ನನ್ನಲ್ಲಿರುವ ಎಲ್ಲವೂ ಕರ್ತನನ್ನು ಸ್ತುತಿಸಲಿ; ಎಂದು ದೇವರು ತನಗಾಗಿ ಮಾಡಿದ ಒಳ್ಳೆಯ ವಿಷಯಗಳನ್ನು ನಾನು ಎಂದಿಗೂ ಮರೆಯಬಾರದು ಎಂಬುದಾಗಿ ದಾವೀದನು ಪ್ರಾರ್ಥಸಿ ಅದಕ್ಕೆ ಬದ್ಧನ್ನಾಗಿದ್ದನು. ನಾವು ಕೂಡ ಪ್ರಾರ್ಥಿಸುತ್ತಾ ನಮ್ಮ ಜೀವನದಲ್ಲಿ ದೇವರು ಮಾಡಿದ ಎಲ್ಲಾ ಒಳ್ಳೆಯತನವನ್ನು ಎಂದಿಗೂ ಮರೆಯಬಾರದು ಎನ್ನುವ ಬದ್ಧತೆಯಲ್ಲಿರಬೇಕು.
”ಐಗುಪ್ತದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸವತೆಕಾಯಿ, ಕರ್ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವು ನೆನಪಿಗೆ ಬರುತ್ತವಲ್ಲಾ; ಇಲ್ಲಿಯಾದರೋ ನಮ್ಮ ಜೀವ ಬತ್ತಿಹೋಯಿತು; ಈ ಮನ್ನವೇ ಹೊರತು ನಮಗೆ ಇನ್ನೇನೂ ಸಿಕ್ಕಲಿಕ್ಕಿಲ್ಲ ಅಂದುಕೊಳ್ಳುತ್ತಿದ್ದರು.(ಅರಣ್ಯಕಾಂಡ 11:5-6)
ಇಸ್ರಾಯೇಲ್ಯರು ತಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸವತೆಕಾಯಿ, ಕರ್ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವುಗಳಿಗಾಗಿ ಎಷ್ಟು ಬೆಲೆ ತೆತ್ತಿದ್ದರೋ ಅದನ್ನು ಎಷ್ಟು ಬೇಗನೆ ಮರೆತು ಹೋಗಿದ್ದರು. ಅಮಾನವೀಯ ಸ್ಥಿತಿಯಲ್ಲಿ ಗುಲಾಮರಾಗಿ ಜೀವಿಸುತ್ತ ಅಲ್ಲಿ ಅವರು ಭಾರಿ ಬೆಲೆಯನ್ನು ತೆರಬೇಕಾಗಿತ್ತು. ಅವರು ಅಂತಹ ಬೆಲೆಯನ್ನು ಪಾವತಿಸಲುಆಗದೆ ಆ ಸಂಕಟವನ್ನು ಸಹಿಸಲಾಗದ ಕಾರಣ ಅವರು ಆಗಾಗ್ಗೆ ವಿಮೋಚನೆಗಾಗಿ ಕರ್ತನಿಗೆ ಮೊರೆಯಿಡುತ್ತಿದ್ದರು.
ಕರ್ತನು ಅವರನ್ನು ಬಿಡುಗಡೆ ಮಾಡಿದ ನಂತರ, ಅವರು ಕರ್ತನು ತಮಗಾಗಿ ಮಾಡಿಕೊಟ್ಟ ಎಲ್ಲಾ ಅನುಕೂಲಗಳನ್ನು ಮರೆತು, ಐಗುಪ್ತದಲ್ಲಿ ಅವರು ಬಿಟ್ಟು ಬಂದ 'ತಿನ್ನುತ್ತಿದ್ದ ಪದಾರ್ಥಗಳಿಗಾಗಿ ' ಅಳುತ್ತಿದ್ದರು. ಅವರು ಈಜಿಪ್ಟಿನ ಆಹಾರವನ್ನು ನೆನಪಿಸಿಕೊಂಡರೇ ವಿನಃ ಕರ್ತನು ಮಾಡಿದ ಪ್ರಬಲವಾದ ವಿಮೋಚನೆಯನ್ನು ನೆನಪಿಸಿಕೊಳ್ಳಲಿಲ್ಲ ಎಂಬುದು ಎಷ್ಟು ವಿಚಿತ್ರವಲ್ಲವೇ?
ದೇವರು ನಮಗಾಗಿ ಮಾಡಿದ ಒಳ್ಳೆಯ ವಿಷಯಗಳನ್ನು ಮರೆತುಬಿಡುವುದು ಪಾಪ ಎಂದು ನನಗೆ ಮನವರಿಕೆಯಾಗಿದೆ.
1. ಮರೆತುಬಿಡುವುದು ಅಪನಂಬಿಕೆಗೂ ಮತ್ತು ತಿರುಗಿ ಬೀಳುವುದಕ್ಕೂ ಕಾರಣವಾಗುತ್ತದೆ ಇಸ್ರಾಯೇಲ್ ಮಕ್ಕಳು ಅನೇಕ ಅದ್ಭುತಗಳನ್ನು ನೋಡಿದ್ದರೂ, ಅವರು "ಶೀಘ್ರದಲ್ಲೇ ಆತನು ಅವರಿಗೆ ಮಾಡಿದ ಅನೇಕ ದಯೆಯನ್ನು ಮರೆತುಬಿಟ್ಟರು. ಬದಲಾಗಿ, ಅವರು ಕೆಂಪು ಸಮುದ್ರದಲ್ಲಿ ಆತನ ವಿರುದ್ಧ ತಿರುಗಿ ಬಿದ್ದರು." (ಕೀರ್ತನೆ 106:7 NLT)
2. ಮರೆತುಬಿಡುವಂತದ್ದು ನಮ್ಮನ್ನು ಮೂರ್ಖತನದಿಂದ ವರ್ತಿಸುವಂತೆ ಮಾಡುತ್ತದೆ.
ಆದರೆ ಅವರು ಬೇಗನೆ ಆತನ ಕೆಲಸಗಳನ್ನು ಮರೆತು ಆತನ ಸಂಕಲ್ಪವನ್ನು ಕಾದಿರದೆ ಆತುರ ಪಟ್ಟರು! (ಕೀರ್ತನೆ 106:13 NLT)
ದೇವರ ಒಳ್ಳೆಯತನವನ್ನು ಮರೆತುಬಿಡುವುದರಿಂದ ನಾವು ಅಸಹನೆಗೊಳ್ಳುತ್ತೇವೆ ಮತ್ತು ಆತನ ನಿರ್ದೇಶನಕ್ಕಾಗಿ ನಾವು ಕಾಯದಿರುವವರಾಗುತ್ತೇವೆ. ಯಾವಾಗ ಜನರಿಗೆ ತಾಳ್ಮೆಯಿರುವುದಿಲ್ಲವೋ ಆಗ ಅವರು ಮೂರ್ಖತನದ ಕೆಲಸಗಳನ್ನು ಮಾಡುತ್ತಾರೆ.
3. ಮರೆತು ಹೋಗುವಂತದ್ದು ದೇವರ ಕೋಪಕ್ಕೆ ಕಿಚ್ಚು ಹೊತ್ತಿಸಿದಂತೆ.
ಐಗುಪ್ತದಲ್ಲಿ ಮಹತ್ತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪುಸಮುದ್ರದ ಬಳಿಯಲ್ಲಿ ಘೋರ ಕೃತ್ಯಗಳನ್ನೂ ನಡಿಸಿದ ತಮ್ಮ ರಕ್ಷಕನಾದ ದೇವರನ್ನು ಮರೆತೇಬಿಟ್ಟರು.
ಆದದರಿಂದ ಆತನು ಅವರನ್ನು ಸಂಹರಿಸುವೆನೆನ್ನಲು
ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.(ಕೀರ್ತನೆ 106:21-23 NLT)
ಖಂಡಿತವಾಗಿಯೂ ಕರ್ತನು ಈ ಹಿಂದೆ ನಿಮಗಾಗಿ ಯಾವುದಾದರೂ ಒಂದು ಒಳ್ಳೆಯದನ್ನು ಮಾಡಿಯೇ ಮಾಡಿರುತ್ತಾನೆ. ಅದಕ್ಕಾಗಿ ಆತನಿಗೆ ಧನ್ಯವಾದ ಹೇಳುವುದನ್ನು ರೂಢಿಸಿಕೊಳ್ಳಿ. ಕರ್ತನ ಒಳ್ಳೆಯತನವನ್ನು ಎಂದಿಗೂ ಮರೆಯಬೇಡಿ.
Bible Reading: Ezekiel 7-10
Prayer
ತಂದೆಯೇ, ನೀನು ನನ್ನ ಕುಟುಂಬ ಸದಸ್ಯರಿಗೂ ಮತ್ತು ನನಗಾಗಿಯೂ ಮಾಡಿದ ಎಲ್ಲಾ ಒಳ್ಳೆಯದನ್ನು ನಾನು ಎಂದಿಗೂ ಮರೆಯದಂತೆ ನನಗೆ ಯೇಸುನಾಮದಲ್ಲಿ ಕೃಪೆಯನ್ನು ನೀಡು
Join our WhatsApp Channel

Most Read
● ಧಾರ್ಮಿಕತೆಯ ಆತ್ಮವನ್ನು ಗುರುತಿಸುವುದು● ನಿಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಿ
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ಬೇರಿನೊಂದಿಗೆ ವ್ಯವಹರಿಸುವುದು
● ಆತನ ಬಲದ ಉದ್ದೇಶ.
Comments