ಅನುದಿನದ ಮನ್ನಾ
1
0
104
ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವುದು ಹೇಗೆ?
Wednesday, 4th of June 2025
Categories :
ಮಾನವ ಹೃದಯ (Human Heart)
ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ, ಏಕೆಂದರೆ ಅದು ನಿಮ್ಮ ಜೀವನದ ಹಾದಿಯನ್ನು ನಿರ್ಧರಿಸುತ್ತದೆ. (ಜ್ಞಾನೋಕ್ತಿ 4:23 )
ಈ ವಾಕ್ಯವು ಬೇರೆ ಯಾರಾದರೂ ನಿಮ್ಮ ಹೃದಯವನ್ನು ಕಾಯುತ್ತಾರೆ ಎಂದು ಅದು ಹೇಳುತ್ತಿಲ್ಲ ಎಂಬುದನ್ನು ಗಮನಿಸಿ. ದೇವರು ನಿಮ್ಮ ಹೃದಯವನ್ನು ಕಾಪಾಡುತ್ತಾನೆ, ನಿಮ್ಮ ನೆರೆಯವನು ನಿಮ್ಮ ಹೃದಯವನ್ನು ಕಾಪಾಡುತ್ತಾನೆ ಅಥವಾ ನಿಮ್ಮ ಪಾಸ್ಟರ್ ನಿಮ್ಮ ಹೃದಯವನ್ನು ಕಾಪಾಡುತ್ತಾನೆ ಎಂದು ಅದು ಹೇಳುತ್ತಿಲ್ಲ. ನೀವೇ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಬೇಕು ಎಂದು ಅದು ಹೇಳುತ್ತದೆ.
ಲೋಕವು ನಿಮ್ಮ ಹೃದಯವನ್ನು ನಂಬಿ,ನಿಮ್ಮ ಹೃದಯವನ್ನು ಅನುಸರಿಸಿ, ನಿಮ್ಮ ಹೃದಯ ಹೇಳುವುದನ್ನು ಆಲಿಸಿ ಎಂದೆಲ್ಲಾ ಹೇಳುತ್ತದೆ ಎಂಬುದು ನನಗೆ ತಿಳಿದ ವಿಷಯವೇ. ಆದರೆ ದೇವರವಾಕ್ಯವು ಹೃದಯವನ್ನು ಅನುಸರಿಸುವಂತೆ ಹೇಳುವುದಿಲ್ಲ; ಬದಲಿಗೆ ಅದು ನಿಮ್ಮ ಹೃದಯಕ್ಕೆ ಉಪದೇಶಿಸಿ ಎಂದು ಹೇಳುತ್ತದೆ. ಅದು ಯಾವುದನ್ನು ಅನುಸರಿಸಬೇಕೆಂದು ಕಲಿಸಿಕೊಡಿ ಎಂದು ಹೇಳುತ್ತದೆ.
ಹಾಗಾದರೆ ನೀವು ಅದನ್ನು ಹೇಗೆ ಮಾಡುತ್ತೀರಿ?
ಜ್ಞಾನೋಕ್ತಿ 4 ರ ಉಳಿದ ಭಾಗವು ಪರಿಗಣಿಸಿ ನೋಡುವಾಗ ಅದು ನಮಗೆ ನಾಲ್ಕು ವಿಷಯಗಳನ್ನು ನೀಡುತ್ತದೆ:
1.ನೀವು ಏನನ್ನು ಮಾತನಾಡುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ.
"ಸೊಟ್ಟ ಮಾತುಗಳನ್ನು ನಿನ್ನಿಂದ ತೊಲಗಿಸಿಬಿಡು, ತುಟಿಗಳ ವಕ್ರತೆಯನ್ನು ದೂರಮಾಡು." ಜ್ಞಾನೋಕ್ತಿ 4:24.
ನೀವು ಮಾತನಾಡುವ ಮಾತುಗಳ ವಿಚಾರದಲ್ಲಿ ಜಾಗ್ರತೆ ವಹಿಸುವ ಮೂಲಕ ನಿಮ್ಮ ಹೃದಯವನ್ನು ಪೋಷಿಸಬಹುದು.
2.ನೀವು ಏನನ್ನು ನೋಡುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ.
"ನೆಟ್ಟಗೆ ದೃಷ್ಟಿಸು, ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ".ಜ್ಞಾನೋಕ್ತಿ 4:25
ನೀವು ಏನನ್ನು (ಅಥವಾ ಯಾರನ್ನು) ನೋಡುತ್ತಿದ್ದೀರಿ? ಅದರ ಕುರಿತು ಜಾಗ್ರತೆ ವಹಿಸಿ.ಯಾಕೆಂದರೆ ಕ್ರಿಸ್ತನು ಯಾವುದಕ್ಕಾಗಿ ಸತ್ತನೋ ಅವುಗಳೇ ಹೆಚ್ಚಾಗಿ ರಂಜನೀಯವಾಗಿ ನಮಗೆ ಕಾಣುತ್ತಿರುತ್ತದೆ.
3.ನೀವು ಎಲ್ಲಿಗೆ ಹೆಜ್ಜೆಹಾಕುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ.
"ನೀನು ನಡೆಯುವ ದಾರಿಯ ಬಗ್ಗೆ ಗಮನವಿರಲಿ; ನೀನು ಕೈಗೊಳ್ಳುವ ಹಾದಿ ಸ್ಥಿರವಾಗಿರಲಿ".ಜ್ಞಾನೋಕ್ತಿ 4:26.
ಸಾಮಾನ್ಯವಾಗಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಮತ್ತು ನೀವು ಏನು ಮಾತನಾಡುತ್ತಿದ್ದೀರಿ ಮತ್ತು ನೋಡುತ್ತಿದ್ದೀರಿ ಎಂಬುದನ್ನು ಬದಲಾಯಿಸಿಕೊಳ್ಳಬೇಕೆಂದರೆ - ನೀವು ಎಲ್ಲಿ ಸುತ್ತಾಡುತ್ತೀರಿ ಮತ್ತು ಯಾರೊಂದಿಗೆ ಸುತ್ತಾಡುತ್ತೀರಿ ಎಂಬುದನ್ನು ಸಹ ಬದಲಾಯಿಸಬೇಕಾಗುತ್ತದೆ.
"ನೀವು ಹುಟ್ಟುವ ಕುಟುಂಬವನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಸಾಧ್ಯವಿಲ್ಲ ಆದರೆ ನೀವು ಖಂಡಿತವಾಗಿಯೂ ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಬಹುದು. ಆಯ್ಕೆ ನಿಮ್ಮದು." ಎಂದು ಯಾರೋ ಒಬ್ಬರು ಹೇಳಿದ್ದಾರೆ.
4.ಯಾವುದಾದರೂ ಕೇಡಿನ ಸಂಗತಿ ಎಂದು ತೋರಿಬಂದರೆ, ಅದರಿಂದ ದೂರವಿರಿ.
"ನಿನ್ನ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಕಾಲುಗಳು ದೂರವಿರಲಿ". ಜ್ಞಾನೋಕ್ತಿ 4:27
ಈಗ, ಒಳ್ಳೆಯದು ಅಥವಾ ತಟಸ್ಥವಾದದ್ದು ಯಾವುದೇ ಆಗಲಿ ನಮ್ಮ ಜೀವನದಲ್ಲಿ ದೇವರಿಗಿಂತ ಹೆಚ್ಚು ಮುಖ್ಯವಾದಾಗ ಅದು ಕೆಟ್ಟದಾಗಬಹುದು. ಉತ್ತಮ ಆಟವನ್ನು ನೋಡುವುದು; ಅದರಲ್ಲಿ ಯಾವುದೇ ತಪ್ಪಿಲ್ಲ, ಅದಕ್ಕೆ ತುಂಬಾ ಮುಖ್ಯತ್ವ ನೀಡುವಾಗ ಒಂದು ವೇಳೆ ನಿಮ್ಮ ನೆಚ್ಚಿನ ತಂಡವು ಸೋತರೆ ವಾರವಿಡೀ ನಿಮ್ಮನ್ನು ಕೋಪಗೊಳ್ಳುವಂತೆಯೋ ಅಥವಾ ಖಿನ್ನತೆಗೋ ಅದು ಒಳಪಡಿಸುತ್ತದೆ.
5.ಪ್ರಾರ್ಥನೆಯು ನಿಮ್ಮನ್ನು ಬಲಪಡಿಸುತ್ತದೆ ಮತ್ತು ನಿಮ್ಮನ್ನು ಎದೆಗುಂದದಂತೆ ಕಾಪಾಡುತ್ತದೆ. ಇದು ಹೇಗೆ ಸಂಭವಿಸುತ್ತದೆ?
"ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಯೇಸು ತನ್ನ ಶಿಷ್ಯರಿಗೆ ಒಂದು ಸಾಮ್ಯ ಹೇಳಿದನು “(ಲೂಕ 18:1)
ನಾವು ಪ್ರಾರ್ಥಿಸುವಾಗ, ಎಲ್ಲಾ ತಿಳುವಳಿಕೆಯನ್ನು ಮೀರುವ ದೇವರ ಶಾಂತಿಯು ಕ್ರಿಸ್ತ ಯೇಸುವಿನ ಮೂಲಕ ನಿಮ್ಮ ಹೃದಯಗಳನ್ನು ಮತ್ತು ಮನಸ್ಸುಗಳನ್ನು ಕಾಯುತ್ತದೆ. ನಾವು ದೇವರ ಮುಂದೆ ಬಂದು ನಮ್ಮ ವಿನಂತಿಗಳನ್ನು ಆತನಿಗೆ ತಿಳಿಸಿದಾಗ ಮಾತ್ರವೇ ಈ ಶಾಂತಿ ಬರುತ್ತದೆ.
Bible Reading: 2 Chronicles 36, Ezra 1-2
ಪ್ರಾರ್ಥನೆಗಳು
ತಂದೆಯೇ, ನಾನು ಬೇಕಾದ ಒಂದೇ ವಿಷಯದ ವ್ಯಕ್ತಿಯಾಗಿ ಬದುಕಲು ಬದ್ಧನಾಗಿದ್ದೇನೆ. ಬೆಥಾನಿಯ ಮರಿಯಳು ಮಾಡಿದಂತೆ ನಿಮ್ಮ ಪಾದಗಳ ಬಳಿ ನಿಯಮಿತವಾಗಿ ಕುಳಿತುಕೊಳ್ಳಲು ನನಗೆ ಸಹಾಯ ಮಾಡು.
ಇಂದು ನಾನು ಕಲಿತ ಎಲ್ಲಾ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ನನಗೆ ಯೇಸುನಾಮದಲ್ಲಿ ಕೃಪೆಯನ್ನು ಅನುಗ್ರಹಿಸು. ಆಮೆನ್
Join our WhatsApp Channel

Most Read
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?● ಜೀವನದ ಬಿರುಗಾಳಿಗಳ ಮಧ್ಯದಲ್ಲಿಯೂ ನಂಬಿಕೆಯನ್ನು ಕಂಡು ಕೊಳ್ಳುವುದು.
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
● ಶಾಂತಿಯು ನಿಮ್ಮನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅರಿತುಕೊಳ್ಳಿ.
ಅನಿಸಿಕೆಗಳು