ಅನುದಿನದ ಮನ್ನಾ
2
2
121
ಭಸ್ಮವಾಗುವಿಕೆಯ ( ಅತಿಯಾದ ಆಯಾಸದಿಂದಾಗುವ ದೈಹಿಕ ಬಳಲಿಕೆ ಮತ್ತು ಮಾನಸಿಕ ಖಿನ್ನತೆ) ವ್ಯಾಖ್ಯಾನ
Thursday, 15th of May 2025
Categories :
ಒತ್ತಡ (Stress)
"ಕಳವಳವು ಹೃದಯವನ್ನು ಭಾರವಾಗಿಸುತ್ತದೆ, ಆದರೆ ಕನಿಕರದ ಮಾತು ಅದನ್ನು ಹುರಿದುಂಬಿಸುತ್ತದೆ." ಎಂದು ಜ್ಞಾನೋಕ್ತಿ 12:25 ಹೇಳುತ್ತದೆ.ಆತಂಕ ಮತ್ತು ಒತ್ತಡದ ಭಾವನೆಗಳು ಈ ಪೀಳಿಗೆಗೆ ಮಾತ್ರ ಹೊಸ ಪರಿಕಲ್ಪನೆಗಳೇನೂ ಅಲ್ಲ ಮತ್ತು ಅದು ಹೊಸದೂ ಅಲ್ಲ. ವಾಸ್ತವವಾಗಿ, "ಸೂರ್ಯನ ಕೆಳಗೆ ಹೊಸದೇನೂ ಇಲ್ಲ." ಎಂದು ಪ್ರಸಂಗಿ 1:9 ನಮಗೆ ಹೇಳುತ್ತದೆ,ಸತ್ಯವೇದದ ಕಾಲದಲ್ಲಿಯೂ ಸಹ, ಜನರು ಭಾವನಾತ್ಮಕವಾದ ಒತ್ತಡ ಮತ್ತು ಬಳಲಿಕೆಯನ್ನು ಎದುರಿಸಿದ್ದರು.
ನೀವು ಭಸ್ಮವಾಗುವಿಕೆಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?
ನಿಮ್ಮ ಮೇಲೆ ಇರಿಸಲಾದ ಬೇಡಿಕೆಗಳು ನಿಮಗೆ ಲಭ್ಯವಿರುವ ಸಂಪನ್ಮೂಲಗಳನ್ನು ಮೀರಿ ಹೋದಾಗ, ಅದು ನಿಮ್ಮಲ್ಲಿ ಪರಿಪೂರ್ಣವಾಗಿ ಭಸ್ಮವಾಗುವಿಕೆಯನ್ನು ಹುಟ್ಟು ಹಾಕುತ್ತದೆ. ನಿಮ್ಮಿಂದ ತುಂಬಾ ನಿರೀಕ್ಷಿಸಲಾಗುತ್ತಿದೆ ಎಂದು ನೀವು ಎಂದಾದರೂ ಭಾವಿಸಿದ್ದೀರಾ?ಅದು ನಿಮಗೆ ಲಭ್ಯವಿರುವ ಸಂಪನ್ಮೂಲಗಳನ್ನು ಮೀರಿದೆಯೇ ? ನೀವು ಇನ್ನೂ ಸ್ವಲ್ಪ ಕಾಲ ಹಾಗೆ ಜೀವನವನ್ನು ನಡೆಸುತ್ತಿದ್ದರೆ, ನೀವು ಭಸ್ಮವಾಗುವಿಕೆಯ ಕಡೆಗೆ ಧಾವಿಸುತ್ತಿದ್ದೀರಿ ಎಂದು ನಾನು ನಿಮಗೆ ಎಚ್ಚರಿಸುತ್ತೇನೆ.
ಭಸ್ಮವಾಗುವಿಕೆ ಎಂದರೆ ಅತಿಯಾದ ಮತ್ತು ದೀರ್ಘಕಾಲದ ಒತ್ತಡದಿಂದ ಉಂಟಾಗುವ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಬಳಲಿಕೆಯ ಸ್ಥಿತಿ. ಒಬ್ಬ ವ್ಯಕ್ತಿಯು ಅತಿಯಾಗಿ ಭಾವನಾತ್ಮಕವಾಗಿ ದಣಿದು ಅವನ ಮೇಲಿಟ್ಟ ನಿರಂತರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ಅದು ಸಂಭವಿಸುತ್ತದೆ. ಒತ್ತಡ ಮುಂದುವರಿದಂತೆ, ದೇವರು ಅವರನ್ನು ಏನು ಮಾಡಲು ಕರೆದಿದ್ದಾನೋ ಅದರ ಕುರಿತು ಅವರು ಆಸಕ್ತಿ ಮತ್ತು ಪ್ರೇರಣೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ.
ಭಸ್ಮವಾಗುವುದು ಒಟ್ಟಾರೆಯಾಗಿ ಆರೋಗ್ಯ ಮತ್ತು ಆ ವ್ಯಕ್ತಿಯ ಯೋಗಕ್ಷೇಮ ಸ್ಟಿತಿಯ ಕುಸಿತಕ್ಕೆ ಕಾರಣವಾಗಬಹುದು. ಇದು ಭಸ್ಮವಾಗುವುದನ್ನು ಅನುಭವಿಸುತ್ತಿರುವ ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಅವರ ಎಲ್ಲಾ ಸಂಬಂಧಗಳ ಮೇಲೂ ಪರಿಣಾಮ ಬೀರಿ ಅವರ ಪರಿಸರವನ್ನು ಬಹಳ ವಿಷಕಾರಿಯನ್ನಾಗಿ ಮಾಡಿಬಿಡುತ್ತದೆ.
ಸಾಂಕೇತಿಕವಾಗಿ ಹೇಳಬೇಕೆಂದರೆ ನೀವು ಮನೆಯಲ್ಲಿ ಬುಲ್‌ಡಾಗ್ ರೀತಿಯಲ್ಲಿ ರೂಪಾಂತರಗೊಳ್ಳುತ್ತೀರಿ. ನಿಮ್ಮ ಸಂಗಾತಿಯು ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದಾಗಲೆಲ್ಲಾ, ನೀವು ಅನಿರೀಕ್ಷಿತವಾಗಿ ಅವರ ಮೇಲೆ ಸೇಡು ತೀರಿಸಿಕೊಳ್ಳಲಾರಾಂಭಿಸಿ, ಅವರಿಗೆ ನೋವನ್ನೂ ಮತ್ತು ಗೊಂದಲವನ್ನೂ ಉಂಟು ಮಾಡಲಾರಾಂಭಿಸುತ್ತೀರಿ. ನಿಮ್ಮೊಡನೆ ಒಮ್ಮೆಯಾದರೂ ಮಾತಾನಾಡಬೇಕೆಂದು ಬಯಸುವ ನಿಮ್ಮ ಮಕ್ಕಳು ಸಹ ನಿಮ್ಮ ಈ ಅಪ್ರಚೋದಿತ ವಾಗ್ದಾಳಿಗಳಿಗೆ ಗುರಿಯಾಗಿ ಇದು ಅವರಲ್ಲಿನ ಉತ್ಸಾಹವನ್ನೇ ಕುಗ್ಗಿಸಿ ಬಿಡುತ್ತದೆ.
ಕುಟುಂಬ ಸದಸ್ಯರು ನೀವೇಕೆ ಕುಟುಂಬಕ್ಕಾಗಿ ಸಮಯ ನೀಡುತ್ತಿಲ್ಲ ಎಂದು ಪ್ರಶ್ನಿಸಲು ಪ್ರಾರಂಭಿಸಿದಾಗ ಮನೆಯಲ್ಲಿನ ವಾತಾವರಣವು ಉದ್ವಿಗ್ನ ಗೊಂಡು ವಿಷಕಾರಿಯಾಗುತ್ತದೆ. ನಿಮ್ಮ ಈ ಅನಿರೀಕ್ಷಿತ ನಡವಳಿಕೆಯ ನೀವು ತೆಗೆದುಕೊಳ್ಳುತ್ತಿರುವ ಈ ಭಾವನಾತ್ಮಕ ಒತ್ತಡದಿಂದ ಅವರನ್ನು ಉಳಿಸುವ ಬದಲು ನೀವು ಕಚೇರಿಯಲ್ಲಿಯೇ ಇದ್ದರೆನೇ ಇನ್ನೂ ಹೆಚ್ಚು ಆಹ್ಲಾದಕರವಾಗಿರುತ್ತದೆಯೇ ಎಂದು ಅವರು ಆಸೆ ಪಡುವವರಾಗುತ್ತಾರೆ.
ಒಂದು ಭೀಕರ ಪ್ರವಾಹದ ನಡುವೆ, ಒಬ್ಬ ವ್ಯಕ್ತಿಯು ತನ್ನ ಛಾವಣಿಯ ಮೇಲೆ ಸಿಲುಕಿಕೊಂಡು "ದೇವರೇ, ದಯವಿಟ್ಟು ನನ್ನನ್ನು ರಕ್ಷಿಸು" ಎಂದು ಅತ್ಯಾಸಕ್ತಿಯಿಂದ ಪ್ರಾರ್ಥಿಸುತ್ತಿದ್ದನು. ಕೊನೆಗೆ, ಒಂದು ಹೆಲಿಕಾಪ್ಟರ್ ಬಂದಿತು, ಆದರೆ ಅವನು "ದೇವರು ನನ್ನನ್ನು ರಕ್ಷಿಸುತ್ತಾನೆ!" ಎಂದು ಕೂಗಿದನು.
ನೀರಿನ ಮಟ್ಟ ಏರುತ್ತಲೇ ಇದ್ದಂತೆ, ಒಂದು ಮೋಟಾರ್ ದೋಣಿ ಸಮೀಪಿಸಿತು, ಆದರೆ ಆ ವ್ಯಕ್ತಿ "ದೇವರರೇ ನನ್ನನ್ನು ರಕ್ಷಿಸುತ್ತಾನೆ!" ಎಂದು ಮೊಂಡುತನದಿಂದ ಪ್ರಾರ್ಥಿಸುತ್ತಿದ್ದನು. ಪ್ರವಾಹ ಮತ್ತಷ್ಟು ತೀವ್ರಗೊಂಡಿತು ಆಗ ಒಬ್ಬ ಧೈರ್ಯಶಾಲಿ ಈಜುಗಾರ ಕಾಣಿಸಿಕೊಂಡನು, ಕೊನೆಯ ಲೈಫ್ ಜಾಕೆಟ್ ಅನ್ನು ನೀಡುತ್ತಾ, ಅದನ್ನು ತೆಗೆದುಕೊಳ್ಳುವಂತೆ ಆ ವ್ಯಕ್ತಿಗೆ ಬೇಡಿಕೊಂಡನು. ಆದರೆ ಈಗಲೂ , ಆ ವ್ಯಕ್ತಿ ನಿರಾಕರಿಸಿದನು, ದೇವರೇ ಅವನನ್ನು ಕಾಪಾಡಬೇಕೆಂದು ಈಗ ಖಚಿತವಾಯಿತು. ನಂತರ, ಅನಿವಾರ್ಯವಾಗಿ, ಪ್ರವಾಹದ ನೀರು ಅವನನ್ನು ಆವರಿಸಿತು, ಮತ್ತು ಅವನು ಅದರಲ್ಲೇ ಕೊಚ್ಚಿ ಹೋದನು, ಅಂತಿಮವಾಗಿ ಸ್ವರ್ಗಕ್ಕೆ ತಲುಪಿದನು.
ಅಲ್ಲಿ, ಎಲ್ಲರೂ ಸಾಲಿನಲ್ಲಿ ನಿಂತು, ಕರ್ತನಾದ ಯೇಸುವನ್ನು ಭೇಟಿಯಾಗುವ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆಳವಾಗಿ ಮುಖ ಗಂಟಿಕ್ಕಿಕೊಂಡಿದ್ದ ಆ ವ್ಯಕ್ತಿಯನ್ನು ಹೊರತುಪಡಿಸಿ ಎಲ್ಲರೂ ನಗುತ್ತಿದ್ದರು. ಯೇಸು ಆತನ ಬಳಿಗೆ ಬಂದು, ಆತನ ಕೈ ಕುಲುಕಿ, ಆತನನ್ನು ಸ್ವರ್ಗಕ್ಕೆ ಸ್ವಾಗತಿಸಿ, ಆತನ ಅತೃಪ್ತ ಮುಖಭಾವಕ್ಕೆ ಕಾರಣವೇನೆಂದು ಕೇಳಿದನು. ಆ ವ್ಯಕ್ತಿ, "ನಾನು ಮೂರು ಬಾರಿ ಪ್ರಾರ್ಥಿಸಿದೆ, ಆದರೆ ನೀನು ನನ್ನನ್ನು ಉಳಿಸಲಿಲ್ಲ" ಎಂದು ಉತ್ತರಿಸಿದನು. "ಓಹ್, ನೀನು ಅದರ ಬಗ್ಗೆ ಅಸಮಾಧಾನಗೊಂಡಿದ್ದೀಯ?" ಎಂದು ಯೇಸು ಪ್ರತಿಕ್ರಿಯಿಸಿದನು.
ಕರ್ತನಾದ ಯೇಸು, "ನನ್ನ ಮಗನೇ, ನಾನು ಕೆಲವು ವಿಷಯಗಳನ್ನು ನಿನಗೆ ಸ್ಪಷ್ಟಪಡಿಸಬೇಕು. ಮೊದಲನೆಯದಾಗಿ, ಹೆಲಿಕಾಪ್ಟರ್ ಬಂದಾಗ, ನಾನು ನಿನ್ನನ್ನು ರಕ್ಷಿಸಲೆಂದೆ ಅದನ್ನು ಕಳುಹಿಸಿದೆ, ಆದರೆ ನೀನು ಅದನ್ನು ತಿರಸ್ಕರಿಸಿದೆ. ಎರಡನೆಯದಾಗಿ, ನಾನು ಜೀವರಕ್ಷಕ ದೋಣಿಯನ್ನು ಸಹ ಕಳುಹಿಸಿದೆ, ಆದರೆ ನೀನು ಅದನ್ನೂ ನಿರಾಕರಿಸಿದೆ. ಕೊನೆಯದಾಗಿ, ನಾನೇ ವೈಯಕ್ತಿಕವಾಗಿ ನಿನ್ನ ಬಳಿಗೆ ಈಜಿಬಂದು ಜೀವರಕ್ಷಕ ಜಾಕೆಟ್ ನೀಡಿದೆ , ಆದರೆ ನೀನು ನನ್ನನ್ನೂ ಸಹ ಒಪ್ಪಿಕೊಳ್ಳಲಿಲ್ಲ." ಆ ವ್ಯಕ್ತಿ ಕೇಳುತ್ತಿದ್ದಂತೆ, ಅವನಿಗೆ ಸಹಾಯವು ವಿಭಿನ್ನ ರೂಪಗಳಲ್ಲಿ ಬಂದಿತ್ತು ಎಂಬುದನ್ನು ಅವನು ಅರಿತುಕೊಂಡನು, ಆದರೆ ಅವನಲ್ಲಿದ್ದ ನಿರೀಕ್ಷೆಗಳು ಅವನನ್ನು ಅಲ್ಲಿದ್ದ ದೈವಿಕ ಸಹಾಯಕ್ಕೆ ಕುರುಡಾಗಿಸಿದವು. ಆದ್ದರಿಂದ ದಯವಿಟ್ಟು ಈ ಮನುಷ್ಯನಂತೆ ಇರಬೇಡಿರಿ; ಈ ಸಂದೇಶವನ್ನು ಜೀವರಕ್ಷಕವಾಗಿ ಪರಿಗಣಿಸಿ.
Bible Reading: 1 Chronicles 4-6
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನನ್ನ ಆಶ್ರಯವೂ ಮತ್ತು ಶಕ್ತಿಯ ಮೂಲವೂ ಮತ್ತು ನನ್ನ ಆತ್ಮದ ಪುನಃಸ್ಥಾಪಕನಾಗಿರುವುದಕ್ಕಾಗಿಯೂ ನಿನಗೆ ಸ್ತೋತ್ರ . ನಾನು ಭಸ್ಮವಾಗುವಿಕೆಯನ್ನು ಎದುರಿಸುತ್ತಿರುವಾಗ, ನಾನು ವಿರಾಮ ತೆಗೆದುಕೊಳ್ಳಬೇಕೆಂಬುದನ್ನು ಗುರುತಿಸಲಾಗದಂತೆ ನಿಯಂತ್ರಿಸುವ ಪ್ರಚೋದನೆಯನ್ನು ತೆಗೆದುಹಾಕಿ ಎಂದೆಂದಿಗೂ ವಿಫಲಗೊಳ್ಳದ ನಿನ್ನ ಪ್ರೀತಿಯ ಮೇಲೆಯೇ ಆತುಕೊಳ್ಳವಂತೆ ನನಗೆ ಜ್ಞಾನವನ್ನು ನೀಡು. ನಿನ್ನ ಸನ್ನಿಧಿಯಲ್ಲಿ ವಿಶ್ರಾಂತಿಯನ್ನು ಹೊಂದಿಕೊಳ್ಳುವುದನ್ನು ನನಗೆ ಕಲಿಸಿ, ನಿನ್ನ ಸಮಾಧಾನವು ನನ್ನ ದಣಿದ ಆತ್ಮವನ್ನು ಪುನರುಜ್ಜೀವನಗೊಳಿಸುವಂತೆ ಯೇಸುನಾಮದಲ್ಲಿ ಅನುವು ಮಾಡಿಕೊಡಲಿ. ಆಮೆನ್!
Join our WhatsApp Channel

Most Read
● ಶಾಂತಿಯು ನಿಮ್ಮನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅರಿತುಕೊಳ್ಳಿ.● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
● ಅಪನಂಬಿಕೆ
● ನಿಮ್ಮ ಗತಿಯನ್ನು ಬದಲಾಯಿಸಿ
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ಹೊಟ್ಟೆಕಿಚ್ಚು ಎಂಬ ಪೀಡೆ.
ಅನಿಸಿಕೆಗಳು