हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಮನೆಯಲ್ಲಿನ ವಾತಾವರಣವನ್ನು ಬದಲಾಯಿಸುವುದು -1
Daily Manna

ನಿಮ್ಮ ಮನೆಯಲ್ಲಿನ ವಾತಾವರಣವನ್ನು ಬದಲಾಯಿಸುವುದು -1

Sunday, 23rd of March 2025
4 1 127
"ಏಕೆಂದರೆ, ಅವನು ತನ್ನ ಮಕ್ಕಳಿಗೂ ಅವನ ತರುವಾಯ ಅವನ ಮನೆಯವರಿಗೂ ಯೆಹೋವ ದೇವರ ಮಾರ್ಗವನ್ನು ಕೈಗೊಂಡು, ನೀತಿ ನ್ಯಾಯಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸುವನು. ಆಗ ಯೆಹೋವ ದೇವರಾದ ನಾನು ಅಬ್ರಹಾಮನಿಗೆ ಹೇಳಿದ್ದು ನೆರವೇರುವದು,” ಎಂದುಕೊಂಡರು.(ಆದಿಕಾಂಡ 18:19) 

ಒಂದು ಮನೆಯು ಸಮಾಜದ ಅಡಿಪಾಯ. ಯಾವುದೇ ಚೈತನ್ಯಶೀಲ ಸಮಾಜವು ಚೈತನ್ಯಶೀಲ ಕುಟುಂಬಗಳ ದೊಡ್ಡ ಸಂಗ್ರಹವನ್ನು ಹೊಂದಿರಬೇಕು. ಯಾವುದೇ ಚರ್ಚ್ ಅಥವಾ ಸಮುದಾಯದಲ್ಲಿ ದೇವರ ಚಲಿಸುವಿಕೆಗೆ  ಕುಟುಂಬವು ಮುಖ್ಯವಾಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇದು ಸತ್ಯವಾದದ್ದು.ಏಕೆಂದರೆ ದೇವರಿಂದ ಉಪಯೋಗಿಸಲ್ಪಡುವ  ಯಾರೇ ಆಗಲಿ ಒಂದು ಮನೆಯಿಂದಲೇ  ಬರಬೇಕು. ಮನುಕುಲವನ್ನು ಉಳಿಸಲು ಬಂದ ಯೇಸು ಕೂಡ ಭೂಮಿಗೆ ಇಳಿದು ಅನಾಥನಂತೆ ಅಲೆದಾಡಲಿಲ್ಲ; ಆತನೂ ಸಹ ಒಂದು ಕುಟುಂಬದಿಂದ ಬಂದವನೇ. 

ಜನರು ಯೇಸುವನ್ನು ನೋಡಿ ಆಶ್ಚರ್ಯಚಕಿತರಾದರು ಮತ್ತು ಮತ್ತಾಯ 13:55-56 ರಲ್ಲಿ "ಈತನು ಆ ಬಡಗಿಯ ಪುತ್ರನಲ್ಲವೇ? ಮರಿಯಳೆಂಬುವಳು ಈತನ ತಾಯಿಯಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಎಂಬುವರು ಈತನ ತಮ್ಮಂದಿರಲ್ಲವೇ?  ಈತನ ತಂಗಿಯರೆಲ್ಲರೂ ನಮ್ಮೊಂದಿಗೆ ಇದ್ದಾರಲ್ಲವೇ? ಹಾಗಾದರೆ, ಇವೆಲ್ಲವು ಈತನಿಗೆ ಎಲ್ಲಿಂದ ಬಂದವು?” ಎಂದು ಮಾತನಾಡಿಕೊಂಡು  ಅವರು ಯೇಸುವನ್ನು ಒಂದು ಕುಟುಂಬಕ್ಕೆ ಸೇರಿದವನೆಂದು ಕಂಡು ಕೊಂಡರು " ಎಂದು ಸತ್ಯವೇದ ಹೇಳುತ್ತದೆ. 

ಅದೇ ರೀತಿಯಲ್ಲಿ,  ಯಾವುದೇ ಒಬ್ಬ ಮುಖ್ಯವಾದ  ವ್ಯಕ್ತಿಯು ಅವನ  ಕುಟುಂಬದ ತಲೆಮಾರಿನ ಮನೆಯಿಂದಲೇ ಬರುತ್ತಾನೆ. ಇದು ಪ್ರತಿ ಮನೆಯ ಒಡೆಯನ ಮೇಲೆ ಈ ಸತ್ಯದ ಬಗ್ಗೆ ಜಾಗೃತರವಾಗಿರಬೇಕಾದ  ಜವಾಬ್ದಾರಿಯ ಭಾರವನ್ನು ಹಾಕುತ್ತದೆ. ಸಮಾಜಕ್ಕೆ ಕಂಟಕವಾಗುವ ಬಹುತೇಕ ಮಕ್ಕಳು ಅನಾರೋಗ್ಯಕರ ಕುಟುಂಬಗಳಿಂದಲೇ ಬಂದವರಾಗಿರುತ್ತಾರೆ. ಶಾಂತಿಯಿಂದ ಬದುಕುವುದು ಎಂದರೆ ಏನೆಂದು ಹಲವರಿಗೆ ತಿಳಿದಿಲ್ಲ, ಹಾಗಿದ್ದಾಗ ಹೇಗೆತಾನೆ  ಸಮುದಾಯದಲ್ಲಿ ಅವರು ಶಾತಿಯನ್ನು ತರಲು  ಸಾಧ್ಯ ? ಸಂತೋಷದಿಂದ ಬದುಕುವುದು ಎಂದರೆ ಏನು ಎಂಬುದೇ ಅವರಿಗೆ ತಿಳಿದಿಲ್ಲದಿದ್ದರೆ  ಅವರು ಸಮಾಜವನ್ನು ಹೇಗೆತಾನೇ  ಸಂತೋಷಪಡಿಸಬಹುದು?

ಮುಂದಿನ ಕೆಲವು ಭಕ್ತಿವೃದ್ಧಿಯ ಸಲಹೆಗಳಲ್ಲಿ , ನಿಮ್ಮ ಮನೆಯನ್ನು ಶಾಂತಿ ಮತ್ತು ಸಂತೋಷದ ವಾಸಸ್ಥಳವನ್ನಾಗಿ ಮಾಡಲು ನಿಮಗೆ ಸಹಾಯ ಮಾಡುವ ನಾಲ್ಕು ವಿಧಾನಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಮನೆಯಲ್ಲಿ ಶಾಂತಿ ಇದ್ದಾಗ, ಅದು ದೇವರು ನಿಮ್ಮ ಮನೆಯಲ್ಲಿ ವಾಸಿಸುತ್ತಿದ್ದಾನೆ ಎಂಬುದರ ಸಂಕೇತವಾಗಿದೆ ಎಂಬುದನ್ನು ನೆನಪಿಡಿ. 

ನಿಮ್ಮ ಮನೆಯಲ್ಲಿ ಗಡಿಗಳನ್ನು ನಿಗದಿಪಡಿಸುವುದು

ಮಕ್ಕಳು ಯಾವಾಗಲೂ ತಮಗೆ ಇಷ್ಟವಾದಂತೆ ಇರಲು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ತಮಗೆ ಇಷ್ಟವಾದಂತೆ ಇರಲೆಂದೆ ಇಷ್ಟಪಡುತ್ತಾರೆ. ಏನು ಮಾಡಬೇಕೆಂದು ಅಥವಾ ಹೇಗೆ ಕೆಲಸ ಮಾಡಬೇಕೆಂದು ಇಂದು ಯಾರಿಗೂ ಹೇಳಲಾಗುವುದಿಲ್ಲ. ಆದರೆ ಯಾವುದೇ ಮನೆ ಮತ್ತು ಸಮಾಜದ  ಶಾಂತಿ ಮತ್ತು ಪ್ರಗತಿಗೆ ಗಡಿಗಳು ಅತ್ಯಗತ್ಯ. ನಮ್ಮ ಹೆದ್ದಾರಿಯಲ್ಲಿ ಯಾವುದೇ ಸಂಚಾರ ನಿಯಮಗಳಿಲ್ಲ ಎಂದು ಕಲ್ಪಿಸಿಕೊಳ್ಳಿ; ಖಂಡಿತವಾಗಿಯೂ, ಅಪಘಾತಗಳ ಪ್ರಮಾಣವು ಘಾತೀಯವಾಗಿ ಹೆಚ್ಚಾಗುತ್ತದೆ. ಅದೇ ರೀತಿ, ಗಡಿಗಳಿಲ್ಲದ ಯಾವುದೇ ಮನೆಯಲ್ಲಿ ಯಾವಾಗಲೂ ಅವ್ಯವಸ್ಥೆ ಇರುತ್ತದೆ.

ಗಡಿಗಳು ಎನ್ನುವಂತದ್ದು  ಯಾವುದನ್ನು ಅನುಮತಿಸಲಾಗಿದೆ ಮತ್ತು ಯಾವುದನ್ನು ಅನುಮತಿಸಲಾಗಿಲ್ಲ ಎಂಬುದನ್ನು ಸೂಚಿಸುವ ಮಿತಿಗಳ ಗುಂಪಾಗಿದೆ. ಕೆಲವನ್ನು ಪ್ರಾಯೋಗಿಕ ದೃಷ್ಟಿಕೋನದಿಂದ ಹೊಂದಿಸಲಾಗಿದೆ ಮತ್ತು ಇತರವು ಆರೋಗ್ಯ ಕಾರಣಗಳಿಗಾಗಿ ಹೊಂದಿಸಲಾಗಿದೆ. ಕೆಲವೊಮ್ಮೆ, ನಿಮ್ಮ ಸೀಮಾ ರೇಖೆಯನ್ನು ಹಿಡಿದಿಡಲು ಮತ್ತು ರಾಜಿ ಮಾಡಿಕೊಳ್ಳದಿರಲು ವಿಶೇಷವಾಗಿ ನಿಮ್ಮ ಕುಟುಂಬದಲ್ಲಿ ಹದಿಹರೆಯದವರು ಇದ್ದಾಗ ಶಿಸ್ತಿನ ಪ್ರೀತಿ ಅಗತ್ಯವಾಗಿರುತ್ತದೆ.

ಉದಾಹರಣೆಗೆ, ನಾವು ನಮ್ಮ ಮನೆಗಳಲ್ಲಿ ಧೂಮಪಾನವನ್ನು ಅನುಮತಿಸುವುದಿಲ್ಲ. ಹುಟ್ಟುಹಬ್ಬ ಮುಂತಾದ ನಮ್ಮ ಯಾವುದೇ ಸಮಾರಂಭಗಳಲ್ಲಿ ನಾವು ನಮ್ಮ ಮನೆಯಲ್ಲಿ ಯಾವುದೇ ಮದ್ಯವನ್ನು ಅನುಮತಿಸುವುದಿಲ್ಲ. ಇವು ನಾವು ನಿಗದಿಪಡಿಸಿದ ಮಿತಿಗಳು, ಮತ್ತು ಅವುಗಳನ್ನು ಮುರಿದರೆ, ಅವು ನಮ್ಮ ಇಚ್ಛೆಗೆ ವಿರುದ್ಧವಾಗಿ ಮತ್ತು ನಮ್ಮ ಅರಿವಿಲ್ಲದೆ ಮುರಿಯಲ್ಪಡುತ್ತವೆ. ಆದ್ದರಿಂದ, ನಿಮ್ಮ ವಾಸಸ್ಥಳಕ್ಕೆ ಅನಗತ್ಯವಾದ  ಕಸದ ಪ್ರವೇಶವನ್ನು ತಡೆಯಲು ನೀವು ಮನಸ್ಸುಮಾಡಬೇಕು ಮತ್ತು ಅವುಗಳಿಗಾಗಿ ಮಿತಿಗಳನ್ನು ನಿರ್ಧರಿಸಬೇಕು.

ಇಂದಿನ ಪಠ್ಯಭಾಗವಾದ ದೇವರವಾಕ್ಯವನ್ನು ನೀವು ಸೂಕ್ಷ್ಮವಾಗಿ ಓದಿದರೆ, ಇದು ಅಬ್ರಹಾಮನ ಬಗ್ಗೆ ದೇವರ ಸಾಕ್ಷಿಯಾಗಿದೆ;  ಅಬ್ರಹಾಮನು ತನ್ನ ಮನೆಯಲ್ಲಿ ಗಡಿಗಳನ್ನು ನಿಗದಿಪಡಿಸುತ್ತಾನೆ ಎಂದು ಆತನಿಗೆ ವಿಶ್ವಾಸವಿತ್ತು. ಯಾರೂ ಸಹ  ತಮಗಿಷ್ಟ ಬಂದಂತೆ ವರ್ತಿಸಲು ಬಿಡದೇ ತಾನು ನಿರೀಕ್ಷಿಸಿದಂತೆಯೇ ವರ್ತಿಸುವಂತೆ ಅಬ್ರಹಾಮನು ತನ್ನ ಮನೆಯವರನ್ನು ನೋಡಿಕೊಳ್ಳುತ್ತಾನೆ ಎಂಬ ಖಚಿತತೆ ದೇವರಿಗಿತ್ತು . ಹಾಗಾಗಿ ಸತ್ಯವೇದವು ಅಬ್ರಹಾಮನ ಮನೆಯಲ್ಲಿ ಯಾವುದೇ ರೀತಿಯ ದ್ವೇಷ ಅಥವಾ ಅಶಾಂತಿಯನ್ನು ಎಂದಿಗೂ ದಾಖಲಿಸದೇ ಇರುವಂತದ್ದರಲ್ಲಿ  ಆಶ್ಚರ್ಯವೇನಿಲ್ಲ. ಅವನ ಮನೆಯಲ್ಲಿ ಸುಮಾರು ಮುನ್ನೂರು ತರಬೇತಿ ಪಡೆದ ಸೈನಿಕರಿದ್ದರು, ಆದರೂ, ಎಲ್ಲರೂ ಸರಿಯಾದದ್ದನ್ನೇ  ಮಾಡುತ್ತಿದ್ದರು. ಇದು ಶಾಂತಿ ಮತ್ತು ಸಂತೋಷಕ್ಕೆ ಅಡಿಪಾಯ. 

ಪೋಷಕರಾಗಿ, ನಿಮ್ಮ ಮನೆಯಲ್ಲಿ ನಡೆಯುವ ಘಟನೆಗಳಲ್ಲೇ ಮುಳುಗಿಹೋಗಬೇಡಿ . ಅದನ್ನು ಪೂರ್ವನಿಯೋಜಿತವಾಗಿ ಬಿಡಬೇಡಿ. ದೇವರ ವಾಕ್ಯವು ನಿಮ್ಮ ಮನೆಯ ವ್ಯವಹಾರಗಳನ್ನು ಆಳಲಿ. ಯಾಜಕನಾದ ಎಲಿ ತನ್ನ ಮನೆಯಲ್ಲಿ ಗಡಿಗಳನ್ನು ಏರ್ಪಡಿಸಲಿಲ್ಲ ಅದರಿಂದಾಗಿ ಅವನು ಅಂತಿಮವಾಗಿ ತನ್ನ ಮಕ್ಕಳನ್ನು ಮತ್ತು ತನ್ನ ನಿಯೋಜನೆಯನ್ನು ಕಳೆದುಕೊಂಡನು. ಆದ್ದರಿಂದ, ನಿಮ್ಮ ಮನೆಯಲ್ಲಿ ಧರ್ಮಗ್ರಂಥದ ಗಡಿಗಳನ್ನು ಉಚ್ಚರಿಸಿ, ಆಗ ದೇವರ ಶಾಂತಿ ಆಳ್ವಿಕೆ ಮಾಡುತ್ತದೆ. 

Bible Reading: Judges 4-5 
Prayer
ತಂದೆಯೇ, ನಮಗಾಗಿ ಒಂದು ಕುಟುಂಬವನ್ನು ನೀಡಿದ್ದಕ್ಕಾಗಿ ನಾನು ನಿನಗೆ ಯೇಸುನಾಮದಲ್ಲಿ ಸ್ತೋತ್ರ  ಸಲ್ಲಿಸುತ್ತೇನೆ . ನಮ್ಮ ಮನೆಯಲ್ಲಿ ನಿನ್ನ ಶಾಂತಿಯನ್ನು ಕಾಪಾಡಲು ಯಾವ ಗಡಿಗಳನ್ನು ಏರ್ಪಡಿಸಬೇಕೆಂದು ತಿಳಿದುಕೊಳ್ಳುವಂತೆ ನಿನ್ನ ಜ್ಞಾನ ವನ್ನು ಅನುಗ್ರಹಿಸು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿನ್ನ  ಶಾಂತಿಯು ನಮ್ಮ ಮನೆಯಲ್ಲಿ ತುಂಬಿ  ನಿನ್ನ ಪ್ರಸನ್ನತೆ ಯಾವಾಗಲೂ ನಮ್ಮೊಂದಿಗೆ ವಾಸಿಸಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.

Join our WhatsApp Channel


Most Read
● ವ್ಯಸನಗಳನ್ನು ನಿಲ್ಲಿಸುವುದು
● ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
●  ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕಟ್ಟಬೇಕಾದ ಬೆಲೆ
● ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login