हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಆಲಸ್ಯದ ದೈತ್ಯನನ್ನು ಕೊಲ್ಲುವುದು
Daily Manna

ಆಲಸ್ಯದ ದೈತ್ಯನನ್ನು ಕೊಲ್ಲುವುದು

Sunday, 26th of January 2025
1 0 128
Categories : ಆಲಸ್ಯ(procrastination)
"ಇನ್ನು ಸ್ವಲ್ಪ ನಿದ್ರೆ, ಇನ್ನು ತುಸು ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ?  ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು."(ಜ್ಞಾನೋಕ್ತಿ 24:33-34) 

ಈ ಮೇಲಿನ ದೇವರವಾಕ್ಯದಲ್ಲಿ 3 'ಸ್ವಲ್ಪ 'ಗಳಿವೆ ಎಂಬುದನ್ನು ಗಮನಿಸಿ ಮೇಲ್ನೋಟಕ್ಕೆ, ಸ್ವಲ್ಪ ಎನ್ನುವಂತದ್ದು ಹೆಚ್ಚಾಗಿ  ಕಾಣಿಸುವುದಿಲ್ಲ, ಆದರೆ ಅದು 'ಸ್ವಲ್ಪ ಎಂದು  ಎಣಿಸಿಕೊಳ್ಳುವುದರಿಂದ  ದಿನವು ಹಾಗೆ ಓಡುತ್ತಿದ್ದು  ನಿಜವಾದ ಕೆಲಸದ ಸಮಯ ಮುಗಿದೇ ಹೋಗಿರುತ್ತದೆ. ಆಗ ಹೊಲವು ಮುಳ್ಳುಗಳಿಂದ ತುಂಬಿ, ಮನುಷ್ಯನು ತನ್ನ ಭೋಗದ ಫಲಿತವಾದ  ಬಡತನವನ್ನು ಅನುಭವಿಸುತ್ತಾನೆ. 

"ಇಂದು ಸಣ್ಣ ಆಲಸ್ಯಗಳಿಂದ ಮನುಷ್ಯರು ತಮ್ಮ ಜೀವಾತ್ಮವನ್ನು ಹಾಳುಮಾಡಿ ಕೊಳ್ಳುತ್ತಾರೆ." ಎಂದು ಒಬ್ಬರು ಹೇಳಿದ್ದಾರೆ.  ಸೋದೋಮ್ ಮತ್ತು  ಗೊಮೊರ್ರಾವನ್ನು ನಾಶಮಾಡಲು ಬಂದ ದೇವದೂತರು ಮುಂಬರುವ ತೀರ್ಪಿನಿಂದ ತಪ್ಪಿಸಿಕೊಳ್ಳಲು ಅವನು ತ್ವರಿತವಾಗಿ ಹೊರಡಬೇಕೆಂದು ಲೋಟನಿಗೆ ಸ್ಪಷ್ಟವಾಗಿ ತಿಳಿಸಿದರು. ಆದರೆ  ಅವರಿಗೆ ಕಿವಿಗೊಡುವ ಬದಲು ಅವರು ವೃತಾ ಕಾಲಹರಣ ಮಾಡುತ್ತಾ ಸಂಗತಿಗಳನ್ನು ವಿಳಂಬಗೊಳಿಸುತ್ತಲೇ ಇದ್ದರು. ಆದರೂ ದೇವದೂತರು ಅಕ್ಷರಶಃ ಅವನನ್ನು, ಅವನ ಹೆಂಡತಿ ಮತ್ತು ಅವನ ಹೆಣ್ಣುಮಕ್ಕಳನ್ನು ಕೈಹಿಡಿದು ಸುರಕ್ಷಿತವಾಗಿ ಹೊರಗೆ ತಂದದ್ದು ದೇವರ ದಯೆಯೇ . (ಆದಿಕಾಂಡ 19:15-16 ನೋಡಿ)

ನಾವು ಕಾರ್ಯಗಳನ್ನು ಮುಂದೂಡುವಾಗ, ನಾವು ನಿರ್ಧಾರವನ್ನೂ ಮುಂದೂಡುವವರಾಗುತ್ತೇವೆ ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ವಾಸ್ತವವಾಗಿ, ಆಲಸ್ಯಕ್ಕೆ  ಹಿಂದಿರುವ ಮೂಲ ಕಾರಣವೆಂದರೆ ಅಸಡ್ಡೆ ಮತ್ತು ಸೋಮಾರಿತನವೇ ಹೊರತು ನಾವು ಕಾರ್ಯಗಳನ್ನು ಮುಂದೂಡಲು, ನಿರ್ಧಾರ ತೆಗೆದುಕೊಳ್ಳಲು ನಮಗೆ ಸಾಕಷ್ಟು ಮಾಹಿತಿಯ ಕೊರತೆ ಇದೆ ಎಂಬ ಕಾರಣವಲ್ಲ. ಸಾಮಾನ್ಯವಾಗಿ ನಮಗೆ ಏನು ಮಾಡಬೇಕೆಂದು ಈಗಾಗಲೇ ತಿಳಿದಿರುತ್ತದೆ. ಒಂದು ಕಾರಣಕ್ಕಾಗಿಯೋ ಅಥವಾ ಮತ್ತೊಂದು ಕಾರಣಕ್ಕಾಗಿಯೋ ನಾವು ಅದನ್ನು ಮಾಡಲು ಬಯಸುವುದಿಲ್ಲ. 

ನಿಯಮಿತವಾಗಿ ಆಲಸ್ಯದಲ್ಲಿ ತೊಡಗುವುದರಿಂದ, ಅದು ಅಭ್ಯಾಸವಾಗುತ್ತದೆ ಮತ್ತು ಅಂತಿಮವಾಗಿ ಅದು ನಿಮ್ಮ ಸ್ವಭಾವದ ಭಾಗವಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವ ವಿಷಯಕ್ಕೆ ಬಂದಾಗ, ಅಂಥವರು ತಡವಾಗುವವರೆಗೆ ಕಾಯುತ್ತಾರೆ, ಹೇಗಾದರೂ ವಿಷಯಗಳು ತಾವಾಗಿಯೇ ನಡೆಯಲಿ  ಎಂದು ಆಶಿಸುತ್ತಾರೆ. 

ವಾಸ್ತವದಲ್ಲಿ, ಇದು ಎಂದಿಗೂ ಸಂಭವಿಸುವುದಿಲ್ಲ. ಅವರು ನಿರ್ಧಾರ ತೆಗೆದುಕೊಳ್ಳದೆ ಹೋದರೆ ನಿರ್ಧಾರವೇ ಅವರನ್ನು  ನಿರ್ಧರಿಸಿ ಬಿಡುತ್ತದೆಎಂಬುದು ಅಂತಹವರಿಗೆ ತಿಳಿದಿರದ ಒಂದು ಸಂಗತಿಯಾಗಿದೆ. ಕಾರ್ಯನಿರ್ವಹಿಸಲು ವಿಫಲವಾಗುವ ಅವರ ಸ್ವಭಾವ  ಸಾಮಾನ್ಯವಾಗಿ ದೀರ್ಘಾವಧಿಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಅವರ ಜೀವಿತದ ಮೇಲೆ ಬೀರುತ್ತದೆ.

"ನೀವು ಈಹೊತ್ತು ದೇವರ ಶಬ್ದಕ್ಕೆ ಕಿವಿಗೊಟ್ಟರೆ, ನಿಮ್ಮ ಹಿರಿಯರು ದೇವರ ಕೋಪವನ್ನೆಬ್ಬಿಸಿದ ಸ್ಥಳದಲ್ಲಿ ಮಾಡಿದಂತೆ ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ" (ಇಬ್ರಿಯ 3:15) ಎಂದು ಆಲಸ್ಯದ ಅಪಾಯದ ಕುರಿತು ಸತ್ಯವೇದ ನಮ್ಮನ್ನು ಎಚ್ಚರಿಸುತ್ತದೆ:

ಸೈತಾನನ ನೆಚ್ಚಿನ ಪದವೆಂದರೆ "ನಾಳೆ." ಯಾವ ವ್ಯಕ್ತಿಯಾದರೂ ತನ್ನ ರಕ್ಷಣೆಯನ್ನು ಹೊಂದಿ ಕೊಳ್ಳುವುದಕ್ಕೆ ನಾಳೆ ಎಂದು ಹೇಳಿದರೆ ಸೈತಾನನು ಅದರಲ್ಲಿ ಯಶಸ್ವಿಯಾಗಿಬಿಡುತ್ತಾನೆ. 

ಮತ್ತೊಂದೆಡೆ, 'ಇಂದು' ಎಂಬ ಪದವು ದೇವರ ಹೃದಯಕ್ಕೆ ಬಹಳ ಪ್ರಿಯವಾಗಿದೆ. ಫೆಲಿಕ್ಸ್ ಎಂಬ ಹೆಸರಿನ ರೋಮನ್ ಅಧಿಕಾರಿಯ ಕಥೆಯನ್ನು ನಾವು ಅ. ಕೃ 24:22-27 ರಲ್ಲಿ ಕಂಡುಕೊಳ್ಳುತ್ತೇವೆ. ಫೆಲಿಕ್ಸ್ ಮತ್ತು ಅವರ ಪತ್ನಿ ಡ್ರುಸಿಲ್ಲಾ, ಆಲಸ್ಯದ ಕಾರಣ ರಕ್ಷಣೆಯ ಅವಕಾಶವನ್ನು ಕಳೆದುಕೊಂಡರು. ಫೆಲಿಕ್ಸ್ ಅಪೊಸ್ತಲ ಪೌಲನಿಗೆ ಉತ್ತರಿಸುತ್ತಾ, "ಸದ್ಯಕ್ಕೆ ಹೋಗು ಇದನ್ನು ಇನ್ನೊಮ್ಮೆ ಕೇಳುತ್ತೇವೆ " ಎಂದು ಹೇಳಿದನು.

"ಪೌಲನು  ಸುನೀತಿ ದಯೆ ಮುಂದಣ ನ್ಯಾಯವಿಚಾರಣೆ ಇವುಗಳ ವಿಷಯವಾಗಿ ಪ್ರಸ್ತಾಪಿಸುತ್ತಿದ್ದಾಗ ಫೇಲಿಕ್ಸನು ಭಯಗ್ರಸ್ತನಾಗಿ ಅವನಿಗೆ - ಸದ್ಯಕ್ಕೆ ಹೋಗು; ಸಮಯ ದೊರಕಿದಾಗ ನಿನ್ನನ್ನು ಕರಿಸುವೆನು ಎಂದು ಹೇಳಿದನು. (ಅ. ಕೃ. 24:25)

'ನಾಳೆ' ಎನ್ನುವಂಥದ್ದು ಅತ್ಯಂತ ಅಪಾಯಕಾರಿ ಪದ. ಏಕೆಂದರೆ ಅದು ಅನೇಕ ಜನರ  ಕನಸುಗಳನ್ನು ಕಸಿದುಕೊಂಡಿದೆ. ಇದು ವಿದ್ಯಾರ್ಥಿಗಳ ವೃತ್ತಿಜೀವನದ ಅವಕಾಶಗಳನ್ನು ಕಸಿದುಕೊಂಡಿದೆ,  ತಂದೆ ಮತ್ತು ತಾಯಿಯರಿಗೆ ತಮ್ಮ ಮಕ್ಕಳೊಂದಿಗೆ ಇರಬೇಕಾದ ಅವರ ಸಂಬಂಧಗಳನ್ನು  ಕಸಿದುಕೊಂಡಿದೆ.

ನಾವು ದೇವರ ವಾಕ್ಯವು ಹೇಳುವದನ್ನು ಅನುಸರಿಸಲು ಪ್ರಾರಂಭಿಸದಿದ್ದರೆ, ನಾವು ನಮ್ಮನ್ನೇ ಮೋಸಗೊಳಿಸುಕೊಳ್ಳುವವರಾಗುತ್ತೇವೆ. (ಯಾಕೋಬ 1:22) ಎಂದು ಯಾಕೋಬನು  ಕೂಡ ನಮಗೆ ಹೇಳುತ್ತಾನೆ. ವಾಕ್ಯವನ್ನು ತಕ್ಷಣವೇ ಕೈಕೊಂಡು ನಡೆಯಲು ನಿರ್ಧರಿಸಿ. ಎಂದಿಗೂ ವಿಳಂಬ ಮಾಡಬೇಡಿ (ಮುಂದೂಡಬೇಡಿ)

Bible Reading: Exodus 23-25

Prayer
ತಂದೆಯೇ,  ನಾನು ನನ್ನನ್ನೇ ಯೇಸುನಾಮದಲ್ಲಿ ನಿಮಗೆ ಒಪ್ಪಿಸಿಕೊಡುತ್ತೇನೆ ಯೇಸುವಿನಲ್ಲಿರುವ ನನ್ನ ಅಧಿಕಾರವನ್ನು ತೆಗೆದುಕೊಂಡು ಸಕಲ ರೀತಿಯ ಆಲಸ್ಯ ಮತ್ತು ಗೊಂದಲದ ಮನೋಭಾವಗಳು  ಈಗಲೇ  ನನ್ನ ಜೀವನವನ್ನು ಬಿಟ್ಟು  ತೊರೆಯುವಂತೆ ಯೇಸುನಾಮದಲ್ಲಿ ನಾನು ಆಜ್ಞಾಪಿಸುತ್ತೇನೆ.

Join our WhatsApp Channel


Most Read
● ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.
● ಭಯಪಡಬೇಡ.
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ಅನುಕರಣೆ
● ಶರಣಾಗತಿಯಲ್ಲಿರುವ ಸ್ವಾತಂತ್ರ್ಯ
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login