हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಕರ್ತನಲ್ಲಿ ನಿಮ್ಮನ್ನು ನೀವು ಬಲಪಡಿಸಿಕೊಳ್ಳುವುದು ಹೇಗೆ
Daily Manna

ಕರ್ತನಲ್ಲಿ ನಿಮ್ಮನ್ನು ನೀವು ಬಲಪಡಿಸಿಕೊಳ್ಳುವುದು ಹೇಗೆ

Saturday, 12th of July 2025
2 1 109
Categories : Emotions
1 ಸಮುವೇಲ 30 ರಲ್ಲಿ, "ದಾವೀದನೂ ಅವನ ಜನರೂ ಮೂರನೆಯ ದಿನ ಚಿಕ್ಲಗ್ ಊರನ್ನು ಮುಟ್ಟಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣಪ್ರಾಂತಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿ  ಅದರಲ್ಲಿದ್ದ ಎಲ್ಲಾ ಹೆಂಗಸರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಸೆರೆಹಿಡಿದುಕೊಂಡು ಹೋಗಿದ್ದರು; ಆದರೆ ಯಾರನ್ನೂ ಕೊಂದಿರಲಿಲ್ಲ.  ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು 

ಸುಡಲ್ಪಟ್ಟಿರುವದನ್ನೂ ತಮ್ಮ ಹೆಂಡತಿಯರೂ ಗಂಡುಹೆಣ್ಣು ಮಕ್ಕಳೂ ಸೆರೆಯಾಗಿ ಒಯ್ಯಲ್ಪಟ್ಟಿರುವದನ್ನೂ ಕಂಡು  ಅವರು ತಮ್ಮಿಂದಾಗುವಷ್ಟು ಕಾಲ ಗಟ್ಟಿಯಾಗಿ ಅತ್ತರು. 

ಇದಲ್ಲದೆ ಜನರು ತಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು (1 ಸಮುವೇಲ 30:6)

 ಗಮನಿಸಿ, ದಾವೀದನು ತನ್ನ ನಿರುತ್ಸಾಹ ಪಡಿಸಿದ ಪರಿಸ್ಥಿತಿ ಯಿಂದ ಕುಗ್ಗಿಹೋಗಲಿಲ್ಲ. ಬದಲಾಗಿ, ಅವನು ಕರ್ತನಲ್ಲಿ ತನ್ನನ್ನು ಪ್ರೋತ್ಸಾಹಿಸಿಕೊಳ್ಳುವುದನ್ನು ಮತ್ತು ಬಲಪಡಿಸಿಕೊಳ್ಳುವುದನ್ನೂ ಆಯ್ಕೆ ಮಾಡಿ ಕೊಂಡನು. ನಿಮ್ಮನ್ನು ಬಲಪಡಿಸಲು, ನಿಮ್ಮ ಕೈ ಹಿಡಿಯಲು ಯಾರೂ ಇಲ್ಲದಿರುವ ಸಮಯಗಳು ಜೀವನದಲ್ಲಿ ಇರುತ್ತವೆ; ಅಂತಹ ಸಮಯದಲ್ಲಿ ನಿಮ್ಮಲ್ಲಿ ಬಹುತೇಕರು ಮತ್ತೆ ಎಂದಿಗೂ ಎದ್ದೇಳಲು ಆಗದಂತೆ ಬಿದ್ದಿಲ್ಲ. ಅದು ನಿಮ್ಮ ಕಥೆಯಾಗಿರುವುದಿಲ್ಲ ಎಂದು ನಾನು ಪ್ರವಾದನೆ ನುಡಿಯುತ್ತೇನೆ. ಎದ್ದೇಳಿ! ಕರ್ತನಲ್ಲಿ ನಿಮ್ಮನ್ನು  ನೀವು ಬಲಪಡಿಸಿಕೊಳ್ಳಿ.

ಕುತೂಹಲಕಾರಿ ಸಂಗತಿಯೆಂದರೆ, ದಾವೀದನು ಕರ್ತನಲ್ಲಿ ತನ್ನನ್ನು ತಾನು ಬಲಪಡಿಸಿಕೊಂಡಾಗ, ಅವನ ಜನರು ಸಹ ಅವನ ಬಳಿಗೆ ಹಿಂತಿರುಗಿ ಬಂದರು. ಒಂದನ್ನು ಯಾವಾಗಲೂ ನೆನಪಿಡಿ, ನೀವು ಕರ್ತನಲ್ಲಿ ನಿಮ್ಮನ್ನು ಬಲ ಪಡಿಸಿಕೊಳ್ಳುವಾಗ, ಆ ಉತ್ತೇಜನವು ಇತರರಿಗೂ ಹರಡುತ್ತದೆ. ಅದು ನಿಮ್ಮ ಸುತ್ತಲಿನ ಎಲ್ಲರ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.

 ದಾವೀದನು ಕರ್ತನಲ್ಲಿ ತನ್ನನ್ನು ಹೇಗೆ ಬಲಪಡಿಸಿಕೊಂಡನು ಎಂಬುದರ ಕುರಿತು ಬೈಬಲ್ ಸ್ಪಷ್ಟವಾಗಿ ಹೇಳಿಲ್ಲ. ಬಹುಶಃ, ಅವನು ತನ್ನ ವೀಣೆಯನ್ನು ತೆಗೆದುಕೊಂಡು, ಏಕಾಂತ ಸ್ಥಳಕ್ಕೆ ಹೋಗಿ, ಕರ್ತನಿಗೆ ಸ್ತುತಿ ಮತ್ತು ಆರಾಧನೆಯ ಹಾಡುಗಳನ್ನು ಹಾಡಲು ಪ್ರಾರಂಭಿಸಿರಬಹುದು. 

ಆಗ ದಾವೀದನಿಗೆ ಹಾಡಲು ಇಷ್ಟವಿಲ್ಲದಿದ್ದರೂ, ಕಷ್ಟಪಟ್ಟಾದರೂ ಹಾಡಿರಬಹುದು. ನಿಮ್ಮ ಸುತ್ತಲಿನ ನಕಾರಾತ್ಮಕ ಸಂದರ್ಭಗಳನ್ನು ವರ್ಧಿಸಲು ಬಿಡಬೇಡಿರಿ. ಬದಲಾಗಿ, ಕರ್ತನನ್ನು ಮಹಿಮೆಪಡಿಸಿ. 

ನಿಮ್ಮ ಹೆಡ್‌ಫೋನ್‌ಗಳನ್ನು ಹಾಕಿಕೊಂಡು, ಕೆಲವು ಆರಾಧನಾ ಸಂಗೀತವನ್ನು  ಕೇಳಿ ಮತ್ತು ಆತನ ನಾಮವನ್ನು ಸ್ತುತಿಸಿ. ಅಥವಾ ನೀವು ನಿಮ್ಮ ಬೈಬಲ್ ಅನ್ನು ತೆರೆದು ದೇವರವಾಕ್ಯಗಳಲ್ಲಿ ಪ್ರೋತ್ಸಾಹದಾಯಕ ಭಾಗವನ್ನು ಗಟ್ಟಿಯಾಗಿ ಓದಬಹುದು. 

ನಿಮ್ಮ ಆತ್ಮೀಕ ಮನುಷ್ಯನು ನೀವು ವಾಕ್ಯವನ್ನು ಮಾತನಾಡುವುದನ್ನು ನಿಮ್ಮ ಧ್ವನಿಯನ್ನು ಗ್ರಹಿಸಿಕೊಂಡಾಗ ಅದು ನಿಮ್ಮ ಆತ್ಮೀಕ ಮನುಷ್ಯನಲ್ಲಿ ನಂಬಿಕೆಯನ್ನು ಹುಟ್ಟಿಸುತ್ತದೆ. (ರೋಮ 10:17)

 "ನೀವು ದೇವರನ್ನು ಗರಿಮೆ ಪಡಿಸುವಾಗ, ನೀವು ನಿಮ್ಮ ತೊಂದರೆಗಳನ್ನು ಕನಿಷ್ಠವಾಗಿ ಮಾಡುತ್ತೀರಿ."ಎಂದು ಒಬ್ಬ ದೇವರ ಮನುಷ್ಯರು ಹೇಳಿದ್ದಾರೆ ಎಂಥಾ ಶಕ್ತಿಶಾಲಿ ಮಾತುಗಳಲ್ಲವೇ? 

ಇಂದು ನೀವು ಕರ್ತನಲ್ಲಿ ನಿಮ್ಮನ್ನು ನೀವು ಹೇಗೆ ಬಲಪಡಿಸಿಕೊಳ್ಳಬಹುದು? ನಿಮ್ಮ ಗೆಲುವು ಶೀಘ್ರದಲ್ಲೇ ನಿಮ್ಮದಾಗುತ್ತದೆ! ನಿಮ್ಮ ಸಾಕ್ಷ್ಯವನ್ನು ಕೇಳಲು ನಾನು ಕಾಯುತ್ತಿದ್ದೇನೆ. 

ಕೃಪೆಯುಳ್ಳ ತಂದೆಯೇ, ನೀನೊಬ್ಬನೇ ನನ್ನ ಭರವಸೆಯೂ ಮತ್ತು ಬಲವೂ ಆಗಿರುವುದಕ್ಕಾಗಿ ಸ್ತೋತ್ರ. ನೀನು ನನ್ನನ್ನು ಎಂದಿಗೂ ವಿಫಲಗೊಳಿಸುವುದಿಲ್ಲ ಎಂದು ತಿಳಿದು ಯೇಸುನಾಮದಲ್ಲಿ ನಾನು ನಿನ್ನ ಮೇಲೆಯೇ ಆಧಾರಗೊಳ್ಳುತ್ತೇನೆ. ಆಮೆನ್.

Bible Reading: Palms 134-142
Prayer
ಕೃಪೆಯುಳ್ಳ ತಂದೆಯೇ, ನೀನೊಬ್ಬನೇ ನನ್ನ ಭರವಸೆಯೂ ಮತ್ತು ಬಲವೂ ಆಗಿರುವುದಕ್ಕಾಗಿ ಸ್ತೋತ್ರ. ನೀನು ನನ್ನನ್ನು ಎಂದಿಗೂ ವಿಫಲಗೊಳಿಸುವುದಿಲ್ಲ ಎಂದು ತಿಳಿದು ಯೇಸುನಾಮದಲ್ಲಿ ನಾನು ನಿನ್ನ ಮೇಲೆಯೇ ಆಧಾರಗೊಳ್ಳುತ್ತೇನೆ. ಆಮೆನ್.

Join our WhatsApp Channel


Most Read
● ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು
● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ಯುದ್ಧಕ್ಕಾಗಿ ತರಬೇತಿ - II
● ನೀವು ಸುಲಭವಾಗಿ ಬೇಸರಗೊಳ್ಳುವಿರಾ?
● ದೇವರು ಹೇಗೆ ಒದಗಿಸುತ್ತಾನೆ #4
● ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login