हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಓಟವನ್ನು ಓಡಲು ಇರುವ ತಂತ್ರಗಾರಿಕೆ
Daily Manna

ಓಟವನ್ನು ಓಡಲು ಇರುವ ತಂತ್ರಗಾರಿಕೆ

Monday, 9th of June 2025
1 1 98
Categories : ಆಧ್ಯಾತ್ಮಿಕ ಓಟ (Spiritual Race)
ಆದ್ದರಿಂದ, [ಸತ್ಯಕ್ಕೆ ಸಾಕ್ಷಿಯಾಗಿರುವ]  ಇಷ್ಟು ದೊಡ್ಡಸಾಕ್ಷಿಗಳು  ಮೇಘದೋಪಾದಿಯಲ್ಲಿ  ನಮ್ಮ ಸುತ್ತಲೂ ಇರುವುದರಿಂದ,...(ಇಬ್ರಿಯ 12:1 ಆಂಪ್ಲಿಫೈಡ್) 

ಇದರ ಅರ್ಥವೇನೆಂದು ನೀವು ನೋಡಿದ್ದೀರಾ? - ಇದರರ್ಥ ದಾರಿಯನ್ನು ಬೆಳಗಿಸಿದ ಈ ಎಲ್ಲಾ ಪ್ರವರ್ತಕರು, ಈ ಎಲ್ಲಾ ಅನುಭವಿಗಳು ಅವರ ಅನುಭವಗಳ ಮೂಲಕ  ನಮ್ಮನ್ನು ಹುರಿದುಂಬಿಸುತ್ತಿದ್ದಾರೆ  ಆದರಿಂದ   ನಾವು ಅವರ ಹೆಜ್ಜೆ ಜಾಡನ್ನು ಮುಂದುವರಿಸುವುದು ಉತ್ತಮ ಎಂಬುದಾಗಿದೆ. (ಇಬ್ರಿಯ 12:1 ಮೆಸೇಜ್ ) 

ಈ ಓಟದಲ್ಲಿ ನಾವು ಒಬ್ಬಂಟಿಯಾಗಿಲ್ಲ ಎಂಬುದನ್ನು ನಾವು ಮೊದಲು ನೆನಪಿನಲ್ಲಿಡಬೇಕು. ಸಾಕ್ಷಿಗಳ ದೊಡ್ಡ ಮೇಘವೇ  ನಮ್ಮನ್ನು ಗಮನಿಸುತ್ತಿದೆ ಎಂಬುದನ್ನು ನಾವು ಯಾವಾಗಲೂ  ನೆನಪಿನಲ್ಲಿಡಬೇಕು. ಇವರು ಸತ್ಯದಲ್ಲಿ ನಿಂತು ಬದುಕಿದ ಜನರು ಮತ್ತು ಈಗ ಕರ್ತನೊಂದಿಗೆ ಇದ್ದಾರೆ. ಒಳ್ಳೆಯ ಸುದ್ದಿ ಏನೆಂದರೆ ಅವರು ಕೇವಲ ನಮ್ಮನ್ನು ನೋಡುತ್ತಿಲ್ಲ;ಬದಲಾಗಿ  ಅವರು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದನ್ನು ನೆನಪಿನಲ್ಲಿಟ್ಟುಕೊಂಡು, ನಾವು ನಮ್ಮ ಓಟದೊಂದಿಗೆ ಮುಂದುವರಿಯಬೇಕು. 

ನಾವು ಸುಖಾ ಸುಮ್ಮನೆ ಎಲ್ಲೆಲ್ಲೋ ಸುತ್ತಾಡಲು ಸಾಧ್ಯವಿಲ್ಲ. ಎರಡನೆಯದಾಗಿ, ಶಾಸ್ತ್ರವು ಹೇಳುವುದೇನೆಂದರೆ , "ನಮಗೆ ಸುಲಭವಾಗಿ ಅಂಟಿಕೊಳ್ಳುವ ಮತ್ತು ನಾವು ಸಿಕ್ಕಿಹಾಕಿಕೊಳ್ಳಬಲ್ಲಂತಹ  ಎಲ್ಲಾ ಹೊರೆಗಳನ್ನು (ಅನಗತ್ಯ ಭಾರ) ಮತ್ತು ಪಾಪವನ್ನು ತೆಗೆದುಹಾಕಿ ಬದಿಗಿಡೋಣ, (ಇಬ್ರಿಯ 12:1 (b)  ಆಂಪ್ಲಿಫೈಡ್)

ನೀವು ಆಧುನಿಕ ಕ್ರೀಡಾಪಟುಗಳನ್ನು ಗಮನಿಸಿ  ನೋಡಿ, ಅವರ ದೇಹದ ಮೇಲೆ ಯಾವುದೇ ದಪ್ಪನಾದ ಬಟ್ಟೆಗಳು ಅಥವಾ ಅನಗತ್ಯ ತೂಕವಿರುವುದಿಲ್ಲ. ಇದು ಅವರು ತಮ್ಮ ಓಟವನ್ನು ಕಡಿಮೆ ಸಮಯದಲ್ಲಿ ಓಡಲು ಸಹಾಯ ಮಾಡುತ್ತದೆ. ರೇಸಿಂಗ್ ಕಾರುಗಳಿಗೆ ಬಳಸುವ ಸಾಮಾನ್ಯ ವಸ್ತುಗಳು ಸಹ  ಕಾರ್ಬನ್ (ಗ್ರ್ಯಾಫೈಟ್) ಆಗಿದ್ದು ಅವು ಹಗುರವಾದ ವಸ್ತುಗಳು ಎಂದು  ಹೇಳಲಾಗುತ್ತದೆ. ಇದು ಅದಕ್ಕೆ ಕಡಿಮೆ ಇಂಧನವನ್ನು ಬಳಸಲು ಸಹಾಯ  ಮಾಡುತ್ತದೆ, ಕಡಿಮೆ ಎಳೆತವನ್ನು ಬಳಸಿ  ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಅದೇ ರೀತಿ, ಆತ್ಮೀಕ ಓಟವನ್ನು ಓಡುವಾಗ, ನಮ್ಮನ್ನು ನಿಧಾನ ಪಡಿಸುವ  ಅಥವಾ ನಮ್ಮನ್ನು ತಡೆಹಿಡಿಯುವ ಯಾವುದೇ ಸಂಗತಿ ಇದ್ದರೂ  ನಾವು ಅವುಗಳನ್ನು ತೆಗೆದುಹಾಕಬೇಕು.

ಇಂದು, ನಿಮ್ಮನ್ನು ನಿಧಾನಗೊಳಿಸುವ ಮತ್ತು ಆತ್ಮೀಕ ಓಟವನ್ನು ಪರಿಣಾಮಕಾರಿಯಾಗಿ ಓಡದಂತೆ ನಿಮ್ಮನ್ನು ತಡೆಯುವ ವಿಷಯಗಳು ಯಾವಾವು ನಿಮ್ಮಲ್ಲಿ ಇವೆ ಎಂಬುದನ್ನು ಚೆನ್ನಾಗಿ ಗಮನಿಸಿ ನೋಡಿ ಪರಿಶೀಲಿಸಿರಿ . ನಂತರ ದೇವರವಾಕ್ಯವು  ನಮಗೆ ಪಾಪವು ನಮ್ಮನ್ನು ಸಿಕ್ಕಿಸುವಂತದ್ದು  ಮತ್ತು ನಾವು ಓಟವನ್ನು ಓಡುವಾಗ ಅಕ್ಷರಶಃ ನಮ್ಮನ್ನು ಎಡವಿ ಬೀಳಿಸುವಂತದ್ದು ಎಂದು ಹೇಳುತ್ತದೆ. ಈಗ ನೀವು ಓಟವನ್ನು ಓಡುತ್ತಿರುವಾಗ ಎಡವಿ ಬೀಳುವುದನ್ನು ಊಹಿಸಿ, ಅದು ನಿಮ್ಮನ್ನು ಓಟದಿಂದ ಸಂಪೂರ್ಣವಾಗಿಯೇ  ತೆಗೆದುಹಾಕಬಹುದು ಅಥವಾ ನಿಜವಾಗಿಯೂ ನಿಮ್ಮ ಆತ್ಮೀಕ ಪ್ರಗತಿಯನ್ನು ಕುಂಟಿತಗೊಳಿಸುತ್ತದೆ. ಅದಕ್ಕಾಗಿಯೇ ನಾವು ಪಾಪದಿಂದ ದೂರವಿರಬೇಕು. 

“ಕರ್ತನೇ, ಪಾಪದಿಂದ ದೂರವಿರಲು ಮತ್ತು ಯಾವಾಗಲೂ ನಿಮಗೆ ಹತ್ತಿರವಾಗಿರಲು ನನಗೆ ಅನುಗ್ರಹವನ್ನು ನೀಡು.” ಎನ್ನುವ ಪ್ರವಾದಿಯವರಾದ ಟಿ.ಬಿ. ಜೋಶುವಾ ಅವರ ಪ್ರಾರ್ಥನೆಗಳಲ್ಲಿ ಒಂದನ್ನು ನಾನು ಇಷ್ಟಪಡುತ್ತೇನೆ

Bible Reading: Nehemiah 4-6
Prayer
ತಂದೆಯೇ, ನಾನು ನಿನ್ನ ಮಹಿಮೆಯನ್ನು ಪಡೆಯಲು ವಿಫಲನಾಗಲು ಮಾಡಿರುವಂತ ಯಾವುದೇ ರೀತಿಯ ಅಪರಾಧವಾಗಿದ್ದರೂ ನನ್ನನ್ನು ಯೇಸುನಾಮದಲ್ಲಿ ಕ್ಷಮಿಸಿ, . ಇಂದು ಮತ್ತು ಯಾವಾಗಲೂ ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ


Join our WhatsApp Channel


Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಂಬಿಕೆಯ ಜೀವಿತ
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ಆತನಿಗೆ ಯಾವುದೇ ಮಿತಿಯಿಲ್ಲ.
● ಶರಣಾಗತಿಯಲ್ಲಿರುವ ಸ್ವಾತಂತ್ರ್ಯ
● ಅಲೆದಾಡುವುದನ್ನು ನಿಲ್ಲಿಸಿ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login