Daily Manna
3
1
33
ಸರ್ಪಗಳನ್ನು ತಡೆಯುವುದು.
Friday, 5th of September 2025
Categories :
ಬಿಡುಗಡೆ (Deliverance)
"ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು; ನಾವು ಪರೀಕ್ಷಿಸದೆ ಇರೋಣ. ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ". (1 ಕೊರಿಂಥ 10:9-10)
ಇಸ್ರೇಲ್ ಮಕ್ಕಳು, ಮರುಭೂಮಿಯಲ್ಲಿ ತಮ್ಮ ಎರಡನೇ ಪ್ರಯಾಣದಲ್ಲಿ ಸಂಚಾರಿಸುವಾಗ ಆಹಾರ, ಪರಿಸ್ಥಿತಿಗಳು ಎಲ್ಲದರ ಕುರಿತು, ಗೊಣಗುತ್ತಲೇ ಇದ್ದು ದೇವರನ್ನು ದೂರುತ್ತಲೇ ಇದ್ದರು. ಇದು ದೇವರನ್ನು ಕೋಪಗೊಳುವಂತೆ ಮಾಡಿತು ಇದರಿಂದ ಆತನು ಅವರ ಮಧ್ಯದಲ್ಲಿ ವಿಷಪೂರಿತ ಹಾವುಗಳನ್ನು ಕಳುಹಿಸಿದನು,ಇದರಿಂದಾಗಿ ಅವರಲ್ಲಿ ಅನೇಕರು ಹಾವಿನಿಂದ ಕಚ್ಚಿಸಿಕೊಂಡು ಸತ್ತರು. (ಅರಣ್ಯಕಾಂಡ 21:4-6 ಓದಿ)
ಈ ಹೊಡೆತದಿಂದ , ಜನರು ಬೇಗನೆ ತಮ್ಮ ತಪ್ಪನ್ನು ಅರಿತುಕೊಂಡು ತಾವು ಪಾಪ ಮಾಡಿದ್ದೇವೆಂದು ದೀನತೆಯಿಂದ ಒಪ್ಪಿಕೊಂಡರು. ಆಗ ಮೋಶೆಯು ಜನರಿಗಾಗಿ ಮಧ್ಯಸ್ಥಿಕೆ ವಹಿಸಿದನು. (ಅರಣ್ಯಕಾಂಡ 21:7)
ನಿರಂತರವಾಗಿ ಗೊಣಗುವ ಮತ್ತು ದೂರುವುದರಿಂದಾಗುವ ಅಪಾಯವೆಂದರೆ ನಾವು ಅಂತಿಮವಾಗಿ ದೇವರು ನಮಗೆ ನೀಡಿರುವ ಎಲ್ಲಾ ಒಳ್ಳೆಯ ವಿಷಯಗಳನ್ನು ಮರೆತುಬಿಡುತ್ತೇವೆ. ನೀವು ಗೊಣಗುಟ್ಟುವ ಮತ್ತು ದೂರುವ ಕ್ಷಣದಲ್ಲಿ, ನೀವು ಕೃತಜ್ಞತಾ ಹೀನರಂತೆ ವರ್ತಿಸಲು ಪ್ರಾರಂಭಿಸುತ್ತೀರಿ.
ಗೊಣಗುವಂತದ್ದು ಉತ್ತರವನ್ನು ಹುಡುಕುವ ಬದಲು ಸಮಸ್ಯೆಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ. ಇದು ದೇವರ ಶಕ್ತಿಯ ಮೇಲೆ ಆತುಕೊಳ್ಳುವ ಬದಲು ನಮ್ಮ ಮೇಲೆ ನಾವು ಕೇಂದ್ರೀಕರಿಸುವಂತೆ ಮಾಡುತ್ತದೆ.
ಗೊಣಗುಟ್ಟುವುದು ಮತ್ತು ದೂರುವಂತದ್ದರ ಅತ್ಯಂತ ಅಪಾಯಕಾರಿ ವಿಷಯವೆಂದರೆ ಅದು ಜನರ ಜೀವನದಲ್ಲಿ ವಿನಾಶವನ್ನು ಉಂಟುಮಾಡುವ ದುಷ್ಟ ದುರಾತ್ಮ ಶಕ್ತಿಗಳಿಗೆ ಬಾಗಿಲು ತೆರೆದುಕೊಡುತ್ತದೆ. ಗೊಣಗುವುದನ್ನು ನಾವು ನಿಲ್ಲಿಸುವುದು ಎಷ್ಟು ಮುಖ್ಯ ವಿಷಯ ಎಂದು ಪವಿತ್ರಾತ್ಮನು ನಮಗೆ ಕಲಿಸಲು ಬಯಸುತ್ತಾನೆ, ಮತ್ತು ಆದ್ದರಿಂದಲೇ ಅವನು ಫಿಲಿಪ್ಪಿ 2:14-15 ರಲ್ಲಿ ಅಪೊಸ್ತಲ ಪೌಲನ ಮೂಲಕ ಹೀಗೆ ಬರೆದನು:
" ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. ಹೀಗೆ ನೀವು ನಿರ್ದೋಷಿಗಳೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ. ಇವರೊಳಗೆ ನೀವು ಸರ್ವರಿಗೂ ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು ಲೋಕದೊಳಗೆ ಹೊಳೆಯುವ ಜೋತಿರ್ಮಂಡಲಗಳಂತೆ ಕಾಣಿಸುವವರಾಗಿದ್ದೀರಲ್ಲಾ. ನೀವು ಹೀಗೆ ನಡೆದರೆ ನಾನು ಕೆಲಸ ಸಾಧಿಸಿದ್ದೂ ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ ಉತ್ಸಾಹವು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವದು."
ದೇವಮನುಷ್ಯನಾದ ಮೋಶೆಗೆ ಇನ್ನೊಂದು ವಿಷಯವನ್ನು ಮಾಡಬೇಕೆಂದು ಸೂಚಿಸಲಾಗಿತ್ತು: ಮೋಶೆಯು ತಾಮ್ರದ ಸರ್ಪವನ್ನು ಮಾಡಿ ಅದನ್ನು ಎತ್ತರವಾದ ಕಂಬದ ಮೇಲೆ ಇಟ್ಟನು; ಆಗ ಹಾವು ಯಾರನ್ನಾದರೂ ಕಚ್ಚಿದ್ದರೆ, ಅವರು ತಾಮ್ರದ ಸರ್ಪವನ್ನು ನೋಡಿದಾಗ ಬದುಕುಳಿಯುತ್ತಿದ್ದರು. (ಅರಣ್ಯಕಾಂಡ 21:9)
ಈ ಚಿತ್ರದಲ್ಲಿ ಅರ್ಥವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನಮಗೆ ಮುಖ್ಯವಾದ ಮೂರು ವಿಷಯಗಳಿವೆ.
1. ಹಳೆಯ ಒಡಂಬಡಿಕೆಯ ಉದ್ದಕ್ಕೂ ,ತಾಮ್ರ ಅಥವಾ ಹಿತ್ತಾಳೆಲೋಹವು ನ್ಯಾಯ ತೀರ್ಪಿನೊಂದಿಗೆ ಸಂಬಂಧ ಹೊಂದಿತ್ತು.
2. ಹವ್ವಳನ್ನು ಪ್ರಲೋಭಿಸಲು ಸೈತಾನನು ತೋಟದಲ್ಲಿ ತೆಗೆದುಕೊಂಡ ರೂಪದ ಸಂಕೇತವೆಂದರೆ ಸರ್ಪ.
3. ತಾಮ್ರದ ಸರ್ಪವನ್ನು ಸಾರ್ವಜನಿಕವಾಗಿ, ಹೊರಗೆ, ಎಲ್ಲರಿಗೂ ಕಾಣುವಂತೆ ಕಂಬದ ಮೇಲೆ ನೇತುಹಾಕಲಾಗಿತ್ತು.
ಸರ್ಪಗಳಿಂದ ಕಚ್ಚಲ್ಪಟ್ಟ ಜನರು ಕಂಬದ ಮೇಲಿನ ಸರ್ಪದ ಚಿತ್ರವನ್ನು ನೋಡಬೇಕಾಗಿತ್ತು,ಆಗ ಅವರು ಬದುಕುಳಿಯುತ್ತಿದ್ದರು. ನೀವು ಗೊಣಗುಟ್ಟಲು ಮತ್ತು ದೂರು ನೀಡಲು ಬಯಸಿದಾಗಲೆಲ್ಲಾ, ಯೇಸುವನ್ನು ನೋಡಿ, ಆತನು ನಮಗಾಗಿ ಹೇಗೆ ಬಳಲಿದರೂ, ಆತನು ಯಾರನ್ನೂ ದೂರದೇ ಮತ್ತು ಗೊಣಗುಟ್ಟದೆ ಮೌನವಾಗಿ ಸಹಿಸಿಕೊಂಡನು ಆಗ ತಂದೆಯಾದ ದೇವರು ಆತನನ್ನು ಬಹಳವಾಗಿ ಉನ್ನತೀಕರಿಸಿದನು. ನೀವೂ ಸಹಿಸಿಕೊಳ್ಳುವಾಗ ಅದೇ ಆಗುತ್ತದೆ.
ಅಲ್ಲದೆ, ನೀವು ಯಾವಾಗಲೂ ದೂರುವ ಮತ್ತು ಗೊಣಗುಟ್ಟುವ ಅಭ್ಯಾಸವನ್ನು ಹೊಂದಿದ್ದರೆ, ಯೇಸುವಿನ ಕಡೆಗೆ ನೋಡಿ ಆತನಿಂದ ಕೃಪೆಯನ್ನು ಬೇಡಿಕೊಳ್ಳಿ. ನೆನಪಿಡಿ, ಯೇಸು ನಮಗೆ ಪರಿಪೂರ್ಣ ಮಾದರಿಯಾಗಿದ್ದಾನೆ.
Bible Reading: Ezekiel 14-16
Prayer
ತಂದೆಯೇ, ನನ್ನ ಜೀವನದಲ್ಲಿ ನನ್ನ ಪರಿಸ್ಥಿತಿಯ ಕುರಿತು ದೂರುತ್ತಿದ್ದಕ್ಕಾಗಿ ನನ್ನನ್ನು ಕ್ಷಮಿಸಿ. ನಿನ್ನನ್ನು ನೋಡಲು ಮತ್ತು ಇಂದು ನಾನು ಎದುರಿಸುತ್ತಿರುವ ಪ್ರತಿಯೊಂದು ಅಡೆತಡೆಯನ್ನು ಜಯಿಸಲು ನನಗೆ ಸಹಾಯ ಮಾಡಿ. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ, ತಂದೆಯೇ ಆಮೆನ್.
Join our WhatsApp Channel

Most Read
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ● ಹನ್ನೆರಡು ಮಂದಿಯಲ್ಲಿ ಒಬ್ಬರು.
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
● ಮಹಿಮೆ ಮತ್ತು ಶಕ್ತಿಯ ಭಾಷೆ - ಅನ್ಯಭಾಷೆ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
Comments