ಅನುದಿನದ ಮನ್ನಾ
3
0
143
ನಿಮ್ಮ ಪದೋನ್ನತಿಗಾಗಿ ಸಿದ್ಧರಾಗಿ
Tuesday, 25th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಅವರು ನಿದ್ದೆಯಿಂದ ಎಚ್ಚರಗೊಂಡ ಕನಸಿನಂತೆ ಇರುತ್ತಾರೆ. ಯೆಹೋವ ದೇವರೇ, ನಿಮ್ಮ ದೃಷ್ಟಿಯಲ್ಲಿ ಅವರು ಅಲ್ಪರಾಗಿರಲಿ." (ಕೀರ್ತನೆಗಳು 73:20)
ನಾವು ನಮ್ಮ ಸುತ್ತಲೂ ಅಧರ್ಮಿಗಳು ಏಳಿಗೆಯಾಗುವುದನ್ನು ಕಾಣುತ್ತೇವೆ: ಇದ್ದಕ್ಕಿದ್ದಂತೆ "ಇಗೋ, ನಾನು ಜೀವಂತ ದೇವರನ್ನು ಆರಾಧಿಸುತ್ತಿದ್ದೇನೆ , ಸೇವೆ ಮಾಡುತ್ತಿದ್ದೇನೆ, ಆದರೂ ನಾನು ಏಳಿಗೆಯಾಗುತ್ತಿಲ್ಲ - ಏಕೆ?" ಎಂಬ ಆಲೋಚನೆ ನಮ್ಮ ಮನಸ್ಸಿನಲ್ಲಿ ಹರಿಯುತ್ತದೆ.ಈ ಪರಿಸ್ಥಿತಿಯು ಕಚೇರಿಗಳು ಮತ್ತು ವ್ಯವಹಾರಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತದೆ. ನಮ್ಮ ದೇವರು ನಿದ್ರಿಸುವವನಲ್ಲ. ಆದರೆ ಕೆಲವೊಮ್ಮೆ, ಆತನು ಹಾಗೆ ತೋರುತ್ತಾನೆ. ಆದರೆ ದೇವರು ತನ್ನ ನಿದ್ರೆಯಿಂದ ಸ್ಪಷ್ಟವಾಗಿ ಎಚ್ಚರ ಗೊಂಡಾಗ ಏನಾಗುತ್ತದೆ? ಉತ್ಕೃಷ್ಟನಾಗಿ ಮತ್ತು ಸಮೃದ್ಧನಾಗಿ ಕಂಡುಬಂದ ಭಕ್ತಿಹೀನ ವ್ಯಕ್ತಿ ಕನಸಿನಂತೆ ಕಣ್ಮರೆಯಾಗುತ್ತಾನೆ. ಅವನು ಒಂದು ಕಲ್ಪನೆಯೋ ಅಥವಾ ಭ್ರಮೆಯೋ ಎಂಬಂತೆ ಆಗುತ್ತಾನೆ.
"ಯಾಕಂದರೆ ಉದ್ಧಾರವು ( ಪದೋನ್ನತಿ) ಮೂಡಲಿಂದಾಗಲಿ ಪಡುವಲಿಂದಾಗಲಿ ಅರಣ್ಯದಿಂದಾಗಲಿ ಬರುವದಿಲ್ಲ. ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ." (ಕೀರ್ತನೆ 75:6-7)
ನಿಮ್ಮ ಪದೋನ್ನತಿಗಾಗಿ ಬೇಕಿರುವ ಎರಡು ಪ್ರಾಯೋಗಿಕ ಕೀಲಿ ಕೈಗಳನ್ನು ಹಂಚಿಕೊಳ್ಳಲು ನನಗೆ ಅನುಮತಿಸಿ:
1.ಯಾವಾಗಲೂ ನೀತಿಯ ಕೆಲಸಗಳನ್ನೇ ಮಾಡಿ.
ಎಸ್ತೇರಳು ಪುಸ್ತಕದ ಒಂದು ವಿಷಯವು ಜನಪ್ರಿಯವಾಗಿಲ್ಲದಿದ್ದರೂ ಸಹ ಸರಿಯಾಗಿ ಕಾರ್ಯಮಾಡುವಂತದ್ದಾಗಿದೆ . ಎಸ್ತರಳ ದಿಟ್ಟ ಧೈರ್ಯವನ್ನು ನಾವಿಲ್ಲಿ ನೋಡಬಹುದು, ಅವಳು ತನ್ನ ಜನರಿಗಾಗಿ ರಾಜನಿಗೆ ಮನವಿ ಮಾಡಲು ಹೋದಳು , ಇದರಿಂದ ಅವಳು ಸತ್ತೇ ಹೋಗಬಹುದಿತ್ತು, ಆದರೂ ಇದು ದೇವರ ದೃಷ್ಟಿಯಲ್ಲಿ ಮತ್ತು ಅವಳ ಜನರಾದ - ಯಹೂದಿಗಳಿಗೆ ಮಾಡಬಹುದಾದ ನೀತಿಯ ಕೆಲಸವಾಗಿತ್ತು.
ರಾಜನಿಗೆ ಹಾನಿ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂಬುದು ಮೊರ್ದಕೈಗೆ ತಿಳಿದು ಬಂದಾಗ ಅವನು ಅದರ ಕುರಿತು ಮಾತನಾಡಿದನು. ಪ್ರಭುತ್ವದ ಹಿಂದೆ ಶಕ್ತಿಯುತ ಅಧಿಕಾರಿಗಳು ಕೆಲಸ ಮಾಡುತ್ತಿದ್ದವು ಆದರೂ ಅವನು ರಾಜನಿಗೆ ತನ್ನ ನಿಷ್ಠೆಯನ್ನು ತೋರಿಸಲು ಮುಂದಾದರಿಂದ ಅದು ನೀತಿಯ ಕೆಲಸವಾಗಿ ಎಣಿಸಲ್ಪಟ್ಟಿತ್ತು. ಇದರ ಪರಿಣಾಮವಾಗಿ, ರಾಜ ದಾಖಲೆಗಳಲ್ಲಿ ಬರಹಗಾರರು ಅವನ ಕಾರ್ಯಗಳನ್ನು ಬರೆದಿದ್ದರು ಮತ್ತು ದೇವರು ಅದನ್ನು ಸರಿಯಾದ ಸಮಯದಲ್ಲಿ ರಾಜನ ಗಮನಕ್ಕೆ ತರುವಂತೆ ಮಾಡಿದನು. (ಎಸ್ತರ್ 3:21-23, 6:1-3). ಎಸ್ತರಳು ಮೊರ್ದೆಕೈಯನ್ನು ರಾಜನಿಗೆ ಪ್ರಸ್ತುತಪಡಿಸುವ ಸಮಯಕ್ಕೆ ಮುಂಚಿತವಾಗಿಯೇ ಅವನ ಶ್ರೇಷ್ಠತೆ, ನಿಷ್ಠೆ ಮತ್ತು ನಾಯಕತ್ವದ ಕುರಿತು ಅವನು ದಾಖಲೆಯನ್ನು ಹೊಂದಿದ್ದನು.
2.ನಿಮ್ಮ ಪದೋನ್ನತಿಗಾಗಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ.
ಒಮ್ಮೆ ಪದೋನ್ನತಿ ಪಡೆದ ನಂತರ, ಮೊರ್ದೆಕೈಯ ಮೊದಲ ಕಾರ್ಯ ದೇವರ ಜನರನ್ನು ನಾಶಮಾಡುವ ಉದ್ದೇಶವನ್ನು ಹೊಂದಿದ ಶತ್ರುಗಳ ಆದೇಶವನ್ನು ರದ್ದುಪಡಿಸಿ - ಹೊಸ ಆದೇಶವನ್ನು ಬಿಡುಗಡೆ ಮಾಡುವುದಾಗಿತ್ತು. ಅವನು ಆ ಹೊಸ ಕಟ್ಟಳೆಯನ್ನು ಬರೆಯುವ ಶಾಸ್ತ್ರಿಗಳಿಗೆ ಅದನ್ನು ಧೈರ್ಯವಾಗಿ ಹೇಳಿ ರಾಜನ ಮುದ್ರೆಯನ್ನು ಬಳಸಿಕೊಂಡು ರಾಜನ ಹೆಸರಿನಲ್ಲಿ ಸಂವಹನ ನಡೆಸಿ ಆ ಆದೇಶವನ್ನು ದೂರದವರೆಗೆ ಕಳುಹಿಸಿದನು. ಅಂತಿಮವಾಗಿ, ಈ ದೈವಿಕ ಹಸ್ತಕ್ಷೇಪದ ಮೂಲಕ, ಯಹೂದಿಗಳು ತಮ್ಮ ಶತ್ರುಗಳನ್ನು ಜಯಿಸಿದರು ಮತ್ತು ಅವರ ದುಃಖವು ಉಲ್ಲಾಸದ ಕುಣಿದಾಟವಾಗಿ ಬದಲಾಯಿತು!
"ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ ಸಂತೋಷದಿಂದ ಕುಣಿದಾಡುವಂತೆ ಮಾಡಿದಿ; ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ." ಎಂದು ದೇವರವಾಕ್ಯ ಹೇಳುತ್ತದೆ, (ಕೀರ್ತನೆ 30:11, NIV)
ಅಲೆಕ್ಸಾಂಡರ್ ದಿ ಗ್ರೇಟ್ ಬಗ್ಗೆ ಶಾಲೆಯಲ್ಲಿ ನಿಮ್ಮ ಇತಿಹಾಸ ತರಗತಿಯಲ್ಲಿ ನಿಮಗೆ ಹೇಳಿದ್ದು ನಿಮಗೆ ನೆನಪಿದೆಯೇ? ಅವನು ಸಾರ್ವಕಾಲಿಕ ಶ್ರೇಷ್ಠ ಜನರಲ್‌ಗಳಲ್ಲಿ ಒಬ್ಬನಾಗಿದ್ದ ಮತ್ತು ಬಹುತೇಕ ತಿಳಿದಿರುವ ಸಂಪೂರ್ಣ ಜಗತ್ತನ್ನು ವಶಪಡಿಸಿಕೊಂಡಿದ್ದನು. ಅವನನ್ನು ಬೈಬಲ್‌ನಲ್ಲಿಯೂ ಸಹ ಉಲ್ಲೇಖಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ? ದೇವರ ವಾಕ್ಯದಲ್ಲಿ ಅವನ ಹೆಸರನ್ನು ಬರೆದಿದ್ದನ್ನು ನೀವು ನೋಡುವುದಿಲ್ಲ, ಆದರೆ ಅವನ ಉಲ್ಲೇಖವನ್ನು ದಾನಿಯೇಲ ಗ್ರಂಥದಲ್ಲಿ ಕಾಣಬಹುದು. ಸತ್ಯವೇದವು ಅವನನ್ನು "ಹೋತ" ಎಂದು ಕರೆಯುವುದನ್ನು ನೋಡಿ (ದಾನಿಯೇಲ 8: 5-8).
ಒಬ್ಬ ದೇವರ ಮನುಷ್ಯನು ಈ ರೀತಿ ಹೇಳುತ್ತಾನೆ: "ಜಗತ್ತಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಆಗಿರುವವನು ದೇವರಿಗೆ ಒಂದು ಹೋತಕ್ಕಿಂತ ಹೆಚ್ಚೇನೂ ಅಲ್ಲ." ದೇವರು ಎದ್ದೇಳುವಾಗ , ಶ್ರೇಷ್ಠರು ಶೂನ್ಯವಾಗುತ್ತಾರೆ. ಆರಾಧನೆ ಮತ್ತು ವಾಕ್ಯದಲ್ಲಿ ಗುಣಮಟ್ಟದ ಸಮಯವನ್ನು ಕಳೆಯುವ ಮೂಲಕ ನಿಮ್ಮ ಜೀವನದಲ್ಲಿ ದೇವರನ್ನು ಎದ್ದೇಳಲು ಅನುಮತಿಸಿ. ನಿಮ್ಮ ಕಾಣಿಕೆಗಳ ಮೂಲಕ ಆತನನ್ನು ಸನ್ಮಾನಿಸಿ. ಇದನ್ನು ಮಾಡುವುದರಲ್ಲಿ ಎಂದಿಗೂ ನಿರುತ್ಸಾಹಗೊಳ್ಳಬೇಡಿ.
ಮೊರ್ದೆಕೈಗೆ ನೇಣುಗಂಬವನ್ನು ಸಿದ್ಧಪಡಿಸಿದ ಹಾಮಾನನು ಅದರ ಮೇಲೆಯೇ ತಾನೇ ನೇತು ಹಾಕಲ್ಪಟ್ಟನು. "ಇದಲ್ಲದೆ ಅರಸನ ಸೇವೆಮಾಡುತ್ತಿದ್ದ ಕಂಚುಕಿಗಳಲ್ಲೊಬ್ಬನಾದ ಹರ್ಬೋನನು - ಇಗೋ ಈ ಹಾಮಾನನ ಮನೆಯ ಹತ್ತಿರ ಅರಸನ ಪ್ರಾಣರಕ್ಷಣೆಗಾಗಿ ಸಮಾಚಾರವನ್ನು ತಿಳಿಸಿದ ಮೊರ್ದೆಕೈಯನ್ನು ನೇತುಹಾಕಿಸುವದಕ್ಕೆ ಇವನಿಂದ ಸಿದ್ಧಮಾಡಲ್ಪಟ್ಟ ಐವತ್ತು ಮೊಳ ಎತ್ತರವಾದ ಗಲ್ಲು ಮರವಿರುತ್ತದಲ್ಲಾ ಅನ್ನಲು ಅರಸನು - ಇವನನ್ನು ಅದಕ್ಕೆ ನೇತುಹಾಕಿರಿ ಎಂದು ಆಜ್ಞಾಪಿಸಿದನು. " (ಎಸ್ತರ್ 7: 9 NIV)
ದುಷ್ಟರು ಎಷ್ಟು ಎತ್ತರಕ್ಕೆ ಏರಿಸಲ್ಪಡುತ್ತಾರೋ ಆದ್ದರಿಂದ ಅವರ ಪತನವು ಅಷ್ಟೇ ದೊಡ್ಡದಾಗಿರುತ್ತದೆ ಎಂಬುದನ್ನು ಎಲ್ಲರೂ ನೋಡಿ ದೇವರನ್ನು ಮಹಿಮೆಪಡಿಸುತ್ತಾರೆ. ನೀವಾದರೋ ನಿಮ್ಮ ಪದೋನ್ನತಿಗೆ ಸಿದ್ಧರಾಗಿ !
Bible Reading: Numbers 29:30
ಪ್ರಾರ್ಥನೆಗಳು
ತಂದೆಯೇ, ನೀನು ಕೇವಲ ಶಕ್ತಿ ಇರುವ ದೇವರಲ್ಲ ಬದಲಾಗಿ ಸರ್ವಶಕ್ತನಾದ ದೇವರಾಗಿದ್ದೀಯ ಎಂದು ಯೇಸುನಾಮದಲ್ಲಿ ನಿನಗೆ ಸ್ತೋತ್ರ ಹೇಳುತ್ತೇನೆ. ನೀನು ನನ್ನ ಪರವಾಗಿದ್ದರೆ, ನನ್ನ ವಿರುದ್ಧ ಯಾರು ತಾನೇ ನಿಲ್ಲಲು ಸಾಧ್ಯ? ಆದ್ದರಿಂದ, ನಾನು ನನ್ನ ಪ್ರತೀ ಪರಿಸ್ಥಿತಿಯನ್ನು ಯೇಸುನಾಮದಲ್ಲಿ ನಿನ್ನ ಕೈಗೆ ಒಪ್ಪಿಸುತ್ತೇನೆ. ಆಮೆನ್.
Join our WhatsApp Channel

Most Read
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ದೇವರು ಹೇಗೆ ಒದಗಿಸುತ್ತಾನೆ #2
● ಸಹವಾಸದಲ್ಲಿರುವ ಅಭಿಷೇಕ
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
ಅನಿಸಿಕೆಗಳು