हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
Daily Manna

ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ

Tuesday, 13th of August 2024
2 1 460
Categories : ಬಿಡುಗಡೆ (Deliverance)
ಕರ್ತನಿಂದ ಹೊಂದಿಕೊಂಡಂತಹ ಬಿಡುಗಡೆಯನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆಯೇ?

ಒಂದು ದಿನ ಸಭೆಯ ಸೇವಾ ಸಮಯದಲ್ಲಿ ಒಬ್ಬ ಸ್ತ್ರೀ ಹಾಗೂ ಆಕೆಯ ತಂದೆಯು ನನ್ನ ಬಳಿಗೆ ನಡೆದು ಬಂದು ಹೇಳಿದ ವಿಷಯ ನನಗಿನ್ನೂ ನೆನಪಿದೆ. ಅವರು "ಪಾಸ್ಟರ್ ಮೈಕಲ್ ರವರೆ ಹೋದ ವರ್ಷದಲ್ಲಿ ನಾನು ಮತ್ತು ನನ್ನ ಮಗಳು ನಿಮ್ಮ ಸಭಾ ಸೇವಕೂಟದಲ್ಲಿ ಭಾಗಿಯಾಗಿದ್ದೆವು. ಆ ದಿನ ನನ್ನ ಮಗಳು ಒಂದು ದೊಡ್ಡ ಬಿಡುಗಡೆಯನ್ನು ಹೊಂದಿಕೊಂಡಳು. ಆಕೆಯೂ ಚೆನ್ನಾಗಿಯೇ ಇದ್ದಳು. ಆದರೆ ಈಗ ಕೆಲವು ವಾರಗಳ ಈಚೆಗೆ ಮತ್ತೆ ಅದೇ ರೀತಿಯ ಬಂಧನಕ್ಕೆ ಒಳಗಾಗಿದ್ದಾಳೆ" ಎಂದರು.

ನೀವು ನಿಮ್ಮ ಬಿಡುಗಡೆಯನ್ನು ಹೊಂದಿಕೊಂಡರಷ್ಟೇ ಸಾಲದು. ಅದನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಸೈತಾನನ ಮುಖ್ಯ ಕಾರ್ಯವೇ ಕದ್ದುಕೊಳ್ಳುವುದು ಕೊಲ್ಲುವುದು ಮತ್ತು ಹಾಳು ಮಾಡುವುದಾಗಿದೆ ಎಂದು ಸತ್ಯವೇದವು ನಮಗೆ ಸ್ಪಷ್ಟವಾಗಿ ಹೇಳುತ್ತದೆ (ಯೋಹಾನ 10:10). ಆದ್ದರಿಂದ ನಾವು ಪಡೆದುಕೊಂಡ ಬಿಡುಗಡೆಯನ್ನು ಆದಷ್ಟು ಜಾಗೃತೆಯಿಂದ ಕಾಪಾಡಿಕೊಳ್ಳಲು ಮತ್ತು ಭವಿಷ್ಯದಲ್ಲಿಯೂ ಅದನ್ನು ಆ ಕಳ್ಳನ್ನು ಕದ್ದುಕೊಳ್ಳದಂತೆ ಸಾಕಷ್ಟು ಪ್ರಯತ್ನಿಸುವುದನ್ನು ನಾವು ಕಲಿಯಬೇಕು.

# 1.ನಿಮ್ಮ ಹಳೆಯ ಜೀವಿತಕ್ಕೆ ಹಿಂದಿರುಗಬೇಡಿರಿ.
ನೀವು ಬಿಡುಗಡೆಯನ್ನು ಹೊಂದಿಕೊಂಡ ಮೇಲೆ ಒಂದು ವಿಚಾರದ ಕುರಿತು, ನೀವು ಜಾಗೃತೆಯಿಂದ ಇರಬೇಕು. ಅದೇನೆಂದರೆ ನೀವು ಎಂದಿಗೂ ಮತ್ತೆ ನಿಮ್ಮ ಹಳೆಯ ಜೀವಿತಕ್ಕೆ ಹಿಂದಿರುಗದಂತೆ ಎಚ್ಚರ ವಹಿಸಬೇಕು. ಏಕಕಾಲದಲ್ಲಿ ನೀವು ದೇವರ ರಾಜ್ಯಕ್ಕೆ  ಬಾದ್ಯಸ್ತರಾಗಿ, ಸೈತಾನನೊಂದಿಗೂ ಒಡನಾಟ ಇಟ್ಟುಕೊಂಡು ಬಾಳಲು ಸಾಧ್ಯವಿಲ್ಲ- ಅದು ತುಂಬಾ ಅಪಾಯಕಾರಿಯಾದದ್ದು.

ಕರ್ತನಾದ  ಯೇಸುವು ಒಮ್ಮೆ ಒಬ್ಬ ವ್ಯಕ್ತಿಯನ್ನು  ಅವನ ಭಯಂಕರ ಸ್ಥಿತಿಯಿಂದ ಬಿಡಿಸಿದನು ಮತ್ತು ಆತನು ಆ ವ್ಯಕ್ತಿಗೆ ಎಚ್ಚರಿಸುತ್ತಾ
"ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು - ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪಮಾಡಬೇಡ; ನಿನಗೆ ಹೆಚ್ಚಿನ ಕೇಡು ಬಂದೀತು ಅಂದನು."(ಯೋಹಾನ 5:14).

ಒಬ್ಬ ವ್ಯಕ್ತಿಯು ಬಿಡುಗಡೆಯನ್ನು ಹೊಂದಿಕೊಂಡು ಮತ್ತೆ ತನ್ನ ಹಳೆಯ ಜೀವಿತಕ್ಕೆ ತಿರುಗಿಕೊಂಡಾಗ ಯಾವ ಒಂದು ದುರಾತ್ಮ ಅವನನ್ನು ಬಿಟ್ಟು ಹೋಗಿತ್ತೋ ಅದೇ ದುರಾತ್ಮವು ಮತ್ತೆ ಅವನನ್ನು ಹಿಡಿಯಲು ಯತ್ನಿಸುತ್ತದೆ. ಈ ಒಂದು ಮುಖ್ಯ ಕಾರಣದಿಂದಲೇ ಸಭೆಗೆ ಬರುವ ಅನೇಕ ಮಂದಿಯು ಒಂದು ವಾರದ ಬಳಿಕ ಮತ್ತದೇ ಸಮಸ್ಯೆಯನ್ನು ಹೊತ್ತು ತಿರುಗಿ ಬರುವುದನ್ನು ನಾವು ಕಾಣುತ್ತೇವೆ.

 #2.ಯಾವಾಗಲೂ ದೇವರ ವಾಕ್ಯದಿಂದಲೂ ಆತ್ಮದಿಂದಲೂ ತುಂಬಿದವರಾರ್ರಿ.
ಕರ್ತನಾದ ಯೇಸು ಒಬ್ಬ ವ್ಯಕ್ತಿಯು ಬಿಡುಗಡೆ ಹೊಂದಿದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವ ಕೆಲವೊಂದು ನಿರ್ದಿಷ್ಟ ಸತ್ಯಗಳನ್ನು ನಮಗೆ ಹೇಳಿದ್ದಾನೆ.

"ದೆವ್ವವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. ವಿಶ್ರಾಂತಿ ಸಿಕ್ಕದ ಕಾರಣ ಅದು - ನಾನು ಬಿಟ್ಟು ಬಂದ ನನ್ನ ಮನೆಗೆ ತಿರಿಗಿ ಹೋಗುತ್ತೇನೆ ಅಂದುಕೊಂಡು ಬಂದು ಆ ಮನೆ ಒಕ್ಕಲಿಲ್ಲದ್ದೂ ಗುಡಿಸಿ ಅಲಂಕರಿಸಿದ್ದೂ ಆಗಿರುವದನ್ನು ಕಂಡು ಹೊರಟುಹೋಗಿ ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರಕೊಂಡು ಬರುವದು. ಅವು ಒಳಹೊಕ್ಕು ಅಲ್ಲಿ ವಾಸಮಾಡುವವು. ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವದು. ಇದರಂತೆಯೇ ಈ ಕೆಟ್ಟ ಸಂತತಿಗೆ ಆಗುವದು ಅಂದನು."(ಮತ್ತಾಯ 12:43-45)

ಕರ್ತನಾದ ಯೇಸು ಇಲ್ಲಿ ಒಂದು ಶಕ್ತಿಯುತವಾದ ವಿಚಾರವನ್ನು ಪ್ರಕಟಿಸಿದ್ದಾನೆ. ಒಬ್ಬ ವ್ಯಕ್ತಿಯು ಅಶುದ್ಧ ಆತ್ಮದಿಂದ ಬಿಡುಗಡೆಯನ್ನು ಹೊಂದಿಕೊಂಡಾಗ ಆ ದುರಾತ್ಮವು ಮತ್ತೆ ಬಂದು ಆ ವ್ಯಕ್ತಿಯಲ್ಲಿ ಪ್ರವೇಶ ಪಡೆಯಲು ಯತ್ನಿಸುತ್ತದೆ. ಏಕೆಂದರೆ ದೆವ್ವಗಳಿಗೆ ತಮ್ಮ ಕಾರ್ಯಗಳನ್ನು ಮಾಡಲು ಒಂದು ದೇಹದ ಅವಶ್ಯಕತೆ ಇದೆ. ಹಾಗಾಗಿ ಅವು ತಾವು ಬಿಟ್ಟು ಹೋದ ದೇಹವನ್ನು ಮತ್ತೆ ಪಡೆದುಕೊಳ್ಳಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತವೆ.

ಆ ವ್ಯಕ್ತಿಯು ದೇವರ ವಾಕ್ಯದಿಂದಲೂ ದೇವರಾತ್ಮನಿಂದಲೂ ತುಂಬಿಸಲ್ಪಡದೆ ಹೋದರೆ ಆ ದುರಾತ್ಮವೂ ತನಗಿಂತ ಇನ್ನೂ ಬಲವಾದ ಕೆಟ್ಟದಾದ ದುರಾತ್ಮಗಳನ್ನು ಕರೆದುಕೊಂಡು ಬಂದು ಆ ವ್ಯಕ್ತಿಯ ದೇಹವನ್ನು ಹೊಕ್ಕುತ್ತದೆ. ಆಗ ಆ ವ್ಯಕ್ತಿಯ ಸ್ಥಿತಿಯು ಮೊದಲಿಗಿಂತಲೂ ಹೀನಾಯವಾಗುತ್ತದೆ. ಈ ಒಂದು ಸ್ಥಿತಿಯಿಂದ ದೇವರ ಕಾರ್ಯಗಳನ್ನು ಟೀಕಿಸಲು ಶತ್ರುಗಳಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.

"ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ - ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು ಎಂದು ಹೇಳಿದನು."(ಯೋಹಾನ 8:31-32)

ದುರಾತ್ಮಗಳಿಂದ ಬಿಡುಗಡೆ ಹೊಂದಿದ ವ್ಯಕ್ತಿಯು ದೇವರ ವಾಕ್ಯಗಳನ್ನು ಓದುವುದಕ್ಕೂ ಧ್ಯಾನಿಸುವುದಕ್ಕೂ ಸಮಯ ಕೊಡುವಂತದ್ದು ಬಹಳ ಮುಖ್ಯವಾದ ವಿಷಯವಾಗಿದೆ.

"ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನಮಾಡುತ್ತಾ ಕೀರ್ತನೆ ಹಾಡುತ್ತಾ."(ಎಫೆಸದವರಿಗೆ 5:18-19)

 ನಾವು ನಿರಂತರವಾಗಿ ದೇವರ ಆತ್ಮದಿಂದ ತುಂಬಿ ನಮಗೆ ಸಿಕ್ಕ ಬಿಡುಗಡೆಯನ್ನು ಕಾಯ್ದುಕೊಳ್ಳುವುದು ಅವಶ್ಯಕ ಎಂದು ದೇವರ ವಾಕ್ಯವು ನಮಗೆ ಹೇಳುತ್ತದೆ. ಮತ್ತಾಯ  12:43-45 ರಲ್ಲಿನ  ಆ ವ್ಯಕ್ತಿಯ ಜೀವಿತವು ಖಾಲಿಯಾಗಿತ್ತು ಆದ್ದರಿಂದಲೇ ದುರಾತ್ಮ ಅವನ ಮೇಲೆ ಮತ್ತೆ ಆಳ್ವಿಕೆ ಮಾಡಿತು. ಆ ವ್ಯಕ್ತಿಯು ದೇವರ ಆತ್ಮನಿಂದ ತುಂಬಿಸಲ್ಪಟ್ಟವನಾಗಿ ತನಗೆ ಸಿಕ್ಕ ಬಿಡುಗಡೆಯನ್ನು ಕಾಯ್ದುಕೊಂಡಿದ್ದರೆ ಮತ್ತೆ ಆ ವ್ಯಕ್ತಿಯು ನರಳಬೇಕಾದ ಅವಶ್ಯಕತೆ ಇರಲಿಲ್ಲ.

ಆದರಿಂದಲೇ ಯಾವ ವ್ಯಕ್ತಿಯೂ ಬಿಡುಗಡೆಯನ್ನು ಹೊಂದಿಕೊಳ್ಳುತ್ತಾನೋ ಅವನು  ಆತ್ಮಭರಿತವಾದ ಸಭಾ ಸೇವಾ ಕೂಟವನ್ನು ಭಾಗವಹಿಸಲೇಬೇಕು. ಅಂತಹ ಸೇವೆಯಲ್ಲಿ ದೇವರ ವಾಕ್ಯವು ಮತ್ತು ದೇವರಾತ್ಮವು  ಆ ವ್ಯಕ್ತಿಯನ್ನು ನಡೆಸುತ್ತಾ ಆ ವ್ಯಕ್ತಿಯನ್ನು ಮತ್ತಷ್ಟು ಸದೃಢವಾಗುವಂತೆ ಮಾಡುತ್ತದೆ. ಇದಕ್ಕಾಗಿಯೇ ನಾನು ಜನರನ್ನು ನಮ್ಮ ಆನ್ಲೈನ್ ಸೇವೆಯಲ್ಲಿ ಭಾಗವಹಿಸುವಂತೆ ಒತ್ತಾಯ ಪಡಿಸುತ್ತೇನೆ.

ಕಡೆಯದಾಗಿ ಯಾವಾಗಲೂ ಆದಷ್ಟು ನಿಮ್ಮ ಮನೆಯಲ್ಲಿ ನಿಮ್ಮ ಕಾರಿನಲ್ಲಿ ಇತ್ಯಾದಿ... ಆರಾಧನೆ ಗೀತೆಗಳನ್ನು ಕೇಳುತ್ತಲೇ ಇರಿ. ಇದು ನಿಮ್ಮನ್ನು ಬಿಡುಗಡೆಯ ವಾತಾವರಣದಲ್ಲಿ ಅಕ್ಷರಶಃ ಜೀವಿಸುವಂತೆ ಸಹಾಯ ಮಾಡುತ್ತದೆ.‭"ಆ ಕರ್ತನು ದೇವರಾತ್ಮನೇ; ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು."(2 ಕೊರಿಂಥದವರಿಗೆ 3:17)
Prayer
ಕರ್ತನಾದ ಯೇಸುವೇ ನಿನ ವಾಕ್ಯದಲ್ಲಿ ನಿರಂತರವಾಗಿ ಸಮೃದ್ಧಿಯಾಗಿ ಅನುದಿನವು ನಾನು ಬೆಳೆಯುವಂತೆ ಯೇಸು ನಾಮದಲ್ಲಿ ಕೃಪೆ ಕೊಡು. ವರಪ್ರದನಾದ ಪವಿತ್ರಾತ್ಮ ದೇವರೇ, ಯೇಸುನಾಮದಲ್ಲಿ ನನದೆಲ್ಲಾ ತೆಗೆದುಕೋ. ನನ್ನ ಪಾತ್ರೆಯು ತುಂಬಿ ಹೊರ ಸೂಸುವವರೆಗೂ ನನ್ನನ್ನು ತುಂಬಿಸು.ಆಮೆನ್.


Join our WhatsApp Channel


Most Read
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ನೀವಿನ್ನೂ ತಡಮಾಡುತ್ತಿರುವುದೇಕೆ?
● ಕೆಂಪು ದೀಪದ ಎಚ್ಚರಿಕೆ ಗಂಟೆ
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ಎರಡು ಸಾರಿ ಸಾಯಬೇಡಿರಿ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login