हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಮನಸ್ಸನ್ನು ಶಿಸ್ತುಗೊಳಿಸಿ
Daily Manna

ನಿಮ್ಮ ಮನಸ್ಸನ್ನು ಶಿಸ್ತುಗೊಳಿಸಿ

Tuesday, 22nd of April 2025
1 1 108
"ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು (ಕೀರ್ತನೆ 86:11)

ನೀವು ಎಂದಾದರೂ ನಿಮ್ಮನ್ನು ಅತಿಯಾದ ಯೋಚನೆಗಳು  ಬಾದಿಸುತ್ತಿವೆ ಮತ್ತು ಯಾವುದರ ಮೇಲೂ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸಿದ್ದೀರಾ? ಬಹುಶಃ ನಿಮ್ಮ ಮನಸ್ಸು ನಕಾರಾತ್ಮಕ ಆಲೋಚನೆಗಳು ಮತ್ತು ಗೊಂದಲಗಳಿಂದ ಅಸ್ತವ್ಯಸ್ತಗೊಂಡು  ನಿಮ್ಮ ದೈನಂದಿನ ಜೀವನದಲ್ಲಿ ದೇವರ ಶಾಂತಿಯನ್ನು ಅನುಭವಿಸುವುದನ್ನು ತಡೆಯುತ್ತಿರುತ್ತವೆ. ಸತ್ಯವೆಂದರೆ ನಾವು ಯಾವಾಗಲೂ ಗೊಂದಲಗಳಿಂದ ಮುಕ್ತವಾದ ಹಾಗೂ ದೇವರ ಶಾತಿಯನ್ನು ಕದಡದಂತಹ  ಸ್ಪಷ್ಟವಾದ ಮತ್ತು ಶಿಸ್ತುಬದ್ಧವಾದ ಮನಸ್ಸನ್ನು ಹೊಂದಿರಬೇಕೆಂದು ದೇವರು ಬಯಸುತ್ತಾನೆ.

2 ತಿಮೊಥೆಯ 1:7 ರಲ್ಲಿ, ದೇವರು ನಮಗೆ ಕೊಟ್ಟಿರುವ ಆತ್ಮವು ಶಕ್ತಿ, ಪ್ರೀತಿ ಹಾಗೂ ಸ್ವಶಿಸ್ತು ಆತ್ಮವೇ ಹೊರತು ಭಯದ ಆತ್ಮವಲ್ಲ." ಕೆಲವು ನಿರ್ದಿಷ್ಟ  ಆಲೋಚನೆಗಳು ಮತ್ತು ಭಾವನೆಗಳನ್ನು ಪ್ರವೇಶಿಸದಂತೆ ನಮ್ಮ ಕಣ್ಣುಗಳು, ಕಿವಿಗಳು ಮತ್ತು ಹೃದಯಗಳನ್ನು ಕಾಪಾಡುವ ಸ್ವಸ್ಥ ಮನಸ್ಸನ್ನು ರಚಿಸಲು ನಮಗೆ ಅಗತ್ಯವಿರುವ ಶಕ್ತಿ ಮತ್ತು ಪ್ರೀತಿಯನ್ನು ದೇವರು ನಮಗೆ ಅನುಗ್ರಹಿಸಿದ್ದಾನೆ ಎಂದು ನಾವು ಓದುತ್ತೇವೆ. ಈ ದೇವರ ವಾಕ್ಯದಲ್ಲಿ "ಶಕ್ತಿ" ಎಂಬ ಗ್ರೀಕ್ ಪದದ  "ಡುನಾಮಿಸ್"ಎಂಬ ಮೂಲದಿಂದ  ಬಂದಿದೆ , ಇದು ಅಪೊಸ್ತಲರ ಕೃತ್ಯಗಳು 1:8 ರಲ್ಲಿ ವಿಶ್ವಾಸಿಗಳಿಗೆ ನೀಡಲಾದ ಪವಿತ್ರಾತ್ಮನ  ಶಕ್ತಿಯನ್ನು ವಿವರಿಸಲು ಬಳಸಲಾದ ಅದೇ ಪದವಾಗಿದೆ.
"ಆದರೆ ಪವಿತ್ರಾತ್ಮ ದೇವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯನ್ನು ಪಡೆಯುವಿರಿ. ಆಗ ನೀವು ಯೆರೂಸಲೇಮಿನಲ್ಲಿ, ಯೂದಾಯ ಪ್ರಾಂತ ಮತ್ತು ಸಮಾರ್ಯ ಪ್ರಾಂತದ ಎಲ್ಲಾ ಕಡೆಗಳಲ್ಲಿಯೂ ಹಾಗೂ ಭೂಲೋಕದ ಕೊನೆಯ ಮೇರೆಗಳವರೆಗೂ ನನಗೆ ಸಾಕ್ಷಿಗಳಾಗುವಿರಿ,”
(ಅಪೊಸ್ತಲರ ಕೃತ್ಯಗಳು 1:8)

ನಾವು ಪವಿತ್ರಾತ್ಮನ ವರವನ್ನು  ಹೊಂದಿದಾಗ , ನಮ್ಮ ಮನಸ್ಸನ್ನು ಹೆಚ್ಚಾಗಿ ಆವರಿಸುವಂತ  ಭಯದ ಮನೋಭಾವವನ್ನು ಪ್ರತಿರೋಧಿಸಲು ನಮಗೆ ಅಗತ್ಯವಿರುವ ಶಕ್ತಿಯನ್ನು (ಡುನಾಮಿಸ್) ನಾವು ಪಡೆಯುತ್ತೇವೆ. ಮಾರ್ಕ 5:30 ರಲ್ಲಿ ಯೇಸುವಿನಿಂದ ಹೊರಟು  ರಕ್ತಕುಸುವ ರೋಗದ ಸಮಸ್ಯೆಯಿಂದ ಬಳಲುತಿದ್ದ ಮಹಿಳೆಯನ್ನು ಗುಣಪಡಿಸಿದ ಅದೇ ಶಕ್ತಿಯೇ (ಡುನಾಮಿಸ್) ಇಂದು ನಾವು ನಮ್ಮ ಮನಸ್ಸನ್ನು ಶಿಸ್ತುಬದ್ಧಗೊಳಿಸಲು ಮತ್ತು ದೇವರ ವಾಕ್ಯದ ಸತ್ಯದ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿರುವಾಗ ನಮಗೆ ಸಹಾಯ ಮಾಡಲು  ಲಭ್ಯವಿದೆ. ಶಿಸ್ತಿನ ಮನಸ್ಸು ಎಂದರೆ ಆತ್ಮವನ್ನೂ ಮತ್ತು ನಮ್ಮ ಆತ್ಮಕ್ಕೆ ಪ್ರವೇಶಿಸುವದನ್ನು ನಿಗ್ರಹಿಸುವ ಉದ್ದೇಶಪೂರ್ವಕ ಮನಸ್ಸು. ನಮ್ಮ ಸುತ್ತಲೂ ನಡೆಯುವ ಎಲ್ಲಾ ಸಂದರ್ಭಗಳು ಮತ್ತು ಘಟನೆಗಳನ್ನು ನಾವು ಯಾವಾಗಲೂ ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಾವು ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು  ಎಂಬುದನ್ನು ನಾವು ನಿಯಂತ್ರಿಸಬಹುದು. ದೇವರ ವಾಕ್ಯದ ಸತ್ಯದ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದನ್ನು  ನಾವು ಆಯ್ಕೆ ಮಾಡಿ ಕೊಳ್ಳುವಾಗ, ಭಯ, ಚಿಂತೆ ಮತ್ತು ಅನುಮಾನಗಳನ್ನು ತೆಗೆದುಹಾಕಿ   ಪ್ರೀತಿ, ಸಂತೋಷ ಮತ್ತು ಸಮಾಧಾನದ ಆಲೋಚನೆಗಳಿಂದ ನಮ್ಮ ಮನಸ್ಸನ್ನು ತುಂಬುತ್ತೇವೆ.

ಸ್ವಸ್ಥ ಮನಸ್ಥಿತಿಯನ್ನು  ಬೆಳೆಸಿಕೊಳ್ಳಲು  ಶಿಸ್ತು ಮತ್ತು ಪ್ರಯತ್ನ ಎರಡೂ ಬೇಕಾಗುತ್ತದೆ, ಆದರೆ ಆದರ  ಪ್ರತಿಫಲಗಳು ಯೋಗ್ಯವಾಗಿರುತ್ತವೆ. "ಆಗ ಎಲ್ಲಾ ಗ್ರಹಿಕೆಯನ್ನೂ ಮೀರುವ ದೇವರ ಸಮಾಧಾನವು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು" ( ಫಿಲಿಪ್ಪಿ 4:7). " ದೃಢ ಮನಸ್ಸುಳ್ಳವರನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವೆ, ಏಕೆಂದರೆ ಅವರಿಗೆ ನಿನ್ನಲ್ಲಿ ಭರವಸವಿದೆ.” ಎಂದು ಯೆಶಾಯ 26:3 ಹೇಳುತ್ತದೆ.

ನಮ್ಮ ಜೀವಿತವು ದೇವರ ನಿಯಂತ್ರಣದಲ್ಲಿದ್ದು  ನಮ್ಮ ದಾರಿಯಲ್ಲಿ ಬರುವ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಮಗೆ ಅಗತ್ಯವಿರುವ ಶಕ್ತಿ ಮತ್ತು ಪ್ರೀತಿಯನ್ನು ಆತನು ಅನುಗ್ರಹಿಸಿದ್ದಾನೆ ಎನ್ನುವ ತಿಳುವಳಿಕೆಯಲ್ಲಿ ನಾವಿರುವಾಗ  ನಾವು ಆ ಪೂರ್ಣ ಸಮಾಧಾನವನ್ನು  ಹೊಂದಬಹುದು. 
ಕರ್ತನನ್ನು ಪ್ರೀತಿಸುವ ಇತರ ಕ್ರೈಸ್ತರೊಂದಿಗೆ ಸಂಪರ್ಕದಲ್ಲಿರುವಂತದ್ದು ಸಹ ನಾವು  ಶಿಸ್ತಿನ ಮನಸ್ಥಿತಿ ಕಾಪಾಡಿಕೊಳ್ಳಲು ನಮಗೆ  ನಂಬಲಾಗದಷ್ಟು ಸಹಾಯ ಮಾಡಬಲ್ಲದು. ನಮ್ಮ ಮೌಲ್ಯಗಳು ಮತ್ತು ನಂಬಿಕೆಗಳನ್ನು ಹಂಚಿಕೊಳ್ಳುವ ಜನರೊಂದಿಗೆ ನಾವು ಸಮಯ ಕಳೆಯುವಾಗ, ನಮ್ಮ ನಂಬಿಕೆಯಲ್ಲಿ ನಾವು ಪ್ರೋತ್ಸಾಹಿಸಲ್ಪಡುವಂತ ಮತ್ತು ಸವಾಲುಗಳನ್ನು ಎದುರಿಸುವಂತ  ಸಾಧ್ಯತೆ ಹೆಚ್ಚು. 

ನಮಗೆ ಬೆಂಬಲ ನೀಡುವ ಸಮುದಾಯದ ಭಾಗವಾಗಿರುವುದು (ಉದಾಹರಣೆಗೆ, J-12 ನಾಯಕರ  ಅಡಿಯಲ್ಲಿರುವುದು) ನಾವು ಜವಾಬ್ದಾರಿಯುತವಾಗಿರುವಂತೆಯೂ  ಮತ್ತು ದೇವರ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವಂತೆಯೂ ನಮಗೆ  ಸಹಾಯ ಮಾಡಿ  ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಾವು ಇನ್ನಷ್ಟು ಯಶಸ್ಸು ಪಡೆಯಲು ಕಾರಣವಾಗಬಹುದು. ಆದ್ದರಿಂದ, ನಮ್ಮ ಮನಸ್ಸನ್ನು ಶಿಸ್ತುಬದ್ಧಗೊಳಿಸುವುದು, ನಮ್ಮ ಕಣ್ಣುಗಳು, ಕಿವಿಗಳು ಮತ್ತು ಹೃದಯಗಳನ್ನು ಕಾಪಾಡುವಂತದ್ದು  ಮತ್ತು ದೇವರ ವಾಕ್ಯದ ಸತ್ಯದ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವಂತದನ್ನು ನಮ್ಮ ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಳ್ಳೋಣ. ಹಾಗೆ ಮಾಡುವಾಗ, ನಮ್ಮನ್ನು ಪ್ರೀತಿಸುವ ಮತ್ತು ಯಾವಾಗಲೂ ನಮ್ಮೊಂದಿಗೆ ಇರುವ ದೇವರನ್ನು ನಾವು ಸೇವಿಸುತ್ತಿದ್ದೇವೆ  ಎಂದು ತಿಳಿದುಕೊಳ್ಳುವುದರಿಂದ ದೊರಕುವ ಶಾಂತಿ ಮತ್ತು ಸಂತೋಷವನ್ನು ನಾವು ಅನುಭವಿಸಬಹುದು.

Bible Reading: 1 Kings 1-2
Prayer
ಕರ್ತನ ವಾಕ್ಯವು ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರುವಂತದ್ದು  ಮತ್ತು ಪ್ರಾಬಲ್ಯ ಸಾಧಿಸುವಂತದ್ದು ಆಗಿದೆ. ಅದು ಎಲ್ಲಾ ಸಮಯದಲ್ಲೂ ನೀತಿಯ ಕಾರ್ಯವನ್ನೇ ಮಾಡುವ ಸಾಮರ್ಥ್ಯವನ್ನು ನನ್ನಲ್ಲಿ ಉತ್ಪಾದಿಸುತ್ತದೆ. ನನ್ನ ಜೀವನವು ಕ್ರಿಸ್ತನ ಸೌಂದರ್ಯ ಮತ್ತು ಶ್ರೇಷ್ಠತೆಯ ಪ್ರತಿಬಿಂಬವಾಗಿರುವುದರಿಂದ ಲೋಕ ಮತ್ತು ಅದರ ನಕಾರಾತ್ಮಕತೆಯು ನನ್ನ ಆಲೋಚನೆಯ ಮೇಲೆ ಯಾವ ಪ್ರಭಾವವನ್ನೂ ಬೀರಲು ಸಾಧ್ಯವಿಲ್ಲ! ನನ್ನ ಪ್ರತಿಯೊಂದು ಆಲೋಚನೆಗಳು ಆತನಿಗೆ ಮಹಿಮೆ, ಗೌರವ ಮತ್ತು ಸ್ತುತಿಯನ್ನು ತರುತ್ತದೆ ಎಂದು ಯೇಸುನಾಮದಲ್ಲಿ ಆಲೋಚಿಸುತ್ತೇನೆ.


Join our WhatsApp Channel


Most Read
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರ ವಾಕ್ಯದಲ್ಲಿರುವ ನಂಬಿಗಸ್ಥಿಕೆ
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಕರ್ತನ ಸೇವೆ ಮಾಡುವುದು ಎಂದರೇನು II
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login