ನಾವು ನೋಡುವವರಾಗಿ(ದೃಷ್ಟಿಸುವುದರ) ನಡೆಯದೆ ನಂಬಿಕೆಯಿಂದ (ವಿಶ್ವಾಸಹಿಸುವುದರ ಮೂಲಕ) ನಡೆಯುತ್ತೇವೆ. (2 ಕೊರಿಂಥ 5:7)
ನೀವು ನಿಮ್ಮ ಹೃದಯದ ಕಣ್ಣುಗಳಿಂದ ನೋಡುವುದರಲ್ಲಿಯೇ ಹೆಚ್ಚಿನ ಶಕ್ತಿಯಿದೆ. ಪೌಲನು ಎಫೆಸದ ಚರ್ಚ್‌ಗಾಗಿ ಪ್ರಾರ್ಥಿಸಲು ಇದು ಒಂದು ಕಾರಣವಾಗಿದೆ: “ನಿಮ್ಮ ಮನೋನೇತ್ರಗಳು ಬೆಳಗಬೇಕೆಂದು... ” (ಎಫೆಸ 1:18)
ಕೆಲವು ವರ್ಷಗಳ ಹಿಂದೆ, ತನ್ನ ಹೆಂಡತಿಯನ್ನು ಅಚ್ಚರಿಗೊಳಿಸ ಬೇಕೆಂಬ ಯೋಜನೆಯೊಂದಿಗೆ ವಿದೇಶದ ತನ್ನ ಕೆಲಸದಿಂದ ಮನೆಗೆ ಹಿಂದಿರುಗಿದ ಕುರಿತು ನನಗೆ ಹೇಳಿದ ಒಬ್ಬ ವ್ಯಕ್ತಿಗಾಗಿ ನಾನು ಪ್ರಾರ್ಥಿಸಬೇಕಿತ್ತು.. ಅವನು ತನ್ನ ಹೆಂಡತಿಗೆ ಅಚ್ಚರಿ ನೀಡುವ ಬದಲಾಗಿ, ಅವನು ಬಾಗಿಲನ್ನು ತೆರೆದಾಗ, ಅವನು ಅವಳನ್ನು ಇನ್ನೊಬ್ಬ ಪುರುಷನೊಂದಿಗೆ ಕಂಡುಕೊಂಡು ಸ್ವತಃ ಅವನೇ ಅಚ್ಚರಿಗೊಂಡು. ಅವನು ಸಂಪೂರ್ಣವಾಗಿ ಎದೆಗುಂದಿದನು ಆದರೆ ಅವನ ಮಕ್ಕಳ ನಿಮಿತ್ತದಿಂದ ತನ್ನ ವೈವಾಹಿಕ ಸಂಬಂಧವನ್ನು ಮುಂದುವರೆಸಿದನು.
ಅವನು ಹೇಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದನು, ಆದರೆ ಯೇಸುವಿನ ಮೇಲಿನ ನಂಬಿಕೆಯಿಂದಲೇ, ತನ್ಮ ಜೀವಿತ ಜೀವಿಸಬೇಕೆಂಬುದನ್ನು ಆಯ್ಕೆ ಮಾಡಿ ಕೊಂಡನು ಎಂದು ಆ ವ್ಯಕ್ತಿ ನನಗೆ ಪದೇ ಪದೇ ಹೀಗೆ ಬರೆಯುತ್ತಿದ್ದನು.
“ಕೆಲವೊಮ್ಮೆ, ಅವನನ್ನು ಸಮಾಧಾನಪಡಿಸಲು ನನಲ್ಲಿ ಮಾತುಗಳೇ ಇಲ್ಲ ಎಂದು ಎನಿಸುತಿತ್ತು. ಆದಾಗ್ಯೂ ಪವಿತ್ರಾತ್ಮನು ಒಂದು ದಿನ ಶಕ್ತಿಯುತವಾದ ಮಾತೊಂದನ್ನು ನನಗೆ ಹೇಳಿದನು ಅದೇನೆಂದರೆ" ಈ ಮನುಷ್ಯನು ತನ್ನ ಪ್ರಾಕೃತಿಕ ಕಣ್ಣುಗಳಿಂದ ಅಲ್ಲ ಆದರೆ ಅವನ ಆತ್ಮೀಕ ಕಣ್ಣುಗಳಿಂದ ಸಂಗತಿಯನ್ನು ನೋಡಬೇಕೆಂದು ಹೇಳು." ಈಗ ಇವನ ಹೆಂಡತಿ ಎಂದಿಗೂ ಪ್ರಾರ್ಥಿಸದವಳೂ ಮಕ್ಕಳನ್ನೂ ಕೂಡ ಚರ್ಚ್‌ಗೆ ಬರಲು ಬಿಡುವುದಿಲ್ಲದವಳೂ ಆಗಿದ್ದರೂ. ಅವನ ಹೆಂಡತಿ ಮತ್ತು ಮಕ್ಕಳು ಚರ್ಚ್‌ನಲ್ಲಿ ದೇವರನ್ನು ಪ್ರಾರ್ಥಿಸುತ್ತಿದ್ದಾರೆ ಮತ್ತು ದೇವರನ್ನು ಮನಃ ಪೂರ್ವಕ ವಾಗಿ ಹುಡುಕುತ್ತಿದ್ದಾರೆ ಎಂದು ಕಲ್ಪಿಸಿ ನಂಬಿಕೆಯಿಂದ ಕಾಣುವಂತೆ ಹೇಳು ಎಂದನು.
ನಾನು ಅವನಿಗೆ ಕರ್ತನ ಈ ಮಾತನ್ನು ಹೇಳುತ್ತಿದ್ದಂತೆ, ಅವನು ತುಂಬಾ ಕಟುವಾಗಿ ಅತ್ತು ದೇವರ ವಾಕ್ಯ ಹೇಳಿದಂತೆ ಮಾಡುವುದಾಗಿ ಭರವಸೆ ನೀಡಿದನು. ಅವನ ಹೆಂಡತಿ ಮತ್ತು ಮಕ್ಕಳು ಚರ್ಚ್‌ನಲ್ಲಿ ಅವನ ಪಕ್ಕದಲ್ಲಿ ಪ್ರಾರ್ಥಿಸುತ್ತಿರುವುದಾಗಿ ನಂಬಿ ಅವನು ನೋಡಲಾರಭಿಸಿದನು(ಕಲ್ಪಿಸಿಕೊಂಡನು).
ಅವನು ನೋಡುವುದನ್ನು ಮಾತನಾಡದೆ ನಂಬುವವನಾಗಿ ಮಾತನಾಡಲು ಆರಂಭಿಸ ಸುಮಾರು ನಾಲ್ಕು ತಿಂಗಳುಗಳ ಕಾಲ ಹೀಗೆ ಮಾಡುವುದನ್ನು ಮುಂದುವರಿಸಿದನು. ಒಂದು ದಿನ, ಒಂದು ಅದ್ಭುತ ಸಂಭವಿಸಿತು. ಅವನು ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರಿಂದ, ಅವನು ಎಂದಿನಂತೆ ಬೇಗನೆ ಬಂದನು. ಒಂದು ಗಂಟೆಯ ನಂತರ, ಅವನ ಹೆಂಡತಿಯೂ ತನ್ನ ಮಕ್ಕಳೊಂದಿಗೆ ಬಂದು, ಅವನ ಪಕ್ಕದಲ್ಲಿ ಕುಳಿತು, ಕಣ್ಣೀರು ಸುರಿಸುತ್ತಾ ಕರ್ತನನ್ನು ಆರಾಧಿಸುತ್ತಿದ್ದಳು.
ಆ ದಿನ, ನಾನು ಜನರನ್ನು ರಕ್ಷಣೆ ಹೊಂದಲು ಮುಂದೆ ಬರಲು ಕರೆ ಕೊಟ್ಟಾಗ,ಆಕೆಯೂ ಮುಂದೆ ಬಂದು ನಮ್ಮ ಕರ್ತನಿಂದ ಮಹಿಮೆಯಿಂದ ರಕ್ಷಿಸಲ್ಪಟ್ಟಳು. ಆ ದಿನ ಅವಳಲ್ಲಿ ಪ್ರಾರಂಭವಾದದ್ದು ಆಕೆಯನ್ನು ನಂಬಿಕೆಯಿಂದ ನಂಬಿಕೆಗೆ ಮತ್ತು ಮಹಿಮೆಯಿಂದ ಮಹಿಮೆಗೆ ಬೆಳೆಸುತ್ತಲೇ ಇದೆ. (2 ಕೊರಿಂಥ 3:18)
ಒಂದು ವೇಳೆ ಈ ವ್ಯಕ್ತಿಯು ಅಂದೇ ತನ್ನ ಹೆಂಡತಿಯನ್ನು ತ್ಯಜಿಸಿಬಿಟ್ಟಿದ್ದರೆ ಏನಾಗುತಿತ್ತು ಎಂದು ನಾನು ಊಹಿಸಬಲ್ಲೆ. ಇದು ನಮ್ಮಲ್ಲಿ ಅನೇಕರಿಗೆ ಎಚ್ಚರಿಕೆಯ ಕರೆ.
ಮೊದಲು, ನೀವು ಪ್ರೀತಿಸುವ ಜನರನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಬೇಡಿ.
ಎರಡನೆಯದಾಗಿ, ಆತ್ಮನ ಕಣ್ಣುಗಳಿಂದ ನೋಡುವ ಮೂಲಕ ನಿಮ್ಮ ನಂಬಿಕೆಯನ್ನು ಬಿಡುಗಡೆ ಮಾಡಿ.
ನಿಮ್ಮ ಜೀವನದಲ್ಲಿ ದೇವರು ಏನು ಮಾಡಬೇಕೆಂದು ನೀವು ನಂಬುತ್ತಿದ್ದೀರಿ? ಮೊದಲು, ಆ ನಿಮ್ಮ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ ಎಂದು ನಂಬಿಕೆಯ ಕಣ್ಣುಗಳಿಂದ ಅವುಗಳನ್ನು ನೋಡಲು ಪ್ರಾರಂಭಿಸಿ (ಇಬ್ರಿಯ 11:1) ನಂತರ ಆ ವಿಷಯವನ್ನು ಬಾಯಿಬಿಟ್ಟು ಹೇಳಿ.ಆಗ ಅದು ದೇವರ ಮಹಿಮೆಗಾಗಿ ನೆರವೇರುತ್ತದೆ.
Bible Reading: Ezekiel 21-22
Prayer
ತಂದೆಯೇ, ಯೇಸುವಿನ ಹೆಸರಿನಲ್ಲಿ, ನಿಮ್ಮ ವಾಕ್ಯವು ನನ್ನೊಳಗೆ ಭಾಗವಾಗುವವರೆಗೂ ಅದನ್ನು ಧ್ಯಾನಿಸಲು ನನಗೆ ಸಹಾಯ ಮಾಡಿ. ಆತ್ಮೀಕ ಕ್ಷೇತ್ರದಲ್ಲಿ ನನ್ನ ಪ್ರಾರ್ಥನೆಗಳು ತೆರೆದುಕೊಳ್ಳುವುದನ್ನು ನೋಡಲು ನನ್ನ ಕಣ್ಣುಗಳನ್ನು ತೆರೆ ಮಾಡಿ. ಆಮೆನ್.
Join our WhatsApp Channel

Most Read
● ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.● ನೀವು ಪಾವತಿಸಬೇಕಾದ ಬೆಲೆ
● ಶತ್ರುವಿನ ಮಾರ್ಗ ರಹಸ್ಯವಾಗಿದೆ
● ಓಟವನ್ನು ಓಡಲು ಇರುವ ತಂತ್ರಗಾರಿಕೆ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ಆತ್ಮಕ್ಕೆ ದೇವರ ಔಷಧಿ
Comments