हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
Daily Manna

ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.

Sunday, 23rd of June 2024
1 0 398
Categories : ಅನುಗ್ರಹ (Grace)
ಇತರರಿಗೆ ಕೃಪೆ ತೋರಿಸುವುದು ಎಂದರೆ "ಸಹನೆಯಿಂದ ಸಹಿಸಿಕೊಳ್ಳುವುದು" (ಅಥವಾ ದಯಾಪೂರ್ವಕವಾಗಿ ಸಹಿಸಿಕೊಳ್ಳುವುದು) ಎಂದರ್ಥ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಚಾರದಲ್ಲಿ ಬಲಹೀನತೆಗಳು ಇದ್ದೇ ಇರುತ್ತವೆ. ಅದರಿಂದಾಗಿ ನಾವೆಲ್ಲರೂ ಸಹ "ಪ್ರಗತಿಯಲ್ಲಿರುವ ಕಾಮಗಾರಿಗಳು" ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕೆಂಬುದು ಇದರ ಅರ್ಥವಾಗಿದೆ. ಇಂದು ಕೃಪೆ ತೋರಿಸಬೇಕೆನ್ನುವಂತದ್ದು ನಾವೆಲ್ಲರೂ ನಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ಒಂದು ಮುಖ್ಯವಾದ ಮನೋಭಾವವಾಗಿದೆ.

ಕೃಪೆಯನ್ನು ಪ್ರಾಯೋಗಿಕವಾಗಿ ವ್ಯಕ್ತಪಡಿಸುವ ಈ ಮಾರ್ಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅನುಮತಿಸಿ

ಮಾತುಗಳಲ್ಲಿ ಕೃಪೆಯನ್ನು ವ್ಯಕ್ತಪಡಿಸುವುದು.

ಮತ್ತೊಬ್ಬರಿಂದ ಕಿರಿಕಿರಿ ಅನುಭವಿಸುವಂಥದ್ದು ಬೇಸರಗೊಳ್ಳುವಂಥದ್ದು ಸಹಜವಾದ ಒಂದು ಮನೋಭಾವವಾಗಿದೆ. ಆದರೆ ಅವುಗಳಿಗೆ ನಾವು ವಿಭಿನ್ನ ರೀತಿಯಲ್ಲಿ ಅವುಗಳಿಗೆ ಪ್ರತಿಸ್ಪಂದಿಸುವುದನ್ನು ಕಲಿಯಬೇಕೆಂದು ದೇವರು ಬಯಸುತ್ತಾನೆ. ನಾವು ಕ್ರೈಸ್ತರೊಂದಿಗಾಗಲೀ  ಅಥವಾ ಅನ್ಯರೊಂದಿಗಾಗಲೀ  ವ್ಯವಹರಿಸುವಾಗ ಸಾತ್ವಿಕವಾದ ದಯಾಪೂರಕವಾದ ಮಾತುಗಳನ್ನೇ ಬಳಸಬೇಕು.

ಕೆಲವು ಜನರನ್ನು ತಿದ್ದಬೇಕಾದ ಸಮಯವೂ ಬರುತ್ತದೆ. ಆದರೆ ಆಗಲೂ ಸಹ ನಮ್ಮ ಮಾತುಗಳು ಏರುದನಿಯಲ್ಲಿ ಎಂದಿಗೂ ಇರಬಾರದು

"ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳಿದುಕೊಳ್ಳುವಿರಿ."(ಕೊಲೊಸ್ಸೆಯವರಿಗೆ 4:6)

ಕೃಪೆಯಿಂದ ಪ್ರತಿಕ್ರಿಯಿಸಿ.

ನೀವು ಎಂದಾದರೂ ಅನ್ಯಾಯವಾಗಿ ಟೀಕೆಗೊಳಗಾಗಿದ್ದೀರಾ? ಈಗ ನೀವು ಆ ಜನರು ನಿಮ್ಮನ್ನು ಕಾಲೊರಿಸುವ ಬಟ್ಟೆಯಂತೆ ಉಪಯೋಗಿಸಿಕೊಂಡು ಅದರ ಮೇಲೆ ನಡೆಯಲು ಅವಕಾಶ ಮಾಡಿಕೊಡಬೇಕಾಗಿಲ್ಲ. ಆದಾಗಿಯೂ ನೀವು ಅವರೊಂದಿಗೆ ದಯಾಪೂರ್ವಕವಾಗಿ ಪ್ರತಿಕ್ರಿಯೆಸಬಹುದು. ನಿಮ್ಮ ಈ ನಡತೆಯು ನಿಮ್ಮ ಸುತ್ತಲಿನ ಜನರಲ್ಲಿ ಉತ್ತಮ ಪರಿಣಾಮವನ್ನು ಉಂಟು ಮಾಡಿ ಯೇಸು ನಾಮವನ್ನು ಮಹಿಮೆಗೊಳಿಸುತ್ತದೆ.

ಸಮಾಧಾನದ ಆತ್ಮದಿಂದ ಪ್ರತಿಕ್ರಿಯಿಸುವಂಥದ್ದು ನೀವು ಸತ್ಯವನ್ನು ಪರಿಶೋಧಿಸಿ ನೋಡುವಂತೆಯೂ, ಮುಂದಿನ ಹಂತಕ್ಕೆ ಸಾಗಲು ನಿಮಗೆ ಅಗತ್ಯವಾದ ಬದಲಾವಣೆಯನ್ನು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

 "ಕ್ಷಮಿಸಿ" ಎಂದು ಹೇಳುವುದನ್ನು ಕಲಿಯಿರಿ.

ಇಂದಿನ ದಿನಮಾನಗಳಲ್ಲಿ "ಕ್ಷಮಿಸಿ" ಎನ್ನುವ ಪದವು ಕೇಳಲು ಬಹಳ ಅಪರೂಪವಾದ ಪದವಾಗಿದೆ. ಅಧಿಕವಾದ ವಿಶೇಷ ಪದವು ಎಂದು ಎನಿಸಿ ಬಿಟ್ಟಿದೆ. ನೀವು ತಪ್ಪು ಮಾಡಿದಾಗ ನಿಮ್ಮೆಲ್ಲ ಅಹಂಕಾರವನ್ನು ನುಂಗಿಕೊಂಡು ಕ್ಷಮಾಪಣೆಯನ್ನು ಕೇಳಿರಿ. ನೆನಪಿಡಿ ಕೃಪೆ ಎಂದರೆ ಯೋಗ್ಯತೆ ಇಲ್ಲದವರಿಗಾಗಿಯೇ ದಯೆ ನೀಡುವ ಸಂಗತಿಯಾಗಿದೆ. ನಾವು ಇಷ್ಟು ಮಾಡುತ್ತಾ ಬಂದಿದ್ದರೂ ಇಂದು ವಿಚ್ಛೇದನಗಳ ಸಂಖ್ಯೆ ಎಷ್ಟೋ ಇಳಿಮುಖವಾಗುತ್ತಿತ್ತು. ಕ್ರೈಸ್ತರಲ್ಲಿ ಸಮಸ್ಯೆಗಳು ಕೂಡ ಇನ್ನೂ ಕಡಿಮೆಯಾಗುತ್ತಿತ್ತು.

ಅನೇಕ ವರ್ಷಗಳ ಹಿಂದೆ ನಾನು "ಪೈರ್ ಪ್ರೂಫ್" ಎಂಬ ಕ್ರೈಸ್ತ ಇಂಗ್ಲಿಷ್ ಚಲನಚಿತ್ರವನ್ನು ನೋಡಿದೆ. ಅದರಲ್ಲಿ ಆ ವ್ಯಕ್ತಿಯು ತನ್ನ ಹೆಂಡತಿಯೊಂದಿಗೆ ದಯಾಪೂರ್ವಕವಾಗಿ ನಡೆದುಕೊಳ್ಳುವ ಮೂಲಕ ತನ್ನ ದಾಂಪತ್ಯ ಜೀವನವನ್ನು ದುರಸ್ತಿ ಮಾಡಿಕೊಂಡು ಮತ್ತೆ ತನ್ನ ಹೆಂಡತಿಯನ್ನು ಪಡೆದುಕೊಳ್ಳುತ್ತಾನೆ. ಆಕೆಯ ಕ್ರಿಯೆಗಳು ಪ್ರತಿಕ್ರಿಯೆಗಳು ಭಯಂಕರವಾಗಿರುತ್ತವೆ. ಆದರೂ ಸಹ ಅವನು ಆಕೆಯ ವಿಚಾರದಲ್ಲಿ ದಯಾಪೂರ್ವಕವಾಗಿ ವರ್ತಿಸುತ್ತಾನೆ. ಅವರಿಬ್ಬರ ದಾಂಪತ್ಯವೂ ಆ ಗಂಡನ ದಯಾಪೂರ್ವಕ ನಡವಳಿಕೆಯ ಕಾರಣದಿಂದಲೇ ಪುನಃ ಸ್ಥಾಪಿಸಲ್ಪಡುತ್ತದೆ.

"ನಿನ್ನ ವೈರಿಯ ಎತ್ತಾಗಲಿ ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗಿರಲಾಗಿ ಅದು ನಿನಗೆ ಸಿಕ್ಕಿದರೆ ಅದನ್ನು ಅವನ ಬಳಿಗೆ ಹೊಡಕೊಂಡು ಹೋಗಿ ಒಪ್ಪಿಸಬೇಕು. ನಿನ್ನ ಹಗೆಯವನ ಕತ್ತೆ ಹೊರೆಯ ಕೆಳಗೆ ಬಿದ್ದಿರುವದನ್ನು ಕಂಡರೆ ಅದನ್ನು ಎಬ್ಬಿಸುವದಕ್ಕೆ ಮನಸ್ಸಿಲ್ಲದೆ ಹೋದಾಗ್ಯೂ ಅವನಿಗೆ ಸಹಾಯಮಾಡಿ ಎಬ್ಬಿಸಲೇಬೇಕು." (ವಿಮೋಚನಕಾಂಡ 23:4-5)

ನನ್ನ ಪೂರ್ವ ದಿನಗಳಲ್ಲಿ ಈ ವಾಕ್ಯವನ್ನು ಅರ್ಥ ಅರ್ಥಮಾಡಿಕೊಳ್ಳಲು ನನಗೆ ಕಷ್ಟವಾಗಿತ್ತು. ಆದರೆ ದೇವರಿಗೆ ಸ್ತೋತ್ರ! ಈಗ ನನಗದು ಅರ್ಥವಾಗುತ್ತಿದೆ.

ಇಲ್ಲಿ ಎಚ್ಚರದಿಂದ ಗಮನಿಸಿ ನೋಡಿ. ಏನೆಂದರೆ ದೇವರು ನಾವು ನಮ್ಮ ಶತ್ರುಗಳಿಗೆ ಸೇರಿದ ಆಸ್ತಿಯ ವಿಚಾರದಲ್ಲಿಯೂ ಸಹ, ನಮ್ಮನ್ನು ದ್ವೇಷಿಸುವರ ವಿಷಯಗಳಲ್ಲಿಯೂ ಸಹ ನಾವು ದಯಾಪೂರ್ವಕವಾಗಿ ನಡೆದುಕೊಳ್ಳಬೇಕೆಂದು ಬಯಸುತ್ತಾನೆ.

ನೀವು ಈಗ ನಿಮ್ಮ ಜೀವನದಲ್ಲಿ ದಯಾಪೂರ್ವಕವಾಗಿ ನಡೆಯಲು ಆರಂಭಿಸಿದ್ದೇ ಆದರೆ ದೇವರು ನಿಮ್ಮ ಜೀವನದಲ್ಲಿ ದೊಡ್ಡ ಮರುಸ್ತಾಪನೆಯನ್ನು ತರುತ್ತಾನೆ ಎಂದು ನಾನು ನಂಬುತ್ತೇನೆ.
Prayer
1)ತಂದೆ ನಾನು ನನ್ನ ರಕ್ಷಕನೂ  ನನ್ನ ಒಡೆಯನೂ  ಆದ ಯೇಸು ಕ್ರಿಸ್ತನಲ್ಲಿ ಇರುವ ಜ್ಞಾನದಲ್ಲಿಯೂ ಕೃಪೆಯಲ್ಲಿಯೂ ಬೆಳೆಯಬೇಕೆಂದು ಯೇಸು ನಾಮದಲ್ಲಿ ಬೇಡುತ್ತೇನೆ.

2)ನನ್ನ ದೇವರ ಮತ್ತು ನನ್ನ ಕರ್ತನಾದ ಯೇಸುವಿನ ಜ್ಞಾನದಲ್ಲಿ ನನಗೆ ಕೃಪೆಯೂ - ಶಾಂತಿಯೂ ಇನ್ನು ಹೆಚ್ಚು ಹೆಚ್ಚಾಗಿ ದೊರಕಲಿ.

3)ನಾನು ಅಮಿತವಾದ ದಯೆಯನ್ನು ಕೃಪೆಯನ್ನು ಹೊಂದಿಕೊಳ್ಳುವಾಗ ಯೇಸು ನಾಮದಲ್ಲಿ ನನಗೆ ಆನಂದವು ಇನ್ನು ಹೆಚ್ಚು ಹೆಚ್ಚಾಗಿ ಉಂಟಾಗಲಿ.

4)ಓ ಕರ್ತನೆ ಬರುವ ದಿನಗಳಲ್ಲಿ, ವಾರಗಳಲ್ಲಿ, ತಿಂಗಳುಗಳಲ್ಲಿ ನಿನ್ನ ಆತ್ಮನ ನಡೆಸುವಿಕೆಯಿಂದ ನನಗೆ ಅಪರಿಮಿತವಾದ ಯಶಸ್ಸು ಯೇಸು ನಾಮದಲ್ಲಿ ದೊರಕಲಿ.

5)ಕರ್ತನೇ ನಾನು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುವಂತೆ ಯೇಸು ನಾಮದಲ್ಲಿ ಸಹಾಯ ಮಾಡು.

6)ನಾನು ಹೋಗುವ ಕಡೆಯೆಲ್ಲ ನಿಶ್ಚಯವಾಗಿಯೂ ಶುಭವೂ ಕೃಪೆಯೂ ಯೇಸು ನಾಮದಲ್ಲಿ ನನ್ನನ್ನು ಹಿಂಬಾಲಿಸುವವು.

Join our WhatsApp Channel


Most Read
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕೃತಜ್ಞತೆಯ ಯಜ್ಞ
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಮದಲಿಂಗನನ್ನು ಭೇಟಿ ಮಾಡಲು ಸಿದ್ದರಾಗಿರಿ.
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಮಾತನಾಡುವ ವಾಕ್ಯದ ಶಕ್ತಿ
● ದೇವರ ರೀತಿಯ ನಂಬಿಕೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login