ಅನುದಿನದ ಮನ್ನಾ
1
0
43
ಶರಣಾಗತಿಯಲ್ಲಿರುವ ಸ್ವಾತಂತ್ರ್ಯ
Monday, 5th of May 2025
Categories :
ಶರಣಾಗತಿ (Surrender)
"ನೌಕೆಯವರು ಅದನ್ನು ಮೇಲಕ್ಕೆಳೆದು ಹಗ್ಗಗಳಿಂದ ನೌಕೆಯ ಕೆಳಭಾಗಕ್ಕೆ ಬಿಗಿಯಾಗಿ ಕಟ್ಟಿದರು. ಸುರ್ತಿಸ್ ಎಂಬ ಉಸುಬಿನಲ್ಲಿ ನೌಕೆ ಸಿಕ್ಕಿಕೊಳ್ಳಬಹುದೆಂಬ ಭಯದಿಂದ ಅವರು ನೌಕೆಯ ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಗೆ ನೌಕೆ ತೇಲುವಂತೆ ಬಿಟ್ಟರು. (ಅಪೊಸ್ತಲರ ಕೃತ್ಯಗಳು 27:17)
ಅಪೊಸ್ತಲ ಪೌಲನು ಸೆರೆಯಾಳಾಗಿ ರೋಮ್‌ಗೆ ಅಪಾಯಕಾರಿ ಸಮುದ್ರ ಪ್ರಯಾಣವನ್ನು ಕೈಗೊಳ್ಳುವುದನ್ನು ನಾವಿಲ್ಲಿ ನೋಡುವವರಾಗಿದ್ದೇವೆ. ಅವನು ಪ್ರಯಾಣಿಸುತ್ತಿದ್ದ ಹಡಗು ಭಾರಿ ಬಿರುಗಾಳಿಯನ್ನು ಎದುರಿಸಿತ್ತು, ಚಂಡಮಾರುತದ ಬಲವಾದ ಗಾಳಿಯು ಹಡಗನ್ನು ನಿರಂತರವಾಗಿ ಬಡಿಯುತಿತ್ತು. ಹದಿನಾಲ್ಕು ದಿನಗಳ ಪರ್ಯಾಂತರವೂ ಸೂರ್ಯನಾಗಲೀ ನಕ್ಷತ್ರಗಳಲಾಗಲೀ ಕಾಣುತ್ತಿರಲಿಲ್ಲವಾದರಿಂದ, ನಾವಿಕರೆಲ್ಲಾ ದಿಗ್ಭ್ರಮೆಗೊಂಡು ಭಯಭೀತರಾಗಿ ಹೋಗಿದ್ದರು. ಹಡಗನ್ನು ನಿಯಂತ್ರಿಸಲು ಮತ್ತು ಅದರ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ಅವರು ಮಾಡಿದ ಎಲ್ಲಾ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಉಗ್ರ ಗಾಳಿಯೇ ಮೇಲುಗೈ ಸಾಧಿಸಿತ್ತು.ಅವರು ತಾವಿನ್ನು ಹೋರಾಡುವುದು ವ್ಯರ್ಥ ಎಂಬುದನ್ನು ಗುರುತಿಸಿ, ಅವರು ಹಾಯಿಗಳನ್ನು ಕೆಳಕ್ಕೆ ಇಳಿಸಲು ಮತ್ತು ಗಾಳಿಯೇ ಅವರನ್ನು ಮಾರ್ಗದರ್ಶಿಸಲೆಂದು ಅನುವುಮಾಡಿಕೊಡಲು ನಿರ್ಧರಿಸಿದರು.
ಈ ವೃತ್ತಾಂತವು ನಮ್ಮ ಸ್ವಂತ ಜೀವನಕ್ಕೂ ಅನ್ವಯಿಸಿಕೊಳ್ಳಬಹುದಾದ ಆಳವಾದ ಆತ್ಮೀಕ ಪಾಠಗಳನ್ನು ಹೊಂದಿದೆ. ನಾವಿಕರು ಉಗ್ರವಾದ ಚಂಡಮಾರುತವನ್ನು ಎದುರಿಸಿದಂತೆಯೇ, ನಾವು ಸಹ ನಮ್ಮನ್ನು ಆವರಿಸುವ ಬೆದರಿಕೆಯೊಡ್ಡುವ ಪ್ರಕ್ಷುಬ್ಧ ಸಂದರ್ಭಗಳನ್ನು ಎದುರಿಸುತ್ತಿರಬಹುದು. ಅಂತಹ ಸಮಯದಲ್ಲಿ, ನಮ್ಮ ಸ್ವಂತ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಅವಲಂಬಿಸಿ ನಮ್ಮ ದಾರಿಯಲ್ಲಿ ಸಾಗಲು ನಾವು ಪ್ರಚೋದಿಸಲ್ಪಡುತ್ತಿರಬಹುದು. ಆದಾಗ್ಯೂ, ಅಪೊಸ್ತಲ ಪೌಲನ ಸಮುದ್ರಯಾನದ ಕಥೆಯು ದೇವರ ಮಾರ್ಗದರ್ಶನಕ್ಕೆ ಶರಣಾಗುವುದರಿಂದ ಅತ್ಯಂತ ಸವಾಲಿನ ಸಂದರ್ಭಗಳಲ್ಲೂ ಅದು ನಮ್ಮನ್ನು ಸುರಕ್ಷಿತವಾಗಿ ಮುನ್ನಡೆಸಬಹುದು ಎಂಬುದನ್ನು ನಮಗೆ ನೆನಪಿಸುತ್ತದೆ.
ನಿಮ್ಮ ಜೀವನದ ಪ್ರತಿಯೊಂದು ಅಂಶವನ್ನೂ ನೀವೇ ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡುತ್ತಿದ್ದೀರಾ ಆದರೆ ಆ ಸಂಗತಿಗಳು ನೀವು ಅಂದುಕೊಂಡಂತೆ ನಡೆಯದಿದ್ದಾಗ ನಿರಾಶೆಗೊಳ್ಳುತ್ತಿದ್ದೀರಾ? ನೀವು ಸಾಧ್ಯವಾದಷ್ಟು ಪ್ರಾರ್ಥನೆ, ನಂಬಿಕೆ ಮತ್ತು ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು ಈ ಎಲ್ಲವನ್ನೂ ಮಾಡಿದ ನಂತರ - ನಾವಿಕರು ಮಾಡಿದಂತೆ ನೀವು ಒಂದು ಹೆಜ್ಜೆ ಹಿಂದಕ್ಕೆ ಇಡಬೇಕಾದ ಸಮಯ ಬರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ಅಲೆಗಳ ಏರಿಳಿತದ ವಿರುದ್ಧ ಹೋರಾಡುವ ಬದಲು, ನಾವು ನಿಯಂತ್ರಣ ಸಾಧಿಸುವ ಪ್ರಯತ್ನವನ್ನು ತ್ಯಜಿಸುವುದು, ನಿಮ್ಮ ಚಿಂತೆಗಳನ್ನು ಬಿಟ್ಟು ಮತ್ತು ದೇವರ ಕೈಯಲ್ಲಿ ನಿಮ್ಮ ನಂಬಿಕೆಯನ್ನು ಇಡುವುದು ಅತ್ಯಗತ್ಯ.
ನಂಬಿಕೆಯ ಮೇಲೆ ಆಧಾರಗೊಳ್ಳುವುದರ ಮೂಲಕ ದೊರಕುವ ಸಮಾಧಾನವನ್ನು ಸ್ವೀಕರಿಸಿ, ಆತನು ನಿಮ್ಮನ್ನು ಗಮನಿಸುತ್ತಿದ್ದಾನೆಂದು ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಪ್ರಗತಿಗೆ ಅಡ್ಡಿಮಾಡಲು ಉದ್ದೇಶಿಸಲಾದ ಗಾಳಿಗಳನ್ನು ಪರಿವರ್ತಿಸಿ, ನಿಮ್ಮ ಪ್ರಯಾಣದಲ್ಲಿ ನಿಮ್ಮನ್ನು ಮುಂದಕ್ಕೆ ಸಾಗಿಸಲು ಅವುಗಳ ಮಾರ್ಗವನ್ನೇ ನಿಮ್ಮ ಪ್ರಯಾಣಕ್ಕಾಗಿ ಸರಿಹೊಂದಿಸುವ ಗಮನಾರ್ಹ ಸಾಮರ್ಥ್ಯ ದೇವರಿಗಿದೆ. ಆತನ ದೈವಿಕ ಮಾರ್ಗದರ್ಶನದಲ್ಲಿ ನಂಬಿಕೆ ಇರಿಸಿ ಮತ್ತು ಶರಾಣಾಗುವುದರಿಂದ ಬರುವ ಸ್ವಾತಂತ್ರ್ಯವನ್ನು ಅನುಭವಿಸಿ.
"ಪೂರ್ಣಹೃದಯದಿಂದ ಯೆಹೋವ ದೇವರಲ್ಲಿ ಭರವಸೆ ಇಡು ನಿನ್ನ ಸ್ವಂತ ಬುದ್ಧಿಯ ಮೇಲೆಯೇ ಆಧಾರಗೊಳ್ಳಬೇಡ. ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು. ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವನು" ಎಂದು ಜ್ಞಾನೋಕ್ತಿ 3:5-6 ಹೇಳುತ್ತದೆ. ಈ ದೇವರವಾಕ್ಯವು ನಮ್ಮ ಸ್ವಂತ ಸೀಮಿತ ತಿಳುವಳಿಕೆಗಿಂತಲೂ ದೇವರ ವಿವೇಕ ಮತ್ತು ನಿರ್ದೇಶನದ ಮೇಲೆ ನಾವು ನಂಬಿಕೆ ಇಡಬೇಕೆಂದು ನಮ್ಮನ್ನು ಪ್ರೋತ್ಸಾಹಿಸುತ್ತದೆ.
ನದಿಯ ಮೇಲೆ ತೇಲುತ್ತಿರುವ ಎಲೆಯನ್ನು ಕಲ್ಪಿಸಿಕೊಳ್ಳಿ: ಅದು ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವಾಗ, ಅದು ನದಿಯ ಹಾದಿಯನ್ನೇ ಅನುಸರಿಸುತ್ತಿರುತ್ತದೆ, ಯಾವುದೇ ತಿರುವುಗಳಲ್ಲೂ ಸುಲಭವಾಗಿ ಚಲಿಸುತ್ತದೆ. ಎಲೆಯು ಪ್ರವಾಹದ ವಿರುದ್ಧ ಹೋರಾಡುವುದಿಲ್ಲ; ಬದಲಾಗಿ, ಅದು ಪ್ರವಾಹಕ್ಕೆ ಮಣಿದು, ನದಿಯೇ ತನ್ನ ಪ್ರಯಾಣವನ್ನು ನಿರ್ದೇಶಿಸಲು ಅನುವು ಮಾಡಿಕೊಡುತ್ತದೆ. ಅದೇ ರೀತಿಯಲ್ಲಿ, ನಾವೇ ಪರಿಸ್ಥಿತಿಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದನ್ನು ತ್ಯಜಿಸಿ ದೇವರ ಚಿತ್ತಕ್ಕೆ ಶರಣಾದಾಗ, ಜೀವನದ ಬಿರುಗಾಳಿಗಳ ನಡುವೆಯೂ ನಾವು ಸಮಾಧಾನವನ್ನೂ ಮತ್ತು ಮಾರ್ಗ ಸೂಚಿಯನ್ನೂ ಪಡೆದುಕೊಳ್ಳಬಹುದು.
ಬಿರುಗಾಳಿಯ ಪ್ರಯಾಣದ ಸಮಯದಲ್ಲಿ ದೇವರ ಮೇಲೆ ಪೌಲನಿಟ್ಟಿದ್ದ ನಂಬಿಕೆಯ ಕಥೆಯು ನಮಗೆ ಮತ್ತೊಂದು ಸ್ಪೂರ್ತಿದಾಯಕ ಅಂಶವಾಗಿದೆ. ಅಪೊಸ್ತಲರ ಕೃತ್ಯಗಳು 27:25 ರಲ್ಲಿ, ಅವನು ತನ್ನ ಸಹ ಪ್ರಯಾಣಿಕರಿಗೆ " ಆದ್ದರಿಂದ ಗೆಳೆಯರೇ, ಧೈರ್ಯಗೊಳ್ಳಿರಿ, ನನಗೆ ಹೇಳಿದಂತೆಯೇ ಸಂಭವಿಸುವುದೆಂದು ನಾನು ದೇವರನ್ನು ನಂಬುತ್ತೇನೆ." ದೇವರ ವಾಗ್ದಾನಗಳ ಮೇಲೆ ಪೌಲನಿಟ್ಟಿದ್ದ ಅಚಲ ನಂಬಿಕೆ ಮತ್ತು ದೇವರ ಸಾನಿಧ್ಯದಲ್ಲಿ ಸಾಂತ್ವನವನ್ನು ಕಂಡುಕೊಳ್ಳುವ ಅವನ ಸಾಮರ್ಥ್ಯವು ಪ್ರತಿಕೂಲತೆಯನ್ನು ನಿವಾರಿಸುವಲ್ಲಿ ನಂಬಿಕೆಯಲ್ಲಿರುವ ಬಲವನ್ನು ಪ್ರದರ್ಶಿಸುತ್ತದೆ.
Bible Reading: 2 Kings 5-7
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿನ್ನ ಬಲವು ಗಾಳಿಯನ್ನೂ ಮತ್ತು ನಾನು ಎದುರಿಸುತ್ತಿರುವ ಬಿರುಗಾಳಿಗಳನ್ನೂ ಮೀರಿಸುವಂತ ದ್ದಾಗಿದೆ ಎಂದು ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನೀನು ಮಾತ್ರವೇ ಬದಲಾಯಿಸಬಹುದಾದ ಸಂದರ್ಭಗಳಲ್ಲಿ ನಾನು ನಿನಗೇ ಶರಣಾಗುವಂತೆ ನನಗೆ ಮಾರ್ಗದರ್ಶನ ನೀಡು ನಿನ್ನ ಸಾನಿಧ್ಯದಲ್ಲಿ ಸಮಾಧಾನವನ್ನು ಕಂಡುಕೊಳ್ಳುವತ್ತ ಗಮನಹರಿಸಲು ನನಗೆ ಸಹಾಯ ಮಾಡು. ನೀನೇ ಎಲ್ಲವನ್ನು ನಿಯಂತ್ರಿಸುವವನಾಗಿದ್ದೀ ಎಂಬುದನ್ನು ನಾನು ನಂಬುತ್ತೇನೆ ಮತ್ತು ಆ ನಂಬಿಕೆಯಲ್ಲಿಯೇ ದೃಢವಾಗಿ ನಿಲ್ಲಲು ನಾನು ಬದ್ಧನಾಗಿದ್ದೇನೆ. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel

Most Read
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
● ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ
● ನೆಪ ಹೇಳುವ ಕಲೆ
ಅನಿಸಿಕೆಗಳು