ಅನುದಿನದ ಮನ್ನಾ
3
1
88
ವ್ಯಸನಗಳನ್ನು ನಿಲ್ಲಿಸುವುದು
Friday, 21st of March 2025
Categories :
ಬಿಡುಗಡೆ (Deliverance)
"ಪ್ರಿಯರೇ, ಅನೇಕ ಮಂದಿ ಸುಳ್ಳು ಪ್ರವಾದಿಗಳು ಲೋಕದೊಳಗೆ ಬಂದಿರುವದರಿಂದ ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು " (1 ಯೋಹಾನ 4:1)
ನಾವು ಚೈತನ್ಯ ಹೊಂದಲು ಹಲವಾರು ಮಾರ್ಗಗಳಿವೆ. ಕೆಲವರು ಬೀಚ್‌ಗೆ ಹೋಗುತ್ತಾರೆ. ಆದರೆ ನಾವೀಗ ದಿನವಿಡೀ ನಮ್ಮನ್ನು ಕಾರ್ಯನಿರತವಾಗಿಡುವ ವಿಭಿನ್ನ ಆಟಗಳೊಂದಿಗೆ ಆಧುನಿಕ ಮನರಂಜನಾ ಕೇಂದ್ರಗಳನ್ನು ಹೊಂದಿದ್ದೇವೆ. ಆದಾಗ್ಯೂ, ಹೆಚ್ಚಿನ ಪೋಷಕರು ಈಗ ತಮ್ಮ ಮಕ್ಕಳು ಮನೆಯಲ್ಲಿಯೂ ಸಹ ಅವುಗಳನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುವಂತ ಈ ಆಟ ಸಾಮಗ್ರಿಗಳಲ್ಲಿ ಕೆಲವನ್ನು ಖರೀದಿಸುತ್ತಾರೆ. ಕೆಲವೊಮ್ಮೆ, ಮಕ್ಕಳು ಮನೆಕೆಲಸಗಳಿಂದ ಅಥವಾ ಇತರ ತೊಡಗಿಸಿಕೊಳ್ಳುವಿಕೆಗಳಿಂದ ಅವರನ್ನು ಬೇರೆಡೆಗೆ ಸೆಳೆಯದಂತೆ ಅವರು ಆಟಗಳನ್ನು ಆಡಲು ಅವಕಾಶ ನೀಡುತ್ತಾರೆ. ಆದರೆ ಇದರಿಂದಾಗುವ ಅನಾನುಕೂಲವೆಂದರೆ ಕೆಲವು ಆಟಗಳು ಈಗ ಒಳ್ಳೆಯದಕ್ಕಿಂತ ಹೆಚ್ಚು ನಕಾರಾತ್ಮಕ ಪರಿಣಾಮಗಳನ್ನು ಬೀರುವಂತವಾಗಿವೆ.
ದುರದೃಷ್ಟವಶಾತ್, ಚಿಕ್ಕ ಮಕ್ಕಳು ಮತ್ತು ಯುವಕರು (ಮತ್ತು ಈಗ ವಯಸ್ಕರು ಸಹ ) ಸಾಮಾನ್ಯವಾಗಿ ಮನರಂಜನೆಯ ಮುಗ್ಧ ರೂಪಗಳೆಂದು ಪರಿಗಣಿಸಲಾದ ಅತೀಂದ್ರಿಯ ಆಟಗಳಲ್ಲಿ ತೊಡಗುತ್ತಾರೆ. ಇದು ಖಿನ್ನತೆ ಮತ್ತು ಇತರ ರೀತಿಯ ಸೈತಾನನ ಆಕ್ರಮಣ ಮತ್ತು ಸ್ವಾಧೀನಕ್ಕೆ ಬಾಗಿಲು ತೆರೆಯುತ್ತದೆ. ಆಟಗಳನ್ನು ಚಟವನ್ನಾಗಿ ಮಾಡಿಕೊಂಡ ಆಟಗಾರರು ಅನಾರೋಗ್ಯಕರ ಎನಿಸುವಷ್ಟು ಸಮಯದವರೆಗೆ, ದಿನಗಟ್ಟಲೆ ತಮ್ಮ ಕಂಪ್ಯೂಟರ್‌ಗಳಲ್ಲಿಯೇ ಉಳಿಯುವುದು ಇಂದು ಅಸಾಮಾನ್ಯವೇನಲ್ಲ. ವ್ಯಸನಿ ಕೆಲವೊಮ್ಮೆ ಆಟಗಳನ್ನು ಆಡಲು ಶಾಲೆ, ಕೆಲಸ ಮತ್ತು ಸಾಮಾಜಿಕ ಜೀವನವನ್ನು ಸಹ ತ್ಯಜಿಸುತ್ತಾನೆ. ಆಟಗಾರನು ಕಂಪ್ಯೂಟರ್ ಮುಂದೆ ಹೆಚ್ಚು ಹೆಚ್ಚು ಸಮಯವನ್ನು ಕಳೆಯುವುದರಿಂದ ಸಂಬಂಧಗಳು ಪಕ್ಕಕ್ಕೆ ತಳ್ಳಲ್ಪಡುತ್ತವೆ.
ಈ ಮುಗ್ಧ ಜನರಿಗೆ ತಿಳಿದಿಲ್ಲದ ಸಂಗತಿಯೆಂದರೆ, ಅಂತಹ ಆಟಗಳು ಆಟಗಾರರನ್ನು ಪರಿಚಿತ ಶಕ್ತಿಗಳಿಗೆ ಪರಿಚಯಿಸಿ, ಇದು ಬಹಳ ಆಕರ್ಷಕವಾದ ದುರಾತ್ಮಗಳ ಅಸ್ತಿತ್ವಕ್ಕೆ ಕೊಂಡೊಯುತ್ತವೆ. ಪರಿಚಿತ ಸ್ಥಳೀಯ ಆತ್ಮಗಳು ಜನರು, ಸ್ಥಳಗಳು ಮತ್ತು ಸನ್ನಿವೇಶಗಳೊಂದಿಗೆ ಪರಿಚಿತವಾಗಿರುವ ದುರಾತ್ಮವಾಗಿದೆ. ಅದು ಒಂದು ಕುಟುಂಬದೊಂದಿಗೆ ತನ್ನನ್ನು ತಾನು ಜೋಡಿಸಿಕೊಂಡು ಅನೇಕ ತಲೆಮಾರುಗಳವರೆಗೆ ಅವರೊಡನೆ ಉಳಿದುಕೊಳ್ಳಬಹುದು.
ಈ ಯುವಕರಲ್ಲಿ ಕೆಲವರು ಆಟಗಳಿಗೆ ಎಷ್ಟು ವ್ಯಸನಿಯಾಗುತ್ತಾರೆಂದರೆ, ಒಂದು ದಿನ ಆಟವಾಡಲು ಬಿಡದಿದ್ದರೆ ಅವರು ಕೋಪಗೊಳ್ಳಲು ಪ್ರಾರಂಭಿಸುತ್ತಾರೆ. ಅವರು ನಿದ್ರೆಯಿಂದ ಎಚ್ಚರವಾದ ಕೂಡಲೇ ಅವರು ಆಟಗಳನ್ನು ಆಡಲು ಎದುರು ನೋಡುತ್ತಾರೆ, ಮತ್ತು ಅವರಿಗೆ ಬೇರೇ ಯಾವುದೂ ಸಹ ಮುಖ್ಯವಾಗಿರುವುದಿಲ್ಲ. ಇನ್ನೊಂದು ಕಡೆಯಲ್ಲಿ , ಈ ಆಟಗಳೊಂದಿಗಿನ ಅವರ ನಿರಂತರ ಸಂವಹನದ ಮೂಲಕ ಅವರೊಳಗೆ ಹರಡುವ ಅಪವಿತ್ರ ಶಕ್ತಿಗಳು ಅಂತಿಮವಾಗಿ ಅವರ ಕೆಲಸಗಳನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುತ್ತವೆ. ಅವರು ಆಟದಲ್ಲಿರುವ ವಸ್ತುಗಳಂತೆ ಮಾತನಾಡಲು ಅಥವಾ ವರ್ತಿಸಲು ಪ್ರಾರಂಭಿಸುತ್ತಾರೆ. ಕೆಲವು ಯುವಕರು ಆಟದಲ್ಲಿರುವ ಪಾತ್ರಗಳಂತೆ ಜಿಗಿಯಲು ಮತ್ತು ಆಟವಾಡಲು ಪ್ರಯತ್ನಿಸಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಆತ್ಮವುಅವರಿಗೆ ತಿಳಿಯದಂತೆ ಕ್ರಮೇಣ ಅವರ ಆತ್ಮವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಇದು ಹಾಗಾಗಬಾರದು.
ನಾವು ನಮ್ಮ ಮನೆಗಳನ್ನು ಗಮನಿಸಬೇಕು ಮತ್ತು ನಮ್ಮ ಮಕ್ಕಳನ್ನು ದೇವರಿಂದ ಕದ್ದು ಕೊಳ್ಳಲು ಬಯಸುವ ಯಾವುದೇ ರೀತಿಯ ವ್ಯಸನವನ್ನು ಬಂಧಿಸಬೇಕು. "ಸೈತಾನನೇ ನನ್ನ ಬಿಟ್ಟು ತೊಲಗು - ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ ಎಂದು ಯೇಸು ಉತ್ತರಕೊಟ್ಟನು." ಎಂದು ಸತ್ಯವೇದದ ಲೂಕ 4:8ರಲ್ಲಿ ಬರೆಯಲಾಗಿದೆ. ಇಲ್ಲಿ ದೇವರು ಮಾತ್ರವೇ ನಮ್ಮ ಪ್ರೀತಿಯಾಗಿ ಉಳಿಯಬೇಕು ಎಂದು ಯೇಸು ನಮಗೆ ಹೇಳುತ್ತಿದ್ದಾನೆ. ನಮ್ಮ ಮಕ್ಕಳನ್ನು ಈ ಆಟಗಳ ವ್ಯಸನ ಮತ್ತು ಆಕರ್ಷಣೆಯಿಂದ ರಕ್ಷಿಸುವ ಸಮಯ ಇದು.
ವ್ಯಸನವನ್ನು ನಿಲ್ಲಿಸಿ ಅವರ ಆತ್ಮಕ್ಕೆ ಪ್ರಯೋಜನವಾಗುವ ದೈವಿಕ ಚಲನಚಿತ್ರಗಳೊಂದಿಗೆ ಅವರನ್ನು ತೊಡಗಿಸಿಕೊಳ್ಳುವ ಸಮಯ ಇದು. ಸೈತಾನನು ಅವರ ಆತ್ಮವನ್ನು ಕರ್ತನಿಂದ ತನ್ನ ಕಡೆಗೆ ಕದ್ದು ಕೊಳ್ಳುವುದನ್ನು ನಾವು ನೋಡಬಾರದು. ಅವರನ್ನು ಭೌತಿಕವಾಗಿ ಆರಾಧನೆಗೆ ಕರೆದೊಯ್ಯಲು ಸಾಧ್ಯವಾಗಬಾರದು ಎಂದು ಅವನಿಗೆ ತಿಳಿದಿರುವುದರಿಂದ, ಅವರನ್ನು ಭೌತಿಕ ಆರಾಧನೆಗೆ ಹೋಗುವುದನ್ನು ತಡೆಯಲು ಅವನು ಈ ಆಟಗಳಂತಹ ತಂತ್ರವನ್ನು ರೂಪಿಸುತ್ತಾನೆ. ಯಾಕೆಂದರೆ ಮಕ್ಕಳು ಮನರಂಜನೆಯನ್ನು ಪ್ರೀತಿಸುತ್ತಾರೆ ಮತ್ತು ಅವರ ಪೋಷಕರು ಸಹ ತಮ್ಮ ಮಕ್ಕಳು ಸಂತೋಷದಿಂದ ಇರುವುದನ್ನು ನೋಡಲು ಇಷ್ಟಪಡುತ್ತಾರೆ ಎಂದು ಅವನಿಗೆ ತಿಳಿದಿದೆ. ಆದ್ದರಿಂದ, ಅವನು ಆಟಗಳ ವೇಷದಲ್ಲಿ ನಮ್ಮ ಮನೆಗೆ ನುಗ್ಗುತ್ತಾನೆ. ಅವನು ಏದೆನ್ ತೋಟದಲ್ಲಿ ಮೊದಲ ದಂಪತಿಗಳ ದೇವರೊಂದಿಗಿನ ಸಂಬಂಧವನ್ನು ನಾಶ ಮಾಡಲು ತಂತ್ರವಾಗಿ ಬಂದಂತೆ ಅವನು ಅನಿರೀಕ್ಷಿತವಾಗಿಯೇ ನಮ್ಮ ಕುಟುಂಬದೊಳಗೆ ನುಗ್ಗುತ್ತಾನೆ.
ಸೈತಾನನು ನಿಮ್ಮ ಮನೆಯೊಳಗೆ ದೇವರ ಪ್ರವೇಶವನ್ನು ತಡೆಯಲು ಬಯಸುತ್ತಾನೆ. ಪ್ರಾರ್ಥನೆ ಮಾಡುವ ಸಮಯ ಬಂದಾಗ ಮಕ್ಕಳು ನಿದ್ರಿಸುವುದನ್ನು ಅಥವಾ ಬೈಬಲ್ ಅಧ್ಯಯನ ಮಾಡಲು ನೀವು ಅವರನ್ನು ಕರೆದಾಗ ಗೊಣಗುವುದನ್ನು ನೀವು ನೋಡಿರುತ್ತೀರಿ. ಮತ್ತೊಂದೆಡೆ, ಆಟಗಳನ್ನು ಆಡುವ ಸಮಯ ಬಂದಾಗ ಮಾತ್ರ ಅವರಲ್ಲಿ ಉತ್ಸಾಹವು ಹೊಳೆಯುವುದನ್ನು ನೀವು ಅನುಭವಿಸಿರಬಹುದು. ದೇವರು ಇಂದು ಪೋಷಕನಾಗಿ ನಿಮಗೆ ಹೇಳುತ್ತಿದ್ದಾನೆ, ಅದನ್ನು ಬಂಧಿಸಿ. ವಯಸ್ಕನಾಗಿ ಆತನು ನಿಮಗೆ ಹೇಳುತ್ತಿದ್ದಾನೆ ಅದನ್ನು ಬಂಧಿಸಿ .
ದೇವರು ಮಾತ್ರ ನಮ್ಮ ಸಂತೋಷದ ಮೂಲವಾಗಿರಬೇಕೇ ಹೊರತು ಆಟಗಳಲ್ಲ.
ನಮ್ಮ ಹೃದಯದಲ್ಲಿ ಇರಬೇಕಾದ ದೇವರ ಸ್ಥಾನವನ್ನು ಯಾವುದೂ ತೆಗೆದುಕೊಳ್ಳಬಾರದು. ನಾವು ಆತನನ್ನು ಮಾತ್ರ ಆರಾಧಿಸಬೇಕು ಮತ್ತು ನಮ್ಮ ಹೃದಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಆದ್ದರಿಂದ, ಅದನ್ನು ಬಂಧಿಸಿ . "ಆದರೆ ನನ್ನ ಮಕ್ಕಳು ಅಳುತ್ತಾರೆ." ಎನ್ನುತ್ತೀರಾ? ಆದರೆ ಅವರು ಶಾಶ್ವತವಾಗಿ ಅಳುವುದಿಲ್ಲ, ಯಾಕೆಂದರೆ ನೀವು ಅವರನ್ನು ಅಂಧಕಾರದ ಶಕ್ತಿಗಳಿಂದ ಕಸಿದುಕೊಂಡಿದ್ದೀರಿ.
Bible Reading: Joshua 23-24
ಪ್ರಾರ್ಥನೆಗಳು
ತಂದೆಯೇ, ಸೈತಾನನ ಕುತಂತ್ರಗಳನ್ನು ನನಗೆ ಪ್ರಕಟ ಪಡಿಸಿದ್ದಕ್ಕಾಗಿ ನಿನಗೆ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನನ್ನ ಮನೆಯಲ್ಲಿ ಬರುವಂತ ಸೈತಾನನ ಕುತಂತ್ರಕ್ಕೆ ಪೋಷಕನಾಗಿ ನಾನು ಸಂವೇದನಾಶೀಲವಾಗಿರಲು ನೀನು ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಮಕ್ಕಳ ಆತ್ಮಗಳನ್ನು ಕದಿಯುವ ಎಲ್ಲಾ ದುಷ್ಟ ಶಕ್ತಿಗಳನ್ನು ಹೊರಹಾಕಲು ಬೇಕಾದ ವಿವೇಕಕ್ಕಾಗಿ ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಇಂದಿನಿಂದ, ಅವರು ಯೇಸುನಾಮದಲ್ಲಿ ನಿನ್ನನ್ನು ಮಾತ್ರ ಆರಾಧಿಸುತ್ತಾರೆ. ಆಮೆನ್.
Join our WhatsApp Channel

Most Read
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1● ಪುರುಷರು ಏಕೆ ಪತನಗೊಳ್ಳುವರು -4
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
● ನಿಮ್ಮ ಮನೆಯಲ್ಲಿ ವಾತಾವರಣವನ್ನು ಬದಲಾಯಿಸುವುದು -2
● ದೇವರು ಹೇಗೆ ಒದಗಿಸುತ್ತಾನೆ #3
ಅನಿಸಿಕೆಗಳು