हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಪ್ರವಾದನಾ ವಾಕ್ಯವನ್ನು ಸ್ವೀಕರಿಸಿದ ನಂತರ ಏನು ಮಾಡಬೇಕು?
Daily Manna

ಪ್ರವಾದನಾ ವಾಕ್ಯವನ್ನು ಸ್ವೀಕರಿಸಿದ ನಂತರ ಏನು ಮಾಡಬೇಕು?

Friday, 1st of August 2025
1 0 42
Categories : ಪ್ರವಾದನ ವಾಕ್ಯ (Prophetic word)
ಪ್ರವಾದನಾ ವಾಕ್ಯವು ನಿಮ್ಮ ಮನರಂಜನೆಗಾಗಿ ಮಾತ್ರವಲ್ಲ. ಅದು ಪಕ್ಕಕ್ಕೆ ಇರಿಸಿ ಮರೆತುಬಿಡುವ ವಿಷಯವಲ್ಲ. ನಿಮ್ಮ ದಾರಿಯಲ್ಲಿ ಯಾವುದೇ ಪರ್ವತಗಳು ನಿಂತರೂ, ನೀವು ಸರಿಯಾದ ಹಾದಿಯಲ್ಲಿ ಉಳಿದುಕೊಳ್ಳುವಂತೆ ಅನುವು ಮಾಡಿಕೊಡಲು ಅದು ತಂದೆಯ ಹೃದಯದಿಂದ ಬಂದ ಸಂದೇಶವಾಗಿರುತ್ತದೆ. 

ವೈಯಕ್ತಿಕ ಪ್ರವಾದನೆಯನ್ನು ಸ್ವೀಕರಿಸುವುದು ಒಂದು ಶಕ್ತಿಶಾಲಿ ಮತ್ತು ಅದ್ಭುತ ಕ್ಷಣವಾಗಬಹುದು. ನೀವು ವೈಯಕ್ತಿಕ ಪ್ರವಾದನೆಯನ್ನು ಸ್ವೀಕರಿಸಿದಾಗ, ದೇವರು ನಿಮ್ಮನ್ನು ವೈಯಕ್ತಿಕವಾಗಿ ತಿಳಿದಿದ್ದಾನೆ ಮತ್ತು ನಿಮ್ಮ ಜೀವನಕ್ಕಾಗಿ ಒಂದು ಯೋಜನೆಯನ್ನು ಹೊಂದಿದ್ದಾನೆ ಎಂಬುದು ನಿಮಗೆ ನೆನಪಿಸಲಾಗುತ್ತದೆ. 

ನಾನು ವೈಯಕ್ತಿಕ ಪ್ರವಾದನಾ ವಾಕ್ಯ ಸ್ವೀಕರಿಸಿದ ನಂತರ ನಾನು ಏನು ಮಾಡಬೇಕು? 

ನಾನು ಇದನ್ನು ಹೇಳುವ ಮೊದಲು, ವೈಯಕ್ತಿಕ ಪ್ರವಾದನೆಯು ದೇವರು ಈಗಾಗಲೇ ನಿಮಗೆ ಏನು ತೋರಿಸುತ್ತಿದ್ದಾನೆ ಎಂಬುದರ ದೃಢೀಕರಣವಾಗಿದೆಯೇ ಹೊರತು ಮಾರ್ಗದರ್ಶನದ ಪ್ರಾಥಮಿಕ ಸಾಧನವಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ.

1. ನಿಮ್ಮ ವೈಯಕ್ತಿಕ ಪ್ರವಾದನೆಯನ್ನು ಬರೆಯಿರಿ ಅಥವಾ ದಾಖಲಿಸಿರಿ.
ಆಗ ಯೆಹೋವನು ನನಗೆ ಈ ಉತ್ತರವನ್ನು ದಯಪಾಲಿಸಿದನು, “ನಿನಗಾದ ದರ್ಶನವನ್ನು ಬರೆದಿಡು; ಓದುವವರು ಸುಲಭವಾಗಿ ಶೀಘ್ರವಾಗಿ ಓದಲು ಅನುಕೂಲವಾಗುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತಿಡು!  ಸೂಕ್ತ ಹಾಗು ನಿಯಮಿತ ಕಾಲದಲ್ಲಿ ಆ ದರ್ಶನದಲ್ಲಿ ಕಂಡದ್ದು ನೆರವೇರುವುದು, ಅದರ ಅಂತಿಮ ಪರಿಣಾಮ ಶೀಘ್ರದಲ್ಲೇ ಗೊತ್ತಾಗುವುದು. ತಡವಾದರೂ ಅದಕ್ಕೆ ಕಾದಿರು; ಅದು ಖಂಡಿತವಾಗಿ ಕೈಗೂಡುವುದು. (ಹಬಕ್ಕೂಕ 2:2-3)

ಹಬಕ್ಕೂಕನಿಗೆ ಅವನು ಸ್ವೀಕರಿಸಿದ ಪ್ರವಾದನಾ ವಾಕ್ಯವನ್ನು ಬರೆಯುವಂತೆ ಕರ್ತನು ಸೂಚಿಸಿದ್ದನು. ಅದೇ ರೀತಿ, ನಾವು ಪ್ರವಾದನಾ ವಾಕ್ಯವನ್ನು ಸ್ವೀಕರಿಸಿದಾಗ, ಆ ವಾಕ್ಯವನ್ನು ಬರೆದಿಡಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಇದು ಅದನ್ನು ನಿಖರವಾಗಿ ನೆನಪಿಟ್ಟುಕೊಳ್ಳಲು ಮತ್ತು ಅದು ಯಾವಾಗ ನಮ್ಮ ಜೀವನದಲ್ಲಿ ತೆರೆದುಕೊಳ್ಳುತ್ತದೆ ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ. 

2. ನಿಮ್ಮ ವೈಯಕ್ತಿಕ ಪ್ರವಾದನೆಯ ಕುರಿತು ಪ್ರಾರ್ಥಿಸಿ.
ಪ್ರವಾದನಾ ವಾಕ್ಯವನ್ನು ಸ್ವೀಕರಿಸಿದ ನಂತರ ಒಬ್ಬರು ಮಾಡಬಹುದಾದ ಮುಂದಿನ ಕೆಲಸವೆಂದರೆ ಪ್ರಾರ್ಥಿಸುವುದು. ಪ್ರಾರ್ಥನೆಯಲ್ಲಿ ಪ್ರವಾದನಾ ವಾಕ್ಯವನ್ನು ಕರ್ತನ ಬಳಿಗೆ ಕೊಂಡೊಯ್ಯಿರಿ. ಇದು ಆ ವಾಕ್ಯವು ಕರ್ತನಿಂದ ಬಂದಿದೆಯೇ ಎಂಬುದನ್ನು ದೃಢೀಕರಿಸುತ್ತದೆ. 

ಅಲ್ಲದೆ, ನೀವು ಸ್ವೀಕರಿಸಿದ ವಾಕ್ಯದ ಕುರಿತು ನೀವು ಹೇಗೆ ಹೋಗಬೇಕೆಂದು ಕರ್ತನು ನಿಮಗೆ ಒಳನೋಟಗಳನ್ನು ಮತ್ತು ಕ್ರಿಯಾ ಯೋಜನೆಯನ್ನು ನೀಡುವನು. 

3. ನಿಮ್ಮ ಪ್ರವಾದನೆಯೊಂದಿಗೆ ಆತ್ಮೀಕ ಹೋರಾಟವನ್ನು ಮಾಡಿ.
"ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ."  (1 ತಿಮೊಥೆಯ 1:18) 

ಅಪೊಸ್ತಲ ಪೌಲನು ತನ್ನ ಆತ್ಮೀಕ ಮಗನಾದ ತಿಮೊಥೆಯನಿಗೆ ತಾನು ಸ್ವೀಕರಿಸಿದ ಪ್ರವಾದನಾ ವಾಕ್ಯಗಳನ್ನು ನೆನಪಿಸಿದನು ಮತ್ತು ಅವನು ಸ್ವೀಕರಿಸಿದ ಪ್ರವಾದನಾ ವಾಕ್ಯಗಳನ್ನು ಹಿಡಿದುಕೊಂಡು ಆತ್ಮೀಕ ಹೋರಾಟವನ್ನು ಮಾಡುವಂತೆ ಅವನನ್ನು ಒತ್ತಾಯಿಸಿದನು.

ಒಬ್ಬ ವ್ಯಕ್ತಿಯು ಪ್ರವಾದನೆಯ ವಾಕ್ಯವನ್ನು ಸ್ವೀಕರಿಸಲು ಇರುವ ಒಂದು ಮುಖ್ಯವಾದ ಕಾರಣ;  ಪ್ರವಾದನಾ ವಾಕ್ಯ ಸ್ವೀಕರಿದವಳು/ ನು, ಆ ವಾಕ್ಯದ ಸಾಮರ್ಥ್ಯವನ್ನು ತಿಳಿದಿರುವ ವ್ಯಕ್ತಿಯ ವಿರುದ್ಧ ಶತ್ರು ಹೋರಾಡುವವನಾಗಿರುತ್ತಾನೆ . ಅಂತಹ ಸಮಯದಲ್ಲಿ, ವ್ಯಕ್ತಿಯು ತನ್ನ ಧೈರ್ಯವನ್ನು ಕರೆಯನ್ನು ಬಿಟ್ಟುಕೊಡಬಾರದು ಮತ್ತು ವಾಕ್ಯವನ್ನು ಬಂಧಿಸುವ ಅಂಧಕಾರ ಶಕ್ತಿಗಳ ವಿರುದ್ಧ ಹೋರಾಡಬೇಕಾಗುತ್ತದೆ. 

Bible Reading: Isaiah 31-34
Prayer
ತಂದೆಯೇ, ನಾನು ಸ್ವೀಕರಿಸಿದ ಪ್ರವಾದನಾ ವಾಕ್ಯಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ನನ್ನನ್ನು ಕ್ಷಮಿಸಿ. ಇಂದಿನ ಬೋಧನೆಯನ್ನು ಆಚರಣೆಗೆ ತರಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಆಮೆನ್.


Join our WhatsApp Channel


Most Read
● ಭಸ್ಮವಾಗುವಿಕೆಯ ( ಅತಿಯಾದ ಆಯಾಸದಿಂದಾಗುವ ದೈಹಿಕ ಬಳಲಿಕೆ ಮತ್ತು ಮಾನಸಿಕ ಖಿನ್ನತೆ) ವ್ಯಾಖ್ಯಾನ
● ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೈವೀಕ ಅನುಕ್ರಮ -2
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -3
● ನಿಮ್ಮ ಮಾರ್ಗದರ್ಶಕರು ಯಾರು - II
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login