ಅನುದಿನದ ಮನ್ನಾ
2
0
54
ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -4
Wednesday, 26th of March 2025
Categories :
ಬಿಡುಗಡೆ (Deliverance)
ವಾತಾವರಣ (Atmosphere)
ದೇವರ ವಾಕ್ಯವು ನಮ್ಮ ಜೀವನ ಮತ್ತು ಮನೆಗಳನ್ನು ನಡೆಸಲು ಮಾದರಿಯಾಗಿದೆ. ನಮ್ಮ ಮಕ್ಕಳನ್ನು ಕರ್ತನ ಮಾರ್ಗ ಮತ್ತು ಉಪದೇಶದಲ್ಲಿ ಹೇಗೆ ಬೆಳೆಸಬೇಕು ಎಂಬುದರ ಕುರಿತು ನಮಗೆ ನಿರ್ದೇಶನ ನೀಡುವ ದಿಕ್ಸೂಚಿ ಇದಾಗಿದೆ. ದೇವರ ವಾಕ್ಯವು ತನ್ನ ಪಾದಗಳನ್ನು ನಡೆಯಬೇಕಾದ ಹಾದಿಯಲ್ಲಿ ಮಾರ್ಗದರ್ಶಿಸುವ ದೀಪವಾಗಿದೆ ಎಂದು ದಾವೀದನು ತನ್ನ ಕೀರ್ತನೆಯಲ್ಲಿ ಹೇಳುತ್ತಾನೆ.
ನೀವು ನೋಡುವ ವ್ಯಕ್ತಿಗಳನ್ನು ಇವರು ಸಾಮಾಜಿಕ ಮಾಧ್ಯಮದಲ್ಲಿನ ಮಾಹಿತಿಯೊಂದಿಗೆ ತನ್ನ ಜೀವನವನ್ನು ಮತ್ತು ಮನೆಯನ್ನು ನಡೆಸುವ ವ್ಯಕ್ತಿಯೋ ಅಥವಾ ದೇವರವಾಕ್ಯದಲ್ಲಿ ಬರುವ ಮಾಹಿತಿಯೊಂದಿಗೆ ತನ್ನ ಮನೆಯನ್ನು ನಡೆಸುವ ವ್ಯಕ್ತಿಯೋ ಎಂದು ನೀವು ಸುಲಭವಾಗಿ ಹೇಳಬಹುದು. ಯಾಕೆಂದರೆ ವ್ಯತ್ಯಾಸ ಯಾವಾಗಲೂ ಸ್ಪಷ್ಟವಾಗಿರುತ್ತದೆ.
ಮತ್ತಾಯ 7:24-27 ರಲ್ಲಿ “ಆದ್ದರಿಂದ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವ ಪ್ರತಿಯೊಬ್ಬನೂ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಸಮಾನ. ಮಳೆಯು ಸುರಿದು ಹಳ್ಳಗಳು ಬಂದವು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಆ ಮನೆ ಬೀಳಲಿಲ್ಲ. ಏಕೆಂದರೆ ಅದರ ಅಸ್ತಿವಾರವು ಬಂಡೆಯ ಮೇಲೆ ಕಟ್ಟಲಾಗಿತ್ತು. ಈ ನನ್ನ ಮಾತುಗಳನ್ನು ಕೇಳುವ ಪ್ರತಿಯೊಬ್ಬನು ಅವುಗಳಂತೆ ನಡೆಯದೆ ಹೋದರೆ, ಅವನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿಹೀನನಿಗೆ ಸಮಾನ. ಮಳೆಯು ಸುರಿದು, ಹಳ್ಳಗಳು ಬಂದವು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆಗ ಆ ಮನೆ ಕುಸಿದು ಬಿತ್ತು. ಅದರ ಬೀಳುವಿಕೆಯು ಭಯಂಕರವಾಗಿತ್ತು,” ಎಂದು ಹೇಳುತ್ತಾನೆ
ಕರ್ತನಾದ ಯೇಸು ಹೇಳಿದ್ದೇನೆಂದರೆ ವಾಕ್ಯವು ಅಡಿಪಾಯವಾಗಿದೆ, ಅಡಿಪಾಯವು ಭದ್ರವಾಗಿರುವಾಗ, ಕಟ್ಟಡವು ನಿಲ್ಲುತ್ತದೆ. ಆದ್ದರಿಂದ ಸಿದ್ಧಾಂತ ಮತ್ತು ಮಾಟಮಂತ್ರದ ಗಾಳಿಯು ಜನರನ್ನು ಹಾರಿಬಿಡಿಸಲು ಪ್ರಯತ್ನಿಸುವಾಗ, ವಾಕ್ಯದಿಂದ ಬದುಕುವ ವ್ಯಕ್ತಿ ದೃಢವಾಗಿ ನಿಲ್ಲುತ್ತಾನೆ.
ಆದ್ದರಿಂದ, ನಾವು ಕುಟುಂಬವಾಗಿ ವಾಕ್ಯದ ಜೀವನಶೈಲಿಯನ್ನು ಬೆಳೆಸಿಕೊಳ್ಳಬೇಕು. ನೀವು ಸತ್ಯವೇದವನ್ನು ನಿಮ್ಮ ಕೈಯಲ್ಲಿ ಹಿಡಿದಿರುವುದರಿಂದಲೋ ಅಥವಾ ನಿಮ್ಮ ಮನೆಯ ಪ್ರತಿಯೊಂದು ಕೋಣೆಯಲ್ಲಿ ಸತ್ಯವೇದದ ಪ್ರತಿಯನ್ನು ಇರಿಸಿರುವುದರಿಂದಲೋ ದೇವರ ವಾಕ್ಯವು ನಿಮ್ಮ ಜೀವನದಲ್ಲಿ ಸಕ್ರಿಯವಾಗುವುದಿಲ್ಲ ಮತ್ತು ಕಾರ್ಯನಿರ್ವಹಿಸುವುದೂ ಇಲ್ಲ.ಆದರೆ ನೀವು ವಾಕ್ಯಗಳನ್ನು ಇಟ್ಟು ಮಾತನಾಡುವಾಗ ದೇವರ ವಾಕ್ಯವು ಪ್ರೇರೇಪಿಸಿ ಅದನ್ನು ಕಲಿಸಿದಾಗ, ದೈವಿಕ ಶಕ್ತಿಯು ಬಿಡುಗಡೆಯಾಗುತ್ತದೆ. ದಾವೀದನು ಕೀರ್ತನೆ 119:9-11 ರಲ್ಲಿ "ಯೌವನಸ್ಥನು ಯಾವುದರಿಂದ ತನ್ನ ನಡತೆಯನ್ನು ಶುದ್ಧವಾಗಿಟ್ಟುಕೊಳ್ಳುವನು? ನಿಮ್ಮ ವಾಕ್ಯದ ಪ್ರಕಾರ ಜೀವಿಸುವುದರಿಂದಲೇ.ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಹುಡುಕಿದ್ದೇನೆ; ನಿಮ್ಮ ಆಜ್ಞೆಗಳಿಂದ ನಾನು ತಪ್ಪಿಹೋಗದಂತೆ ಮಾಡಿರಿ. ನಿಮಗೆ ವಿರೋಧವಾಗಿ ಪಾಪಮಾಡದ ಹಾಗೆ ನನ್ನ ಹೃದಯದಲ್ಲಿ ನಿಮ್ಮ ವಾಕ್ಯವನ್ನು ಬಚ್ಚಿಟ್ಟುಕೊಂಡಿದ್ದೇನೆ." ಎಂದು ಹೇಳುತ್ತಾನೆ. ನೀವು ಈ ಕೀರ್ತನೆಗಳನ್ನು ನೋಡಿದ್ದೀರಾ? ಹಾಗಾದರೆ ನಿಮ್ಮ ಮಕ್ಕಳು ದಾರಿ ತಪ್ಪದಂತೆ ಅವರಿಗೆ ವಾಕ್ಯವನ್ನು ಕಲಿಸಬೇಕಾಗಿದೆ. ಕೆಲವು ಜನರು ತಮ್ಮ ಮಕ್ಕಳಿಗೆ ಅವರ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಕಲಿಸಲು ಇಷ್ಟಪಡುತ್ತಾರೆ, ಹೌದು, ಅದು ಒಳ್ಳೆಯದು, ಆದರೆ ನಿಮ್ಮ ಸಂಸ್ಕೃತಿಯನ್ನು ಅವರು ಸಮುದಾಯದೊಳಗೆ ಇರುವಾಗ ಮಾತ್ರ ಅಭ್ಯಾಸ ಮಾಡಲಾಗುತ್ತದೆ. ಅವರು ಬೇರೆಡೆ ಇದ್ದರೆ ಮುಂದೆ ಏನು; ಆ ಕ್ಷಣದಲ್ಲಿ, ದೇವರ ವಾಕ್ಯವು ಅವರಿಗೆ ಏನು ಮಾಡಬೇಕೆಂದು ನಿರ್ದೇಶಿಸಲು ದಿಕ್ಸೂಚಿಯಾಗಿದೆ. ಸತ್ಯವೇದವು ಜಾಗತಿಕವಾಗಿ ಪ್ರಸ್ತುತವಾಗಿರುವ ಏಕೈಕ ಪುಸ್ತಕವಾಗಿದೆ.
ಆದ್ದರಿಂದ, ನಿಮ್ಮ ಮನೆಯ ಕುರಿತು ನಿಮ್ಮ ಕುಟುಂಬ ಸದಸ್ಯರ ಕುರಿತು , ನಿಮ್ಮ ಭೂಮಿ ಮತ್ತು ಆಸ್ತಿಗಳ ಕುರಿತು ವಾಕ್ಯವನ್ನು ಮಾತನಾಡಿ. ನೀವು ನಿಮ್ಮ ಕುಟುಂಬ ಸದಸ್ಯರ ಕುರಿತು ದೇವರ ವಾಕ್ಯವನ್ನು ಮಾತನಾಡುವಾಗ, ನೀವು ಅವರ ಮೇಲೆ ದೈವಿಕ ನಿಯಮವನ್ನು ಹೇರುವವರಾಗಿರುತ್ತೀರಿ. ನೀವು ಭೂಮಿಯ ಮೇಲಿನ ಘಟನೆಗಳ ಮೇಲೆ ದೈವಿಕ ಅಭಿವ್ಯಕ್ತಿಗಳನ್ನು ಬಿಡುಗಡೆ ಮಾಡುವವರಾಗಿರುತ್ತೀರಿ. ನೀವು ನಿಮ್ಮ ದಾರಿಯಲ್ಲಿರುವ ಬೆಟ್ಟಕ್ಕೆ "ಇಲ್ಲಿಂದ ಕಿತ್ತುಕೊಂಡು ಹೋಗು " ಎಂದು ಹೇಳಿ , ಅದು ಅಲ್ಲಿಂದ ಚಲಿಸುವಂತೆ ಮಾಡುವವರಾಗುತ್ತೀರಿ. ನಿಮ್ಮ ಮಕ್ಕಳಿಗೆ ದೇವರ ವಾಕ್ಯವನ್ನು ಕಲಿಸಿ ಮತ್ತು ಅವರು ಯಾವಾಗಲೂ ಅದನ್ನು ಹೇಳುತ್ತಿರಲಿ. ಅವರು ವಾಕ್ಯವು ಏನನ್ನು ಹೇಳುತ್ತದೆಯೋ ಅದನ್ನು ಹೇಳಲು ಕಲಿಯಬೇಕೇ ವಿನಃ ಅವರು ಏನು ಭಾವಿಸುತ್ತಾರೆಯೋ ಅಥವಾ ಆರ್ಥಿಕತೆ ಏನು ಹೇಳುತ್ತದೆ ಎಂಬುದನಲ್ಲ.
"ನಿಮ್ಮ ನೇಗಿಲುಗಳ ಗುಳಗಳನ್ನು ಖಡ್ಗಗಳನ್ನಾಗಿಯೂ ನಿಮ್ಮ ಕುಡುಗೋಲುಗಳನ್ನು ಈಟಿಗಳನ್ನಾಗಿಯೂ ಬಡಿಯಿರಿ ಬಲಹೀನನು ಸಹ ನಾನು ಶಕ್ತಿವಂತನು ಎಂದು ಹೇಳಲಿ." ಎಂದು ಯೋವೇಲ 3:10 ಹೇಳುತ್ತದೆ.
ಅವರು ದುರ್ಬಲರೆಂದು ಭಾವಿಸುತ್ತಿದ್ದಾರೆಯೇ? ಅವರು ತಮ್ಮ ಜೀವನದ ಮೇಲೆ ದೇವರ ಶಕ್ತಿಯನ್ನು ಘೋಷಿಸಲಿ. ದೇವರ ವಾಕ್ಯವು ಶುದ್ಧೀಕರಣ ಶಕ್ತಿಯನ್ನು ಹೊಂದಿದೆ. ಯೇಸು ಯೋಹಾನ 15:3 ರಲ್ಲಿ, "ನಾನು ನಿಮಗೆ ಹೇಳಿದ ವಾಕ್ಯದಿಂದಾಗಿ ನೀವು ಈಗಾಗಲೇ ಶುದ್ಧರಾಗಿದ್ದೀರಿ" ಎಂದು ಹೇಳಿದನು. ದೇವರ ವಾಕ್ಯವು ನಮ್ಮನ್ನು ಶುದ್ಧೀಕರಿಸುತ್ತದೆ. ನಿಮ್ಮ ಮಕ್ಕಳು ಕೆಲವು ರೀತಿಯಲ್ಲಿ ವ್ಯಸನಿಯಾಗಿದ್ದಾರೆಯೇ? ಅವರು ಕೆಲವು ದೌರ್ಬಲ್ಯಗಳೊಂದಿಗೆ ಹೋರಾಡುತ್ತಿದ್ದಾರೆಯೇ? ಅವರು ದೇವರ ವಾಕ್ಯವನ್ನು ಅಧ್ಯಯನ ಮಾಡಲು ನಿಯಮಿತ ಸಮಯವನ್ನು ಹೊಂದಲಿ.
Bible Reading: Judges 10-12
ಪ್ರಾರ್ಥನೆಗಳು
ತಂದೆಯೇ, ನಿಮ್ಮ ವಾಕ್ಯದ ಬೆಳಕಿಗಾಗಿ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನಿನ್ನ ವಾಕ್ಯವನ್ನು ಅನುಸರಿಸಲು ನನಗೆ ಸಹಾಯ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ವಾಕ್ಯ ಮತ್ತು ನಿಮ್ಮ ಮಾರ್ಗಗಳನ್ನು ಅನುಸರಿಸಲು ಬೇಕಾದ ಕೃಪೆಗಾಗಿ ನಾನು ಪ್ರಾರ್ಥಿಸುತ್ತೇನೆ. ನಿನ್ನ ವಾಕ್ಯದಿಂದ ನನ್ನ ಕುಟುಂಬವನ್ನು ಪವಿತ್ರಗೊಳಿಸುತ್ತೇನೆ ಮತ್ತು ನಮ್ಮ ಜೀವನವು ನಿನ್ನ ವಾಕ್ಯದಿಂದ ನಡೆಸಲ್ಪಡಬೇಕೆಂದು ನಾನು ಯೇಸುನಾಮದಲ್ಲಿ ಆಜ್ಞಾಪಿಸುತ್ತೇನೆ. ಆಮೆನ್
Join our WhatsApp Channel

Most Read
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಹೋರಾಡಿ
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ನಿತ್ಯತ್ವದ ಮನಃಸ್ಥಿತಿಯಲ್ಲಿ ಬದುಕುವುದು.
ಅನಿಸಿಕೆಗಳು