ಅನುದಿನದ ಮನ್ನಾ
3
1
73
ನಿಮ್ಮ ಮನೆಯಲ್ಲಿ ವಾತಾವರಣವನ್ನು ಬದಲಾಯಿಸುವುದು -2
Monday, 24th of March 2025
Categories :
ಬಿಡುಗಡೆ (Deliverance)
ವಾತಾವರಣ (Atmosphere)
"ಒಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಾರ್ಥನೆಯ ಸಮಯದಲ್ಲಿ ಪೇತ್ರ ಹಾಗೂ ಯೋಹಾನನು ದೇವಾಲಯಕ್ಕೆ ಹೋದರು." (ಅಪೊಸ್ತಲರ ಕೃತ್ಯಗಳು 3:1)
ನಿಮ್ಮ ಮನೆಯಲ್ಲಿನ ವಾತಾವರಣವನ್ನು ಬದಲಾಯಿಸ ಬೇಕೆಂದು ನೀವು ಬಯಸುವುದಾದರೆ ನೀವು ತೊಡಗಿಸಿಕೊಳ್ಳಬೇಕಾದ ಇನ್ನೊಂದು ಕೀಲಿಕೈ ಪ್ರಾರ್ಥನೆ. ಅಭಿವೃದ್ಧಿ ಹೊಂದಲು ಬಯಸುವ ಯಾವುದೇ ಮನೆಗೆ ಪ್ರಾರ್ಥನೆಯು ಅತ್ಯಗತ್ಯವಾದದ್ದು. ಪ್ರಾರ್ಥನೆಯಿಲ್ಲದ ಕ್ರೈಸ್ತನು ಶಕ್ತಿಹೀನನು ಎಂದು ಹೇಳಲಾಗುತ್ತದೆ.
ಅದಕ್ಕಾಗಿಯೇ ದೇವರು ಮತ್ತು ಮನುಷ್ಯನ ನಡುವಿನ ಸಂವಹನ ಮಾಧ್ಯಮವಾಗಿ ದೇವರು ಪ್ರಾರ್ಥನೆಯನ್ನು ನೇಮಿಸಿದ್ದಾನೆ. ದೇವರ ಮಗನಾದ ಯೇಸು ನಮಗೆ ಹೇಗೆ ಪ್ರಾರ್ಥಿಸಬೇಕೆಂದು ಕಲಿಸದೇ ಪ್ರಾರ್ಥನಾಶೀಲ ವ್ಯಕ್ತಿಗೆ ಉದಾಹರಣೆಯಾಗಿ ನಮಗೆ ಆತನಿದ್ದನು.
ಸತ್ಯವೇದದ ಮತ್ತಾಯ 6:6 ರಲ್ಲಿ ಹೇಳುತ್ತದೆ. " ಆದರೆ ನೀನು ಪ್ರಾರ್ಥನೆ ಮಾಡುವಾಗ, ನಿನ್ನ ಕೋಣೆಯೊಳಗೆ ಹೋಗಿ, ಬಾಗಿಲನ್ನು ಮುಚ್ಚಿ ಅದೃಶ್ಯವಾಗಿರುವ ನಿನ್ನ ತಂದೆಗೆ ಪ್ರಾರ್ಥನೆ ಸಲ್ಲಿಸು. ಆಗ ರಹಸ್ಯದಲ್ಲಿ ನಡೆಯುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲ ಕೊಡುವನು." ಎಂದು.
"ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು. ಎಂದು ಮಾರ್ಕ್ 1:35 ರಲ್ಲಿ ಯೇಸುವಿನ ಬಗ್ಗೆ ಸತ್ಯವೇದ ಹೇಳುತ್ತದೆ, ಮತ್ತು ಲೂಕ 5:16 ರಲ್ಲಿ," ಆತನಾದರೋ ಅರಣ್ಯಪ್ರದೇಶಗಳಿಗೆ ಹೋಗಿ ದೇವರ ಪ್ರಾರ್ಥನೆಯನ್ನು ಮಾಡುತ್ತಿದ್ದನು" ಎಂದು ಹೇಳುತ್ತದೆ . ಆತನ ಸೇವೆಯೆಲ್ಲಾ ಪ್ರಾರ್ಥನೆಗಳಿಂದ ಗುರುತಿಸಲ್ಪಟ್ಟಿದೆ; ಆದ್ದರಿಂದಲೇ ಜನರನ್ನು ಬೆರಗುಗೊಳಿಸುವಂತ ದಾಖಲೆ ಫಲಿತಾಂಶಗಳನ್ನು ಆತನಲ್ಲಿ ನಾವು ಕಾಣುತ್ತೇವೆ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ.
ಯೇಸುವಿನಂತೆ, ನಾವು ನಮ್ಮ ಮನೆಯಲ್ಲಿನ ವಾತಾವರಣವನ್ನು ಬದಲಾಯಿಸಬೇಕಾದರೆ ನಮಗೆ ಉತ್ಸಾಹಭರಿತ ಪ್ರಾರ್ಥನಾ ಬಲಿಪೀಠವಿರಬೇಕು. ಯೇಸು ಲೂಕ 18:1 ರಲ್ಲಿ, ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು." ಎಂದು ನೋಡುತ್ತೇವೆ. ನಮ್ಮ ಮನೆಯು ಉರಿಯುತ್ತಿರುವ ಬೆಂಕಿಯೋಪಾದಿಯಲ್ಲಿರಬೇಕು , ಆಗ ಅದು ರಾತ್ರಿಯಲ್ಲಿ ಗುಡಾರದಲ್ಲಿರುವವರ ಮೇಲೆ ದಾಳಿ ಮಾಡುವವುಗಳನ್ನು ದೂರಮಾಡಿ ಅದರ ಸುತ್ತಲಿನ ಜನರನ್ನು ಮತ್ತು ಪ್ರಾಣಿಗಳನ್ನು ಸಹ ಬೆಚ್ಚಗಿಡುತ್ತದೆ ಆದ್ದರಿಂದ, ಸೈತಾನ ಮತ್ತು ಅವನ ಎಲ್ಲಾ ಕ್ರಿಯೆಗಳನ್ನು ನಮ್ಮ ಮನೆಗಳಿಂದ ದೂರವಿಡಲು ನಾವು ತೀವ್ರವಾದ ಪ್ರಾರ್ಥನಾ ವೇದಿಕೆಯನ್ನು ನಾವು ಹೊಂದಿರಬೇಕು.
ಆದ್ದರಿಂದ, ನಮಗೆ ಪ್ರಾರ್ಥನೆಗೆ ಒಂದು ನಿಗದಿತ ಸ್ಥಳ ಮತ್ತು ಸಮಯ ಇರಬೇಕು. ಪ್ರಾರ್ಥನೆಯನ್ನು ಯಾವುದೋ ಅವಕಾಶ ಸಿಕ್ಕಾಗ ಮಾಡುವ ಕಾರ್ಯವಾಗಿರಲು ಬಿಡಬೇಡಿ. ನಾವು ಕುಟುಂಬವಾಗಿ ಪ್ರಾರ್ಥಿಸಲು ನಮಗೆ ಒಂದು ಸಮಯ ಇರಬೇಕು. ಶಿಷ್ಯರು ಪ್ರಾರ್ಥನೆಯ ಸಮಯದಲ್ಲಿ ದೇವಾಲಯಕ್ಕೆ ಹೋಗುತ್ತಿದ್ದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ತಾವು ಕೇವಲ ಪ್ರಚೋದನೆಯಿಂದ ಪ್ರಾರ್ಥಿಸುವಂತದ್ದಲ್ಲ ಬದಲಾಗಿ ,ನಾವು ಪ್ರಾರ್ಥನೆಯಲ್ಲಿ ಶಿಸ್ತಿನವರಾಗಿರಬೇಕು ಎಂದು ಅವರುಗಳು ಯೇಸುವಿನಿಂದ ಕಲಿತರು. ಹಾಗಾಗಿ ನಾವು ಪ್ರಾರ್ಥನೆ ಮಾಡಲು ಸಮಯವನ್ನು ನಿಗದಿಪಡಿಸಿದಾಗ ಮಾತ್ರವೇ ಅದು ಸಾಧ್ಯವಾಗುತ್ತದೆ.
ನಿಮ್ಮ ಮನೆಯಲ್ಲಿ ನಿಮ್ಮ ದೇವರೊಂದಿಗೆ ಮಾತನಾಡಲು ಒಂದು ನಿರ್ದಿಷ್ಟ ಸಮಯವನ್ನು ಮೀಸಲಿಡಿ. ನೀವು ನಿಮ್ಮ ಮಕ್ಕಳ ಸಹಾಯಕರಲ್ಲ, ದೇವರು ಅವರಿಗೆ ನಿಜವಾದ ಸಹಾಯಕನಾಗಿದ್ದಾನೆ ಎಂದು ನಿಮ್ಮ ಮಕ್ಕಳಿಗೆ ತಿಳಿಸಿ. ಕೆಲವು ಪೋಷಕರು ತಮ್ಮ ಮಕ್ಕಳನ್ನು ದೇವರಿಂದ ದೂರವಿಡುತ್ತಾರೆ. ಅವರು ತಮ್ಮ ಮಕ್ಕಳ ಹೃದಯವನ್ನು ದೇವರ ಕಡೆಗೆ ತಿರುಗಿಸುವುದನ್ನು ಬಿಟ್ಟು ತಮ್ಮ ಕಡೆಗೆ ತಿರುಗಿಸಿ ಕೊಳ್ಳುತ್ತಾರೆ. ಆದ್ದರಿಂದ ಅವರಿಗೆ ಅಗತ್ಯವಿರುವಾಗ, ಅವರು ನಿಮ್ಮ ಬಳಿಗೆ ಬರುತ್ತಾರೆ, ಆದರೆ ದೇವರೇ ಒದಗಿಸುವವನು ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಿ. ನೀವು ಕೇವಲ ಒಂದು ಮಾರ್ಗವಾಗಿದ್ದೀರಿ ಅಷ್ಟೇ ಎಂದು ಅವರಿಗೆ ತಿಳಿಸಿಕೊಡಿ. ನೀವು ಅವರಿಗೆ ಸಹಾಯ ಮಾಡಲು ಸಾಧ್ಯವಾಗದಂತ ಸಂದರ್ಭಗಳಲ್ಲಿ ತಾವಿರುವಾಗ , ಕರ್ತನ ಕಡೆಗೆ ಹೇಗೆ ತಿರುಗಬೇಕೆಂದು ಅವರಿಗೆ ತಿಳಿಯುತ್ತದೆ.
ಅತ್ಯಾಸಕ್ತಿಯಿಂದ ನಾವು ಮಾಡುವ ಪ್ರಾರ್ಥನೆಯು ದುಷ್ಟಶಕ್ತಿಗಳು ಮತ್ತು ಸೈತಾನನ ಅಭಿವ್ಯಕ್ತಿಗಳನ್ನು ನಮ್ಮ ಮನೆಗಳಿಂದ ದೂರವಿಡಲು ಸಹಾಯ ಮಾಡುತ್ತದೆ. ಆಗ ನಮ್ಮ ಮಕ್ಕಳು ಪ್ರಾರ್ಥನೆಯ ಬಲಿಪೀಠದ ಮೇಲೆ ತಮ್ಮ ಮೇಲೆ ಗುರಿಯಿಟ್ಟಿರುವ ಯಾವುದೇ ಶತ್ರು ದಾಳಿಯನ್ನು ಜಯಿಸಲು ಸಬಲರಾಗುತ್ತಾರೆ. ಮನೆಯಲ್ಲಿ ಪ್ರಾರ್ಥನೆಯ ಮೂಲಕ, ನೀವು ನಿಮ್ಮ ಮನೆಯನ್ನು ಅಂಧಕಾರದ ಶಕ್ತಿಗಳಿಗೆ ಹಾರಾಟ ನಿಷೇಧಿತ ವಲಯವನ್ನಾಗಿ ಮಾಡುತ್ತೀರಿ.ಹಾಗಾಗಿ ನೀವು ಸೈತಾನ ಮತ್ತು ಅವನ ಸಹಚರರ ವಿರುದ್ಧ ಶಾಶ್ವತವಾಗಿ ಬಾಗಿಲನ್ನು ಮುಚ್ಚುವವರಾಗುತ್ತೀರಿ.
ನಿಮ್ಮ ಮನೆಯಲ್ಲಿ ಸಮಾಧಾನವನ್ನೂ ಮತ್ತು ಸಂತೋಷವನ್ನೂ ಅನುಭವಿಸಲು ಇದು ತುಂಬಾ ಪ್ರಾಮುಖ್ಯವಾದದ್ದು. " ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು ಶುದ್ಧೀಕರಿಸುವದಲ್ಲವೇ." ಎಂದು ಇಬ್ರಿಯ 9:14 ರಲ್ಲಿ ಸತ್ಯವೇದ ಹೇಳುತ್ತದೆ. ಪ್ರಾರ್ಥನೆಯ ಇನ್ನೊಂದು ಪ್ರಾಮುಖ್ಯತೆಯೆಂದರೆ, ನಾವು ಪ್ರಾರ್ಥನೆಗಳ ಮೂಲಕ ಪ್ರತಿಯೊಂದು ಮಾರಕ ಅಭ್ಯಾಸವನ್ನು ಶಿಲುಬೆಗೆ ಜಡಿಯುವವರಾಗುತ್ತೇವೆ . ನಮ್ಮ ಮಕ್ಕಳಲ್ಲಿರುವ ಪ್ರತಿಯೊಂದು ವ್ಯಸನವನ್ನು ಅಳಿಸಿಹಾಕಲು ನಾವು ಪ್ರಾರ್ಥನೆಯಲ್ಲಿ ಯೇಸುವಿನ ರಕ್ತದ ಆಶ್ರಯಕ್ಕೆ ಒಪ್ಪಿಸಿಕೊಡುವವರಾಗುತ್ತೇವೆ. ಕೆಲವು ಪೋಷಕರು ಪ್ರಾರ್ಥನೆಯ ಬೆಂಕಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗದೇ ಹೋದಾಗ ಮಾತ್ರವೇ ತಮ್ಮ ಮಕ್ಕಳನ್ನು ವ್ಯಸನದಿಂದ ಮುಕ್ತ ಗೊಳಿಸಲು ಪುನರ್ವಸತಿ ಅಥವಾ ಅವರಿಗೆ ಸಹಾಯ ಮಾಡುವ ಸಲಹೆಗಾರರಿಗಾಗಿ ಕಾಯುತ್ತಾರೆ. ಆದ್ದರಿಂದ, ಎಡೆಬಿಡದೆ ಪ್ರಾರ್ಥಿಸಿ ಮತ್ತು ಈ ಕೊನೆಯ ದಿನಗಳಲ್ಲಿ ನೀವು ಪ್ರಾಬಲ್ಯ ಸಾಧಿಸಬೇಕಾದರೆ ಕುಟುಂಬವಾಗಿ ಎಡಬಿಡದೆ ಪ್ರಾರ್ಥಿಸುತ್ತಾ ಇರಿ.
Bible Reading: Judges 6-7
ಪ್ರಾರ್ಥನೆಗಳು
ತಂದೆಯೇ, ಪ್ರಾರ್ಥನೆ ಮಾಡುವ ಕರೆಯ ಮಹತ್ವವನ್ನು ಅರಿಯುವಂತೆ ನನ್ನ ಕಣ್ಣುಗಳನ್ನು ತೆರೆದಿದ್ದಕ್ಕಾಗಿ ಯೇಸುನಾಮದಲ್ಲಿ ನಿಮಗೆ ಸ್ತೋತ್ರ. ನನ್ನ ಹೃದಯವನ್ನು ಸತ್ಯದಿಂದ ತುಂಬಿಸಬೇಕೆಂದೂ, ನಾನು ಪ್ರಾರ್ಥನೆಯಲ್ಲಿ ದುರ್ಬಲವಾಗಿರದೆ ಆತ್ಮದಲ್ಲಿ ಉತ್ಸಾಹದಿಂದ ಇರಲು ನಿನ್ನ ಕೃಪೆಗಾಗಿ ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಇಂದಿನಿಂದ, ನಾನು ಸೋಮಾರಿಯಾಗಿರುವುದಿಲ್ಲ ನಮ್ಮ ಬಲಿಪೀಠದ ಮೇಲಿನ ಬೆಂಕಿ ಯಾವಾಗಲೂ ಯೇಸುನಾಮದಲ್ಲಿ ಉರಿಯುತ್ತಲೇ ಇರುತ್ತದೆ. ಆಮೆನ್.
Join our WhatsApp Channel

Most Read
● ದೈವಿಕ ಅನುಕ್ರಮ - 1● ಯೇಸುವನ್ನು ನೋಡುವ ಬಯಕೆ
● ಈ ದಿನಗಳಲ್ಲಿ ಇದನ್ನು ಮಾಡಿರ
● ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
● ಭವ್ಯಭವನದ ಹಿಂದಿರುವ ಮನುಷ್ಯ
● ಪರಲೋಕದ ವಾಗ್ದಾನ
ಅನಿಸಿಕೆಗಳು