ಹುಲಿಯು ಅತ್ಯಂತ ಕ್ರೂರವಾದ ವ್ಯಾಗ್ರ.ಬೆಕ್ಕಿನ ಪ್ರಭೇದದಲ್ಲಿಯೇ ಅತ್ಯಂತ ಅಪಾಯಕಾರಿಯಾದ ಬಲಶಾಲಿಯಾದ ಪ್ರಾಣಿ ಎಂದು ಹುಲಿಯು ಗುರುತಿಸಲ್ಪಟ್ಟಿದೆ. ಹುಲಿಯು ತನ್ನ ಗಾತ್ರಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಾದ ಗಾತ್ರದ ಪ್ರಾಣಿಗಳನ್ನು ಸಹ ಹೊಡೆದು ಉಳಿಸಬಲ್ಲದು. ಅದಕ್ಕೆ ಭೂಮಿಯ ಮೇಲಿರುವಂತ ಯಾವುದೇ ಮಾಂಸಾಹಾರಿ ಪ್ರಾಣಿಗಿಂತಲೂ ದೊಡ್ಡದಾದ ಕೋರೆ ಹಲ್ಲುಗಳಿವೆ. ತನ್ನ ಬೇಟೆಯ ಬೆನ್ನೆಲುಬನ್ನು ಸಹ ಜಗಿಯಬಲ್ಲಂತಹ ಶಕ್ತಿಯುತವಾದ ದವಡೆಗಳು ಹುಲಿಗಿವೆ.
"ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವದು; ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ. "(ಯೆರೆಮೀಯ 5:6)
"ಆದಕಾರಣ ನಾನು ಅವರ ಪಾಲಿಗೆ ಸಿಂಹ; ಚಿರತೆಯ ಹಾಗೆ ದಾರಿಯ ಮಗ್ಗುಲಲ್ಲಿ ಹೊಂಚುಹಾಕುವೆನು."(ಹೋಶೇಯ 13:7)
ಈ ಮೇಲಿನ ವಾಕ್ಯದಲ್ಲಿ ಚಿರತೆಯನ್ನು ಉಲ್ಲೇಖಿಸಲಾಗಿದೆ. ಇದೇ ನಿಯಮವು ಬೆಕ್ಕಿನ ಪ್ರಭೇದದ ಹುಲಿಗೂ ಅನ್ವಯಿಸುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬಹುದು.
ನೀವು ಕನಸಿನಲ್ಲಿ ಹುಲಿಯನ್ನು ಕಂಡರೆ ಅದು ಈ ಕೆಳಕಂಡ ಅರ್ಥವನ್ನು ಕೊಡಬಹುದು.
1. ಒಂದು ಅಪಾಯವು ಮರೆಯಾಗಿ ನಿಂತು ಕಾಯುತ್ತಿದೆ ಎಂದು.
2. ಒಂದು ತಂತ್ರವನ್ನು ಮತ್ತು ರಹಸ್ಯವಾದ ಕಾರ್ಯವನ್ನು ನಿಮ್ಮ ವಿರುದ್ಧ ಶತ್ರುವು ರೂಪಿಸುತ್ತಿದ್ದಾನೆ ಎಂದು
3. ಇನ್ನು ಆಳವಾಗಿ ಹೇಳಬೇಕೆಂದರೆ ಮಾಟ ಮಂತ್ರದ ದುರಾತ್ಮ ನಿಮ್ಮ ವಿರುದ್ಧ ಕಾರ್ಯ ಮಾಡುತ್ತಿದೆ ಎಂಬುದೇ.
ಹುಲಿಗಳು ಸಾಮಾನ್ಯವಾಗಿ ತಮ್ಮ ಮೂತ್ರ ವಿಸರ್ಜನೆ ಮೂಲಕವೂ ಮತ್ತು ತಮ್ಮ ಪಾದಗಳ ಮೂಲಕ ಸ್ರವಿಸುವ ದ್ರವದ ಮೂಲಕವೂ ತಮ್ಮ ಕ್ಷೇತ್ರವನ್ನು ಗುರುತು ಮಾಡಿಕೊಳ್ಳುತ್ತವೆ.
ನೀವು ಕನಸಿನಲ್ಲಿ ಹುಲಿಯನ್ನು ಕಂಡರೆ ಅದು ಆ ಕ್ಷೇತ್ರದ ದುರಾತ್ಮವು ನಿಮ್ಮ ವಿರುದ್ಧ ಬಂದಿದೆ ಎಂದರ್ಥ.
ನೀವು ಪಶ್ಚಾತಾಪದಿಂದಲೂ ಮತ್ತು ಅತ್ಯಾಶಕ್ತಿಯಿಂದ ಉಪವಾಸ ಮತ್ತು ಪ್ರಾರ್ಥನೆ ಮಾಡುವಂಥದ್ದೇ ಇದಕ್ಕಿರುವ ತಪ್ಪಿಸಿಕೊಳ್ಳುವ ಮಾರ್ಗವಾಗಿದೆ.
Join our WhatsApp Channel
Related Items