हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ತಾವಾಗಿಯೇ  ಹೇರಿಕೊಂಡ  ಶಾಪಗಳಿಂದ ವಿಮೋಚನೆ
Daily Manna

ತಾವಾಗಿಯೇ  ಹೇರಿಕೊಂಡ  ಶಾಪಗಳಿಂದ ವಿಮೋಚನೆ

Tuesday, 28th of January 2025
2 1 130
Categories : ಬಿಡುಗಡೆ (Deliverance)
"ಮರಣ ಮತ್ತು ಜೀವವು ನಾಲಿಗೆಯ ಅಧಿಕಾರದಲ್ಲಿದೆ,ಅದನ್ನು ಪ್ರೀತಿಸುವವರು ಅದರ ಫಲವನ್ನು  ತಿನ್ನುವರು."ಎಂದು ಜ್ಞಾನೋಕ್ತಿ 18:21 ರಲ್ಲಿ ಹೇಳಿದೆ. 

ಜೀವನ್ಮರಣವನ್ನು ತರುವ ಶಕ್ತಿ ನಾಲಿಗೆಗಿದೆ. ಯಾಕೋಬನ ತಾಯಿಯಾದ ರೆಬೆಕ್ಕಳು  ಯಾಕೋಬನನ್ನು ಆಶೀರ್ವದಿಸಲು ಇಸಾಕನನ್ನು ಮೋಸಗೊಳಿಸುವಂತೆ  ಒಂದು ವಿಸ್ತಾರವಾದ ಯೋಜನೆಯನ್ನು ಯೋಜಿಸಿದಳು. ಅದು ತನ್ನ ತಂದೆಯಾದ  ಇಸಾಕನಿಗೆ ಗೊತ್ತಾಗಿಬಿಟ್ಟರೆ , ಇಸಾಕನು ತನ್ನನ್ನು ಶಪಿಸುತ್ತಾನೆ ಎಂದು ಯಾಕೋಬನು ಭಯಪಟ್ಟನು. 

ಆದರೆ ಅವನ ತಾಯಿಯು  (ರೆಬೆಕಳು)  ಮಗನೇ, ಅವನು ನಿನಗೆ ಶಾಪಕೊಟ್ಟರೆ ಆ ಶಾಪ ನನಗಿರಲಿ; ನೀನು ನನ್ನ ಮಾತನ್ನು ಕೇಳಿ ಆ ಮರಿಗಳನ್ನು ತೆಗೆದುಕೊಂಡು ಬಾ ಎಂದು ಹೇಳಿದಳು"
(ಆದಿಕಾಂಡ 27:13) 

ರೆಬೆಕಾ ತನ್ನ ಮೇಲೆ ಶಾಪವನ್ನು ತಾನೇ  ಉಚ್ಚರಿಸಿ ಕೊಂಡಳು - ಸ್ವಯಂ ಪ್ರೇರಿತ ಶಾಪ. ಆಕೆಯ ಜೀವನದ ಮೇಲೆ ಈ ಶಾಪದ ಪರಿಣಾಮವನ್ನು ನಾವು ನೋಡುತ್ತೇವೆ. 

"ರೆಬೆಕ್ಕಳು ಇಸಾಕನಿಗೆ - ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. ಯಾಕೋಬನೂ ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯ ಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು ಎಂದು ಹೇಳಿದಳು." (ಆದಿಕಾಂಡ 27:46) 

ರೆಬೆಕಾ ತನ್ನ ಜೀವನದಿಂದ ಬೇಸತ್ತಳು ಮತ್ತು ಅಂತಿಮವಾಗಿ, ತನ್ನ ಸ್ವಯಂ ಹೇರಿದ ಶಾಪದ ಪರಿಣಾಮವಾಗಿ ಅವಳು ಅಕಾಲಿಕವಾಗಿ ಮರಣಹೊಂದಿದಳು. 

ಸ್ವಯಂ ಪ್ರೇರಿತವಾಗಿ  ಅಥವಾ ಸ್ವಯಂ ಹೇರಿಕೆಯ ಶಾಪದ ಇನ್ನೊಂದು ಉದಾಹರಣೆ:
" ಆಗ ಪಿಲಾತನು ತನ್ನ ಯತ್ನ ನಡೆಯುವದಿಲ್ಲ, ಗದ್ದಲ ಮಾತ್ರ ಹೆಚ್ಚಾಗುತ್ತದೆ ಎಂದು ತಿಳಿದು ನೀರು ತಕ್ಕೊಂಡು ಜನರ ಮುಂದೆ ಕೈ ತೊಳಕೊಂಡು - ಈ ಪುರುಷನನ್ನು ಕೊಲ್ಲಿಸಿದ್ದಕ್ಕೆ ನಾನು ಸೇರಿದವನಲ್ಲ, ನೀವೇ ನೋಡಿಕೊಳ್ಳಿರಿ ಅನ್ನಲಾಗಿ ಜನರೆಲ್ಲಾ - [ಅವನನ್ನು ಕೊಲ್ಲಿಸಿದ್ದಕ್ಕೆ ನಾವೂ ನಮ್ಮ ಮಕ್ಕಳೂ ಉತ್ತರ ಕೊಡುತ್ತೇವೆ ಅಂದರು."(ಮತ್ತಾಯ 27:24-25 )

ಇಸ್ರೇಲ್ ಜನರು , ಭಾವನಾತ್ಮಕ ಉನ್ಮಾದದ ​​ಕ್ಷಣದಲ್ಲಿ, ತಮ್ಮ ಮೇಲೆ ಮಾತ್ರವಲ್ಲದೆ ತಮ್ಮ ಮಕ್ಕಳು ಮತ್ತು ಅವರ ಮಕ್ಕಳ ಮೇಲೂ  ಶಾಪವನ್ನು ಘೋಷಿಸಿ ಕೊಂಡರು. :

"ಕ್ರಿ.ಶ. 70 ರ ಹೊತ್ತಿಗೆ ರೋಮನ್ನರು ಜೆರುಸಲೆಮ್ನ ಹೊರಗಿನ ಗೋಡೆಗಳನ್ನು ಮುರಿದರು, ದೇವಾಲಯವನ್ನು ನಾಶಪಡಿಸಿದರು ಮತ್ತು ನಗರಕ್ಕೆ ಬೆಂಕಿ ಹಚ್ಚಿದರು.ಆ  ವಿಜಯದಲ್ಲಿ, ರೋಮನ್ನರು ಸಾವಿರಾರು ಜನರನ್ನು ಕೊಂದರು. ಸಾವಿನಿಂದ ಪಾರಾದವರಲ್ಲಿ: ಸಾವಿರಾರು ಜನರನ್ನು ಗುಲಾಮರನ್ನಾಗಿ ಮಾಡಿಕೊಂಡು ಈಜಿಪ್ಟಿನ ಗಣಿಗಳಲ್ಲಿ ದುಡಿಯಲು ಕಳುಹಿಸಲಾಯಿತು; ಇತರರು ಸಾರ್ವಜನಿಕರ ಮನರಂಜನೆಗಾಗಿ ಕಟುಕಲು ಸಾಮ್ರಾಜ್ಯದಾದ್ಯಂತ ಅಖಾಡಗಳಿಗೆ ಚದುರಿಹೋದರು. ದೇವಾಲಯದ ಪವಿತ್ರ ಅವಶೇಷಗಳನ್ನು ರೋಮ್ ಗೆ  ಕೊಂಡೊಯ್ಯಲಾಯಿತು, ಅಲ್ಲಿ ಅವುಗಳನ್ನು ವಿಜಯದ ಆಚರಣೆಯಲ್ಲಿ ಪ್ರದರ್ಶಿಸಲಾಯಿತು. WW2 (ವಿಶ್ವ ಸಮರ 2) ಅಂತ್ಯದ ವೇಳೆಗೆ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್‌ಗಳ ಆವಿಷ್ಕಾರವು ಯಹೂದಿಗಳನ್ನು ನಿರ್ನಾಮ ಮಾಡುವ ಹಿಟ್ಲರನ ಯೋಜನೆಗಳ ಸಂಪೂರ್ಣ ಭಯಾನಕತೆಯನ್ನು ಬಹಿರಂಗಪಡಿಸಿತು. ಯಹೂದಿಗಳ ವ್ಯವಸ್ಥಿತ ಹತ್ಯಾಕಾಂಡ ಕುರಿತ  ಮಾಧ್ಯಮ ವರದಿಗಳಂತೂ  ಇನ್ನೂ ಜಗತ್ತನ್ನು ಬೆಚ್ಚಿಬೀಳಿಸುತ್ತವೆ" ಎಂದು ಪ್ರಸಿದ್ಧ ಇತಿಹಾಸಕಾರ ಫ್ಲೇವಿಯಸ್ ಜೋಸೆಫಸ್ ಬರೆಯುತ್ತಾರೆ.

ಇಂದಿಗೂ ಆ ಮಾತುಗಳ ಫಲಿತವನ್ನು  ನಾವು ನೋಡಬಹುದು. ಇಸ್ರಾಯೇಲ್ಯರು ಏಕೆ ಯಾರೂ ಊಹಿಸಲಾಗದ ಹಿಂಸಾಚಾರ ಮತ್ತು ರಕ್ತಪಾತದ ಮೂಲಕ ಹೋಗಬೇಕಾಯಿತು ಎಂಬುದರ ಕುರಿತು ಇದು ನಿಮಗೆ ತಿಳುವಳಿಕೆಯನ್ನು ನೀಡುತ್ತದೆ. ಅವರು ತಮ್ಮ ಮೇಲೆ ಮತ್ತು ಇನ್ನೂ ಹುಟ್ಟಲಿರುವ ಪೀಳಿಗೆಗಳ ಮೇಲೆ ಶಾಪವನ್ನು ಘೋಷಿಸಿಕೊಂಡರು.

ವಿನಾಶದ ಕೆಟ್ಟ ವಿಧವೆಂದರೆ ಸ್ವಯಂ ನಾಶ. ಇಂದು ಅನೇಕ ಜನರು ಸ್ವಯಂ ಹೇರಿಕೆಗಳ  ಶಾಪಗಳ ಪರಿಣಾಮವಾಗಿ ಬಳಲುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಎದುರಿಸುತ್ತಿರುವ ಸಮಸ್ಯೆಗಳು ದೇವರು, ಸೈತಾನ ಅಥವಾ ಮಾನವ ಮೂಲಗಳಿಂದ ಹುಟ್ಟಿಕೊಂಡಿಲ್ಲ. ಬದಲಾಗಿ ತಮಗೆ ತಾವೇ ಸ್ವಯಂ ಹೇರಿಕೊಂಡ ಶಾಪಗಳ ದೆಸೆಯಿಂದಾಗಿದೆ.

ಸ್ವಯಂ ಹೇರಿಕೆಯ  ಶಾಪಗಳು ನಾವು ಮಾತನಾಡುವ ಮಾತುಗಳಿಂದಾಗಿ ನಮ್ಮ ಮೇಲೆ ಬರುತ್ತವೆ. ನಿಜವಾಗಿ ನಮ್ಮನ್ನು ನಾವೇ ಶಪಿಸಿಕೊಳ್ಳುತ್ತಿದ್ದೇವೆ. "ನಾನು ಸಾಯಲು ಬಯಸುತ್ತೇನೆ, ನಾನು ಜೀವನದಲ್ಲಿ ಬೇಸತ್ತಿದ್ದೇನೆ, ನಾನು ನಿಷ್ಪ್ರಯೋಜಕನಾಗಿದ್ದೇನೆ, ಎಂದು ಹೇಳುವ ಅಭ್ಯಾಸವನ್ನು ಹಲವರು ಹೊಂದಿದ್ದಾರೆ. ಇದರಿಂದಾಗಿ ನಾವು ನಮ್ಮ ಮೇಲೆಯೇ ಶಾಪವನ್ನು ಉಚ್ಚರಿಸುಕೊಳ್ಳುವವರಾಗುತ್ತೇವೆ"  ಜನರು ಅಂತಹ ನಕಾರಾತ್ಮಕ ಭಾಷೆಯನ್ನು ಬಳಸಿದಾಗ, ಅವರು ವಿನಾಶವನ್ನು ಉಂಟುಮಾಡುವ ದುಷ್ಟ ಶಕ್ತಿಗಳಿಗೆ ಬಾಗಿಲು ತೆರೆದು ಕೊಡುವವರಾಗುತ್ತಾರೆ ಎಂಬುದು ಜನರಿಗೆ ಅರ್ಥವಾಗಿರುವುದಿಲ್ಲ. ಇದುವೇ  ಜನರನ್ನು ಕಾಡುತ್ತಿರುವ ಅನೇಕ ಅವಘಡಗಳಿಗೆ ಕಾರಣವಾಗಿದೆ. 

ಈಗ ಉಳಿದಿರುವ ಪ್ರಶ್ನೆ : ಸ್ವಯಂ ಹೇರಿದ ಶಾಪಗಳನ್ನು ಮುರಿಯಲು ನಾನು ಏನು ಮಾಡಬೇಕು? 
a)ಕರ್ತನ ಮುಂದೆ ಯಥಾರ್ಥವಾಗಿ ಅದಕ್ಕಾಗಿ ಪಶ್ಚಾತ್ತಾಪಪಡಬೇಕು.
b)ದೇವರ ಅಭಿಷಿಕ್ತ ಸೇವಕ ಅಥವಾ ಸೇವಕಿಯಿಂದ ಅಥವಾ ಉಪವಾಸ ಮತ್ತು ಪ್ರಾರ್ಥನೆಯ ಮೂಲಕ ವಿಮೋಚನೆಯನ್ನು ಹುಡುಕುವುದು. 
c)ಸರಿಯಾದ ವಾಕ್ಯಗಳನ್ನು ಅರಿಕೆಮಾಡುವ ಮೂಲಕ ಆ ಋಣಾತ್ಮಕ ಹೇಳಿಕೆಗಳನ್ನು ಬದಲಾಯಿಸಿ (ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ, ನೋಹ್ ಅಪ್ಲಿಕೇಶನ್‌ನಲ್ಲಿ ದೈನಂದಿನ ಅರಿಕೆಗಳು ವಿಭಾಗವನ್ನು ನೋಡಿ). 

ನಾವು ಪವಿತ್ರಾತ್ಮನಿಗೆ  ಸಂವೇದನಾಶೀಲರಾಗಿ ಸ್ಪಂಧಿಸುವವರಾಗಿರೋಣ, ಇದರಿಂದ ನಾವು ಹೇಳಿರುವ  ನಕಾರಾತ್ಮಕ ವಿಷಯಗಳ ಕುರಿತು ಆತನು ನಮಗೆ ಮನವರಿಕೆ ಮಾಡಿಕೊಟ್ಟು ಪಶ್ಚಾತ್ತಾಪಕ್ಕೂ ಮತ್ತು ಸ್ವಸ್ತತೆಯೆಡೆಗೂ ನಮ್ಮನ್ನು ನಡೆಸುತ್ತಾನೆ . 

ಗಮನಿಸಿ: ದಯವಿಟ್ಟು ನಿಮಗೆ ತಿಳಿದಿರುವ ಕನಿಷ್ಠ ಐದು ಮಂದಿಗಾದರೂ ಇದನ್ನು ರವಾನಿಸಿ ಇದರಿಂದ ಅವರು ಕೂಡ ಈ ವಿಮೋಚನೆಯನ್ನು ಅನುಭವಿಸುತ್ತಾರೆ. ನೀವು ಇದನ್ನು ಮಾಡುತ್ತಿರುವಾಗ ಕರ್ತನು ನಿಮ್ಮನ್ನು ಆಶೀರ್ವದಿಸುತ್ತಾನೆ.

Bible Reading: Exodus 29 
Confession
ನಾನು ಸಾಯುವದಿಲ್ಲ; ಜೀವದಿಂದಿದ್ದು 
ಈ ಪೀಳಿಗೆಗೂ  ಮತ್ತು ಮುಂದಿನ ತಲೆಮಾರಿಗೂ  ಯೇಸುವಿನ ಹೆಸರಿನಲ್ಲಿ ಯಾಹುವಿನ ಕ್ರಿಯೆಗಳನ್ನು ಸಾರುವೆನು. ಆಮೆನ್.

Join our WhatsApp Channel


Most Read
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ಕೃಪೆಯಿಂದಲೇ ರಕ್ಷಣೆ
● ಆಲಸ್ಯದ ದೈತ್ಯನನ್ನು ಕೊಲ್ಲುವುದು
● ನಂಬಿಕೆಯಲ್ಲಿರುವ ಬಲ
● ನಿಮ್ಮನ್ನು ನಡೆಸುತ್ತಿರುವವರು ಯಾರು?
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.
● ಎಸ್ತರಳ ರಹಸ್ಯವೇನು?
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login