"ನೀವಾದರೋ ಯೆಹೋವನಿಗೆ ಮೀಸಲಾದ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವದನ್ನಾದರೂ ತೆಗೆದುಕೊಂಡರೆ ಇಸ್ರಾಯೇಲ್ಯರ ಪಾಳೆಯವು ಶಾಪಕ್ಕೆ ಗುರಿಯಾಗಿ ಕೆಟ್ಟೀತು."(ಯೆಹೋಶುವ 6:18)
ಒಬ್ಬ ವ್ಯಕ್ತಿ ಒಮ್ಮೆ ನನ್ನ ಬಳಿಗೆ ಬಂದು ಅವರ ಮನೆಯಲ್ಲಿ ನಡೆಯುತ್ತಿರುವ ಒಂದು ವಿಚಿತ್ರ ಘಟನೆಯನ್ನು ನನ್ನೊಡನೆ ಹಂಚಿಕೊಂಡರು. ಆ ವ್ಯಕ್ತಿ ಈಗಷ್ಟೇ ಒಂದು ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು ಆದರೆ ಅಲ್ಲಿ ಕೆಲವೊಂದು ವಿಚಿತ್ರವಾದ ಅಲೌಕಿಕ ಅಭಿವ್ಯಕ್ತಿಗಳು ಸಂಭವಿಸುತ್ತಿದ್ದದ್ದನ್ನು ಕಂಡರು . ಒಮ್ಮೊಮ್ಮೆ ಅವರೂ ಮತ್ತು ಅವರ ಹೆಂಡತಿಯೂ ಒಂದು ನಿರ್ದಿಷ್ಟ ಕೋಣೆಯಿಂದ ವಿಚಿತ್ರವಾದ, ಯಾವುದೋ ಒಂದು ದುಷ್ಟಶಕ್ತಿ ಬರುತ್ತಿರುವಂತೆ ಭಾವಿಸುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ, ಇಬ್ಬರೂ ಅದೇ ಕೋಣೆಯಲ್ಲಿ ನೆಲದಾದ್ಯಂತ ವೇಗವಾಗಿ ಚಲಿಸುವ ಆವಿಯಂತಹ ನೆರಳಿನ ಆಕೃತಿಯನ್ನು ನೋಡುತಿದ್ದರು. ಅವರ ಮಗಳು ಮತ್ತು ಮಗ ಕೂಡ ಅದೇ ಕಳವಳವನ್ನು ವ್ಯಕ್ತಪಡಿಸಿದ್ದರಾದರಿಂದ ಅವರು ಪ್ರಾರ್ಥನೆಗಾಗಿ ನನ್ನ ಬಳಿಗೆ ಈ ವಿಷಯವನ್ನು ತಂದರು.
ನಾನು ಅವರನ್ನು ವಿಚಾರಿಸುತ್ತಿರುವಾಗ ಅವರು ವಿದೇಶ ಪ್ರವಾಸಕ್ಕೆ ಹೋದಾಗ ಅವರು ಖರೀದಿಸಿದ ನೂರಾರು ವರ್ಷಗಳಷ್ಟು ಹಳೆಯದಾದ ಮರದ ಪ್ರಾಚೀನ ವಸ್ತುಗಳ ಬಗ್ಗೆ ತಕ್ಷಣವೇ ನನಗೆ ಹೇಳಿದರು. ಅದರ ಸೌಂದರ್ಯ ಮತ್ತು ಪುರಾತತ್ವದ ಕಾರಣದಿಂದಾಗಿ ಅವರು ಅದನ್ನು ಖರೀದಿಸಿ ತಂದಿದ್ದರು. ಆಗ ಕೆಲವು ಬುಡಕಟ್ಟು ಜನಾಂಗದವರು ಆಫ್ರಿಕಾದಲ್ಲಿ ಈ ಪ್ರಾಚೀನ ವಸ್ತುಗಳನ್ನು ತಮ್ಮ ದುಷ್ಟ ಆಚರಣೆಗಳಲ್ಲಿ ಹೇಗೆ ಬಳಸುತ್ತಿದ್ದರು ಮತ್ತು ಅದು ದುಷ್ಟಶಕ್ತಿಗಳನ್ನು ಹೇಗೆ ಆಕರ್ಷಿಸುತಿತ್ತು ಎಂದು ನಾನು ಅವರಿಗೆ ವಿವರಿಸಿದೆ.
ಸೈತಾನನು ಯಾವಾಗಲೂ ಮನೆಗಳಲ್ಲಿ ಹೇಗೆ ನುಗ್ಗಲಿ ಎಂದು ಸ್ಥಳವಾಕಾಶ ಹುಡುಕುತ್ತಿರುತ್ತಾನೆ ಆಗ ಮಾತ್ರ ಅವನು ಮನೆಯೊಳಗೆ ನುಸುಳಬಹುದು ಮತ್ತು ಪ್ರವೇಶವನ್ನು ಪಡೆಯಬಹುದು.ಅವರೇನೋ ಮುಗ್ಧವಾಗಿ ಕಲಾಕೃತಿಯನ್ನು ಖರೀದಿಸಿದ್ದರೆಂದು ನೀವು ಊಹಿಸಬಹುದು; ಆದರೆ ಅದು ತದ ನಂತರ ಅವರ ಕುತ್ತಿಗೆಗೆ ಉರುಲಾಗಿ ಬದಲಾಯಿತು . ಒಂದು ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆಯುವುದನ್ನು ಊಹಿಸಿಕೊಳ್ಳಿ, ಒಮ್ಮೊಮ್ಮೆ ಅದು ನಿಮ್ಮ ಮನೆಯಲ್ಲಿನ ಶಾಂತಿಯನ್ನು ಕದಿಯಲು ಪ್ರಾರಂಭಿಸುತ್ತದೆ. ಇವೆಲ್ಲವೂ ಸೈತಾನನ ಕುತಂತ್ರಗಳು. ನಿಮ್ಮ ಮನೆಯಲ್ಲಿ ಕೆಲವು ದುರಾತ್ಮಗಳ ದಾಳಿಗೆ ಒಳಗಾಗಿರುವಂತಹ ಅಥವಾ ನೀವು ಯಾವ ಕಾರಣದ ಮೇಲೆಯೂ ಬೆರಳು ತೋರಿಸಲೂ ಸಾಧ್ಯವಾಗದಿರುವಂತಹ ಪರಿಸ್ಥಿತಿಯಲ್ಲಿ ನೀವು ಇದ್ದೀರಾ? ಅಥವಾ ನೀವು ನಿಮ್ಮ ಮನೆಯಲ್ಲಿನ ಶಾಂತಿಯನ್ನು ಕಳೆದುಕೊಂಡು, ನಿಮ್ಮ ಹೆಂಡತಿಯ ತಪ್ಪುಗಳನ್ನು ಕುರಿತು ಬೆರಳು ತೋರಿಸುತ್ತಿದ್ದೀರಾ ?
ಮತ್ತಾಯ 13:24-30 ರಲ್ಲಿ ಯೇಸು ಇದೇ ರೀತಿಯ ದೃಷ್ಟಾಂತವನ್ನು ಹೇಳಿದನು."ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು; ಅದೇನಂದರೆ - ಪರಲೋಕರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆದರೆ ಜನರು ನಿದ್ರೆಮಾಡುವ ಕಾಲದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಬಿತ್ತಿ ಹೋದನು. ಗೋದಿಯು ಬೆಳೆದು ಫಲಕ್ಕೆ ಬಂದಾಗ ಹಣಜಿ ಸಹ ಕಾಣಬಂತು. ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು - ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜ ಬಿತ್ತಿದಿಯಲ್ಲಾ; ಹಣಜಿ ಎಲ್ಲಿಂದ ಬಂತು ಎಂದು ಕೇಳಲು ಅವನು - ಇದು ಒಬ್ಬ ವೈರಿ ಮಾಡಿದ ಕೆಲಸ ಅನ್ನಲಾಗಿ ಆಳುಗಳು ಅವನನ್ನು - ಹಾಗಾದರೆ ನಾವು ಅದನ್ನು ಆರಿಸಿ ತೆಗೆಯೋಣೋ ಎಂದು ಕೇಳಲು [ಅವನು - ಬೇಡ; ಹಣಜಿಯನ್ನು ಆರಿಸಿ ತೆಗೆಯುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ. ಸುಗ್ಗೀಕಾಲದ ತನಕ ಎರಡೂ ಕೂಡ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ - ಮೊದಲು ಹಣಜಿಯನ್ನು ಆರಿಸಿತೆಗೆದು ಅದನ್ನು ಸುಡುವದಕ್ಕೆ ಹೊರೆಕಟ್ಟಿಹಾಕಿ, ಗೋದಿಯನ್ನು ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು ಅಂದನು.ಎಂದು
ಬೈಬಲ್ ಹೇಳುತ್ತದೆ.
ಅಲ್ಲಿ ಸೇವಕರು ನಿಜವಾಗಿಯೂ ಒಳ್ಳೆಯ ಬೀಜಗಳನ್ನೇ ಬಿತ್ತಿದರು, ಆದರೆ ಏನೋ ತಪ್ಪಾಯಿತು. ಆ ಬಿತ್ತನೆಯನ್ನು ಕೆಡಿಸಲು ಒಬ್ಬ ಶತ್ರು ಬಂದನು. ಯೇಸು ಒತ್ತಿ ಹೇಳಿದ್ದೇನೆಂದರೆ , "ಒಬ್ಬ ಶತ್ರು ಇದನ್ನು ಮಾಡಿದ್ದಾನೆ." ನಿಮ್ಮ ಮನೆಯಲ್ಲಿ ಒಬ್ಬ ಶತ್ರು ಶಾಪಗ್ರಸ್ತ ವಸ್ತುವನ್ನು ಬಿತ್ತಿದ್ದಾನೆ. ದೇವರ ಆತ್ಮಕ್ಕಿಂತ ಭಿನ್ನವಾದ ವಿಚಿತ್ರ ಶಕ್ತಿಗಳೊಂದಿಗೆ ಶತ್ರು ನಿಮ್ಮ ಮನೆಗೆ ನುಸುಳಿದ್ದಾನೆ. ಹೌದು, ನೀವು ಮನೆಯನ್ನು ಮುಗ್ಧವಾಗಿ ಖರೀದಿಸಿರ ಬಹುದು, ಮತ್ತು ನಿಸ್ಸಂದೇಹವಾಗಿ ನೀವು ಶುದ್ಧ ಉದ್ದೇಶದಿಂದಲೇ ಕೆಲಸಕ್ಕೆ ಅರ್ಜಿ ಸಲ್ಲಿಸಿರ ಬಹುದು, ಆದರೆ ಅಲ್ಲಿ ಶಾಂತಿ ನೆಲೆಸದಿದ್ದರೆ ಈ ಎಲ್ಲಾ ಹೋರಾಟಗಳ ಹಿಂದೆ ಒಬ್ಬ ಶತ್ರು ಇದ್ದಾನೆ.
ಅದಕ್ಕಾಗಿ ಯೇಸು ಹೇಳುವ ಪರಿಹಾರ ಇಲ್ಲಿದೆ, ನಾವು ಶತ್ರುವಿನ ಕೆಲಸಗಳನ್ನು ತೆಗೆದುಹಾಕಿ ಅದನ್ನು ಸುಟ್ಟುಹಾಕಬೇಕಾಗುತ್ತದೆ. ನಿಮ್ಮ ಮದುವೆಯಲ್ಲಿ ಶಾಪಗ್ರಸ್ತ ವಸ್ತು ಎಂದು ದೇವರು ನಿಮಗೆ ಯಾವುದನ್ನು ತೋರಿಸಿದ್ದಾನೆಯೇ ? ನಿಮ್ಮ ಕುಟುಂಬದಲ್ಲಿ ಶಾಪಗ್ರಸ್ತ ವಸ್ತು ಎಂದು ದೇವರು ನಿಮಗೆ ಯಾವುದನ್ನು ತೋರಿಸಿದ್ದಾನೆಯೇ ? ಅದನ್ನು ತೆಗೆದು ಹಾಕಲು , ಬಂಧಿಸಲು ಮತ್ತು ಸುಟ್ಟು ಹಾಕಲು ಇದು ಸಮಯ. ಆಗ ಮಾತ್ರ ಪಿಶಾಚನು ನಿಮ್ಮ ಶಾಂತಿ ಮತ್ತು ಸಂತೋಷವನ್ನು ಕದಿಯುವುದನ್ನು ನೀವು ನೋಡಲಾರಿರಿ. ಶಾಪಗ್ರಸ್ತ ವಸ್ತುವನ್ನು ನಿಮ್ಮ ಮನೆಯಿಂದ ಹೊರಹೋಗುವಂತೆ ಆತ್ಮನಲ್ಲಿ ಹೋರಾಟವನ್ನು ತೆಗೆದುಕೊಳ್ಳುವ ಸಮಯ ಇದು. ಆಗ ನೀವು ಬಯಸದೇ ಇರುವುದ್ದನ್ನು ನೀವು ನೋಡುವುದಿಲ್ಲ.
Bible Reading: Joshua 11-12
ಪ್ರಾರ್ಥನೆಗಳು
ತಂದೆಯೇ, ನೀನು ನನ್ನ ಮನೆಗೆ ತರುತ್ತಿರುವ ವಿಮೋಚನೆಗಾಗಿ ನಿನಗೆ ಯೇಸುನಾಮದಲ್ಲಿ ಸ್ತೋತ್ರ . ನನ್ನ ಕುಟುಂಬದಲ್ಲಿರುವ ನಿನ್ನ ಕೃಪೆ ಮತ್ತು ಕರುಣೆಗಾಗಿ ಸ್ತೋತ್ರ .ನಮ್ಮ ಮನೆಯಲ್ಲಿ ನಮ್ಮ ಸಂತೋಷವನ್ನು ಕದಿಯಲು ಮತ್ತು ನಮ್ಮನ್ನು ಹಿಂಸಿಸಲು ಸೈತಾನನು ಬಳಸುತ್ತಿರುವ ಯಾವುದಾದರೂ ಶಾಪಗ್ರಸ್ತ ವಸ್ತುವಿದ್ದರೆ ಅದನ್ನು ಕಾಣುವಂತೆ ನಮ್ಮ ಕಣ್ಣುಗಳನ್ನು ತೆರೆಯಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕುಟುಂಬವು ನಿಜವಾಗಿಯೂ ವಿಮೋಚನೆ ಹೊಂದಿದೆ ಎಂದು ಯೇಸುನಾಮದಲ್ಲಿ ನಾನು ಆದೇಶಿಸುತ್ತೇನೆ. ಆಮೆನ್.
Join our WhatsApp Channel

Most Read
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
● ನಿಮ್ಮ ಗತಿಯನ್ನು ಬದಲಾಯಿಸಿ
● ಯಾವುದೂ ಮರೆಯಾಗಿಲ್ಲ
● ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
● ಆತ್ಮೀಕ ಚಾರಣ
● ನಿಮ್ಮ ಮನೆಯಲ್ಲಿ ವಾತಾವರಣವನ್ನು ಬದಲಾಯಿಸುವುದು -2
ಅನಿಸಿಕೆಗಳು