"ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ."ಯಾಕೋಬ (1:4 NKJV) ಹೇಳುತ್ತಾನೆ. ಜೀವನದ ಬಿರುಗಾಳಿಗಳ ಮೂಲಕ, ದೇವರು ನಮ್ಮನ್ನು ಹೊಚ್ಚ ಹೊಸ ಸೃಷ್ಟಿಯಾಗಿ ಪರಿಷ್ಕರಿಸುತ್ತಿದ್ದು, ಇದು ಆತನ ಪ್ರೀತಿ ಮತ್ತು ಕೃಪೆಗೆ ಸಾಕ್ಷಿಯಾಗಿದೆ.
ನಾವು ಯಾವುದೇ ಪರೀಕ್ಷೆಗಳು ಮತ್ತು ಕ್ಲೇಶಗಳನ್ನು ಎದುರಿಸುತ್ತಿದ್ದರೂ, ದೇವರ ದೃಷ್ಟಿಯಲ್ಲಿ ನಮ್ಮ ನಿಜವಾದ ಮೌಲ್ಯವನ್ನು ನಾವು ಎಂದಿಗೂ ಮರೆಯಬಾರದು. ಕರ್ತನಾದ ಯೇಸು ನಿಷ್ಪ್ರಯೋಜಕವಾದದ್ದಕ್ಕಾಗಿ ತನ್ನ ಅಮೂಲ್ಯ ರಕ್ತವನ್ನು ಚೆಲ್ಲಲಿಲ್ಲ; ಆತನು ಅನಂತವಾಗಿ ಮೌಲ್ಯಕರಿಸಿದ ಪೋಶಿಸುತ್ತಿರುವ ನನ್ನ ಹಾಗೂ ನಿಮ್ಮಲ್ಲಿ ಪ್ರತಿಯೊಬ್ಬರಿಗಾಗಿಯೂ ತನ್ನ ಜೀವವನ್ನೇ ಕೊಟ್ಟುಬಿಟ್ಟನು. ನಾವು ಜೀವನದ ಬಿರುಗಾಳಿಗಳಲ್ಲಿ ದಿಕ್ಕನ್ನು ಅರಸುವಾಗ , ನಾವು ಉನ್ನತ ಬ್ರ್ಯಾಂಡ್ ನವರು ಅಪ್ರತಿಮ ಬ್ರಾಂಡ್ ನಿರ್ವಾಹಕನಾದ ದೇವರ ಸ್ವತಃ ಕಾಳಜಿ ಮತ್ತು ಉದ್ದೇಶದಿಂದಲೇ ರಚಿಸಲ್ಪಟ್ಟಿದ್ದೇವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, .
ನಮ್ಮ ಜೀವನದ ಕುರಿತು ದೇವರಿಗಿರುವ ಜಾಗ್ರತೆ ಮತ್ತು ತಾಳ್ಮೆಯ ಕಾರ್ಯವು ಗಮನಾರ್ಹವಾದುದು. ಆತನು ನಮ್ಮ ಅಪೂರ್ಣತೆಗಳನ್ನು ಪ್ರೀತಿಯಿಂದ ತೆಗೆದುಹಾಕಿ , ನಮ್ಮನ್ನು ನಮ್ಮ ಅತ್ಯುತ್ತಮ ಆವೃತ್ತಿಯಾಗಿ ಪರಿಷ್ಕರಿಸುತ್ತಾ ಹೋಗುತ್ತಾನೆ. ನಾವು ಎದುರಿಸುವ ಪ್ರತಿಯೊಂದು ಸವಾಲಿನೊಂದಿಗೆ, ಆತನು ನಮ್ಮ ಚಾರಿತ್ರ್ಯ ವನ್ನು ಬಲಪಡಿಸಿ, ನಮ್ಮ ನಂಬಿಕೆಯನ್ನು ಆಳಗೊಳಿಸಿ ನಮ್ಮ ನಿಜವಾದ ಉದ್ದೇಶವನ್ನು ಪ್ರಕಟ ಪಡಿಸುತ್ತಾನೆ.
ಆದ್ದರಿಂದ ನಿಮ್ಮನ್ನು ನೀವು ಎಂದಿಗೂ ಕೀಳಾಗಿ ನೋಡಬೇಡಿ; ಬದಲಾಗಿ, ನಿಮ್ಮ ಸೃಷ್ಟಿಕರ್ತನ ಪ್ರತಿರೂಪದಲ್ಲಿ ರಚಿಸಲಾದ ಅನನ್ಯ ಮತ್ತು ಅಮೂಲ್ಯವಾದ ಬ್ರ್ಯಾಂಡ್ ಆಗಿ ನಿಮ್ಮನ್ನು ನೀವು ನೋಡಿಕೊಳ್ಳಿ.ನಮ್ಮಲ್ಲಿ ಪ್ರತಿಯೊಬ್ಬಬ್ಬರನ್ನು ಭಯಂಕರವಾಗಿ ಮತ್ತು ಅದ್ಭುತವಾಗಿ ರಚಿಸಲ್ಪಟ್ಟವರಾಗಿದ್ದು ದೇವರು ತನ್ನ ಅಚಲವಾದ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನೆ ಎಂಬುದನ್ನು ನೆನಪಿಡಿ. ಆತನೇ ಪರಿಪೂರ್ಣ ಬ್ರಾಂಡ್ ನಿರ್ವಾಹಕ ಮತ್ತು ನಾವು ಆತನ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ನಂಬಿಕೆ ಇಡುವಾಗ, ಆತನು ನಮ್ಮ ನಿಜವಾದ ಉದ್ದೇಶದತ್ತ ನಮ್ಮನ್ನು ಕರೆದೊಯ್ಯುತ್ತಾನೆ ಎಂದು ನಾವು ವಿಶ್ವಾಸ ಹೊಂದಬಹುದು.
ಯೇಸು ಬಿರುಗಾಳಿಯನ್ನು ಶಾಂತಗೊಳಿಸಿದಾಗ, ಆತನ ಶಿಷ್ಯರು ಆತನ ಶಕ್ತಿಯನ್ನು ನೋಡಿ ಆಶ್ಚರ್ಯಚಕಿತರಾಗಿ, "ಈತನು ಯಾರಾಗಿರಬಹುದು, ಗಾಳಿ ಮತ್ತು ಸಮುದ್ರವು ಸಹ ಆತನಿಗೆ ವಿಧೇಯವಾಗುತ್ತದೆ!" ಎಂದು ಭಯದಿಂದ ಉದ್ಗರಿಸಿದರು (ಮಾರ್ಕ 4:41). ಈ ಭಯದ ಉದ್ಘಾರವು ಬಿರುಗಾಳಿಯಿಂದಲ್ಲ, ಬದಲಾಗಿ ಅವರು ಆಗ ಅನುಭವಿಸಿದ ಶಾಂತತೆಯಿಂದ ಉಂಟಾಗಿತ್ತು. ಈ ಘಟನೆಯು ಪ್ರತಿಯೊಂದು ಭಯವನ್ನು ದೇವರ ಭಯದಿಂದ ಜಯಿಸಬಹುದು ಎಂಬ ಸತ್ಯವನ್ನು ಹೊರತರುತ್ತದೆ. ದೇವರ ಭಯದಂತೆ ಯಾವುದೂ ಸಹ ನಮ್ಮನ್ನು ಧೈರ್ಯಶಾಲಿಗಳನ್ನಾಗಿ ಮಾಡುವುದಿಲ್ಲ. "ದೇವರಿಗೆ ಭಯಪಡಿರಿ, ಮತ್ತು ನಿಮಗೆ ಈ ಭಯವಿರಬೇಕೇ ವಿನಃ ಬೇರಾವುದೂ ಅಲ್ಲಾ." ಎಂದು ದೇವರ ಮನುಷ್ಯನೊಬ್ಬ ಒಮ್ಮೆ ಹೇಳಿದ್ದಾರೆ.
ಜೀವನದಲ್ಲಿ ನಾವು ಎದುರಿಸುವ ಪ್ರತಿಯೊಂದು ಬಿರುಗಾಳಿಯು ದೇವರ ಸ್ವಭಾವ ಮತ್ತು ಆತನ ಶಕ್ತಿಯ ಕುರಿತು ಆಳವಾದ ತಿಳುವಳಿಕೆಯನ್ನು ನಾವು ಪಡೆದುಕೊಳ್ಳುವಂತ ಒಂದು ಅನನ್ಯ ಅವಕಾಶವನ್ನು ನೀಡಿ, ಇದು ಅಂತಿಮವಾಗಿ ರೂಪಾಂತರದ ಪ್ರಕಟಣೆಗೆ ಕಾರಣವಾಗುತ್ತದೆ. ಒಂದು ಪ್ರಕಟಣೆಯು ನಿಮ್ಮ ಜೀವನದಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡುತ್ತದೆ. ದೇವರ ಸ್ವಭಾವದ ಪ್ರಕಟಣೆಯು ನಮ್ಮ ನಂಬಿಕೆಯನ್ನು ಬಲಪಡಿಸುವುದಷ್ಟೇ ಅಲ್ಲದೆ ನಮ್ಮ ಜೀವನದಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡುತ್ತದೆ. ಇದು ನಮ್ಮ ದೃಷ್ಟಿಕೋನವನ್ನು ಮರುರೂಪಿಸಿ ಸವಾಲುಗಳಿಗೆ ನಾವು ಪ್ರತಿಕ್ರಿಯಿಸುವ ವಿಧಾನವನ್ನೇ ಬದಲಾಯಿಸಿ ಬಿಡುತ್ತದೆ.
ನಿಮ್ಮಲ್ಲಿ ಕೆಲವರು ಮಾರಣಾಂತಿಕ ಕಾಯಿಲೆಗಳನ್ನು ಎದುರಿಸುತ್ತಿರುವಾಗ ವೈದ್ಯರು ಬದುಕುಳಿಯುವ ಕುರಿತು ಭರವಸೆ ತೀರಾ ಕಡಿಮೆ ಎಂದು ಹೇಳಿದ್ದಿರಬಹುದು . ಆದರೂ, ಕರ್ತನ ಕರುಣೆ ಮತ್ತು ದೈವಿಕ ಹಸ್ತಕ್ಷೇಪದ ಮೂಲಕ, ನೀವು ಲಾಜರನಂತೆ ಸಮಾಧಿಯಿಂದ ಹೊರಬಂದು ವಿಜಯಶಾಲಿಯಾಗಿ ಹೊರಹೊಮ್ಮಿ ಇಂದು ಮತ್ತೆ ಜೀವಂತವಾಗಿದ್ದೀರಿ. ಈ ಅನುಭವವು ಯೇಸುವೇ ಸ್ವಸ್ಥತ ಗಾರನೆಂದು ನಿಮಗೆ ಒಂದು ಆಳವಾದ ಪ್ರಕಟಣೆಯನ್ನೇ ನೀಡಿದೆ ಅಲ್ಲವೇ.
ಈಗ ನೀವು ಈ ನೂತನ ತಿಳುವಳಿಕೆಯೊಂದಿಗೆ ಶಸ್ತ್ರಸಜ್ಜಿತರಾಗಿ, ಮುಂದಿನ ಬಾರಿ ನೀವು "ಇದು ಶವಪೆಟ್ಟಿಗೆಗೆ ಹೋಗುವ ರೋಗಿ " ಎಂದು ಹೇಳುವಂತ ಯಾರನ್ನಾದರೂ ಭೇಟಿಯಾದಾಗ "ಇಲ್ಲ! ಯೇಸು ಗುಣಪಡಿಸುವವನು" ಎಂದು ಆತ್ಮವಿಶ್ವಾಸದಿಂದ ನೀವು ಅವರಿಗೆ ಘೋಷಿಸುತ್ತೀರಿ. ಈ ಪ್ರಕಟಣೆ ಯ ನಂಬಿಕೆಯಲ್ಲಿ ದೃಢವಾಗಿ ನಿಲ್ಲಲು ಮತ್ತು ದೇವರ ಪ್ರೀತಿ, ಕೃಪೆ ಮತ್ತು ಗುಣಪಡಿಸುವ ಶಕ್ತಿಗೆ ಸಾಕ್ಷಿಯಾಗಲು ಅದು ನಿಮಗೆ ಅಧಿಕಾರ ನೀಡಿರುತ್ತದೆ.
ಆದ್ದರಿಂದ, ನೀವು ಚಂಡಮಾರುತದ ಮೂಲಕ ಹೋಗುವಾಗ, ನೀವು ಪಡೆದ ಪ್ರಕಟನೆಗಳನ್ನು ನೆನಪಿಸಿಕೊಂಡು ಗಾಳಿ ಮತ್ತು ಸಮುದ್ರವನ್ನು ಶಾಂತಗೊಳಿಸುವಾತನಲ್ಲಿ ನೀವು ನಂಬಿಕೆ ಇಡುವುದನ್ನೇ ಮುಂದುವರಿಸುವಾಗ ಅವು ನಿಮ್ಮ ನಂಬಿಕೆಯನ್ನು ಮತ್ತಷ್ಟು ಉತ್ತೇಜಿಸಲಿ.
Bible Reading: 1 Chronicles 1-3
ಪ್ರಾರ್ಥನೆಗಳು
ತಂದೆಯೇ, ನೀನು ನನ್ನಲ್ಲಿ ಕಾರ್ಯ ಮಾಡುವವನಾಗಿದ್ದು ನಾನು ನಿನ್ನ ಮೂಲಕ ಸರ್ವ ವಿಷಯದಲ್ಲೂ ಸಂಪೂರ್ಣನಾಗಿರುವುದರಿಂದಲೂ ಯಾವುದೇ ಒಳ್ಳೆಯದಕ್ಕೆ ಏನೂ ಕೊರತೆಯಿಲ್ಲವರಾಗಿ ನನ್ನನ್ನು ಮಾಡಿದಕ್ಕಾಗಿಯೂ ನಿನಗೇ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ಪವಿತ್ರಾತ್ಮನೇ, ನಾನು ಎದುರಿಸುತ್ತಿರುವ ಎಲ್ಲಾ ಬಿರುಗಾಳಿಗಳನ್ನು ಜಯಿಸಲು ನೀನು ನನಗೆ ಕಲಿಸಿದ್ದನ್ನೆಲ್ಲಾ ನನ್ನ ನೆನಪಿಗೆ ಯೇಸುನಾಮದಲ್ಲಿ ಪ್ರಕಟಿಸು. ಆಮೆನ್!
Join our WhatsApp Channel

Most Read
● ಪುರುಷರು ಏಕೆ ಪತನಗೊಳ್ಳುವರು -4● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
● ನೀವಿನ್ನೂ ತಡಮಾಡುತ್ತಿರುವುದೇಕೆ?
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
ಅನಿಸಿಕೆಗಳು