ಅನುದಿನದ ಮನ್ನಾ
3
2
313
ಶಾಂತಿಯು ನಿಮ್ಮನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅರಿತುಕೊಳ್ಳಿ.
Friday, 23rd of May 2025
Categories :
ಸಮಾಧಾನ(Peace)
"ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ. (ಯೋಹಾನ 14:27)
ಕರ್ತನಾದ ಯೇಸು, “ನನ್ನ ಶಾಂತಿಯನ್ನು ನಾನು ನಿಮಗೆ ಕೊಡುತ್ತೇನೆ…”
ಎಂದು ಹೇಳಿದನು. ಶಾಂತಿಯು ಕರ್ತನಾದ ಯೇಸು ಕ್ರಿಸ್ತನಿಂದಲೇ ನಮಗೆ ಬಂದ ಕೃಪಾವರವಾಗಿದೆ. ಈ ವಾಕ್ಯವು ಆತನು ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಬಯಸುತ್ತಾನೆ ಎಂಬುದನ್ನು ಸಹ ಪ್ರಕಟಪಡಿಸುತ್ತದೆ. ಯಾರೋ ಒಮ್ಮೆ ಹೀಗೆ ಹೇಳಿದರು, “ಯೇಸು ನಮ್ಮಲ್ಲಿ ವಾಸಿಸಲು ಬಯಸುವುದಿಲ್ಲ, ಆದರೆ ಅವನು ನಮ್ಮೊಳಗೆ ಆಳ್ವಿಕೆ ಮಾಡಲು ಬಯಸುತ್ತಾನೆ.” ಎಂದು.
ಈ ಲೋಕವು ಯಾವುದೋ ಚಟುವಟಿಕೆಗಳನ್ನು ಮಾಡುವ ಮೂಲಕ ಅಥವಾ ಚಿಂತನಶೀಲ ಜೀವನಶೈಲಿಯ ನಡೆಸುವ ಮೂಲಕ ದೊರಕುವ ಶಾಂತಿಯನ್ನು ಅರಸುತ್ತಿರುವಾಗ, ನಿಜವಾದ ಶಾಂತಿಯು ಯೇಸುವಿನಲ್ಲಿ ಮಾತ್ರವೇ ಸಿಗುವಂತದ್ದು ಎಂಬುದನ್ನು ಅರಿತುಕೊಳ್ಳಿ ಏಕೆಂದರೆ ಆತನು ಸಕಲ ಸಮಾಧಾನದ ಮೂಲವಾಗಿದ್ದಾನೆ.
ಮತ್ತೊಮ್ಮೆ ಯೇಸು ಹೇಳಿದ್ದೇನೆಂದರೆ, “ಲೋಕವು ಕೊಡುವ ರೀತಿಯ(ಶಾಂತಿ)ದಲ್ಲ….
ಲೋಕವು ನೀಡುವ ಶಾಂತಿಯು ಹೆಚ್ಚಾಗಿ ರಾಜಿ ಮಾಡಿಕೊಳ್ಳುವಿಕೆ ಮತ್ತು ಕುಶಲತೆಯನ್ನು ಆಧರಿಸಿದೆ.
ಆದಾಗ್ಯೂ, ಕರ್ತನಾದ ಯೇಸು ಕ್ರಿಸ್ತನು ನೀಡುವ ಶಾಂತಿಯು ಶಿಲುಬೆಯ ಮೇಲಿನ ಆತನ ತ್ಯಾಗದ ಮರಣವನ್ನು ಆಧರಿಸಿರುತ್ತದೆ. "ಆತನು ನಿಮ್ಮನ್ನು ಸಹ ತನ್ನ ಕುಮಾರನ ಸ್ಥೂಲ ದೇಹದಲ್ಲಿ ಉಂಟಾದ ಮರಣದ ಮೂಲಕ ಈಗ ಸಂಧಾನಪಡಿಸಿಕೊಂಡಿದ್ದಾನೆ; ಮತ್ತು ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿರಪರಾಧಿಗಳನ್ನಾಗಿಯೂ ತನ್ನ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂದಿದ್ದಾನೆ." (ಕೊಲೊಸ್ಸೆ 1:22 ).
ಆತನು ತನ್ನ ಸಕಲವನ್ನೂ -ಅಂದರೆ ಆತನ ಜೀವವನ್ನೇ - ತ್ಯಾಗ ಮಾಡಿರುವುದರಿಂದ ಕ್ರಿಸ್ತನು ನಮಗೆ ನೀಡುವ ಶಾಂತಿಯು ತ್ಯಾಗಮಯವಾಗಿದೆ.
ಕರ್ತನಾದ ಯೇಸು ಮತ್ತೂ ಹೇಳಿದ್ದೇನೆಂದರೆ, “ನಿಮ್ಮ ಹೃದಯವು ಕಳವಳಪಡದಿರಲಿ, ಭಯಪಡದಿರಲಿ.”
ಅನೇಕರು ನನಗೆ ಬರೆಯುತ್ತಾ ತಾವು ಭಯ, ಖಿನ್ನತೆ, ನಿದ್ರಾಹೀನತೆ ಮತ್ತು ಇತರ ಒತ್ತಡ-ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದೇವೆ ಎಂದು ಹೇಳುತ್ತಾರೆ. ಜೊತೆಗೆ ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿರುತ್ತದೆ. ಒಬ್ಬ ಯುವಕನು ಈ ಅಗ್ನಿಪರೀಕ್ಷೆಯಿಂದ ಬದುಕುಳಿಯಲು ಪ್ರತಿದಿನ 5 ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ನನಗೆ ಬರೆದಿದ್ದನು.
ನನ್ನ ಮಾತನ್ನು ಚೆನ್ನಾಗಿ ಕೇಳಿಸಿಕೊಳ್ಳಿ, ನಿಮ್ಮ ಎಲ್ಲಾ ಭಯಗಳಿಗೆ ಕ್ರಿಸ್ತೇಸುವಿನಲ್ಲಿರುವ ಶಾಂತಿಯೇ ಖಚಿತವಾದ ಪರಿಹಾರ. ನನ್ನ ಜೀವನದಲ್ಲಿಯೂ ನಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಸಮಯವಿತ್ತು. ಆಗ ನಾನು ಒಂದು ಪ್ರಾರ್ಥನಾ ಸೇವೆಗೆ ಹಾಜರಾಗಿ ಅಲ್ಲಿ ನಾನು ಆರಾಧಿಸುವಾಗ , “ಕರ್ತನೇ, ನಾನು ಜೀವನದ ಅಂತ್ಯವನ್ನು ತಲುಪಿದ್ದೇನೆ, ನಾನು ನಿನಗೆ ಶರಣಾಗುತ್ತೇನೆ, ದಯವಿಟ್ಟು ನನಗೆ ಸಹಾಯ ಮಾಡು ” ಎಂದು ಪ್ರಾರ್ಥಿಸಿದೆ. ಆ ಕ್ಷಣದಲ್ಲಿ , ನಾನು ಯಾವ ದೇವದೂತರನ್ನೊ ಅಥವಾ ದರ್ಶನಗಳನ್ನೊ ನೋಡಲಿಲ್ಲ ಆದರೆ ಈ ಶಾಂತಿಯು ನನ್ನ ಹೃದಯವನ್ನು ತುಂಬಿತ್ತು. ಆತ್ಮಹತ್ಯೆಯ ಎಲ್ಲಾ ಆಲೋಚನೆಗಳು ಮಾಯವಾದವು. ಕರ್ತನು ನನಗಾಗಿ ಅದನ್ನು ಮಾಡಲು ಸಾಧ್ಯವಾದರೆ, ಆತನು ಖಂಡಿತವಾಗಿಯೂ ನಿಮಗಾಗಿಯೂ ಸಹ ಅದನ್ನು ಮಾಡುತ್ತಾನೆ.ದೇವರು ವ್ಯಕ್ತಿಗಳಲ್ಲಿ ಮುಖದಾಕ್ಷಿಣ್ಯ ಮಾಡುವವನಲ್ಲ (ಅ. ಕೃ 10:34)
Bible Reading: 1 Chronicles 29, 2 Chronicles 1-2
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನಾ ವಿಷಯವನ್ನು ಕನಿಷ್ಠ 3 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲವಾದರೂ ಪ್ರಾರ್ಥಿಸಬೇಕು.
ವೈಯಕ್ತಿಕ ಆತ್ಮೀಕ ಬೆಳವಣಿಗೆ
ಶಾಂತಿಯ ದೇವರೇ, ನನ್ನ ಜೀವನವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ, ದಯವಿಟ್ಟು ಯೇಸುನಾಮದಲ್ಲಿ ಸದಾ ನನ್ನೊಂದಿಗೆ ಇರು.
ಕುಟುಂಬ ರಕ್ಷಣೆ
ನನ್ನ ಜೀವನದಲ್ಲಿ ಮತ್ತು ನನ್ನ ಕುಟುಂಬ ಸದಸ್ಯರಲ್ಲಿ ಶಾಂತಿಗೆ ಅಡ್ಡಿಯಾಗುವ ಪ್ರತಿಯೊಂದು ಶಕ್ತಿಯೂ ಯೇಸುನಾಮದಲ್ಲಿ ನಿರ್ಮೂಲವಾಗಲಿ. ನನ್ನ ಜೀವನದಲ್ಲಿ ಮತ್ತು ನನ್ನ ಕುಟುಂಬ ಸದಸ್ಯರಲ್ಲಿ ನಿನ್ನ ಶಾಂತಿಯು ಯೇಸುನಾಮದಲ್ಲಿ ಆಳ್ವಿಕೆ ಮಾಡಲಿ.
ಆರ್ಥಿಕ ಪ್ರಗತಿ
ನಾನು ಮತ್ತು ನನ್ನ ಕುಟುಂಬ ಸದಸ್ಯರು ನೀರಿನ ನದಿಗಳ ಬಳಿ ನೆಟ್ಟ ಮರಗಳಂತೆ ಇದ್ದೇವೆ. ಅದರಿಂದ ನಾವು ಮಾಡುವ ಎಲ್ಲಾ ಕಾರ್ಯವೂ ದೇವರ ಮಹಿಮೆಗಾಗಿ ಸಮೃದ್ಧಿಯಾಗಲಿ. (ಕೀರ್ತನೆ 1:3)
ನಾವು ಧೈರ್ಯಗೆಡದೆ ,ಮುನ್ನಡೆಯುವುದರಿಂದ ತಕ್ಕ ಸಮಯದಲ್ಲಿ, ನಾವು ನಮ್ಮ ಬೆಳೆಯನ್ನು ಕೊಯ್ಯುತ್ತೇವೆ. (ಗಲಾತ್ಯ 6:9)
KSM ಚರ್ಚ್
ಪಾಸ್ಟರ್ ಮೈಕೆಲ್, ಅವರ ಕುಟುಂಬ, ಮತ್ತು ಅವರ ತಂಡದ ಸದಸ್ಯರ ಶಾಂತಿಗೆ ಅಡ್ಡಿಯಾಗುವ ಪ್ರತಿಯೊಂದು ಶಕ್ತಿಯು ಯೇಸುನಾಮದಲ್ಲಿ ಲಯವಾಗಿ ಹೋಗಲಿ. ಕರ್ತನೇ ನಿನ್ನ ಶಾಂತಿಯು ಅವರ ಜೀವನದಲ್ಲಿ ಆಳ್ವಿಕೆ ಮಾಡಲಿ.
ರಾಷ್ಟ್ರ
ಕರ್ತನಾದ ಯೇಸು, ನೀನು ಸಮಾಧಾನದ ಅರಸನು . ನಮ್ಮ ರಾಷ್ಟ್ರದ ಗಡಿಗಳಲ್ಲಿ ಬೇಕಿರುವ ಶಾಂತಿಗಾಗಿ ನಾವು ಪ್ರಾರ್ಥಿಸುತ್ತೇವೆ. ನಮ್ಮ ರಾಷ್ಟ್ರದ ಪ್ರತಿಯೊಂದು ನಗರ ಮತ್ತು ರಾಜ್ಯದಲ್ಲಿ ನಿನ್ನ ಶಾಂತಿ ಆಳ್ವಿಕೆ ಮಾಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.
Join our WhatsApp Channel

Most Read
● ನಿಮ್ಮ ಆತ್ಮಗಳ ಪುನಃಸ್ಥಾಪನೆ● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
● ನಮ್ಮ ಹಿಂದಿರುವ ಉರಿಯುವ ಸೇತುವೆಗಳು
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು.
● ಪ್ರಾರ್ಥನೆಯ ಪರಿಮಳ
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ದಿನ 06: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು