हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಪ್ರತಿಫಲ ನೀಡುವವನು ದೇವರೇ
Daily Manna

ಪ್ರತಿಫಲ ನೀಡುವವನು ದೇವರೇ

Wednesday, 19th of February 2025
3 1 445
Categories : ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆ ಬರಲಿಲ್ಲ; ಆದದರಿಂದ ಸ್ಮರಿಸತಕ್ಕ ಪೂರ್ವವೃತ್ತಾಂತಗಳ ಗ್ರಂಥವನ್ನು ಅವನು ತರಿಸಿ ಪಾರಾಯಣಮಾಡಿಸುತ್ತಿರುವಾಗ ಅಹಷ್ವೇರೋಷ್ ರಾಜನನ್ನು ಕೊಲ್ಲಬೇಕೆಂದು ದ್ವಾರಪಾಲಕರಾದ ಬಿಗೆತಾನ್ ತೆರೆಷ್ ಎಂಬಿಬ್ಬರು ರಾಜಕಂಚುಕಿಗಳು ಒಳಸಂಚುಮಾಡಿದ ಸಂಗತಿಯೂ ಅದು ಮೊರ್ದೆಕೈಯ ಮುಖಾಂತರ ಬೈಲಿಗೆ ಬಂದ ಸಂಗತಿಯೂ ಅದರಲ್ಲಿ ಸಿಕ್ಕಿದವು. ಆಗ ಅರಸನು - ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವೆಂದು ವಿಚಾರಿಸಿದಾಗ ಅವನ ಸಾನ್ನಿಧ್ಯಸೇವಕರಾದ ಪರಿವಾರದವರು - ಏನೂ ದೊರಕಲಿಲ್ಲ ಎಂದು ಹೇಳಿದರು."(ಎಸ್ತೇರಳು 6:1-3)

ಈ ಘಟನೆಯು ದೇವರಾರಾಜ್ಯದ ಕಾರ್ಯ ವೈಖರಿಯನ್ನು  ಸಂಪೂರ್ಣವಾಗಿ ವಿವರಿಸುತ್ತದೆ. ಅರಸನಾದ ಅಹಷ್ವೇರೋಷನು ನಿದ್ರೆ ಮಾಡಲು ಸಾಧ್ಯವಾಗದೆ, ಸಮಯವನ್ನು ಕಳೆಯಲು ಅನೇಕ ಆಯ್ಕೆಗಳನ್ನು ಹೊಂದಿದ್ದನು, ಆದರೂ ಅವನು ತನ್ನ ಬಳಿಗೆ ಒಂದು ಪುಸ್ತಕವನ್ನು ತಂದು ಓದುವಂತೆ ಆಜ್ಞಾಪಿಸಿದನು. ಪುಸ್ತಕಧಾರಕನು ಪೂರ್ವಕಾಲ ವೃತ್ತಾಂತದ ಯಾವುದೇ ದಾಖಲೆಗಳನ್ನು ಆರಿಸಿ ಕೊಡಬಹುದಿತ್ತು, ಆದರೆ ಅವನು ನಿರ್ದಿಷ್ಟವಾದ ಸುರಳಿಯನ್ನೇ ತಂದನು. ಆ ಪುಸ್ತಕದ  ಯಾವುದೇ ಪುಟವನ್ನು ಓದಲು  ತೆರೆಯಬಹುದಿತ್ತು, ಆದರೆ ರಾಜನನ್ನು ಹತ್ಯೆಯಿಂದ ರಕ್ಷಿಸುವಲ್ಲಿ ಮೊರ್ದೆಕೈಯ ವೀರ ಕಾರ್ಯಗಳನ್ನು ವಿವರಿಸುವ ಪುಟವನ್ನೇ  ಓದಲೆಂದು ತೆರೆಯಲಾಯಿತು. ಪ್ರತಿ ಹೆಜ್ಜೆಯಲ್ಲೂ ದೇವರೇ ಎಲ್ಲಾ ಘಟನೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾನೆ ಎಂಬುದು ಇಲ್ಲಿ  ಸ್ಪಷ್ಟವಾಗುತ್ತದೆ.

ಅರಸನಾದ ಅಹಷ್ವೇರೋಷನ ಬಳಿ ವೃತ್ತಾಂತಗಳ ದಾಖಲೆಗಳ ಪುಸ್ತಕ, ಜ್ಞಾಪಕ ಪುಸ್ತಕ ಇದ್ದಂತೆ, ದೇವರಿಗೂ ಒಂದು ಜ್ಞಾಪಕ ಪುಸ್ತಕವಿದೆ.ಇದನ್ನು ಮಲಾಕಿ 3:16 ರಲ್ಲಿ ಹೇಳಲಾಗಿದೆ,
" ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು. " ಎಂದು ಅದು ಹೇಳುತ್ತದೆ. 

ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜನ ಪುಸ್ತಕವು ಅವನ ಪ್ರಜೆಗಳ ಕಾರ್ಯಗಳನ್ನು ದಾಖಲಿಸಿದಂತೆಯೇ, ದೇವರ ಪುಸ್ತಕವು ಆತನನ್ನು ಸನ್ಮಾನಿಸುವವರ ಮತ್ತು ಗೌರವಿಸುವವರ ಕಾರ್ಯಗಳನ್ನು ದಾಖಲಿಸುತ್ತದೆ. ದೇವರು ಸಾಮಾನ್ಯವಾಗಿ ನಮ್ಮ ಶ್ರಮ ಮತ್ತು ದಯೆ ಮತ್ತು ಪ್ರೀತಿಯ ಕಾರ್ಯಗಳಿಗೆ ಪ್ರತಿಫಲ ನೀಡಲು ಯಾವಾಗಲೂ ಬರುವವನಾಗಿದ್ದಾನೆ. ಆತನು ಹೃದಯವನ್ನೇ  ಹುಡುಕುವವನಾಗಿದ್ದು  ಪ್ರತಿಯೊಂದು ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಾನೆ. ನಮ್ಮ ಪ್ರತಿಯೊಂದು ಕ್ರಿಯೆಯು ಬೀಜವಾಗಿದೆ ಮತ್ತು ಸುಗ್ಗಿಯ ರೂಪದಲ್ಲಿ ನಮಗೆ ಅದು ಮರಳುತ್ತದೆ. ಆದ್ದರಿಂದ ಬೀಜವನ್ನು ಬಿತ್ತುವುದನ್ನು ಮುಂದುವರಿಸಿ.

ಸತ್ಯವೇದದ  ಇಬ್ರಿಯ ಪುಸ್ತಕದ  6:10ನೇ ವಾಕ್ಯವು  ಹೀಗೆ ಹೇಳುತ್ತದೆ, "ನೀವು  ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ." ಎಂದು.
 
ಮೊರ್ದೆಕೈ ಅರಸನನ್ನು ರಕ್ಷಿಸಿದಾಗ ಅವನ ಒಳ್ಳೆಯ ಕಾರ್ಯಕ್ಕೆ ಪ್ರತಿಫಲ ನೀಡಲು ಮರೆತಂತೆ ಮನುಷ್ಯರು ಮರೆತುಬಿಡಬಹುದು. ಇದುವರೆಗೂ ಯಾರೂ ಅದನ್ನು ಪ್ರಸ್ತಾಪಿಸದೇ ಅದನ್ನು ಮುಚ್ಚಿಡಲಾಗಿತ್ತು ಅಥವಾ ಪ್ರಾಯಶಃ ಭದ್ರತಾ ಮುಖ್ಯಸ್ಥರು ಅದರ ಕೀರ್ತಿಯನ್ನು ತೆಗೆದುಕೊಂಡಿರ ಬಹುದು ಮತ್ತು ಅವರಿಗೆ ಜಾಗರೂಕರಾಗಿರುವುದಕ್ಕಾಗಿ ಬಡ್ತಿಯನ್ನೂ ನೀಡಲಾಗಿರಬಹುದು. 

ಆದರೆ ಸರಿಯಾದ ಸಮಯದಲ್ಲಿ, ದೇವರು ಮಧ್ಯಪ್ರವೇಶಿಸಿದನು. ಆತನು  ತನ್ನ ನಿಷ್ಠಾವಂತ ಮಗನ ಸ್ಥಿತಿಯನ್ನು  ಪರಿವರ್ತಿಸುವ ಸಮಯವಾದ್ದರಿಂದ ಆತನು ರಾಜನಿಂದ ನಿದ್ರೆಯನ್ನು ತೆಗೆದುಬಿಟ್ಟನು. ಸತ್ಯವೇದ ಹೇಳುತ್ತದೆ, ದೇವರು ಮರೆಯುವುದಕ್ಕೆ  ಅನ್ಯಾಯಸ್ಥನಲ್ಲ ಎಂದು . ಆದ್ದರಿಂದ, ನೀವು ಮನುಷ್ಯರೊಂದಿಗೆ ಹೋರಾಡುವ ಅಗತ್ಯವಿಲ್ಲ. ಕೆಲವೊಮ್ಮೆ, ನಮಗೆ ಪ್ರತಿಫಲ ಸಿಗದ ಕಾರಣ ನಾವು ಮಾಡುವ ನಮ್ಮ ಒಳ್ಳೆಯ ಕಾರ್ಯಗಳನ್ನು ನಿಲ್ಲಿಸಿ ಬಿಡುತ್ತೇವೆ. ನಮ್ಮಲ್ಲಿ  ಕಹಿತನ ಬೆಳೆಸಿಕೊಂಡು  ಮಾರ್ಪಡುತ್ತೇವೆ.

ಕೆಲಸ ಮಾಡಲು ತಡವಾಗಿ ಬರುವ  ಸೋಮಾರಿಯಾದ ವ್ಯಕ್ತಿಗೆ ಬಡ್ತಿ ಸಿಕ್ಕಿತು ಎಂದು ಕೆಲವರು ತಮ್ಮ ಕೆಲಸದ ಮೇಲಿನ ಬದ್ಧತೆಯನ್ನು ಕಡಿಮೆ ಮಾಡುತ್ತಾರೆ. ಯಾರೂ ನೋಡದ ಕಾರಣ ಇತರರು ತಮ್ಮ ರೀತಿಯ ಮಾರ್ಗಗಳನ್ನು ಬದಲಾಯಿಸುತ್ತಾರೆ. ಆದರೆ ನಾನು ನಿಮಗೆ ಒಂದು ಒಳ್ಳೆಯ ಸುದ್ದಿಯನ್ನು ಹೇಳಲು ಹೊಂದಿದ್ದೇನೆ; ಅದೇನೆಂದರೆ ನಿಮ್ಮ ಪ್ರತಿಫಲವು ದೇವರಿಂದ ಬರುವಂತದ್ದಾಗಿದೆ . ಸಮಯ ಬಂದಾಗ, ನಿಮ್ಮ ಪರವಾಗಿ ಮನುಷ್ಯರನ್ನು ನಿಮ್ಮ ಹಾದಿಯಿಂದ ಹೇಗೆ ಸರಿಸಬೇಕೆಂದು ಆತನಿಗೆ ತಿಳಿದಿದೆ. 

ಈ ಸಂದರ್ಭದಲ್ಲಿ, ದೇವರು ರಾಜನಿಂದ ನಿದ್ರೆ ತೆಗೆದುಕೊಂಡನು. ಅವನು ಪ್ರಕ್ಷುಬ್ಧನಾಗಿದ್ದು  ಈಗ ಅವನಿಗೆ ಮುಖ್ಯವಾದ ವಿಷಯವೆಂದರೆ ದಾಖಲೆ ಪುಸ್ತಕದ ಮೂಲಕ ನೋಡುವುದಾಗಿತ್ತು. ದೇವರು ಸಾರ್ವಭೌಮನು. ಆತನು ಭೂಮಿಯ ಮೇಲೆಲ್ಲಾ  ಆಳ್ವಿಕೆ ನಡೆಸುವವನಾಗಿದ್ದು ಭೂರಾಜರ ಹೃದಯವು ಆತನ ವಶದಲ್ಲಿದೆ. ಆದ್ದರಿಂದ ಆರಾಮಾಗಿರಿ ಮತ್ತು ಅದನ್ನು ಮುಂದುವರೆಸಿರಿ. ನೀವು ಮಾಡುತಿದ್ದ ಉತ್ತಮ ಕಾರ್ಯಗಳನ್ನು ಮುಂದುವರಿಸಿ ಮತ್ತು ಪಟ್ಟು ಸಡಿಲಿಸಬೇಡಿ . ಇತರರು ಸೋಮಾರಿಗಳಾಗಿದ್ದರೂ ನೀವು ಕೆಲಸದಲ್ಲಿ ಶ್ರದ್ಧೆಯಿಂದಿರಿ. ನೀವು ಗುರುತಿಸಲ್ಪಡದಿದ್ದರೂ ಒಳ್ಳೆಯದನ್ನು ಮಾಡುತ್ತಿರಿ. ಮನುಷ್ಯರಿಂದ ಬರುವ  ತಾತ್ಕಾಲಿಕ ಕೃತಕ ಫಲಕದಲ್ಲಿ  ನೆಲೆಗೊಳ್ಳುವುದಕ್ಕಿಂತ ದೇವರ ಶಾಶ್ವತ ಗುರುತಿಸುವಿಕೆಗಾಗಿ ಕಾಯುವುದು ಉತ್ತಮವಾಗಿದೆ.

ನಿಮ್ಮ ಪ್ರತಿಫಲವು ದೇವರಿಂದಲೇ ಬರುವಂತದ್ದಾಗಿದ್ದು  ನೀವಿನ್ನೂ ಅದನ್ನು ಹೊಂದದೇ  ಇರುವಾಗ ಆತನು ನಿಮ್ಮನ್ನು ಕೈ ಬಿಡುವುದಿಲ್ಲ. ಗಲಾತ್ಯ 6: 9ರಲ್ಲಿ ಹೇಳುವಂತೆ “ಒಳ್ಳೆಯದನ್ನು  ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು." ಎಂದು.

ಆದ್ದರಿಂದ, ಮನಗುಂದಬೇಡಿರಿ, ನಿಮ್ಮ ಪ್ರತಿಫಲವು ನೀವು ಯೋಚಿಸುವುದಕ್ಕಿಂತಲೂ  ಸಮೀಪವಾಗಿದೆ, ಆದರೆ ನೀವು ಸೋತುಹೋದರೆ , ನೀವು ಪ್ರತಿಫಲವನ್ನು ಕಳೆದುಕೊಳ್ಳುವವರಾಗುತ್ತೀರಿ. 

Bible Reading: Numbers 14-15
Prayer
ತಂದೆಯೇ, ನಿನ್ನ  ಸೇವೆಯಲ್ಲಿ ಶ್ರದ್ಧೆಯಿಂದ ಇರಲು ನೀನು  ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ.  ನಾನು ನನ್ನನ್ನು ಹತ್ತಿಕ್ಕುವ  ಪ್ರತೀ ಮನಗುಂದಿಸುವಿಕೆ ಮತ್ತು ನಿರುತ್ಸಾಹದ ವಿರುದ್ಧವಾಗಿ ನನ್ನ ನಿಯೋಜನೆಯಲ್ಲಿ ನಾನು ದೃಢವಾಗಿರುವಂತೆ ನೀನು  ದಯೆತೋರಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನೀನು  ಕಾಣಿಸಿಕೊಳ್ಳುವಾಗ ನನ್ನ  ಕರ್ತವ್ಯದಲ್ಲಿ ನಾನು  ನಂಬಿಗಸ್ಥನಾಗಿರುವಂತೆ  ನನಗೆ ಸಹಾಯ ಮಾಡಬೇಕೆಂದು ಯೇಸುವಿನ ಹೆಸರಿನಲ್ಲಿ ನಾನು ಬೇಡುತ್ತೇನೆ . ಆಮೆನ್.


Join our WhatsApp Channel


Most Read
● ಕೃಪೆಯ ವಾಹಕರಾಗಿ ಮಾರ್ಪಡುವುದು.
● ಮದಲಿಂಗನನ್ನು ಭೇಟಿ ಮಾಡಲು ಸಿದ್ದರಾಗಿರಿ.
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇತರರಿಗೆ ಸೇವೆ ಸಲ್ಲಿಸುವ ಮೂಲಕ ನಾವು ಅನುಭವಿಸುವ ಆಶೀರ್ವಾದಗಳು 
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
● ಅಪನಂಬಿಕೆ
● ನೆಪ ಹೇಳುವ ಕಲೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login