हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಕನಸಿನಲ್ಲಿ ದೇವದೂತರ ಗೋಚರಿಸುವಿಕೆ
Daily Manna

ಕನಸಿನಲ್ಲಿ ದೇವದೂತರ ಗೋಚರಿಸುವಿಕೆ

Saturday, 21st of June 2025
1 0 85
Categories : ಕನಸುಗಳು (Dreams) ದೇವದೂತರು (Angels)
ದೇವದೂತರು ದೇವರ ಸಂದೇಶವಾಹಕರಾಗಿದ್ದು; ಇದು ಅವರ ಕರ್ತವ್ಯಗಳಲ್ಲಿ ಒಂದಾಗಿದೆ. ಅವರನ್ನು ದೇವರ ಮಕ್ಕಳಿಗೆ ಆತನ ಸಂದೇಶವನ್ನು ತರುವ ಸೇವಕರಾಗಿ ಕಳುಹಿಸಲಾಗುತ್ತದೆ.

"ಇವರೆಲ್ಲರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಡುವ ಊಳಿಗದ ಆತ್ಮಗಳಲ್ಲವೋ?(ಇಬ್ರಿಯ 1:14) ಎಂದು ಸತ್ಯವೇದ ಹೇಳುತ್ತದೆ.

ಅವರು ನಮ್ಮ ಬಳಿಗೆ ಬರುವಾಗ ಅವರು ವಿವಿಧ ರೀತಿಯಲ್ಲಿ ಪ್ರಕಟಗೊಳ್ಳುತ್ತಾರೆ. ಅವುಗಳಲ್ಲಿ ಒಂದು ನಮ್ಮ ಕನಸುಗಳ ಮೂಲಕ. ತಮ್ಮ ಕನಸಿನಲ್ಲಿ ಕಾಣಿಸಿಕೊಂಡ ದೇವದೂತನ ಮಾತಿನ ಮೂಲಕ, ತಮ್ಮ ಜೀವನ ಗತಿಯನ್ನೇ ಬದಲಾಯಿಸುವ ಸೂಚನೆಗಳನ್ನು ಪಡೆದ ಮನುಷ್ಯರ ಅನೇಕ ಉದಾಹರಣೆಗಳನ್ನು ನಾವು ದೇವರ ವಾಕ್ಯದಲ್ಲಿ ಕಾಣುತ್ತೇವೆ.

ಇದು ಮಾನ್ಯವಾದ ದೇವರರಾಜ್ಯದ ವ್ಯವಸ್ಥೆಯಾಗಿದ್ದು, ಅದರ ಮೂಲಕ ದೇವರು ತನ್ನ ಜನರೊಂದಿಗೆ ಮಾತನಾಡುತ್ತಾನೆ ಅಥವಾ ಅವರಿಗೆ ಆತ್ಮೀಕ ದರ್ಶನ ನೀಡುತ್ತಾನೆ. ಯಾಕೋಬನ ಕಥೆಯನ್ನು ನೋಡಿರಿ: " ಆ ರಾತ್ರಿ ಅವನು ಕನಸುಕಂಡನು. ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೇಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು; ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು." (ಆದಿಕಾಂಡ 28:12)

ಯಾಕೋಬನು ತನ್ನ ಸ್ವಂತ ಸಹೋದರನಾದ ಏಸಾವನಿಂದ ಚೊಚ್ಚಲುತನದ ಹಕ್ಕನ್ನು ಮೋಸಮಾಡಿ ಹೊಂದಿಕೊಂಡಿದಕ್ಕಾಗಿ ಕೋಪಗೊಂಡ ಏಸಾವನು ಯಾಕೋಬನನ್ನು ಕೊಲ್ಲಲು ಯೋಚಿಸುತ್ತಿದ್ದಾಗ ಯಾಕೋಬನು ತಪ್ಪಿಸಿಕೊಂಡು ಓಡಿಹೋಗುತ್ತಿದ್ದನು ನಂತರ ಅವನು ತನ್ನ ಕನಸಿನಲ್ಲಿ ದೇವದೂತರ ದರ್ಶನ ಪಡೆಯುತ್ತಾನೆ, ಅದು ಅವನ ಜೀವನವನ್ನೇ ಬದಲಾಯಿಸುತ್ತದೆ. ದೇವರು ಅದೇ ಸ್ಥಳದಲ್ಲಿ ಅವನೊಂದಿಗೆ ಮಾತನಾಡಿ ಅವನನ್ನು ಮೂಲಪಿತೃವಾದ ಅಬ್ರಹಾಮನ ಆಶೀರ್ವಾದಕ್ಕೆ ಸೇರಿಸಿದನು ಅಂದಿನಿಂದ ಯಾಕೋಬನು ದೇವರೊಂದಿಗೆ ತನ್ನ ನಡಿಗೆಯನ್ನು ಪ್ರಾರಂಭಿಸಿದನು.

ಹಳೆಯ ಮತ್ತು ಹೊಸ ಒಡಂಬಡಿಕೆ ಎರಡರಲ್ಲೂ ದೇವದೂತರು ಪೂರ್ವಜರಿಗೆ, ಪ್ರವಾದಿಗಳಿಗೆ ಮತ್ತು ಇತರರಿಗೆ ಮನುಷ್ಯರ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದರು. 

" ಆತನು ಹೋಗುತ್ತಿರುವಾಗ (ಆಕಾಶಕ್ಕೆ ಒಯ್ಯಲ್ಪಡುವಾಗ) (ಯೇಸುವಿನ ಶಿಷ್ಯರು )ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರವಸ್ತ್ರಧಾರಿಗಳಾದ ಇಬ್ಬರು ಪುರುಷರು(ದೇವದೂತರು) ಫಕ್ಕನೆ ಅವರ ಹತ್ತರ ನಿಂತುಕೊಂಡು -.. ” (ಅಪೊಸ್ತಲರ ಕೃತ್ಯಗಳು 1:10)

ಹೀಗೆ ಕಾಣಿಸಿಕೊಂಡವರು ಕೆಲವೊಮ್ಮೆ ಗೋಚರಿಸುವ ಮಾನವ ರೂಪದಲ್ಲಿ ಮತ್ತು ಇತರ ಸಮಯಗಳಲ್ಲಿ ಕನಸುಗಳು ಅಥವಾ ದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ಯಾವಾಗಲೂ ಸಂದೇಶದೊಂದಿಗೆ ಬರುತ್ತಿದ್ದವರಾದರೂ ಸ್ಪಷ್ಟವಾಗಿ, ಯಾವಾಗಲೂ ಅವರು ಬಿಳಿ ನಾರಿನ ವಸ್ತ್ರಗಳನ್ನು ಧರಿಸಿಕೊಂಡವರಾಗಿಯೇ ಇಲ್ಲವೇ ಎಲ್ಲಾ ಸಮಯದಲ್ಲೂ ಎರಡು ಚಿನ್ನದ ರೆಕ್ಕೆಗಳನ್ನು ಹೊಂದಿಕೊಂಡವರಾಗಿಯೇ ಕಾಣಿಸಿಕೊಳ್ಳುತ್ತಿರಲಿಲ್ಲ. 

ಅವರು ಮಾನವ ಧ್ವನಿ ಮತ್ತು ಸ್ವರವನ್ನು ಹೋಲುವ ಧ್ವನಿಯನ್ನು ಹೊಂದಿರುತ್ತಿದ್ದರು. ಇಬ್ರಿಯರ ಪುಸ್ತಕದಲ್ಲಿ, ಅಪರಿಚಿತರನ್ನು ಸತ್ಕರಿಸುವಾಗ ನಾವು ಜಾಗರೂಕರಾಗಿರಬೇಕು ಎಂದು ಬರಹಗಾರ ಓದುಗರಿಗೆ ತಿಳಿಸುತ್ತಾನೆ, ಏಕೆಂದರೆ ಅವರು ದೇವದೂತರೆಂದು ನಮಗೆ ತಿಳಿದಿಲ್ಲದಿರಬಹುದು (ಇಬ್ರಿಯ 13:2). ಆದ್ದರಿಂದ, ಅವರು ಈ ರೀತಿಯ ಭೌತಿಕ ರೂಪದಲ್ಲಿಯಾದರೂ ಅಥವಾ ಕನಸಿನಲ್ಲಿಯಾದರೂ ಬರಬಹುದು, ಎರಡೂ ರೀತಿಯಲ್ಲಿಯೂ ಬರಬಹುದು, ಅವರು ಒಂದು ಉದ್ದೇಶದಿಂದ ಬರುವವರಾದರಿಂದ ನಾವು ಎಚ್ಚರಿಕೆಯಿಂದ ಗಮನ ಹರಿಸಬೇಕು.

ನಾನು ಇನ್ನೂ ಚಿಕ್ಕ ಹುಡುಗನಾಗಿದ್ದಾಗ, ನೀರಿನಲ್ಲಿ ಮುಳುಗುವುದರಿಂದ ನನ್ನನ್ನು ರಕ್ಷಿಸಿದ ದೇವದೂತನ ದರ್ಶನವು ತುಂಬಾ ಹತ್ತಿರದಿಂದ ಉಂಟಾಯಿತು. ಅನೇಕ ಜನರು ನನ್ನನ್ನು ಕನಸಿನಲ್ಲಿ ನೋಡಿದ್ದೇವೆ ಎಂದು ನನಗೆ ಬರೆಯುತ್ತಾರೆ, ಆದರೆ ಕನಸು ಅಥವಾ ದರ್ಶನವು ಸತ್ಯವೇದಕ್ಕನುಸಾರವಾದ ಸಂಕೇತ ಮತ್ತು ಕಲ್ಪನೆಯನ್ನು ಹೊಂದಿದ್ದು ಆ ವ್ಯಕ್ತಿಯು ಕರ್ತನಿಂದ ಸಂದೇಶವನ್ನು ತರುತ್ತಿರುತ್ತಾನೆ.  ಸಾಮಾನ್ಯವಾಗಿ ಕನಸಿನಲ್ಲಿ ಮನುಷ್ಯನ ರೂಪದಲ್ಲಿ ದೇವದೂತನು ಕಾಣಿಸಿಕೊಳ್ಳಲು ಕರ್ತನು ಅನುಮತಿಸುವ ಕಾರಣ, ಕರ್ತನು ನಮಗೆ ಕೆರೂಬಿಮ್‌ಗಳು, ಸೆರಾಫಿಮ್‌ಗಳು ಅಥವಾ ಆತ್ಮ ಜೀವಿಗಳು ನಮ್ಮ ಎದುರಿಗೆ ಅವುಗಳ ಸಂಪೂರ್ಣ ಮಹಿಮೆಯಲ್ಲಿ ತೋರಿಬಂದರೆ ಅದನ್ನು ಎದುರಿಸುವ ಮಾನಸಿಕ, ದೈಹಿಕ ಮತ್ತು ಆತ್ಮೀಕ ಬಲವು ನಮ್ಮಲಿಲ್ಲ ಎನ್ನುವುದೂ ಒಂದು ಕಾರಣ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಬೈಬಲ್‌ನಲ್ಲಿ ಮನುಷ್ಯರು ದೇವದೂತರನ್ನು ಸಂಪೂರ್ಣವಾದ ಮಹಿಮೆಯಲ್ಲಿ ನೋಡಿದಾಗ, ಅವರು ನೆಲಕ್ಕೆ ಬಿದ್ದರು! ದಾನಿಯೇಲ 10 ರಲ್ಲಿ, ಪ್ರವಾದಿಯಾದ ದಾನಿಯೇಲನು ದೇವದೂತನನ್ನು ನೋಡಿದಾಗ, ಅವನು ನೆಲದ ಮೇಲೆ ಅಡಿಮೊಗವಾಗಿ ಬಿದ್ದನು .

"ದಾನಿಯೇಲನಾದ ನಾನೊಬ್ಬನೇ ಆ ದರ್ಶನವನ್ನು ಕಂಡೆನು; ನನ್ನೊಂದಿಗಿದ್ದವರು ಅದನ್ನು ಕಾಣಲಿಲ್ಲ; ದೊಡ್ಡ ನಡುಕವು ಅವರನ್ನು ಹಿಡಿಯಿತು, ಓಡಿ ಹೋಗಿ ಅವಿತುಕೊಂಡರು. ನಾನು ಏಕಾಕಿಯಾಗಿ ಉಳಿದು ಆ ಅದ್ಭುತದರ್ಶನವನ್ನು ಕಂಡು ಶಕ್ತಿಯನ್ನೆಲ್ಲಾ ಕಳಕೊಂಡೆನು, ನನ್ನ ಗಾಂಭೀರ್ಯವು ಹಾಳಾಯಿತು, ನಿತ್ರಾಣನಾದೆನು.ಆದರೂ ಅವನು ಮಾತಾಡುವ ಸದ್ದನ್ನು ಕೇಳಿದೆನು; ಅವನ ಮಾತಿನ ಶಬ್ದವು ನನ್ನ ಕಿವಿಗೆ ಬಿದ್ದಾಗ ನಾನು ಮೈಮರೆತು ಅಡಿಮೊಗವಾಗಿ ಅಡ್ಡಬಿದ್ದಿದ್ದೆನು.” (ದಾನಿಯೇಲ 10:7-9)

ಬಿಳಾಮನ ಕತ್ತೆಯೂ ಸಹ ದೇವದೂತನ ಸಮ್ಮುಖದಲ್ಲಿ ಅಡ್ಡಬಿದ್ದಿತು (ಅರಣ್ಯಕಾಂಡ 22:27). 

ದೇವದೂತರು ಸಹ ಅದ್ಭುತವಾದ ನೋಟವನ್ನು ಹೊಂದಿದ್ದಾರೆ ಮತ್ತು ಮನುಷ್ಯರಲ್ಲಿ ಬಲಿಷ್ಠರಾದವರನ್ನೂ  ಸಹ ಅದು ಭಯದಲ್ಲಿ ನಡುಗುವಂತೆ ಮಾಡಬಹುದು. ದೇವಜನರಿಗೆ ದೇವದೂತರ ನೋಟವು ಯಾವಾಗಲೂ ಒಳ್ಳೆಯ ಸಂಕೇತವಾಗಿರುತ್ತದೆ, ಏಕೆಂದರೆ ಅವರು ಭಕ್ತಿಹೀನರಿಗೆ ನ್ಯಾಯತೀರ್ಪಿನ ಸಂದೇಶವಾಹಕರಾಗಿರಬಹುದು, ಆದರೆ ನಾವು ಭಯಪಡಬೇಕಾಗಿಲ್ಲ, ಅವರಿಂದ ಒಳ್ಳೆಯದನ್ನೇ ನಿರೀಕ್ಷಿಸುತ್ತೇವೆ. (ಕೀರ್ತನೆಗಳು 91:11)

ಕರ್ತನಾದ ಯೇಸುವಿನ ಜನನದ ಸಮಯದಲ್ಲಿ ಯೋಸೇಫನಿಗಾಗಿ ದೇವರು ವಿವಿಧ ಜನರ ಕನಸಿನಲ್ಲಿ ಸಂದೇಶಗಳೊಂದಿಗೆ ದೇವದೂತರನ್ನು ಕಳುಹಿಸುತ್ತಾನೆ. 

"ಆದರೆ ಆಕೆಯ ಗಂಡನಾದ ಯೋಸೇಫನು ಸಜ್ಜನನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ, ಯಾರಿಗೂ ತಿಳಿಯದಂತೆ ಆಕೆಯನ್ನು ಬಿಟ್ಟುಬಿಡಬೇಕೆಂದಿದ್ದನು. ಅವನು ಇದನ್ನು ಆಲೋಚಿಸುತ್ತಿರುವಾಗ ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು - ಎಲೈ ಯೋಸೇಫನೇ, ದಾವೀದನ ವಂಶದವನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ. ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು. ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು." (ಮತ್ತಾಯ 1:19-21)

ನಂತರ
"ಅವರು ಹೋದ ಮೇಲೆ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು - ನೀನು ಎದ್ದು ಈ ಕೂಸನ್ನೂ ಇದರ ತಾಯಿಯನ್ನೂ ಕರಕೊಂಡು ಐಗುಪ್ತದೇಶಕ್ಕೆ ಓಡಿಹೋಗಿ ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು ಅಂದನು."(ಮತ್ತಾಯ 2:13)

ಮತ್ತೆ 
"ಹೆರೋದನು ತೀರಿಹೋದ ಮೇಲೆ ಐಗುಪ್ತದೇಶದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು -  ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್‍ದೇಶಕ್ಕೆ ಹೋಗು; ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತುಹೋದರು ಎಂದು ಹೇಳಿದನು."
(ಮತ್ತಾಯ 2:19-20)

ದೇವರವಾಕ್ಯದಾದ್ಯಂತ, ದೇವರು ದೇವದೂತರನ್ನು ತನ್ನ ಜನರ ಬಳಿಗೆ ಕೆಲವೊಮ್ಮೆ ಅವರ ಕನಸಿನಲ್ಲಿ ಮತ್ತು ಕೆಲವೊಮ್ಮೆ ಭೌತಿಕವಾಗಿ ಕಳುಹಿಸಿದ್ದಾನೆ. ಈ ವ್ಯವಸ್ಥೆಯ ಬಗ್ಗೆ ನಾವು ಆತ್ಮೀಕವಾಗಿ ಎಚ್ಚರವಾಗಿರಬೇಕು ಏಕೆಂದರೆ ಅವರು ಯಾವಾಗಲೂ ದೇವಜನರಿಗೆ ಸಹಾಯದ ಮೂಲವಾಗಿದ್ದಾರೆ ಮತ್ತು ಇಂದಿಗೂ ನಾವು ನಮ್ಮ ಕನಸಿನಲ್ಲಿ ದೇವದೂತರನ್ನು ನೋಡುವಾಗ, ಅದು ಒಳ್ಳೆಯದಕ್ಕಾಗಿಯೇ ಎಂದು  ಖಚಿತವಾಗಿ ಹೇಳಬಹುದು.

ಅನೇಕ ಜನರು ಕನಸುಗಳ ಕುರಿತು ಹೆಚ್ಚು ಗೌರವವನ್ನು ಹೊಂದಿರುವುದಿಲ್ಲ, ಏಕೆಂದರೆ ಅವರು ಅನೇಕ ಜನರು ಕನಸುಗಳ ಮೂಲಕ ಸುಲಭವಾಗಿ ದಾರಿ ತಪ್ಪಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಇದರಲ್ಲಿ ಸ್ವಲ್ಪ ಸತ್ಯವಿದ್ದರೂ, ಸತ್ಯವೇದದಲ್ಲಿ ಅಥವಾ ಇಂದು ಯಾವುದೇ ಪುರುಷ ಅಥವಾ ಮಹಿಳೆ ನಿಜವಾಗಿಯೂ ದೇವರೊಂದಿಗೆ ನಡೆಯುವಾಗ ಕನಸಿನಲ್ಲಿ ಸುಳ್ಳು ದೇವದೂತನಿಂದ ದಾರಿ ತಪ್ಪಿದರು ಎಂದು ನಾನು ಇದುವರೆಗೂ ಕೇಳಿಲ್ಲ. 

ಕನಸುಗಳಲ್ಲಿ ದೇವದೂತರ ನೋಟವು ನಾವು ಆನಂದಿಸಬಹುದಾದ ಭೌತಿಕ ದರ್ಶನದಷ್ಟೇ ಮುಖ್ಯವಾಗಿದೆ. ಇವುಗಳನ್ನು ಸಹ ಮಾನ್ಯವಾದ ದೇವರ ರಾಜ್ಯ ದರ್ಶನ ಎಂದು ಪರಿಗಣಿಸಬೇಕು ಮತ್ತು ಅವುಗಳನ್ನು ಕನಿಷ್ಠ ಎಂದು ಎಣಿಸಬಾರದು ಅಥವಾ ನಿರುತ್ಸಾಹಗೊಳಿಸಬಾರದು. ಏಕೆಂದರೆ ದೇವರು ಇವರನ್ನು ಹಿಂದೆಯೂ ಬಳಸಿದ್ದಾನೆ ಮತ್ತು ಇಂದಿಗೂ ಅವರನ್ನು ಬಳಸಬಹುದು. 

Bible Reading: Job 30-33
Confession
ನಾನು ಕ್ರಿಸ್ತ ಯೇಸುವಿನಲ್ಲಿ ದೇವರ ಮುಂದೆ ನೀತಿವಂತನಾಗಿರುವುದರಿಂದ, ನನಗೆ ಸೇವೆ ಸಲ್ಲಿಸಲು ದೇವದೂತರನ್ನು ಕಳುಹಿಸಿಕೊಡಲಾಗುತ್ತದೆ. ಅವರು ನಾನು ಮಾತನಾಡುವ ದೇವರ ವಾಕ್ಯಗಳಿಗೆ ಪ್ರತಿಕ್ರಿಯಿಸುತ್ತಾರೆ. ಆದ್ದರಿಂದ, ನನ್ನ ಬಾಯಿಯ ಮಾತುಗಳಿಂದ ನಾನು ದೇವದೂತರನ್ನು ಕಾರ್ಯರೂಪಕ್ಕೆ ಸಕ್ರಿಯ ಗೊಳಿಸುತ್ತೇನೆ. ದೇವರ ದೈವಿಕ ಸಂದೇಶಗಳೊಂದಿಗೆ ದೇವದೂತರು ನನ್ನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ.


Join our WhatsApp Channel


Most Read
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ಭೂಮಿಗೆ ಉಪ್ಪೋ ಅಥವಾ ಉಪ್ಪಿನ ಸ್ತಂಭವೋ
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಬಾಗಿಲನ್ನು ಮುಚ್ಚಿರಿ.
● ಕೊಡುವ ಕೃಪೆ -2
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login