हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಬೇಸರ - ಮುಕ್ತ ಜೀವನವನ್ನು ನಡೆಸುವುದು
Daily Manna

ಬೇಸರ - ಮುಕ್ತ ಜೀವನವನ್ನು ನಡೆಸುವುದು

Friday, 14th of February 2025
3 1 154
Categories : ಅಪರಾಧ (offence) ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ನನ್ನ ವಿಷಯದಲ್ಲಿ ಬೇಸರಗೊಳ್ಳದವನೇ ಧನ್ಯನು ಎಂದು ಹೇಳಿದನು".(ಮತ್ತಾಯ  11:6) 

ಕೊನೆಯದಾಗಿ ಯಾವಾಗ ಯಾರಾದರೂ ನಿಮ್ಮನ್ನು ಬೇಸರ   ಪಡಿಸಿದರು  ? ಯಾರೂ ಸಹ ನಿಮ್ಮನ್ನು  ಬೇಸರ ಪಡಿಸದೆ  ಭೂಮಿಯ ಮೇಲೆ ನೀವು  ಬದುಕಲು ಸಾಧ್ಯವೇ? ಲೂಕ 17:1 ರಲ್ಲಿ ಯೇಸು ಒಂದು ಗಮನಾರ್ಹವಾದ ಹೇಳಿಕೆಯನ್ನು ನೀಡಿದನು, " ಆತನು ತನ್ನ ಶಿಷ್ಯರಿಗೆ - ಬೇಸರ ಪಡಿಸುವ ಮಾತುಗಳು ಬಾರದೆ ಇರಲಾರವು; ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ?  " ಬೇಸರಗಳು ಬಾರದಂತೆ  ಇರಲು ನೀವು ಎಲ್ಲರಿಂದ ದೂರ ಹೋಗಿ ಬದುಕಬೇಕು. ಬಹುಶಃ ಯಾವ  ಜನರು ನಿಮ್ಮನ್ನು ಬೇಸರ ಪಡಿಸಬಾರದೆಂದು  ನೀವು ಬಯಸುವವರಾದರೆ  ನೀವು ದೂರದ ಒಂದು ದ್ವೀಪಕ್ಕೆ ಸ್ಥಳಾಂತರಗೊಳ್ಳಬಹುದು. ಅಲ್ಲಿಯೂ ಸಹ, ರಾತ್ರಿಯಲ್ಲಿ ನೀವು ಸ್ವಲ್ಪ ನಿದ್ರೆ ಪಡೆಯಲು ಪ್ರಯತ್ನಿಸುತ್ತಿರುವಾಗ ಪಕ್ಷಿಗಳು ನಿಮ್ಮ ಕಿಟಕಿಯ ಹಿಂದೆ ಚಿಲಿ  ಪಿಲಿ ಮಾಡಿ  ನಿಮ್ಮ ನಿದ್ದೆಗೆ ಭಂಗ ತಂದು ನಿಮ್ಮನ್ನು ಬೇಸರಗೊಳಿಸುತ್ತದೆ. ಬೇಸರ ಉಂಟಾಗುವಂತದ್ದು  ಜೀವನದ ಒಂದು ಭಾಗವಾಗಿದೆ ಎಂಬುದನ್ನು  ಇದು ತೋರಿಸುತ್ತದೆ, ಆದ್ದರಿಂದ ಅವುಗಳನ್ನು ತಪ್ಪಿಸಿಕೊಳ್ಳುವ  ಬದಲು, ನಾವು ಅವುಗಳನ್ನು ನಿರ್ವಹಿಸಲು ಕಲಿಯಬೇಕು.

ಪರ್ಷಿಯನ್ನರ ರಾಜನನ್ನು ಪ್ರೀತಿಸಬಾರದು ಎಂಬುದಕ್ಕೆ  ಎಸ್ತರಳು ಎಲ್ಲಾ ವಿಧವಾದ ಕಾರಣಗಳನ್ನು ಹೊಂದಿದ್ದಳು. ಯಾಕೆಂದರೆ ಅವಳೊಬ್ಬ  ಯಹೂದಿ ಕನ್ಯೆಯಾಗಿದ್ದಳು. ಆದರೆ ಅಹಶ್ವರೋಷನು ಒಬ್ಬ ಯಹೂದಿಯಾಗಿರಲಿಲ್ಲ. ಆಕೆಯ ಪೋಷಕರು ಪರ್ಷಿಯಾದದವರ ಬಲಾತ್ಕಾರಕ್ಕೆ ಸಿಕ್ಕಿ  ಸತ್ತುಹೋಗಿದ್ದರು. ಅರಸನಾದ ನೆಬುಕಾದ್ನೇಚ್ಚರನ ಆಳ್ವಿಕೆಯಲ್ಲಿ ಬಾಬೆಲಿಗೆ ಸೆರೆಒಯ್ಯಲ್ಪಟ್ಟ ಯೆಹೂದ್ಯರಲ್ಲಿ ಅವರು ಸಹ ಖಂಡಿತವಾಗಿಯೂ ಇದ್ದರು ಮತ್ತು ಪರ್ಷಿಯಾದ ಅರಸ ಸೈರಸ್ ಬಾಬೇಲಿನವರನ್ನು ವಶಪಡಿಸಿಕೊಂಡಾಗ ಅವರೆಲ್ಲಾ ಇವರೊಂದಿಗೆ ಹೊಂದಿ ಕೊಂಡು ಇರಬೇಕೆಂದು ಒತ್ತಾಯಿಸಲ್ಪಟ್ಟರು. ಈ ಎಲ್ಲ ಕಾರಣಗಳಿಂದ , ಅವಳು ಸುಲಭವಾಗಿ ಬೇಸರಗೊಳ್ಳುವ ಆತ್ಮವನ್ನು  ಹೊಂದಬಹುದಿತ್ತು ಬೇಸರಗೊಂಡಿರುವುದರ ಒಂದು  ಲಕ್ಷಣ ಎಂದರೆ ನೀವು ಅದನ್ನು ಮರೆಮಾಡಲು ಎಷ್ಟೇ ಪ್ರಯತ್ನಿಸಿದರೂ ಅದು ನಿಮ್ಮ ಮುಖದ ಮೇಲೆಯೂ  ಮತ್ತು ನಿಮ್ಮ ಕಾರ್ಯಗಳಲ್ಲಿಯೂ ಎದ್ದು  ತೋರುತ್ತದೆ.  ಆದರೆ ಎಸ್ತರಳು ಆ ಬೇಸರದ ಆತ್ಮವು ತನ್ನ ಮೇಲೆ ಹಿಡಿತ ಸಾಧಿಸಲು  ಅನುಮತಿಸಲಿಲ್ಲ. 

ಅವಳು ತನ್ನ ಜನರ ವಿರುದ್ಧ ಆ ಜನರು ನಡೆಸಿದ  ಅಂತಹ ಭಯಾನಕ ಕೃತ್ಯಕ್ಕಾಗಿ  ಸಾಮ್ರಾಜ್ಯದ ಮೇಲೆ ಸೇಡು ತೀರಿಸಿಕೊಳ್ಳಬಹುದೆಂತಲೂ,  ಅವಳು ತನ್ನ ಅಧಿಕಾರ ಚಲಾಯಿಸಿ  ಉನ್ನತ ಸ್ಥಾನದಲ್ಲಿದ್ದು ಸೆರೆಯಲ್ಲಿರುವ ತನಗೆ ಬೇಕಾದ ಯಾರನ್ನಾದರೂ ಬಿಡಿಸಬಹುದೆಂತಲೂ  ಆಕೆ ಸೌಂಧರ್ಯಸ್ಪರ್ಧೆಗೆ ಸೇರಲು ನಿರ್ಧರಿಸಬಹುದಿತ್ತು.  ಆದರೆ ಅವಳು ಹಾಗೆ ಮಾಡಲಿಲ್ಲ. ಈ ಅದ್ಭುತ ಸ್ತ್ರೀಯು ಭೂತಕಾಲದಲ್ಲಾದ  ಎಲ್ಲವನ್ನೂ ಮರೆತು ವರ್ತಮಾನವನ್ನು ಎದುರಿಸಿದಳು. ಅವಳು ಹಿಂದೆ ತಮಗಾದ ಎಲ್ಲಾ  ದುಷ್ಕೃತ್ಯಗಳನ್ನು ಮರೆತುಬಿಟ್ಟು ಪ್ರಸ್ತುತ ದೇವರ ಕಾರ್ಯಸೂಚಿಯ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದಳು.

ಈ ಹಿಂದೆ ನಿಮಗೆ  ನೋವುಂಟು  ಮಾಡಿದವರನ್ನು , ಮತ್ತೆಂದಿಗೂ  ಯಾವುದೇ ಸಂಬಂಧವನ್ನು ಅವರೊಂದಿಗೆ ಹೊಂದುಕೊಳ್ಳುವುದಿಲ್ಲ ಎಂದು ನೀವು ಪ್ರತಿಜ್ಞೆ ಮಾಡಿದ್ದೀರಾ? ಅದು ಸುಲಭವೇ, ಅಲ್ಲವೇ? ವಾಸ್ತವವಾಗಿ, ನೀವು ಅಂತಹ ಜನರೊಂದಿಗಿನ ಸಂಪರ್ಕವನ್ನು  ಕತ್ತರಿಸಿಕೊಂಡರೇನೇ ಒಳ್ಳೆಯದು ಎಂದು ಜನರು ನಿಮಗೆ ಸಲಹೆ ನೀಡುತ್ತಾರೆ. ಆಗ ನೀವು ಪ್ರತಿ ದಿನವೂ ಆ ಗಾಯದ ಬಗ್ಗೆಯೇ ಯೋಚಿಸುತ್ತಿದ್ದು ಆ ಗಾಯವು ಪ್ರತಿದಿನ ತಾಜಾವಾಗುತ್ತಲೇ ಹೋಗುತ್ತದೆ. ಅವರಿಂದಾದ  ನೋವಿನ ಕಾರಣದಿಂದ  ನಾವು ಆ ನೋವುಂಟು ಮಾಡಿದವರಿಗೆ ಸಂಬಂಧಪಟ್ಟ  ಪ್ರತಿಯೊಂದು ಸಂಬಂಧವನ್ನು ಮುರಿದುಕೊಳ್ಳಲು  ಮತ್ತು ಅವರ ನೆನಪನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತೇವೆ. 

ನನ್ನ ಸ್ನೇಹಿತನೇ , ನೀನು  ನಿಜವಾಗಿಯೂ ನೊಂದಿದ್ದೀಯ  ಎಂದು ನನಗೆ ಗೊತ್ತು ಹಾಗೆಯೇ ಅವರು ಮಾಡಿದ್ದು ತಪ್ಪೇ ಎಂಬುದನ್ನೂ  ನಾನು ಅರ್ಥಮಾಡಿಕೊಂಡಿದ್ದೇನೆ. ಅವರು ನಿನ್ನನ್ನು ತೊರೆದು ಹೋದಾಗ ನೀನು ಎಷ್ಟು ಕಳೆದುಹೋಗಿದ್ದೆ  ಎಂಬುದೂ ನನಗೆ ತಿಳಿದಿದೆ. ನೀವು ಸರಿ ಹೋಗಲು ಎಷ್ಟು ವರ್ಷಗಳು ಬೇಕಾಯಿತು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ಛಿದ್ರ ಛಿದ್ರವಾದ ಮನಸನ್ನು  ಹೆಕ್ಕಿ ಬದುಕುವುದು ಸುಲಭವಲ್ಲ ಎಂಬುದನ್ನೂ  ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಹಾಗೆಯೇ ನೀನು  ಅದನ್ನೆಲ್ಲ ಮರೆತು ಮುಂದೆ ಸಾಗಬಹುದು ಎಂಬುದೂ  ನನಗೆ ತಿಳಿದಿದೆ. 

ಹೆಚ್ಚಿನ ಜನರು ಬೇಸರಿಕೆಯನ್ನು ಬಿಡದಿದ್ದಾಗ ಅವರು ಎಲ್ಲಾ ಮರೆತು ಮುಂದೆ ಸಾಗುತ್ತಿದ್ದೇನೆ ಎಂದು ಹೇಳುತ್ತಾರೆ. ಬ್ಯಾಂಡೇಜ್ ತೆಗೆದಾಗ ನೀವು ಇನ್ನು ಮುಂದೆ ನೋವನ್ನು ಅನುಭವಿಸಿದೇ ಹೋದರೆ ನೀವು ಗುಣಮುಖರಾಗಿದ್ದೀರಿ ಎಂದು ನಿಮಗೆ ತಿಳಿಯುತ್ತದೆ . ಆದರೆ ಅದೇ  ಗಾಯವು ತೆರೆದುಕೊಂಡರೆ  ನಿಮಗೆ ಹೇಗೆ ಅನಿಸುತ್ತದೆ? ಇದು ಮನ್ನಿಸಿ ಬಿಡುವ ಸಮಯ. 

ನೋಡಿ, ದೇವರು ನಿಮಗಾಗಿ ಅಗಾಧ ಸಂಗತಿಗಳನ್ನು ಇಟ್ಟಿದ್ದಾನೆ. ಎಸ್ತರಳು  ಆ ಬೇಸರದಲ್ಲೇ ಬದುಕುತ್ತಿದ್ದು  ಅದನ್ನು ಮನ್ನಿಸಿರಲಿಲ್ಲ ಎಂದು ಊಹಿಸಿ ನೋಡಿ . ಅವಳು ರಾಣಿಯಾಗುವುದು ಹೇಗೆ ಸಾಧ್ಯವಾಗುತಿತ್ತು? ಅವಳಲ್ಲಿರುವ ಬೇಸರಿಕೆಯ ಆತ್ಮವು ಅವಳನ್ನು ಮೊದಲ ಸ್ಥಾನದಲ್ಲಿ ಸ್ಪರ್ಧಿಸದಂತೆ ತಡೆಯುತ್ತಾ , ಗೆಲ್ಲಲು ಮಾಡಬೇಕಾದ ಪ್ರಯತ್ನವನ್ನೇ ಬಿಟ್ಟುಬಿಡುತ್ತಿದ್ದಳು. ಆದರೆ ಅವಳು ಅದನ್ನು ಮನ್ನಿಸಿದಳು. ಅವಳು ಆ ಆತ್ಮವನ್ನು ಜಯಿಸಿ, ಅವಳ ಹೃದಯದಲ್ಲಿ ಕ್ಷಮೆಯ ತಂಗಾಳಿಯನ್ನು ಬೀಸಲು ಅವಕಾಶ ಮಾಡಿಕೊಟ್ಟಳು. ಸ್ನೇಹಿತನೇ, ದೇವರು ನಿನಗಾಗಿ ಯಾವುದೋ ದೊಡ್ಡ ಕಾರ್ಯ ಮಾಡುತ್ತಿದ್ದಾನೆ. ಈ ನೋವು ಮತ್ತು ಬೇಸರಿಕೆ ಆ ಪ್ರಕ್ರಿಯೆಯ ಭಾಗವಾಗಿದೆ ಅಷ್ಟೇ. ದೇವರ ಉದ್ದೇಶವು ನೆರವೇರಲು ಕೆಲವು ಜನರು ನಮ್ಮ ಜೀವಿತದಿಂದ  ಹೋಗಲೇಬೇಕು.

ನೀವು ಎಂದಾದರೂ ರಾಕೆಟ್ ಉಡಾಯನಕ್ಕೆ  ಸಾಕ್ಷಿಯಾಗಿದ್ದೀರಾ? ನೀವು ಅದನ್ನು  ಒಮ್ಮೆಯಾದರೂ ಆನ್‌ಲೈನ್‌ನಲ್ಲಿ ಪರಿಶೀಲಿಸಬೇಕು ಎಂದು ನಾನು ಭಾವಿಸುತ್ತೇನೆ. ನೆಲದ ಮೇಲೆ ಇರುವಾಗ, ಅದರೊಂದಿಗೆ ಹಲವಾರು ಸಾಮಗ್ರಿಗಳು ಅದಕ್ಕೆ ಲಗತ್ತಿಸಲ್ಪಟ್ಟಿರುತ್ತವೆ, ಆದರೆ ಅದು ಎತ್ತರ- ಎತ್ತರಕ್ಕೆ ಹಾರಲು ಆರಂಭಿಸುವಾಗ, ಅದಕ್ಕೆ ಲಗತ್ತಿಸಿದ  ನೋದಕವು ಬೀಳಲು ಪ್ರಾರಂಭಿಸುತ್ತದೆ ಅದರಿಂದಾಗಿ ಅದು ಹೆಚ್ಚಿನ ಹೊರೆಯಿಲ್ಲದೇ ಮತ್ತಷ್ಟು ಎತ್ತರಕ್ಕೆ ಏರಲು  ಸಾಧ್ಯವಾಗುತ್ತದೆ. ಹಾಗೆಯೇ ನೀವು ಬೇಸರಿಕೆಯ ಸಂಗತಿಗಳನ್ನೆಲ್ಲ ಮನ್ನಿಸಿ ಮುನ್ನಡೆಯುವಾಗ ಯಾವುದೇ ಹತ್ತಿಕ್ಕುವ ಭಾರವಿಲ್ಲದೆ ನೀವು ಆತ್ಮೀಕ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾ ಹೋಗಬಹುದು. ಐಗುಪ್ತದ ಸಿಂಹಾಸನವನ್ನು ಏರಲು ಯೋಸೆಫನು ತನಗಾದ ನೋವುಗಳನ್ನು ಮನ್ನಿಸಬೇಕಾಯಿತು. ಹಾಗೆಯೇ ದೇವರು ಸಹ  ನಿಮಗಾಗಿ ಸಿಂಹಾಸನವನ್ನು ಸಿದ್ಧಪಡಿಸಿದ್ದಾನೆ, ಆದರೆ ನೀವು ಅದನ್ನು ಹೊಂದಿಕೊಳ್ಳಲು ನಿಮಗೆ ಬೇಸರಗೊಳಿಸಿದ ವ್ಯಕ್ತಿಗಳನ್ನು ಮನ್ನಿಸಬೇಕು. ಇಂದೇ  ಆ ವ್ಯಕ್ತಿಗೆ ಕರೆ ಮಾಡಿ. ಇಂದು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಸಮಾಧಾನ ಮಾಡಿಕೊಳ್ಳಿ. ಇದರಿಂದ ನೀವು ಈ ವರ್ಷ ನಿಮ್ಮ ಜೀವನಕ್ಕಾಗಿ ದೇವರು ಇಟ್ಟಿರುವ  ಔನತ್ಯವನ್ನು ಏರಬಹುದು. 

Bible Reading: Numbers 3
Prayer
ತಂದೆಯೇ, ಇಂದಿನ ಭಕ್ತಿವೃದ್ಧಿವುಂಟುಮಾಡುವ ನಿನ್ನ ಸತ್ಯ ವಾಕ್ಯಕ್ಕಾಗಿ  ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ.ನನ್ನ ಹೃದಯವು  ಭಾರವಾಗಿ ನೋವುಗಳಿಂದ ತುಂಬಿ ಹೋಗಿದೆ  ಅದನ್ನು ಮರೆತು ಬಿಡಲು ನೀನು ನನಗೆ ಸಹಾಯ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಆದರೆ ಕೊನೆಯ ಬಾರಿಗೆ ಇಂದು ನಾನು  ಆ ಗಾಯಗಳನ್ನು ನಿನ್ನ ಮುಂದೆ ತೆರೆಯುತ್ತೇನೆ, ನೀನೇ ಅದನ್ನು ಸ್ವಸ್ಥಗೊಳಿಸಬೇಕಾಗಿ ಪ್ರಾರ್ಥಿಸುತ್ತೇನೆ. ಆ ಎಲ್ಲಾ ನೋವುಗಳನ್ನು ಮರೆತು ಬಿಟ್ಟು  ನಿನ್ನ ಪ್ರೀತಿಯಲ್ಲಿ ಬದುಕಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ನಾನು ಕಳೆದುಕೊಂಡಿದ್ದೆಲ್ಲವೂ ಇಂದು ಪುನಃಸ್ಥಾಪಿಸಲ್ಪಟ್ಟಿದೆ ಎಂದು ಯೇಸುನಾಮದಲ್ಲಿ ನಾನು ಘೋಷಿಸುತ್ತೇನೆ. ಆಮೆನ್ 

Join our WhatsApp Channel


Most Read
● ಯುದ್ಧಕ್ಕಾಗಿ ತರಬೇತಿ.
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದು
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
● ಆರಾಧನೆಯ ಪರಿಮಳ
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login