Daily Manna
1
1
75
ಆತ್ಮವಂಚನೆ ಎಂದರೇನು? - II
Saturday, 10th of May 2025
Categories :
ವಂಚನೆ (Deception)
ಯಾರಾದರೂ ತಮ್ಮನ್ನೇ ತಾವು ಮೋಸಗೊಳಿಸಿ ಕೊಳ್ಳುವುದು ಎಂದರೆ:
b.ಅವರು ನಿಜವಾಗಿಯೂ ಹೊಂದಿರುವುದಕ್ಕಿಂತಲೂ ಹೆಚ್ಚಿನದನ್ನು ಹೊಂದಿದ್ದೇವೆ ಎಂದು ಭಾವಿಸುವುದಾಗಿದೆ:
ಈ ರೀತಿಯ ಆತ್ಮವಂಚನೆಯು ಒಬ್ಬರ ಆಸ್ತಿ, ಸಾಧನೆಗಳು ಅಥವಾ ಸ್ಥಾನಮಾನವನ್ನು ಅತಿಯಾಗಿ ಅಂದಾಜು ಮಾಡುವುದನ್ನು ಒಳಗೊಂಡಿರುತ್ತದೆ. ಅದು ಭೌತಿಕ ಸಂಪತ್ತು, ಬೌದ್ಧಿಕ ಪರಾಕ್ರಮ ಅಥವಾ ಆತ್ಮೀಕ ಬೆಳವಣಿಗೆಯಾಗಿರಬಹುದು.
"ಜನರಿಗೆ - ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ ಎಂದು ಹೇಳಿ ಒಂದು ಸಾಮ್ಯವನ್ನು ಹೇಳಿದನು; ಅದೇನಂದರೆ ಒಬ್ಬಾನೊಬ್ಬ ಐಶ್ವರ್ಯವಂತನ ಭೂವಿುಯು ಚೆನ್ನಾಗಿ ಬೆಳೆಯಿತು. ಆಗ ಅವನು ತನ್ನೊಳಗೆ - ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲವಲ್ಲಾ ಎಂದು ಆಲೋಚಿಸಿ - ಒಂದು ಕೆಲಸ ಮಾಡುತ್ತೇನೆ; ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿಟ್ಟು ನನ್ನ ಜೀವಾತ್ಮಕ್ಕೆ - ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಿದ್ದದೆ; ವಿಶ್ರವಿುಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು ಅಂದುಕೊಂಡನು. ಆದರೆ ದೇವರು ಅವನಿಗೆ - ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು ಎಂದು ಹೇಳಿದನು." (ಲೂಕ 12:16-21)
ದೃಷ್ಟಾಂತದಲ್ಲಿರುವ ಶ್ರೀಮಂತನು ತನ್ನ ಸಂಪತ್ತು ಮತ್ತು ಆಸ್ತಿಗಳೇ ತನ್ನ ಭವಿಷ್ಯದಲ್ಲಿ ತನ್ನನ್ನು ಕಾಪಾಡುವಂತದ್ದು ಎಂದು ನಂಬಿದ್ದನು, ಆದರೆ ಆತ್ಮೀಕ ಸಂಪತ್ತಿನ ನಿಜವಾದ ಮೌಲ್ಯ ಮತ್ತು ದೇವರೊಂದಿಗಿನ ತನ್ನ ಸಂಬಂಧವನ್ನು ಗುರುತಿಸುವಲ್ಲಿ ಅವನು ವಿಫಲನಾದನು. ಆ ಮನುಷ್ಯನನ್ನು ದೇವರು ಮೂರ್ಖನೆಂದು ಕರೆದದ್ದು ಅವನು ಶ್ರೀಮಂತನಾಗಿದ್ದರಿಂದಲ್ಲ, ಬದಲಾಗಿ ಶಾಶ್ವತತೆಯ ಅರಿವು ಮತ್ತು ಅದಕ್ಕೆ ಬೇಕಾದ ಸಿದ್ಧತೆ ಇಲ್ಲದೆ ಬದುಕಿದ್ದರಿಂದ. ಜೀವನದಲ್ಲಿ ಮುಂದೆ ಏನೇ ಆದರೂ ತನ್ನ ಬಳಿ ಸಾಕಷ್ಟು ಸಂಪತ್ತಿದೆ ಎಂದು ಯೋಚಿಸಿಕೊಳ್ಳುವ ಅವನ ಬುದ್ದಿ ಅವನನ್ನು ವಂಚಿಸಿತ್ತು.
ಒಬ್ಬ ಪಾಸ್ಟರ್ ಆಗಿ , ಇತ್ತೀಚೆಗೆ ಕ್ರೂಸ್ ಲೈನರ್‌ನಲ್ಲಿ ವಿದೇಶದಲ್ಲಿ ಕೆಲಸ ಮಾಡಿ ಹಿಂದಿರುಗಿದ ವ್ಯಕ್ತಿಯ ಸುಂದರವಾದ, ಐಷಾರಾಮಿ ಮನೆಗೆ ಭೇಟಿ ನೀಡಲು ನನ್ನನ್ನು ಒಮ್ಮೆ ಆಹ್ವಾನಿಸಲಾಯಿತು. ಹೆಮ್ಮೆ ಮತ್ತು ದುರಹಂಕಾರದಿಂದ ತುಂಬಿದ್ದ ಆ ವ್ಯಕ್ತಿ, ತನ್ನ ಸಾಧನೆಗಳ ಕುರಿತು ಜಂಬ ಕೊಚ್ಚಿಕೊಳ್ಳಲು ಪ್ರಾರಂಭಿಸಿದನು, ತನ್ನ ಈ ಯಶಸ್ಸಿಗೆ ಕಾರಣವಾದದ್ದು ತನ್ನ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವೇ ಎಂದು ಹೇಳಿದನು. ಅವನು ತನ್ನ ಮನೆಯ ಭವ್ಯ ನೋಟವನ್ನು ನನಗೆ ತೋರಿಸುತ್ತಾ ಹೋದನು ಅವೆಲ್ಲವೂ ಅತಿರಂಜಿತ ಪೀಠೋಪಕರಣಗಳು ಮತ್ತು ದುಬಾರಿ ಕಲಾಕೃತಿಗಳಿಂದ ತುಂಬಿತ್ತು.
ನಮ್ಮ ಸಂಭಾಷಣೆಯ ಸಮಯದಲ್ಲಿ, ಆ ಮನುಷ್ಯನು ದೇವರನ್ನು ಮತ್ತು ಆತನ ಸೇವಕರನ್ನು ಕೀಳಾಗಿ ಕಾಣಲು ಪ್ರಾರಂಭಿಸಿ, ವಾರದಲ್ಲಿ ಒಂದು ದಿನ ಮಾತ್ರ ದೇವರಿಗೆ ಮೀಸಲಿಡುವುದು ಸಾಕು ಎಂದು ಹೇಳಿಕೊಂಡನು. ಆ ಮನುಷ್ಯನ ತಪ್ಪು ನಂಬಿಕೆಗಳನ್ನು ಗ್ರಹಿಸಿದ ನಾನು, ಅವನನ್ನು ಸಾವಧಾನವಾಗಿ ತಿದ್ದುತ್ತಾ ಅದು ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದಾದ್ದರಿಂದ ದೇವರ ವಿರುದ್ಧ ಮಾತನಾಡದಂತೆ ಅವನನ್ನು ಎಚ್ಚರಿಸಿದೆ. ಅವನ ಸಾಧನೆಗಳು ಮತ್ತು ಆಸ್ತಿಗಳು ವಾಸ್ತವವಾಗಿ ದೇವರಿಂದ ಬಂದ ಉಡುಗೊರೆಗಳು ಎಂದು ನಾನು ಅವನಿಗೆ ನೆನಪಿಸಿದೆ.
ಆ ಮನುಷ್ಯನು ನನ್ನನ್ನು ನೋಡಿ ನಕ್ಕು , ತಾನು ಎಲ್ಲವನ್ನೂ ತಾನೇ ಸ್ವತಃ ಸಂಪಾದಿಸಿದ್ದು ಅವನ ಯಶಸ್ಸಿನಲ್ಲಿ ದೇವರಿಗೆ ಯಾವುದೇ ಪಾತ್ರವಿಲ್ಲ ಎಂದು ಒತ್ತಿ ಹೇಳಿದನು. ಅವನು ನನ್ನ ಸಲಹೆಯನ್ನು ಸ್ವೀಕರಿಸದೆ ಅರ್ಥ ಮಾಡಿಕೊಳ್ಳದವನ್ನಾಗಿಯೇ ಉಳಿದನು. ಕೆಲವು ತಿಂಗಳುಗಳ ನಂತರ, ಈ ಮನುಷ್ಯನು ಹೃದಯಾಘಾತದಿಂದ ಇದ್ದಕ್ಕಿದ್ದಂತೆ ನಿಧನರಾದನು ಎಂಬ ಸುದ್ದಿ ನನಗೆ ಸಿಕ್ಕಿತು.
"ನೀನು ನಿನ್ನ ವಿಷಯದಲ್ಲಿ - ನಾನು ಐಶ್ವರ್ಯವಂತನು, ಸಂಪನ್ನನು, ಒಂದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು ಆಗಿರುವದನ್ನು ತಿಳಿಯದೆ ಇದ್ದೀ." (ಪ್ರಕಟನೆ 3:17)
ಲವೊದಿಕೀಯದ ಚರ್ಚ್ ಆತ್ಮೀಕವಾಗಿ ದುರವಸ್ಥೆಯಲ್ಲಿದ್ದರೂ ಅವರು ತಮ್ಮ ಆತ್ಮೀಕ ಸ್ಥಿತಿಯ ಬಗ್ಗೆ ತಮ್ಮದೇ ಆದ ಗ್ರಹಿಕೆಯಿಂದ ಮೋಸ ಹೋಗಿದ್ದರು. ಅವರು ತಮ್ಮೊಳಗೆ ತಾವೇ ಅಳತೆಮಾಡಿಕೊಂಡು ತಾವು ಸಂಪತ್ತುಳ್ಳವರು , ಐಶ್ವರ್ಯವಂತರು ತಮಗೆ ಯಾವ ಕೊರತೆಯೂ ಇಲ್ಲಾ ಎಂದೇ ನಂಬಿದ್ದರು. ಆದರೆ ಮತ್ತಾಯ 5:3 ರಲ್ಲಿ ಯೇಸು ಹೊಗಳಿ ಹೇಳಿದ "ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕರಾಜ್ಯವು ಅವರದು." ಎನ್ನುವ ಆತ್ಮೀಕ ದೀನತೆಗೆ ಬಹಳ ದೂರವಿದ್ದರು,
ಆದರೆ ಕರ್ತನಾದ ಯೇಸು ಅವರ ನಿಜವಾದ ಆತ್ಮೀಕ ಸ್ಥಿತಿಯನ್ನು ನೋಡಿದಾಗ ಅವರು ಕೊರತೆಯುಳ್ಳವರಾಗಿದ್ದರು. ಆತನು ಅವರ ಆತ್ಮಗಳನ್ನು ನೋಡಿದನು ಅವರ ದುರವಸ್ಥೆಯನ್ನು ಕಂಡನು. ಆತನು ಮತ್ತೊಮ್ಮೆ ನೋಡುವಾಗ ಅವರಿಗುಂಟಾಗುವ ಅವರ ದುಃಖವನ್ನು ನೋಡಿದನು. ಮೂರನೆಯ ಬಾರಿ, ಯೇಸು ಅವರ ಹೃದಯಗಳನ್ನು ನೋಡಿದಾಗ ಅವರು ಆತ್ಮದಲ್ಲಿ ದಾರಿದ್ರ್ಯದಲ್ಲಿ ಇರುವುದನ್ನು ಕಂಡುಕೊಂಡನು. ಅವರನ್ನು ಮತ್ತೂ ಪರೀಕ್ಷಿಸುವುದನ್ನು ಮುಂದುವರಿಸಿದಾಗ, ಅವರು ಸತ್ಯವನ್ನು ಮತ್ತು ಅವರ ಆತ್ಮೀಕ ಅಗತತ್ಯತೆಯನ್ನು ಗುರುತಿಸಲಾಗದಷ್ಟು ಕುರುಡರಾಗಿದ್ದಾರೆಂದು ಆತನು ಕಂಡುಕೊಂಡನು. ಅಂತಿಮವಾಗಿ, ಅವರು ಆತ್ಮೀಕವಾಗಿ ಬೆತ್ತಲೆಯಾಗಿದ್ದು , ಆತನೊಂದಿಗಿನ ಬೆಸೆದುಕೊಳ್ಳಬೇಕಾದ ನಿಕಟ ಸಂಬಂಧದಿಂದ ಸಿಗುವಂತ ನಿಜವಾದ ಐಶ್ವರ್ಯ ಮತ್ತು ನೀತಿಯಿಂದ ವಂಚಿತರಾಗಿದ್ದಾರೆಂದು ಯೇಸು ಅವರಿಗೆ ಬಹಿರಂಗಪಡಿಸಿದನು.
ಬಾಹ್ಯನೋಟಕ್ಕೆ ಕಾಣುವ ಅವರ ಯಶಸ್ಸು ಮತ್ತು ಸಮೃದ್ಧಿಯ ಹೊರತಾಗಿಯೂ, ಲವೊದಿಕೀಯದ ಜನರು ತಮ್ಮ ಆತ್ಮೀಕ ದಾರೀದ್ರ್ಯದ ಕುರಿತು ಅವರಿಗೆ ಅರಿವನ್ನು ಹೊಂದಿರಲಿಲ್ಲ. ಅವರು ತಾವು ಸ್ವಾವಲಂಬಿಗಳೆಂದು ಯೋಚಿಸುತ್ತಾ ತಮಗೆ ತಾವೇ ವಂಚನೆ ಮಾಡಿಕೊಂಡರು, ಆದರೆ ವಾಸ್ತವದಲ್ಲಿ, ಅವರು ನಿಜವಾಗಿಯೂ ಮುಖ್ಯವಾದ ಒಂದು ವಿಷಯದ ಕೊರತೆಯನ್ನು ಹೊಂದಿದ್ದರು: ಅದು ಕರ್ತನೊಂದಿಗೆ ಇರಬೇಕಾದ ದೀನತೆಯಿಂದ ಕೂಡಿದ ಯಥಾರ್ಥವಾದ ಸಂಬಂಧ. ಇದು ನಮಗೆಲ್ಲರಿಗೂ ನಮ್ಮ ಸ್ವಂತ ಹೃದಯಗಳು ಮತ್ತು ಮನಸ್ಸುಗಳನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳಲು ಒಂದು ಸ್ಪಷ್ಟ ಜ್ಞಾಪನೆಯಾಗಿದೆ. ಇದನ್ನು ಅರಿತುಕೊಂಡರೆ ನಾವು ನಮ್ಮನ್ನೇ ಮೋಸಗೊಳಿಸಿಕೊಳ್ಳುವುದಿಲ್ಲ ಮತ್ತು ಲವೊದಿಕೀಯದ ಸಭೆಯನ್ನು ಬಾಧಿಸುತ್ತಿದ್ದ ಅದೇ ಭ್ರಮೆಗಳಿಗೆ ನಾವು ಬಲಿಯಾಗುವುದಿಲ್ಲ ಎಂಬುದರಲ್ಲಿ ಖಚಿತವಾಗಿರಬಹುದು.
Bible Reading: 2 Kings 17-18
Prayer
ಪರಲೋಕದ ತಂದೆಯೇ, ನಿನ್ನ ಅನಂತ ಜ್ಞಾನದ ಮೂಲಕ, ನನ್ನನ್ನು ಆತ್ಮವಂಚನೆಯಿಂದ ಬಿಡಿಸು. ನನ್ನ ಆತ್ಮೀಕ ದಾರಿದ್ರ್ಯವನ್ನು ಗುರುತಿಸಿಕೊಳ್ಳಲು ಮತ್ತು ನಿನ್ನ ಸತ್ಯವನ್ನು ಪರಿಶೋಧಿಸಲು ನನಗೆ ದೀನ ಹೃದಯವನ್ನು ಅನುಗ್ರಹಿಸು. ನನ್ನ ನಿಜವಾದ ಸ್ವಭಾವವನ್ನು ಕಂಡುಕೊಳ್ಳುವಂತೆ ನನ್ನ ಕಣ್ಣುಗಳನ್ನು ತೆರೆ ಮಾಡು ಮತ್ತು ನಿನ್ನ ನೀತಿಯ ಮಾರ್ಗಗಳಲ್ಲಿ ನನ್ನನ್ನು ಮಾರ್ಗದರ್ಶಿಸಿ ನಡೆಸು. ನಿನ್ನ ಸತ್ಯ ಮತ್ತು ಪ್ರೀತಿಯಲ್ಲಿ ನಡೆಯುತ್ತಾ, ನಾನು ಯಾವಾಗಲೂ ನಿನ್ನ ಕೃಪೆ ಮತ್ತು ಜ್ಞಾನದ ಮೇಲೆಯೇ ಯೇಸುನಾಮದಲ್ಲಿ ಆತುಕೊಳ್ಳುವೆನು. ಆಮೆನ್!
Join our WhatsApp Channel

Most Read
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಎಲ್ಲಿ ಸ್ತುತಿಸ್ತೋತ್ರವೋ ಅಲ್ಲಿ ದೇವರು ನೆಲೆಸಿರುತ್ತಾನೆ.
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
● ಕರ್ತನ ಸೇವೆ ಮಾಡುವುದು ಎಂದರೇನು-I
● ಕ್ರಿಸ್ತನ ಮೂಲಕ ಜಯಶಾಲಿಗಳು
● ಬೇರಿನೊಂದಿಗೆ ವ್ಯವಹರಿಸುವುದು
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
Comments