हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ತಂದೆಯ ಹೃದಯ
Daily Manna

ತಂದೆಯ ಹೃದಯ

Wednesday, 15th of October 2025
3 1 175
Categories : ದೇವರ ಪ್ರೀತಿ (Love of God)
"ಪ್ರೀತಿ ಇಲ್ಲದವನು ದೇವರನ್ನು ಬಲ್ಲವನಲ್ಲ. ಏಕೆಂದರೆ ದೇವರು ಪ್ರೀತಿಯಾಗಿದ್ದಾನೆ".(1 ಯೋಹಾನ 4:8) 

ನೀವು ದೇವರನ್ನು ಹೇಗೆ ಗ್ರಹಿಸುತ್ತೀರಿ? 
ಆತನು ಮರೆಯಲ್ಲಿ ಅಡಗಿಕೊಂಡು, ಪಾಪದ ಕೃತ್ಯದಲ್ಲಿ ನೀವು ಸಿಕ್ಕಿಬೀಳುವಾಗ ನಿಮ್ಮನ್ನು ಹಿಡಿಯಲು ಸಿದ್ಧರಾಗಿರುವ ಸರ್ವಾಧಿಕಾರಿ ರೀತಿಯ ವ್ಯಕ್ತಿಯೇ? ಅಥವಾ ಆತನು, ಪ್ರತಿ ತಿರುವಿನಲ್ಲಿಯೂ ನಿಮ್ಮನ್ನು ಅಪ್ಪಿಕೊಳ್ಳುತ್ತಿರುವ ಪ್ರೀತಿಯ ತಂದೆಯೇ? ಸಂಪ್ರದಾಯಗಳು ಮತ್ತು ನಿಯಮಗಳನ್ನು ಮೀರಿ ಶತಮಾನಗಳವರೆಗೆ,  - ಕಠಿಣ ಆಜ್ಞೆಗಳು ಮತ್ತು ತೀರ್ಪುಗಳ ದೇವರು, ಪವಿತ್ರ, ಅತಿ ಪವಿತ್ರ ಸ್ಥಳದ ರಹಸ್ಯದಿಂದ ಆವೃತವಾಗಿ, ಕೆರೂಬಿಗಳು ಮತ್ತು ಉರಿಯುವ ಧೂಪದ್ರವ್ಯದಿಂದ ಸುತ್ತುವರೆದಿದ್ದ ಹಾಗೇ ಯಹೂದಿ ಜನರು ಮೋಶೆಯ ಧರ್ಮಶಾಸ್ತ್ರದ ಮಸೂರದ ಮೂಲಕ ದೇವರನ್ನು ನೋಡಿದರು. 

ಅವರಿಗೆ ದೇವರ ಪ್ರಕಟಣೆಯು ಪ್ರೀತಿಯಾಗಿ ಅಥವಾ ತಂದೆಯಾಗಿ ಇರಲಿಲ್ಲ. 
ಕರ್ತನಾದ ಯೇಸು ತನ್ನ ಸೇವೆಯನ್ನು ಪ್ರಾರಂಭಿಸಿದಾಗ, ಆತನು ಈ ನಿರೂಪಣೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದನು. ಆತನು ದೇವರನ್ನು 'ತಂದೆ' ಎಂದು ಕರೆದು, ಧರ್ಮಶಾಸ್ತ್ರ ಮತ್ತು ಯಜ್ಞಗಳ ಚೌಕಟ್ಟಿನೊಳಗೆ ಮಾತ್ರ ದೇವರನ್ನು ಅರ್ಥಮಾಡಿಕೊಂಡವರನ್ನು ಆತನು ಬೆರಗುಗೊಳಿಸಿದನು.

ಇದ್ದಕ್ಕಿದ್ದಂತೆ, ಇಲ್ಲಿ ದೇವರು ನರಾವಾತಾರ ತಾಳಿ ಬ್ರಹ್ಮಾಂಡದ ಸೃಷ್ಟಿಕರ್ತನನ್ನು 'ತಂದೆ' ಎಂದು ಕರೆದನು. "ಆದರೆ ಆತನನ್ನು ಅಂಗೀಕರಿಸಿದ ಎಲ್ಲರಿಗೂ, ಆತನ ಹೆಸರಿನಲ್ಲಿ ನಂಬಿಕೆಯಿಟ್ಟವರೆಲ್ಲರಿಗೂ ಆತನು ದೇವರ ಮಕ್ಕಳಾಗುವ ಹಕ್ಕನ್ನು ಕೊಟ್ಟನು." (ಯೋಹಾನ 1:12)

ಗುಣಪಡಿಸುವ ಪ್ರೀತಿ
ಲೂಕ 13 ರಲ್ಲಿ, ಕರ್ತನಾದ ಯೇಸು ಹದಿನೆಂಟು ವರ್ಷಗಳಿಂದ ಗೂನೂ ಬೆನ್ನಿದ್ದ ಸ್ತ್ರೀಯನ್ನು ಭೇಟಿಯಾಗುತ್ತಾನೆ. ಧಾರ್ಮಿಕ ಸಂಪ್ರದಾಯವು ಸಬ್ಬತ್ ದಿನದಂದು ಅಂತಹ ಗುಣಪಡಿಸುವ ಕ್ರಿಯೆಯನ್ನು ದೂರವಿಡುತ್ತಿದ್ದರೂ, ಯೇಸು ಆ ನಿಯಮಗಳನ್ನೆಲ್ಲ ಉಲ್ಲಂಘಿಸಿ. ಆತನು ಅವಳನ್ನು ನೋಡಿ, ಅವಳನ್ನು ಮುಟ್ಟಿ ಅವಳನ್ನು ಗುಣಪಡಿಸಿದನು. ಈ ತನ್ನ ಕ್ರಿಯೆಯಲ್ಲಿ, ಯೇಸು ತಂದೆಯ -ಶುದ್ಧ, ಬೇಷರತ್ತಾದ ಪ್ರೀತಿಯ ಹೃದಯವನ್ನು ಪ್ರಕಟ ಪಡಿಸಿದನು . 

"ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ. ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅನ್ಯಾಯದಲ್ಲಿ ಸಂತೋಷಪಡುವುದಿಲ್ಲ ಆದರೆ ಸತ್ಯದಲ್ಲಿ ಸಂತೋಷಪಡುತ್ತದೆ. ಎಲ್ಲವನ್ನು ತಾಳಿಕೊಳ್ಳುತ್ತದೆ. ಎಲ್ಲವನ್ನು ನಂಬುತ್ತದೆ. ಎಲ್ಲವನ್ನು ನಿರೀಕ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ". (1 ಕೊರಿಂಥ 13:4-7) 

ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ ಕ್ರೋಧಗೊಂಡ ಸಭಾಮಂದಿರದ ನಾಯಕನಿಗೆ ಯೇಸುವಿನ ಗದರಿಸುವಿಕೆಯು ಧಾರ್ಮಿಕ ಸಂಪ್ರದಾಯದ ಕಾರಣದಿಂದಾಗಿ ಪ್ರೀತಿಯನ್ನು ತಡೆಹಿಡಿಯುವ ಅಸಂಬದ್ಧತೆಯನ್ನು ಎತ್ತಿ ತೋರಿಸುತ್ತದೆ.ಆದರೆ ಯೇಸು"......ಈ ಸ್ತ್ರೀಯನ್ನು... ಸಬ್ಬತ್ ದಿನದಂದು ಈ ಬಂಧದಿಂದ ಬಿಡುಗಡೆ ಮಾಡಬೇಕಲ್ಲವೇ?" ಎನ್ನುವಾಗ ಇಲ್ಲಿ, ದೇವರ ಪ್ರೀತಿಗೆ ಯಾವುದೇ ಮಾನವ ನಿಯಮಗಳು ಅಥವಾ ಧರ್ಮಶಾಸ್ತ್ರವೂ ಅಡ್ಡಿಯಾಗುವುದಿಲ್ಲ ಎಂದು ಯೇಸು ನಮಗೆ ತೋರಿಸಿದನು.

"ಹೇಗೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ,  ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ." (ರೋಮ8:38-39)

ಪ್ರಾಯೋಗಿಕ ಹಂತಗಳು: 
1. ದೇವರ ಕುರಿತಾದ ನಿಮ್ಮ ದೃಷ್ಟಿಕೋನವನ್ನು ಮರುಪರಿಶೀಲಿಸಿ: ನಿಮ್ಮ ಗ್ರಹಿಕೆ  ಆತನ ಪ್ರೀತಿ ಆಧಾರಿತವಾಗಿದೆಯೇ ಅಥವಾ ನಿಯಮಗಳ ಮೇಲೆಯೋ ? 
2. ದೇವರ ಪ್ರೀತಿಯನ್ನು ಪ್ರತಿಬಿಂಬಿಸಿ: ದೇವರು ನಮ್ಮನ್ನು ಪ್ರೀತಿಸುವಂತೆ ಇತರರನ್ನು ಬೇಷರತ್ತಾಗಿ ಪ್ರೀತಿಸಬೇಕೆಂದು ಸ್ಪಷ್ಟವಾದ ಕ್ರಮಗಳನ್ನು ತೆಗೆದುಕೊಳ್ಳಿ. 
3. ಅಡೆತಡೆಗಳನ್ನು ಮುರಿಯಿರಿ: ದೇವರ ಪ್ರೀತಿಯನ್ನು ಪ್ರಕಟ ಪಡಿಸಲು ಅಡ್ಡಿಯಾಗುವ ಯಾವುದೇ ಆದರೂ ಅವುಗಳನ್ನು ನಿಮ್ಮ ಜೀವನದಲ್ಲಿ ಗುರುತಿಸಿ  ತೆಗೆದುಹಾಕಿ. ಯೇಸುವಿನಿಂದ ಪ್ರಕಟಪಡಿಸಲ್ಪಟ್ಟ ದೇವರು ನಮಗೆ ದೂರದ ದೇವರಲ್ಲ; ಆತನು ಪ್ರೀತಿಯ ತಂದೆಯಾಗಿದ್ದಾನೆ ಆತನ ಹೃದಯವು ತನ್ನ ಮಕ್ಕಳ ಮೇಲಿನ ಪ್ರೀತಿಯಿಂದ ತುಂಬಿರುತ್ತದೆ. ಇದು ತಾರತಮ್ಯ ಮಾಡದ, 'ಸರಿಯಾದ ಸಮಯ'ಕ್ಕಾಗಿ ಕಾಯುತ್ತಾ ಕೂರದ ಮತ್ತು ಯಾವುದೇ ಅಡೆತಡೆಗಳನ್ನು ತಿಳಿದಿಲ್ಲದ ಪ್ರೀತಿ. 

ಇಂದು, ದೇವರ ಸ್ವಭಾವದ ಈ ಪ್ರಬಲ ಪ್ರಕಟಣೆಯನ್ನು ಸ್ವೀಕರಿಸೋಣ ಮತ್ತು ಅದರ ಅಗತ್ಯವಿರುವ ಜಗತ್ತಿನಲ್ಲಿ ಆತನ ಪ್ರೀತಿಯ ವಾಹಕರಾಗಲು ಶ್ರಮಿಸೋಣ. ಆಮೆನ್. 

Bible Reading: Matthew 18-20

Hear the Daily Manna in Audio

Prayer
ತಂದೆಯೇ, ಮಾನವ ಅಡೆತಡೆಗಳು ಮತ್ತು ಸಂಪ್ರದಾಯಗಳನ್ನು ಧಿಕ್ಕರಿಸುವ ನಿನ್ನ ಮಿತಿಯಿಲ್ಲದ ಪ್ರೀತಿಯನ್ನು ನೋಡುವಂತೆ ನಮ್ಮ ಕಣ್ಣುಗಳನ್ನು ತೆರೆಯಿರಿ. ನಮ್ಮ ಹೃದಯಗಳನ್ನು ನಿನ್ನ ದೈವಿಕ ಪ್ರೀತಿಯ ವಾಹಕಗಳಾಗಿ ಪರಿವರ್ತಿಸಿ ಮತ್ತು ಅದರ ಹರಿವಿಗೆ ಅಡ್ಡಿಯಾಗುವ ಯಾವುದಾದರೂ ನಮ್ಮೊಳಗೆ ಇದ್ದರೆ ಅದನ್ನು ಯೇಸುನಾಮದಲ್ಲಿ ಕೆಡವಿ. ಇಂದು ಮತ್ತು ಯಾವಾಗಲೂ ನಿನ್ನ ನೂತನ ಪ್ರಕಟಣೆಗಳು ಯೇಸುನಾಮದಲ್ಲಿ ನಮಗೆ ದೊರೆಯಲಿ. ಆಮೆನ್.

Join our WhatsApp Channel


Most Read
● ಕೆಂಪು ದೀಪದ ಎಚ್ಚರಿಕೆ ಗಂಟೆ
● ಆತ್ಮನ ಎಲ್ಲಾ ವರಗಳನ್ನು ನಾನು ಬಯಸಬಹುದೇ?
● ಬೇಸರ - ಮುಕ್ತ ಜೀವನವನ್ನು ನಡೆಸುವುದು
● ಬಾಗಿಲನ್ನು ಮುಚ್ಚಿರಿ.
● ಶ್ರೇಷ್ಠತೆಯನ್ನು ಸಾಧಿಸುವುದು ಹೇಗೆ?
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -3
● ದುಃಖದಿಂದ ಕೃಪೆಯ ಕಡೆಗೆ ಸಾಗುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login