हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
Daily Manna

ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.

Sunday, 7th of April 2024
1 1 416
Categories : ಅನ್ಯಭಾಷೆಯನ್ನಾಡುವುದು (Speak in Tongues)
ಅಪೋಸ್ತಲನಾದ ಪೌಲನು 1ಕೊರಿಯಂತೆ ಪತ್ರಿಕೆ 14:4ರಲ್ಲಿ "ವಾಣಿಗಳನ್ನು ಆಡುವವನು ತನಗೆ ಭಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತಾನೆ" ಎಂದು ಘೋಷಿಸಿದ್ದಾನೆ.

ಈ ಬಲವಾದ ವಾಕ್ಯವು ಅತಿಶಯವಾದ ಸತ್ಯವನ್ನು ಪ್ರಕಟಿಸುವಂತದ್ದಾಗಿದೆ.ನೀವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ನಿಮ್ಮ ವೈಯಕ್ತಿಕವಾದ ಸುಧಾರಣೆಯನ್ನು ಬೆಳವಣಿಗೆಯನ್ನು ನೀವು ನಿರೀಕ್ಷಿಸಬಹುದಾಗಿದೆ. ಒಬ್ಬ ಗೌರವಾನ್ವಿತ ಮಂತ್ರಿಯಾದವರು  ಯೋಗ್ಯವಾಗಿ ವರ್ಣಿಸಿರುವ ಪ್ರಕಾರ "ಅನ್ಯ ಭಾಷೆಯನ್ನು ಆಡುವಂಥದ್ದು ಪವಿತ್ರಾತ್ಮನು ನಿಮ್ಮೊಳಗೆ ಮಾಡುವ ಸ್ವಯಂ-ಸುಧಾರಣೆಯ ಪ್ರಕ್ರಿಯೆಯಾಗಿದೆ"

ಇದರರ್ಥ, ನೀವು ಆತ್ಮಿಕ ಜೀವಿತದಲ್ಲಿ ಎಷ್ಟು ಬೇಕಾದರೂ ಬೆಳವಣಿಗೆ ಹೊಂದಬಹುದು, ಅಭಿವೃದ್ಧಿಯನ್ನೂ  ಹೊಂದಬಹುದು. ಅದಕ್ಕೆ ಮಿತಿಯೇ ಇಲ್ಲ. ನೀವು ಈ ದೈವಿಕ ಸಂಪನ್ಮೂಲಗಳ ಬಾಗಿಲನ್ನು ತಟ್ಟುವಾಗ ನಿಮಗಿರುವ ಯಾವುದೇ ಪರಿಸ್ಥಿತಿಯಾಗಲೀ  ಅಥವಾ ಯಾರೇ ಆಗಲೀ ನಿಮ್ಮ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ.

"ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು."(‭‭2 ಕೊರಿಂಥದವರಿಗೆ‬ ‭4:7‬) ಎಂದು ಸತ್ಯವೇದವು ನಮಗೆ ಭರವಸೆಯನ್ನು ಕೊಡುತ್ತದೆ. ದೇವರು ತನ್ನ ನಿಕ್ಷೇಪವನ್ನು ವೈಯಕ್ತಿಕವಾಗಿ ಈ ಮಣ್ಣಿನ ಘಟಗಳಾದ ನಮ್ಮಲ್ಲಿ ಹುದುಗಿಸಿ ಇಟ್ಟಿದ್ದಾನೆ.ಆದಾಗಿಯೂ ನಾವು ಸಕ್ರಿಯವಾಗಿ ಇದರಿಂದ ಹಿಂಪಡೆದುಕೊಳ್ಳದೇ ಹೋದರೆ ನಾವು ಅದನ್ನು ಪಡೆಯುವ ಅವಕಾಶವಿದ್ದರೂ ಬಹಳ ಮಿತವಾದ ಪ್ರಯೋಜನವನ್ನು ಇದರಿಂದ ಹೊಂದುಕೊಳ್ಳುವವರಾಗುತ್ತೇವೆ.

ಇಲ್ಲಿಯೇ  ಅನ್ಯ ಭಾಷೆಯ ವರವು ಉಪಯೋಗಕ್ಕೆ ಬರುವಂತದ್ದು. ನೀವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ನೀವು ಈ ನಿಕ್ಷೇಪದ ಬಾಗಿಲಿನ ಬೀಗಗಳನ್ನು ಬಿಚ್ಚುವವರಾಗುತ್ತೀರಿ ಮತ್ತು ಇದರಿಂದ ನಿಮ್ಮ ಜೀವಿತವು ಉನ್ನತವಾಗಿಯೂ ವಿಸ್ತಾರವಾಗಿಯೂ ಗಮನಾರ್ಹ ಬದಲಾವಣೆಯನ್ನು ಹೊಂದುತ್ತದೆ. ನೀವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುತ್ತ ಕಾಲ ಕಳೆಯುವಾಗ ಧನಾತ್ಮಕ  ಬದಲಾವಣೆಗಳನ್ನು ನಿಮ್ಮಲ್ಲಿ ಆಗುವುದನ್ನು ನೀವು ಗುರುತಿಸಿಕೊಳ್ಳಲಾರಂಬಿಸುವಿರಿ.

"ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ [21] ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ."(ಯೂದನು‬ ‭1:20‭-‬21‬)
ಎಂಬ ದೇವರ ವಾಕ್ಯವು ಅನ್ಯಭಾಷೆಯ ಪ್ರಾರ್ಥನೆಯ ಮಹತ್ವವನ್ನು ಧೃಡೀಕರಿಸುತ್ತದೆ.ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂತದು ನಿಮ್ಮ ನಂಬಿಕೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ನಿಮ್ಮ ವೈಯಕ್ತಿಕ ವ್ಯಕ್ತಿಯನ್ನು ವೃದ್ಧಿಸಿಕೊಳ್ಳಲು ಇರುವ ಸಾಧನವಾಗಿದೆ.

ಅನ್ಯ ಭಾಷೆಯಲ್ಲಿ ಮಾತಾಡುವದರ ಮತ್ತೊಂದು ಮಹತ್ತರವಾದ ಉಪಯುಕ್ತತೆ ಏನೆಂದರೆ ಅದು ನಿಮಗೆ ಆಂತರಿಕವಾದ ಸ್ವಸ್ತತೆಯನ್ನು ತಂದುಕೊಡುತ್ತದೆ. ಅನೇಕರು ತಾವೂ ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿದ್ದರಿಂದ ಅಂತರಿಕವಾಗಿ ಆಳವಾದ ಒಂದು ಭಾವನಾತ್ಮಕ ಸ್ವಸ್ಥತೆಯನ್ನು ಅನುಭವಿಸಿದ್ದೇವೆ ಎಂದು ಸಾಕ್ಷಿ ಹೇಳಿದ್ದನ್ನು ನಾನು ಕೇಳಿದ್ದೇನೆ.ನೀವು ಹೀಗೆ ಪ್ರಾರ್ಥಿಸುವಾಗ ನೀವು ನಿಮಗೆ ಅರಿವಿಲ್ಲದೆ, ನೀವು ಏನನ್ನು ಪ್ರಾರ್ಥಿಸಿದ್ದೀರೋ ಅದರರ್ಥ ಕೂಡ ತಿಳಿಯದೆ ನಿಮ್ಮ ಕಣ್ಣಲ್ಲಿ ನೀರು ಬರುವುದನ್ನು ನೀವು ಗುರುತಿಸಿಕೊಂಡಿರಬಹುದು. ಇದು ಆತ್ಮನಿಂದ ಪ್ರಾರ್ಥಿಸಿದರ ಫಲವಾಗಿದೆ. ಪವಿತ್ರಾತ್ಮನು ನಿಮ್ಮಲ್ಲಿ  ಭೂತಕಾಲದಲ್ಲಿಂದ ಇದ್ದಂತಹ ಹೃದಯದ ಗಾಯಗಳನ್ನೆಲ್ಲಾ ಜಜ್ಜುವಿಕೆಗಳನ್ನೆಲ್ಲಾ ಮೃದುವಾಗಿ ಸ್ವಸ್ಥಪಡಿಸಿದರಿಂದ ಇದು ನಡೆಯುತ್ತದೆ.ಆತನು ಮುರಿದು ಹೋದದ್ದನ್ನು ಕಟ್ಟುವನಾಗಿದ್ದಾನೆ.

"‭ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ."(‭‭ರೋಮಾಪುರದವರಿಗೆ‬ ‭8:16‬) ಎಂದು ಸತ್ಯವೇದ ಹೇಳುತ್ತದೆ. ನೀವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ಪವಿತ್ರಾತ್ಮನು ನಿಮ್ಮ ಆತ್ಮದೊಂದಿಗೆ ಸಾಕ್ಷಿಯಾಗಿದ್ದು ನೀವು ದೇವರ ಪ್ರೀತಿಯ ಮಕ್ಕಳೆಂಬುದನ್ನು ದೃಢಪಡಿಸುತ್ತಾನೆ. ಆತನು ಕ್ರಿಸ್ತನಲ್ಲಿ ನಿಮ್ಮ ಬೆಲೆ ಮತ್ತು  ನಿಮ್ಮ ಮೌಲ್ಯ ಎಂಬುದೇನು ಎಂಬುದನ್ನು ಪುನಃ ನೆನಪಿಸಿ ನಿಮಗೆ ಭರವಸೆ ನೀಡುವವನಾಗಿದ್ದಾನೆ. ಈ ಒಂದು ಆಂತರಿಕವಾದ ಸ್ವಸ್ತತೆ ಮತ್ತು ದೃಢೀಕರಣವು ನಿಮ್ಮ ಸರ್ವಾಂಗೀಣ ಯೋಗ ಕ್ಷೇಮಕ್ಕೆ ಮತ್ತು ನೀವು ಇತರರಿಗೆ ಸೇವೆ ಮಾಡಲು ನಿಮಗೆ ಬೇಕಾಗಿರುವ ಸಾಮರ್ಥ್ಯಕ್ಕೆ ಅತ್ಯವಶ್ಯಕವಾಗಿದೆ

ನೆನಪಿಡಿ, ಭಕ್ತಿವೃದ್ದಿ ಎಂಬುದು ನಿಮ್ಮನ್ನು ಕಟ್ಟುವ ಮತ್ತು ನಿಮ್ಮನ್ನು ಬಲಪಡಿಸುವ ಪ್ರಕ್ರಿಯೆಯಾಗಿದೆ. ನಿಜವಾಗಿ ನೀವು ಸ್ವಸ್ಥಗೊಂಡವರಾದಾಗ ಮಾತ್ರವೇ ಕ್ರಿಸ್ತನ ದೇಹವನ್ನು ಬೆಳೆಸಲು -ಉತ್ತೇಜಿಸಲು ನಿಮಗೆ ಸಾಧ್ಯವಾಗುತ್ತದೆ.
"ಆದದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ."(‭‭1 ಥೆಸಲೋನಿಕದವರಿಗೆ‬ ‭5:11‬ )ಎಂದು ಅಪೋಸ್ತಲನಾದಂತ ಪೌಲನು ಒತ್ತಿ ಹೇಳುತ್ತಾನೆ. ನೀವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವ ಮೂಲಕ ಸ್ವಸ್ತತೆಯನ್ನು ಅಭಿವೃದ್ಧಿಯನ್ನು ಹೊಂದಿದಾಗ ನೀವು ಮತ್ತೊಬ್ಬರ ನಂಬಿಕೆಯ ಪಯಣದಲ್ಲಿ ಭಕ್ತಿ ವೃದ್ಧಿಮಾಡಲು ಇತರರನ್ನು ಸಮಾಧಾನ ಪಡಿಸಲು ಸಶಕ್ತರಾಗುತ್ತೀರಿ.

ಅದಕ್ಕೂ ಹೆಚ್ಚಾಗಿ ಅನ್ಯ ಭಾಷೆಯಲ್ಲಿ ಮಾತನಾಡುವುದೆಂದರೆ ಅದು ಆತ್ಮಿಕ ಸಚೇತನ ಕೊಳ್ಳುವುದು ಮತ್ತು ಪುನರ್ಜೀವ ಹೊಂದುವುದು ಎಂದರ್ಥ
‭"ಹೌದು, ತೊದಲು ಮಾತಿನವರು, ಅನ್ಯಭಾಷಿಗಳು, ಇವರ ಮೂಲಕವಾಗಿಯೇ ಯೆಹೋವನು ಈ ಜನರ ಮಧ್ಯದಲ್ಲಿ ಮಾತಾಡುವನು.12ಆತನು ಮೊದಲು - ಇದೇ ನಿಮಗೆ ಆವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮಗೊಳಿಸಿರಿ, ನಿಮಗೆ ಅನುಕೂಲವಾದ ಉಪಶಮನವು ಇದೇ..... " ಎಂಬುದಾಗಿ  ಯೆಶಾಯ‬ನ ಮೂಲಕ  ‭28:11‭-‬12‬ ಉಲ್ಲೆಖಿಸುತ್ತಾನೆ.

ಆದ್ದರಿಂದ ನಿಮಗೆ ಆಂತರಿಕವಾದ ಸ್ವಸ್ತತೆ ಬೇಕೆನಿಸಿದರೆ, ಆತ್ಮಿಕವಾದ ಅಭಿವೃದ್ಧಿ ಬೇಕೆನಿಸಿದರೆ ಅಥವಾ ದೇವರ ಕರಗಳ ಒಂದು ಸರಳವಾದ ಸ್ಪರ್ಶದಿಂದ ಆಗುವ ನವ ಚೇತನ ಬೇಕೆನಿಸಿದರೆ ನಿಯಮಿತವಾಗಿ ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವ ಪ್ರಯಾಣವನ್ನು ನೀವು ಏಕೆ ಆರಂಭಿಸಬಾರದು? ಆತ್ಮನಿಂದ ಪ್ರಾರ್ಥಿಸುವುದಕ್ಕಾಗಿಯೇ ನಿಮ್ಮ ದಿನದಲ್ಲಿ ಕೆಲ ಸಮಯವನ್ನು ಮೀಸಲಿಡಿರಿ ಹಾಗೂ ದೇವರು ನಿಮ್ಮೊಳಗೂ ಮತ್ತು ನಿಮ್ಮ ಮೂಲಕವೂ ಕಾರ್ಯ ಮಾಡುತ್ತಿದ್ದಾನೆ ಎಂಬುದನ್ನು ನಂಬಿರಿ. ನೀವು ಹೀಗೆ ಮಾಡುವಾಗ ನಿಮ್ಮ ಜೀವಿತದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಕಾಣುವಿರಿ. ದೊಡ್ಡಳತೆಯ ಶಾಂತಿ ಆನಂದ ಮತ್ತು ಪರಿಪೂರ್ಣತೆಯನ್ನು ನೀವು  ಅನುಭವಿಸುತ್ತೀರಿ ಎಂಬ ನಿರೀಕ್ಷೆಯಲ್ಲಿರಿ.

"ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು."‭‭(2 ಕೊರಿಂಥದವರಿಗೆ‬ ‭9:10‬) ಎಂಬುದನ್ನು ನೆನಪಿಡಿರಿ. ನೀವು ಅನ್ಯ ಭಾಷೆಯಲ್ಲಿ  ಪ್ರಾರ್ಥಿಸುವ ಮೂಲಕ ಬೀಜವನ್ನು ಬಿತ್ತುವಾಗ ದೇವರು ನಿಮ್ಮ ಜೀವಿತದ ಫಲವನ್ನು ದ್ವಿಗುಣಗೊಳಿಸಿ  ನಿಮ್ಮ ಉಡಿಲನ್ನು ಆತ್ಮಿಕವಾದ ಆಶೀರ್ವಾದಗಳಿಂದಲೂ ಆಂತರಿಕವಾದ ಸ್ವಸ್ತತೆಯಿಂದಲೂ ತುಂಬುವನು. ಆದ್ದರಿಂದ ಈ ಅತಿಶಯವಾದ ವರವನ್ನು ಅಪ್ಪಿಕೊಳ್ಳೋಣ ಮತ್ತು ನಮ್ಮ ದಿನನಿತ್ಯದ ಪ್ರಾರ್ಥನೆಯ ಭಾಗವನ್ನಾಗಿ ಮಾಡಿ ಕೊಳ್ಳೋಣ. ದೇವರು ನಮ್ಮೊಳಗೆ ಹುದುಗಿಸಿಟ್ಟ ನಿಕ್ಷೇಪದ ಬಾಗಿಲನ್ನು ತೆರೆಯಲು ಇದುವೇ ಕೀಲಿಕೈ ಎಂಬ ತಿಳುವಳಿಕೆಯಿಂದ ಮುನ್ನಡೆಯೋಣ.
Confession
 ನಾನು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ದೇವರು ನನ್ನೊಳಗೆ ಹುದುಗಿಸಿಟ್ಟಿರುವ ನಿಕ್ಷೇಪವನ್ನು ಮುಟ್ಟುತ್ತೇನೆ ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ. ನಾನು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ನನ್ನ ಆಂತರ್ಯದ ಸ್ವಸ್ತತೆಯನ್ನು ಯೇಸು ನಾಮದಲ್ಲಿ ಹೊಂದಿಕೊಳ್ಳುತ್ತೇನೆ. ಆಮೇನ್.


Join our WhatsApp Channel


Most Read
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ದೈವಿಕ ಅನುಕ್ರಮ - 1
● ಕೃತಜ್ಞತೆಯ ಪಾಠ
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ಕರ್ತನೊಂದಿಗೆ ನಡೆಯುವುದು
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login