ಕನಸಿನಲ್ಲಿ ಮೊಸಳೆಯನ್ನು ಕಾಣುವಂತದ್ದು ಸಾಮಾನ್ಯವಾಗಿ ಈ ಕೆಳಕಂಡ ಸಾಂಕೇತಿಕ ಅರ್ಥಗಳನ್ನು ನಮಗೆ ರವಾನಿಸುತ್ತದೆ.ಸಾಂಕೇತಿಕವಾದ ಕನಸುಗಳು ಸಾಮಾನ್ಯವಾಗಿ ನಿಮ್ಮ ಜೀವಿತದ ರಹಸ್ಯಗಳಿಗೆ ಸಂಬಂಧಿಸಿದ ಗೂಡರ್ಥಗಳನ್ನು ಹೇಳುತ್ತದೆ.
1. ಅಪಾಯ ಅಥವಾ ಭಯದ ಸಂಕೇತ.
ಜಾತಿವೈಶಿಷ್ಟತೆ ಪ್ರಕಾರ ಹೇಳುವುದಾದರೆ ಪೆರ್ಮೋಸಳೆ ಮತ್ತು ಮೊಸಳೆಗಳು ಕನಸಿನಲ್ಲಿ ಕಾಣಿಸಿಕೊಳ್ಳುವುದು ನಿಮ್ಮ ಆತ್ಮೀಕ ಜೀವಿತದ ಮೇಲೆ ನಡೆಯುವ ಆಕ್ರಮಣವನ್ನು ಅಥವಾ ನಿಮ್ಮ ಆತ್ಮೀಕ ಜೀವನದಲ್ಲಿ ಉಂಟಾಗುವ ಸವಾಲುಗಳನ್ನು ಸಂಕೇತಿಸುತ್ತದೆ.ಮತ್ತು ಅದರಿಂದ ತಪ್ಪಿಸಿಕೊಳ್ಳಲು ಇಲ್ಲವೇ ಅದರಿಂದ ರಕ್ಷಿಸಿಕೊಳ್ಳುವಂತೆ ಎಚ್ಚರಿಸುವ ಎಚ್ಚರಿಕೆ ಗಂಟೆಯಾಗಿದೆ.
"ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ."(1 ಪೇತ್ರನು 5:8)
2. ಮರೆಯಾಗಿರುವ ವಿಚಾರಗಳು ಅಥವಾ ವಂಚನೆ.
ಮೊಸಳೆಯು ಸಾಮಾನ್ಯವಾಗಿ ಯಾರಿಗೂ ಕಾಣಿಸದಂತೆ ನೀರಿನಲ್ಲಿ ಅಡಗಿಕೊಂಡಿರುತ್ತದೆ ಒಮ್ಮೆಲೆ ಇದ್ದಕ್ಕಿದ್ದ ಹಾಗೆ ಹೊರಹೊಮ್ಮುತ್ತದೆ. ಹಾಗೆಯೇ ನೀವು ಕನಸಿನಲ್ಲಿ ಮೊಸಳೆಯನ್ನು ಕಂಡರೆ ಅದು ಅನಿರೀಕ್ಷಿತ ಮೂಲದಿಂದ ನೀವು ವಂಚನೆಗೊಳಗಾಗುವ ಅಥವಾ ದ್ರೋಹ ಕ್ಕೊಳಗಾಗುವ ಸಂಕೇತವನ್ನು ಸೂಚಿಸುತ್ತದೆ.
3.ಅಪಪ್ರಚಾರ ಮತ್ತು ಸುಳ್ಳುಸುದ್ದಿ.
"ಹಗೆಯವನು ತುಟಿಯಲ್ಲಿ ಸ್ನೇಹಭಾವವನ್ನು ನಟಿಸುತ್ತಾನೆ. ಅಂತರಂಗದಲ್ಲಿ ಬರೀ ಮೋಸವನ್ನು ಇಟ್ಟುಕೊಂಡಿದ್ದಾನೆ" (ಜ್ಞಾನೋಕ್ತಿಗಳು 26:24 )
ಮೊಸಳೆಯು ಅಗಲವಾದ ಬಾಯನ್ನು ಹೊಂದಿದೆ ಇದು ನಿಮ್ಮ ವಿರುದ್ಧವಾಗಿ ಬಾಯ್ದೆರೆಯುವ ಅಪಪ್ರಚಾರ ಮತ್ತು ಸುಳ್ಳುಸುದ್ದಿಯ ದುರಾತ್ಮವನ್ನು ಸಂಕೇತಿಸುತ್ತದೆ. ಆ ದುರಾತ್ಮಗಳನ್ನು ಯೇಸುನಾಮದಲ್ಲಿ ನೀವು ಬಂಧಿಸಬೇಕು.
ನಿಮ್ಮ ಕನಸುಗಳು ನಿಮ್ಮನ್ನು ಭಯಪಡಿಸಬಾರದು. ಬದಲಾಗಿ ದೇವರು ಕನಸಿನ ಮೂಲಕ ನಿಮ್ಮೊಡನೆ ಮಾತಾಡುತ್ತಿದ್ದಾರೆ ಎಂದರೆ ನೀವು ಶತೃವಿನ ತಂತ್ರವನ್ನು ಗೆಲ್ಲಬಹುದು ಎಂದರ್ಥ . ನೀವು ದೇವರ ಸಾನಿಧ್ಯದಲ್ಲಿ ದೇವರ ವಾಕ್ಯ ಧ್ಯಾನದಲ್ಲಿ ಸಮಯವನ್ನು ಕಳೆಯುವ ಮೂಲಕ ಉಪವಾಸದ ಮೂಲಕ ಆತ್ಮೀಕವಾಗಿ ಸಧೃಡರಾಗಿದ್ದು ಶತ್ರುವಿನೊಂದಿಗೆ ಹೋರಾಡಬೇಕು.
ಯೆಹೆಜ್ಕೇಲ 29:4 ರಲ್ಲಿ ಈಜಿಫ್ಟಿನ ಫರೋಹನನ್ನು ಪೆರ್ಮೋಸಳೆ ಎಂದು ದೇವರು ಕರೆಯುತ್ತಾರೆ . ಆ ಫರೋಹನು ಅಹಂಕಾರಿಯೂ ದೇವರಿಗೆ ಎದುರು ಬೀಳುವವನೂ ಆಗಿದ್ದನು. ಆದರಿಂದ ದೇವರು ಅವನನ್ನು
ನಾನು ನಿನ್ನ ದವಡೆಗಳಿಗೆ ಗಾಳಹಾಕಿ ಎಳೆದು ಕಾಡಿಗೆ ಬಿಸಾಡಿ ನಾಶ ಮಾಡುವೆನು ಎನ್ನುತ್ತಾರೆ.
Join our WhatsApp Channel
Related Items