हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Daily Manna

ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ

Thursday, 14th of December 2023
2 2 683
Categories : ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಒಳ್ಳೆಯ ವರಗಳನ್ನು ಪುನಃ ಸ್ಥಾಪಿಸಲು.

‭‭" ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಬಳಿಕ ಯೆಹೋವನು ಅವನ ದುಸ್ಥಿತಿಯನ್ನು ಹೋಗಲಾಡಿಸಿ ಅವನ ಸೊತ್ತನ್ನು ಮೊದಲಿಗಿಂತ ಎರಡರಷ್ಟಾಗಿ ಹೆಚ್ಚಿಸಿದನು."ಯೋಬನು‬ ‭42:10‬.

 ಪುನಃ ಸ್ಥಾಪನೆ - ಪ್ರಾಪಂಚಿಕವಾಗಿ ಹೇಳುವುದಾದರೆ ಹಳೆಯದಾದ, ಶಿಥಿಲವಾದ ಅಥವಾ ಮುರಿದು ಹೋದ ಯಾವುದನ್ನಾದರೂ ಹಿಂದೆ ಇದ್ದ ರೀತಿಯಲ್ಲಿ ಮತ್ತೆ ರೂಪಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಅದಾಗಿಯೂ ದೇವರ ವಾಕ್ಯದ ಪ್ರಕಾರ ಪುನಃಸ್ಥಾಪನೆಯ ವಿವರಣೆಯು ಪ್ರಾಪಂಚಿಕ ಪುನಃಸ್ಥಾಪನೆಗಿಂತ ವಿಭಿನ್ನವಾದ ಅರ್ಥ ವಿವರಣೆಯನ್ನು ಹೊಂದಿದೆ. ಸತ್ಯವೇದದ ಪ್ರಕಾರ ಪುನಃ ಸ್ಥಾಪನೆ ಎಂಬ ಪದವು ಕೇವಲ ಯಾವುದನ್ನಾದರೂ ಅದರ ಹಿಂದಿನ ಸ್ಥಿತಿಗೆ ಮರುಸ್ಥಾಪಿಸುವುದಷ್ಟೇ ಅಲ್ಲದೆ ಅದು ಆಗ ಇದ್ದದ್ದಕ್ಕಿಂತ ಉತ್ತಮವಾಗಿಯೂ ಸುಧಾರಿತವಾಗಿಯೂ ಇರುವ ಸ್ಥಿತಿಗೆ ತರುವಂತದ್ದನ್ನು ಕುರಿತು ಹೇಳುತ್ತದೆ.

 ಈ ಒಂದು ವಿಷಯವನ್ನು ಯೋಬನ ಚರಿತ್ರೆಗಿಂತ ಹೆಚ್ಚು ಸ್ಪಷ್ಟವಾಗಿ ಯಾವುದೂ ವಿವರಿಸುವುದಿಲ್ಲ."‭‭ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು.." ಎಂದು ಯೋಬ 42 :12 ಹೇಳುತ್ತದೆ.

 ನಮ್ಮ ಶತ್ರುವಾದ ಸೈತಾನನು ಏನೆಲ್ಲಾ ನಿಮ್ಮಿಂದ ಕದ್ದುಕೊಂಡನೋ ಅದು ನಿಮ್ಮ ಆರೋಗ್ಯವಾಗಿರಬಹುದು, ನಿಮ್ಮ ಹಣಕಾಸಿನ ಭದ್ರತೆಯಾಗಿರಬಹುದು,ಮಾನಸಿಕ ಸಮಾಧಾನವಾಗಿರಬಹುದು ಅಥವಾ ನಿಮಗೆ ಪ್ರೀತಿ ಪಾತ್ರವಾದ ಯಾವುದೇ ಆಗಿರಲಿ ದೇವರು ಅದನ್ನು ಪುನಃಸ್ಥಾಪಿಸಿ ಕೊಡುತ್ತಾನೆ ಎಂಬ ವಾಗ್ದಾನ ನಮಗಿದೆ.ನಮ್ಮ ಕರ್ತನಾದ ಯೇಸುವು ಆಡಿದ ಕಡೆಯ ಮಾತು "ದೇವರ ಚಿತ್ತವೇನೆಂದರೆ ನಾವು ಕಳೆದುಕೊಂಡದ್ದನ್ನೆಲ್ಲ ದೇವರು ಪುನಸ್ಥಾಪಿಸಿ ಕೊಡುತ್ತಾನೆ ಎಂಬುದೇ."ಎಂದು ಶತೃವಾದ ಸೈತಾನನಿಗೆ ನಾವು ಹೇಳಬೇಕು.

 ದೇವರಿಂದ ನೇಮಿಸಲ್ಪಟ್ಟ ಆತ್ಮೀಯ ನಿಯಮದ ಪ್ರಕಾರ ಹೇಳುವುದಾದರೆ ಕಳ್ಳನು ಕದ್ದುಕೊಂಡದ್ದಕ್ಕೆ ಏಳು ಪಟ್ಟು ನಮಗೆ ಅವನು ಹಿಂದಿರುಗಿಸಬೇಕು(ಜ್ಞಾನೋಕ್ತಿ 6:31 ಓದಿರಿ) ಕಳ್ಳನು ಕದ್ದು ಕೊಳ್ಳುವುದಕ್ಕೂ ಕೊಲ್ಲುವುದಕ್ಕೂ ಹಾಳು ಮಾಡುವುದಕ್ಕೂ ಬರುತ್ತಾನೆ, ಆದರೆ ದೇವರು ಜಡಿದು ಅಲ್ಲಾಡಿಸಿ ಹೊರತುಂಬಿ ಚೆಲ್ಲುವ ಹಾಗೆ ಸಂಪೂರ್ಣವಾದ ಪುನಃ ಸ್ಥಾಪನೆಯನ್ನು ತರುತ್ತಾನೆ.
ಆತನು ಎಲ್ಲವನ್ನು ಮುಂಚಿನದಕ್ಕಿಂತ ಉತ್ತಮವಾಗಿ ಮಾಡುತ್ತಾನೆ

 ಸೈತಾನನು ಒಬ್ಬ ವಿಶ್ವಾಸಿಯಿಂದ ಸುಲುಕೊಳ್ಳಬಹುದೇ?

 ಹೌದು ಪಿಶಾಚನು ಅನುಮತಿಯ ಮೇರೆಗೆ ಕಾರ್ಯ ಮಾಡುತ್ತಾನೆ. ಅವಕಾಶ ಕೊಡದೆ ಅವನು ವಿಶ್ವಾಸಿಯಿಂದ ಏನನ್ನು ಕದ್ದುಕೊಳ್ಳಲು ಸಾಧ್ಯವಿಲ್ಲ (ಎಫಸ್ಸೆ 4:27).

 ವಿಶ್ವಾಸಿಗಳಿಂದ ಸೈತಾನನು ಕದ್ದುಕೊಳ್ಳುವ ಕೆಲವು ಮಾರ್ಗಗಳು ಇಲ್ಲಿವೆ ನೋಡಿರಿ.

1. ದೈವಿಕ ಸೂಚನೆಗಳಿಗೆ ಅವಿಧೇಯರಾದಾಗ.
 ಅವಿಧೇಯತೆಯು ನಮ್ಮ ಮತ್ತು ದೇವರು ನಮಗೆ ಅನುಗ್ರಹಿಸಿದ ನಮ್ಮ ಆತ್ಮಿಕ ಆಯುಧಗಳ ನಡುವೆ ಬಿರುಕನ್ನು ಉಂಟುಮಾಡಿ ಸೈತಾನನ ತಂತ್ರೋಪಾಯಗಳಿಗೆ ನಾವು ಸಿಲುಕಿಕೊಳ್ಳುವಂತೆ ಮಾಡುತ್ತದೆ. ಇದು ನಿಮ್ಮ ಮನೆಯ ಬಾಗಿಲನ್ನು ಬೀಗ ಹಾಕಿ ಭದ್ರ ಪಡಿಸದೆ ಬೇಡದ ಅತಿಥಿಗಳಿಗೆ ಆಹ್ವಾನ ಕೊಟ್ಟದ್ದಕ್ಕೆ ಸಮಾನವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದೇವರಿಗೆ ವಿಧೇಯರಾಗುವಂತದ್ದು ರಕ್ಷಣಾ ಕವಚದ ರೀತಿಯಲ್ಲಿ ನಮಗೆ ರಕ್ಷಣೆಯನ್ನು ಉಂಟುಮಾಡುತ್ತದೆ ಮತ್ತು ಆತನ ಮಾರ್ಗದರ್ಶನ ಆಶೀರ್ವಾದಗಳಲ್ಲಿ ನಮ್ಮನ್ನು ನೆಲೆಗೊಳಿಸಿ ಕಾಯುತ್ತದೆ.

ಸೈತಾನನು ಆದಾಮನನ್ನು ದೇವರ ಸೂಚನೆಗಳಿಗೆ ಅವಿಧೇಯನಾಗುವಂತೆ ಮಾಡಿ ಭೂಮಿಯ ಮೇಲಿನ ಅಧಿಕಾರವನ್ನು ಆದಾಮದಿಂದ ಕಸಿದುಕೊಂಡನು. ಒಂದು ಸಮವೇಲ 15 :22 ನಮಗೆ ಹೇಳುತ್ತದೆ "‭‭..ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತು ಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ" ಎಂದು. ಈ ವಾಕ್ಯವು ಯಾವುದೇ ಸಾಂಪ್ರದಾಯಿಕ ಭಕ್ತಿಗಿಂತಲೂ ಮೀರಿ ವಿಧೇಯತೆಗೆ ಇರುವ ಮುಖ್ಯತ್ವವನ್ನು ನಮಗೆ ಪ್ರಚುರಪಡಿಸುತ್ತದೆ.

2. ತಪ್ಪಾಗಿ ಆಲೋಚನೆ ಮಾಡುವುದು.
 ನಾವು ಮಾಡುವ ಎಲ್ಲಾ ಕೆಲಸಗಳಿಗೂ ನಮ್ಮ ಆಲೋಚನೆಯೇ ನೀಲನಕ್ಷೆ. ಯಾವಾಗ ನಮ್ಮ ಆಲೋಚನೆಗಳು ದೇವರ ಸತ್ಯಕ್ಕೆ ಅನುಗುಣವಾಗಿ ಇರುವುದಿಲ್ಲವೋ ಆಗ ಅವು ನಮ್ಮನ್ನು ನಾಶನದ ಮಾರ್ಗಕ್ಕೆ ಸೆಳೆದುಕೊಂಡು ಹೋಗುತ್ತದೆ. ಸೈತಾನನು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಸಂದೇಹ, ಭಯ,ನಕಾರಾತ್ಮಕ ಆಲೋಚನೆಗಳನ್ನು ಬಿತ್ತುತ್ತಿರುತ್ತಾನೆ. ನಾವು ಅದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳದೆ ಹೋದರೆ ಕೆಡುಕಿನ ಕಾರ್ಯಗಳನ್ನು ನಮ್ಮಲ್ಲಿ ಅವು ಬೆಳೆಸುತ್ತದೆ.

" ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು... " ಎಂದು 
2 ಕೊರಿಂಥದವರಿಗೆ‬ ‭10:5‬ ಹೇಳುತ್ತದೆ.

 ಮನುಷ್ಯರು ತಪ್ಪಾದ ಆಲೋಚನೆಗಳನ್ನು ಮಾಡುವಾಗ ಅವರ ಬಾಯ ಮಾತುಗಳು ಮತ್ತು ಅವರ ಕಾರ್ಯಗಳ ಮೇಲೂ ಅದು ದುಷ್ಪರಿಣಾಮವನ್ನು ಬೀರುತ್ತದೆ.

ಫಿಲಿಪ್ಪಿ 4:8 ನಮ್ಮ ಆಲೋಚನೆಗಳನ್ನು ನಾವು ಹೇಗೆ ಮತ್ತು ಯಾವುದರ ಮೇಲೆ ನಾವು ಆಧಾರ ಗೊಳಿಸಬೇಕು ಎಂದು ನಮಗೆ ಮಾರ್ಗಸೂಚಿಸುತ್ತದೆ.
"ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ."

3. ತಪ್ಪಾಗಿ ಬಾಯಿಂದ ಹೊರಡುವ ಮಾತುಗಳು.
 ನಮ್ಮ ಬಾಯ ಮಾತುಗಳು ನಮ್ಮ ವಾಸ್ತವತೆಯನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ಹೇಗೆ ಧನಾತ್ಮಕವಾದ ಘೋಷಣೆಗಳು ಧನಾತ್ಮಕವಾದ ಫಲವನ್ನು ಆಕರ್ಷಿಸುತ್ತದೋ ಹಾಗೆಯೇ ನಕಾರಾತ್ಮಕ ಮಾತುಗಳು ನಕಾರಾತ್ಮಕವಾದ ಫಲಗಳನ್ನೇ ಆಕರ್ಷಿಸುತ್ತದೆ. ಹಾಗೆಯೇ ಸೈತಾನನು ನಮ್ಮ ಬಾಯಿಂದ ಹೊರಡುವ ಮಾತುಗಳನ್ನೇ ಉಪಯೋಗಿಸಿಕೊಂಡು ನಮ್ಮ ವಿರುದ್ಧವಾಗಿ ಕಾರ್ಯ ಮಾಡುತ್ತಾನೆ. ನಮ್ಮ ಎಲ್ಲಾ ಭಯ ಆತಂಕ ಮತ್ತು ಸಂದೇಹಗಳನ್ನೇ ವಾಸ್ತವತೆಗೆ ಬರುವಂತೆ ಕಾರ್ಯ ಮಾಡುತ್ತಾನೆ.

 ಯೋಬನು ತನ್ನ ಬಾಯಿಯ ಮಾತಿನ ಮೂಲಕ ದೇವರನ್ನು ಶಪಿಸುವಂತೆ ಸೈತಾನನು ಇನ್ನಿಲ್ಲದ ಪ್ರಯತ್ನ ಮಾಡಿದನು ಆದರೆ ಯೋಬನು ಅದನ್ನು ನಿರಾಕರಿಸಿದನು.

‭‭ ‭" ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿದ್ದೀ, ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ."(ಜ್ಞಾನೋಕ್ತಿಗಳು‬ ‭6:2‬)

 ನಾವು ನಮ್ಮ ಬಾಯಿ ಮಾತುಗಳಲ್ಲಿರುವ ಶಕ್ತಿಯನ್ನು ಮತ್ತು ಅದನ್ನು ಹೇಗೆ ವಿವೇಕಯುತವಾಗಿ ಬಳಸಿಕೊಳ್ಳಬೇಕು ಎಂಬುದನ್ನು ಯಾಕೋಬನು ತನ್ನ ಪತ್ರಿಕೆಯ 3:10 ರಲ್ಲಿ ನಮಗೆ ನೆನಪಿಸುತ್ತಾನೆ.

4. ದುಸ್ಸಹವಾಸ.
 ದೇವರು ನಿಮ್ಮನ್ನು ಆಶೀರ್ವದಿಸಲು ಇಚ್ಛಿಸಿದಾಗ ಆತನು ನಿರ್ದಿಷ್ಟ  ಸ್ತ್ರೀ ಅಥವಾ ಪುರುಷನನ್ನು ನಮ್ಮ ಬಳಿಗೆ ಕಳುಹಿಸಿ ಕೊಡುತ್ತಾನೆ. ಹಾಗೆಯೇ ಸೈತಾನನು ಸಹ ನಮ್ಮನ್ನು ನಾಶಪಡಿಸಲೆಂದು ಹೀಗೆಯೇ ಮನುಷ್ಯರನ್ನು ನಮ್ಮ ಬಳಿಗೆ ಕಳುಹಿಸಿ ಕೊಡುತ್ತಾನೆ

 ನಾನು ಏನನ್ನು ಹೇಳಬೇಕೆಂದಿದ್ದೇನೆ ಎಂದರೆ ನೀವು ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳುವಾಗ ಬಹಳ ಜಾಗರೂಕರಾಗಿರಬೇಕು. ಬಹಳಷ್ಟು ಜನರು ದುರ್ಜನರ ಸಹವಾಸ ಮಾಡಿ ತಮ್ಮ ಸದಾಚಾರವನ್ನು ಕೆಡಿಸಿಕೊಂಡಿದ್ದಾರೆ.
"ಮೋಸ ಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ. "‭‭(1 ಕೊರಿಂಥದವರಿಗೆ‬ ‭15:33‬)
ನೀವು ಅನುಭವಿಸಿದ ಹಿನ್ನಡೆಗಳು, ನಷ್ಟಗಳು, ಸಂಕಟಗಳು, ತಪ್ಪುಗಳು ಮತ್ತು ಹಾನಿಗಳ ಹೊರತಾಗಿಯೂ ನೀವು ಪುನಃಸ್ಥಾಪನೆ ಹೊಂದಲು ಸಾಧ್ಯ. ಸೈತಾನನು ಅನೇಕ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು, ಆದರೆ ಕರ್ತನು ಎಲ್ಲವನ್ನೂ ಪುನಃಸ್ಥಾಪಿಸುವೆನು ಎಂದು ವಾಗ್ದಾನ ನೀಡಿದ್ದಾನೆ ಮತ್ತು ಆತನು ಎಲ್ಲವನ್ನೂ ಪುನಃಸ್ಥಾಪಿಸಲು ಸಮರ್ಥನಾಗಿದ್ದಾನೆ.
Prayer
ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೆರೋ ಎಂದು ಖಚಿತ ಪಡಿಸಿಕೊಳ್ಳಿ.

1.ತಂದೆಯೇ, ಯೇಸುನಾಮದಲ್ಲಿ ನನ್ನ ಜೀವನದ ಎಲ್ಲಾ ಮಾರ್ಗಗಳಲ್ಲಿ  ಎಲ್ಲಾ ಒಳ್ಳೆಯ ವಿಷಯಗಳ ಪುನಃಸ್ಥಾಪನೆಯಾಗಲಿ. (ಯೋವೇಲ 2:25)

2. ನನ್ನ ಜೀವನದ ವಿರುದ್ಧ ಕಾರ್ಯ ಮಾಡುವ ಆತ್ಮಿಕ ದರೋಡೆಕೋರರ ಮತ್ತು ನಾಶಕರ ಕಾರ್ಯಾಚರಣೆಗಳನ್ನು ಯೇಸುವಿನ ನಾಮದಲ್ಲಿ ನಾನು ನಿಷೇಧಿಸುತ್ತೇನೆ ಮತ್ತು ಅವುಗಳನ್ನು ಕೊನೆಗೊಳಿಸುತ್ತೇನೆ.(ಯೆಶಾಯ 54:17).

3.ನನ್ನ ಜೀವಿತದ ಎಲ್ಲಾ ಒಳಿತನ್ನು ನಾಶಮಾಡುವ ಪಿಶಾಚನ ದೂತರ ಚಟುವಟಿಕೆಗಳನ್ನು ಯೇಸುವಿನ ನಾಮದಲ್ಲಿ ನಿಷ್ಕ್ರಿಯಗೊಳಿಸುತ್ತೇನೆ (ಲೂಕ 10:19)

4.ಓ ಕರ್ತನೇ, ದಯವಿಟ್ಟು ನಾನು ಕಳೆದುಕೊಂಡ ಎಲ್ಲಾ ಆಶೀರ್ವಾದಗಳನ್ನು, ನನ್ನ ಕರೆಯನ್ನು ಸಂಪೂರ್ಣ ಗೊಳಿಸಲು ನೀನು ನಿಯೋಜಸಿರುವ ಸಹಾಯಕರನ್ನು  ಮತ್ತು ಸದ್ಗುಣಗಳನ್ನು ಯೇಸುವಿನ ನಾಮದಲ್ಲಿ ನನಗೆ ಪುನಃಸ್ಥಾಪಿಸಿ ಕೊಡಿ.

5.ತಂದೆಯೇ, ನನ್ನ ದೇಹ ಮತ್ತು ಜೀವನದಲ್ಲಿ ಹಾನಿಗೊಳಗಾದ ಎಲ್ಲವನ್ನೂ ಯೇಸುವಿನ ಹೆಸರಿನಲ್ಲಿ ಸರಿಪಡಿಸಿ. (ಯೆರೆಮಿಯಾ 30:17)

6.ತಂದೆಯೇ, ನಾನು ಕಳೆದುಕೊಂಡ ಎಲ್ಲಾ ಆಶೀರ್ವಾದಗಳನ್ನು ಮತ್ತೆ ಹಿಂದಿರುಗಿ ಪಡೆದುಕೊಳ್ಳಲು ಮುನ್ನಡೆಯಲು ಮತ್ತುಎಲ್ಲವನ್ನೂ ಪುನಃ ಸ್ಥಾಪಿಸಿಕೊಳ್ಳಲು ಯೇಸುವಿನ ನಾಮದಲ್ಲಿ ನನ್ನನ್ನು ಬಲಪಡಿಸಿ (1 ಸಮುವೇಲನು 30:19)

7.ತಂದೆಯೇ,ನನ್ನ ಜೀವಿತದ ಪ್ರತಿಯೊಂದು ಆಶೀರ್ವಾದದ ಮುಚ್ಚಿದ ಬಾಗಿಲನ್ನು ಯೇಸುವಿನ ಹೆಸರಿನಲ್ಲಿ ಪುನಃ ತೆರೆಯಿರಿ. (ಪ್ರಕಟನೆ 3:8)

8.ತಂದೆಯೇ, ನನ್ನಿಂದ ಸಂಪರ್ಕ ಕಡಿತಗೊಂಡ ನನ್ನ ಕರೆಯನ್ನು ಸಂಪೂರ್ಣ ಗೊಳಿಸಲು ನೀನು ಅನುಗ್ರಹಿಸಿದ್ದ ಸಹಾಯಕರೊಂದಿಗೆ ನನ್ನನ್ನು ಯೇಸುವಿನ ಹೆಸರಿನಲ್ಲಿ ಮರಳಿ ಕೂಡಿಸಿ . (ರೋಮ 8:28)

9.ನನ್ನ ಜೀವನದಲ್ಲಿ ಕಳೆದುಕೊಂಡ ಸಂಪತ್ತು, ಆಶೀರ್ವಾದ ಮತ್ತು ವೈಭವವಗಳು ಏಳು ಪಟ್ಟು ಪುನಃಸ್ಥಾಪನೆಯಾಗಲಿ ಎಂದು ಯೇಸುನಾಮದಲ್ಲಿ ನಾನು ಆದೇಶಿಸುತ್ತೇನೆ. (ಜ್ಞಾನೋಕ್ತಿ 6:31)

10.ತಂದೆಯೇ, ನಿಮ್ಮ ಪರಿಶುದ್ಧ ನಿವಾಸದಿಂದ ಯೇಸುವಿನ ಹೆಸರಿನಲ್ಲಿ ನನಗೆ ಸಹಾಯವನ್ನು ಅನುಗ್ರಹಿಸಿ (ಕೀರ್ತನೆ 20:2)

11.ಕರ್ತನೇ, ಯೇಸುನಾಮದಲ್ಲಿ ಶತ್ರುಗಳ ವಂಚನೆಯಿಂದ ನನ್ನನ್ನು ರಕ್ಷಿಸು ಮತ್ತು ನಿನ್ನ ಸತ್ಯದಿಂದ ನನ್ನ ಮನೋನೇತ್ರಗಳನ್ನು ಬೆಳಗಿಸಿ , ಇದರಿಂದ ನಾನು ಸೈತಾನನ ಕುತಂತ್ರಗಳ ವಿರುದ್ಧ ದೃಢವಾಗಿ ನಿಲ್ಲುತ್ತೇನೆ . (ಎಫೆಸ 6:11)

12.ಪರಲೋಕದ ತಂದೆಯೇ, ನನ್ನ ಜೀವಿತದಲ್ಲಿರುವ ಬಂಧನದ ಪ್ರತಿಯೊಂದು ಸರಪಳಿಯನ್ನು ಮುರಿಯಿರಿ ಮತ್ತು ಯಾವುದೇ ರೀತಿಯ ಆತ್ಮಿಕ ಸೆರೆಯಿದ್ದರೂ ನನ್ನನ್ನು ಅದರಿಂದ ಬಿಡುಗಡೆ ಮಾಡಿ. ನಿಮ್ಮ ಬಿಡುಗಡೆಯ ಶಕ್ತಿಯು ನನ್ನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯೇಸುವಿನ ಹೆಸರಿನಲ್ಲಿ ಆಳ್ವಿಕೆ ಮಾಡಲಿ.(ಯೆಶಾಯ 58:6)


Join our WhatsApp Channel


Most Read
● ಭಸ್ಮವಾಗುವಿಕೆಯ ( ಅತಿಯಾದ ಆಯಾಸದಿಂದಾಗುವ ದೈಹಿಕ ಬಳಲಿಕೆ ಮತ್ತು ಮಾನಸಿಕ ಖಿನ್ನತೆ) ವ್ಯಾಖ್ಯಾನ
● ನಮ್ಮ ಆಯ್ಕೆಯ ಪರಿಣಾಮಗಳು
● ಆತ್ಮವಂಚನೆ ಎಂದರೇನು? -I
● ಮದಲಿಂಗನನ್ನು ಭೇಟಿ ಮಾಡಲು ಸಿದ್ದರಾಗಿರಿ.
● ದೇವರು ಹೇಗೆ ಒದಗಿಸುತ್ತಾನೆ #3
● ಈ ದಿನಗಳಲ್ಲಿ ಇದನ್ನು ಮಾಡಿರ
● ನೀವು ದೇವರ ಉದ್ದೇಶಕ್ಕಾಗಿ ನಿಯೋಜಿಸಲ್ಪಟ್ಟಿದ್ದೀರಿ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login