Daily Manna
1
0
115
ಮಾದರಿಯ ಮೂಲಕ ಮಾರ್ಗದರ್ಶನ
Tuesday, 2nd of September 2025
Categories :
ನಾಯಕತ್ವ (leadership)
'ಯೌವನಸ್ಥನೆಂದು ನಿನ್ನನ್ನು ಅಸಡ್ಡೆಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬುವವರಿಗೆ ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು. (1 ತಿಮೊಥೆಯ 4:12)
ತಿಮೊಥೆಯನು ಯುವಕನಾಗಿದ್ದನು, ಈ ಕಾರಣದಿಂದಾಗಿ, ಸಭೆ ಹಿರಿಯರಲ್ಲಿ ಅನೇಕರು ಅವನನ್ನು ಹಗುರವಾಗಿ ಪರಿಗಣಿಸಿರಬಹುದು ಮತ್ತು ಅವನ ನಾಯಕತ್ವದ ಸಾಮರ್ಥ್ಯಗಳನ್ನು ಕಡೆಗಣಿಸಿರಬಹುದು. ಅವನಿಗೆ ಅಗತ್ಯವಾದ ಅನುಭವವಿಲ್ಲ ಎಂದು ಅವರು ಭಾವಿಸಿದ್ದಿರಬೇಕು.
ಆದರೆ ತಿಮೊಥೆಯನ ವಯಸ್ಸು ಮತ್ತು ಅನುಭವವನ್ನು ಲೆಕ್ಕಿಸದೆ, ಪ್ರತಿದಿನ ಉತ್ತಮ ಮಾದರಿಯನ್ನು ತೋರುವ ಮೂಲಕ ಅವನು ತನ್ನ ವಯಸ್ಸನ್ನು ಮೀರಿದ ಜನರನ್ನೂ ಸಹ ಅವನು ಮುನ್ನಡೆಸಬಹುದು ಎಂದು ಅಪೊಸ್ತಲ ಪೌಲನು ತಿಮೋತಿಯನಿಗೆ ನೆನಪಿಸಿದನು. ಇದು ಅವನ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಂತದ್ದಾಗಿತ್ತು.
ನಾವು ರಕ್ಷಿಸಲ್ಪಟ್ಟು ಒಂದು ತಿಂಗಳಾಗಿರಬಹುದು ಅಥವಾ ಹತ್ತು ವರ್ಷಗಳ ಕಾಲಗಳಾಗಿರಬಹುದು ಹೀಗಿದ್ದರೂ ಸಹ ಕ್ರೈಸ್ತರಾದ ನಾವೆಲ್ಲರೂ ಇತರರಿಗೆ ಮಾದರಿಯಾಗಿರಬೇಕೆಂದು ಕರೆಯಲ್ಪಟ್ಟಿದ್ದೇವೆ. ನಿಮ್ಮ ವ್ಯಕ್ತಿತ್ವ ಪ್ರಕಾರ ಏನೇ ಇರಲಿ, ನಮ್ಮ ಸುತ್ತಮುತ್ತಲಿನವರಿಗೆ ನಂಬಿಕೆ, ಭರವಸೆ, ಪ್ರೀತಿ ಮತ್ತು ಪರಿಶುದ್ಧತೆಯ ವಿಚಾರದಲ್ಲಿ ಮಾದರಿಗಳಾಗಿರಬೇಕೆಂದು ನಾವೆಲ್ಲರೂ ಕರೆಯಲ್ಪಟ್ಟಿದ್ದೇವೆ.
ಬೈಬಲ್ ಜ್ಞಾನ ಹೊಂದಿರುವುದು ಒಳ್ಳೆಯದು, ಆದರೆ ಅದಕ್ಕಿಂತ ಉತ್ತಮವಾದದ್ದು ನಾವು ಕ್ರಿಸ್ತನಲ್ಲಿ ವಿಶೇಷವಾಗಿ ಅವಿಶ್ವಾಸಿಗಳ ಮುಂದೆ ನಮ್ಮ ನಂಬಿಕೆಯನ್ನು ನಾವು ಮಾತನಾಡುವ, ವರ್ತಿಸುವ, ಪ್ರೀತಿಸುವ, ನಂಬುವ ಮತ್ತು ದೇವರನ್ನು ಮೆಚ್ಚಿಸದ ವಿಷಯಗಳನ್ನು ತ್ಯಜಿಸುವ ಮೂಲಕ ಪ್ರದರ್ಶಿಸಬೇಕು.
ಹಲವು ವರ್ಷಗಳ ಹಿಂದೆ, ದೇವರ ಮನುಷ್ಯನೊಬ್ಬ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ, “ಲೋಕದ ಜನರು ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನರನ್ನು ಓದಿಲ್ಲದೇ ಇರಬಹುದು, ಆದರೆ ಅವರು ಖಂಡಿತವಾಗಿಯೂ ಐದನೇ ಸುವಾರ್ತೆಯನ್ನು ಓದುತ್ತಾರೆ. ಏಕೆಂದರೆ ನೀವೇ ಆ ಐದನೇ ಸುವಾರ್ತೆಯಾಗಿದ್ದೀರಿ.” ಇದು ಎಷ್ಟು ಸತ್ಯವಲ್ಲವೇ!
ಕೆಲವರಿಗೆ, ನಾವು ಕ್ರಿಸ್ತನೊಂದಿಗೆ ತಮ್ಮ ಜೀವಿತಾವಧಿಯಲ್ಲಿ ಅವರು ನೋಡಬಹುದಾದ ಏಕೈಕ ನಿಜವಾದ ಸಂಪರ್ಕವಾಗಿರಬಹುದು ಆದರಿಂದ ನಾವು ಆತನನ್ನು ಚೆನ್ನಾಗಿ ಪ್ರತಿನಿಧಿಸುತ್ತಿದ್ದೇವಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅಪೊಸ್ತಲ ಪೌಲನು ನೀಡಿದ ಸಲಹೆಯನ್ನು ನಾವು ನಿಜವಾಗಿಯೂ ಪಾಲಿಸಿದರೆ ಅದು ನಮಗೆಲ್ಲರಿಗೂ ಒಳ್ಳೆಯದೇ.
"ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ."
(1 ತಿಮೊಥೆಯ 4:16 NLT).
ನೀವು ಹೇಗೆ ಬದುಕುತ್ತೀರಿ ಮತ್ತು ನಿಮ್ಮ ಬೋಧನೆಯನ್ನು ಹೇಗಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಸ್ವಂತ ರಕ್ಷಣೆಗಾಗಿ ಮತ್ತು ನಿಮ್ಮನ್ನು ಕೇಳುವವರ ರಕ್ಷಣೆಗಾಗಿ ಸರಿಹೊಂದುವಂತೆ ಅದಿರಲಿ.
Bible Reading: Ezekiel 4-6
Prayer
ತಂದೆಯೇ, ಯೇಸುವಿನ ಹೆಸರಿನಲ್ಲಿ, ನಾನು ಎಲ್ಲರ ಮೇಲೆ ನಿಮ್ಮ ಪ್ರಭಾವ ಬೀರಿ ನಿಮ್ಮ ಸಂಪರ್ಕಕ್ಕೆ ಅವರನ್ನು ಕರೆತಂದು ನಿಮಗಾಗಿ ಅವರ ಆತ್ಮಗಳನ್ನು ಗೆಲ್ಲುವಂತೆ ನಿಮ್ಮ ಮಾರ್ಗಗಳಲ್ಲಿ ಬೆಳೆಯಲು ನನಗೆ ಸಹಾಯ ಮಾಡಿ. ಆಮೆನ್.
Join our WhatsApp Channel

Most Read
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
● ಆತ್ಮವಂಚನೆ ಎಂದರೇನು? -I
● ದೇವರ 7 ಆತ್ಮಗಳು: ಕರ್ತನ ಆತ್ಮ
● ಆಲಸ್ಯದ ದೈತ್ಯನನ್ನು ಕೊಲ್ಲುವುದು
● ಎಸ್ತರಳ ರಹಸ್ಯವೇನು?
● ದೈನಂದಿನ ಮನ್ನಾ
Comments