हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಆಳವಾದ ನೀರಿನೊಳಗೆ
Daily Manna

ಆಳವಾದ ನೀರಿನೊಳಗೆ

Wednesday, 13th of November 2024
3 1 303
Categories : ಶಿಷ್ಯತ್ವ (Discipleship)
"ಅವನು ಮತ್ತೆ ಸಾವಿರ ಮೊಳ ಅಳೆದನು. ಅದು ನನ್ನಿಂದ ದಾಟಲಾಗದ ನದಿಯಾಗಿತ್ತು; ನೀರು ಆಳವಾಗಿ ಈಜಾಡುವಷ್ಟು ಪ್ರವಾಹವಾಗಿತ್ತು, ದಾಟಲಾಗದ ನದಿಯಾಗಿತ್ತು."(ಯೆಹೆ 47:5)

ನೀವು ಚಿಕ್ಕ ಮಕ್ಕಳಾಗಿರುವಾಗ , ಪ್ರಾಯಶಃ ನೀವು ಸಮುದ್ರತೀರಕ್ಕೆ ಪ್ರವಾಸಕ್ಕೆ ಹೋಗಿರಬಹುದು. ನಾನು ಅಂತಹ ಒಂದು ಸಮಯವನ್ನು ನೆನಪಿಸಿಕೊಳ್ಳುತ್ತೇನೆ, ನಾನೂ ಸಹ ಸಮುದ್ರ ತೀರಕ್ಕೆ ಹೋದಾಗ  ನನ್ನ ಮೊಣಕಾಲುಗಳವರೆಗೆ ಅಲೆಗಳು ಅಪ್ಪಳಿಸುವವರೆಗೂ ಆದಮೇಲೆ  ನಾನು ಇನ್ನೂ ಮುಂದಕ್ಕೆ  ಚಲಿಸಲು ಪ್ರಯತ್ನಿಸುವಾಗ, ನಾನು ನನ್ನ ಸಮತೋಲನವನ್ನು ಕಳೆದುಕೊಂಡು ನೀರಿನಲ್ಲಿ ಬೀಳಲು ಪ್ರಾರಂಭಿಸಿ  ತುಂಬಾ ಭಯಭೀತನಾಗಿದ್ದೆ, ಆಗ ನಾನು (ನನ್ನ ಪಕ್ಕದಲ್ಲಿದ್ದ) ನನ್ನ ಕುಟುಂಬ ಸದಸ್ಯರನ್ನು  ಸಹಾಯಕ್ಕಾಗಿ ಕಿರುಚಿಕೊಂಡಿದ್ದೆ. ಆದರೆ  ಆಗ ಇನ್ನೊಂದು ಅಲೆ ನನಗೆ ಬಡಿದಿದ್ದರಿಂದ ಸಮುದ್ರ ಹೊರ ತೀರಕ್ಕೆ ನೂಕಲ್ಪಟ್ಟೆ. 

ಕೆಲವೊಮ್ಮೆ ನಮ್ಮ ದೇವರು ಸಹ ನಮ್ಮನ್ನು ಅಂತಹ ಆಳವಾದ ನೀರಿನೊಳಕ್ಕೆ  ಸೆಳೆದುಕೊಂಡು ಹೋಗುತ್ತಾನೆ. ನಾವು ನಮ್ಮ ಜೀವಿತದಲ್ಲಿ ಕೆಲವೊಂದು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ  ನಿಯಂತ್ರಣವನ್ನು ಕಳೆದುಕೊಳ್ಳುವವರಾಗುತ್ತೇವೆ ಆಗ ನಮಗೆ ಆತನ ಕಾರ್ಯವನ್ನು ಸಂಪೂರ್ಣವಾಗಿ ನಂಬುವುದನ್ನು ಬಿಟ್ಟು ನಮಗೆ ಬೇರೆ ಯಾವುದೇ  ಆಯ್ಕೆಯಿರುವುದಿಲ್ಲ. ಆ ಸಮಯದಲ್ಲಿ  ನಾವು ಆತನನ್ನು ಕೂಗಿದಾಗ, ನಾವು ದೇವರ ಕಾರ್ಯಗಳನ್ನು, ದೇವರ ಕೈ ಪರ್ವತಗಳನ್ನು ಕದಲಿಸುವುದನ್ನು ನೋಡುತ್ತೇವೆ. 


"ಹಡಗು ಹತ್ತಿ ಸಮುದ್ರ ಪ್ರಯಾಣ ಮಾಡುತ್ತಾ, ಮಹಾಜಲರಾಶಿಯಲ್ಲಿ ತಮ್ಮ ಉದ್ಯೋಗವನ್ನು ನಡೆಸುವವರು,ಯೆಹೋವನ ಮಹತ್ಕಾರ್ಯಗಳನ್ನೂ, ಅಗಾಧಜಲದಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ.  ಆತನು ಅಪ್ಪಣೆಕೊಡಲು ಬಿರುಗಾಳಿಯುಂಟಾಗಿ, ಅದರಲ್ಲಿ ತೆರೆಗಳನ್ನು ಎಬ್ಬಿಸಿತು. ಜನರು ಆಕಾಶಕ್ಕೆ ಏರುತ್ತಲೂ, ಅಗಾಧಕ್ಕೆ ಇಳಿಯುತ್ತಲೂ ಕಂಗೆಟ್ಟು ಕರಗಿಹೋದರು.  ಅವರು ದಿಕ್ಕುತೋರದವರಾಗಿ ಸುತ್ತುತ್ತಾ, ಕುಡುಕರಂತೆ ಹೊಯ್ದಾಡುತ್ತಿದ್ದರು. ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ಹೊರತಂದನು.  ಆತನು ಬಿರುಗಾಳಿಯನ್ನು ಶಾಂತಪಡಿಸಿದನು; ತೆರೆಗಳು ನಿಂತವು. ಸಮುದ್ರವು ಶಾಂತವಾದುದರಿಂದ, ಹಡಗಿನವರು ಸಂತೋಷಪಟ್ಟರು, ಅವರು ಮುಟ್ಟಬೇಕಾದ ರೇವಿಗೆ ಆತನು ಅವರನ್ನು ಸೇರಿಸಿದನು. ಅವರು ಯೆಹೋವನ ಕೃಪೆಗೋಸ್ಕರವೂ ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ."(ಕೀರ್ತನೆ ಗಳು 107:23-31)

ದೇವರೆಂದರೆ ನಿಮಗನಿಸಿದಾಗ ಮಾತ್ರ  ನೀವು ತಿರುಗಿಕೊಳ್ಳಬಹುದಾದ  ಆಯ್ಕೆಯ ಸಂಗತಿಯಲ್ಲ. ನಿಮಗೆ ಗೊತ್ತಾ? ಕೆಲವೊಮ್ಮೆ ದೇವರನ್ನು ಬಿಟ್ಟು  ಅನ್ಯ ಮಾರ್ಗವೇ ಇಲ್ಲ  ಎಂಬ ಹಂತಕ್ಕೆ ನಾವು ಬರುವವರೆಗೆ ದೇವರ ಶಕ್ತಿಯು ನಮಗೆ  ಗೋಚರಿಸುವುದೇ ಇಲ್ಲ. ಕೆಲವೊಮ್ಮೆ ದೇವರು ನಮ್ಮನ್ನು ದೀರ್ಘ ಸಮಯದವರೆಗೆ ಜೀವನವೆಂಬ  ನದಿಯ ಆಳಕ್ಕೆ  ಕರೆದೊಯ್ಯುತ್ತಾನೆ. 

ಯೋಸೆಫನು 17 ವರ್ಷಗಳ ಕಾಲ ಕಷ್ಟದ ಆಳವಾದ ಜಲರಾಶಿಯಲ್ಲಿ ಹಾದು ಹೋದನು . ಅವನ ಸಹೋದರರಿಂದ ಆದ ತಿರಸ್ಕಾರ , ಫರೋಹನ ಮನೆಯ  ಗುಲಾಮಗಿರಿ ಮತ್ತು ಅನ್ಯಾಯವಾಗಿ ಅನುಭವಿಸಿದ  ಸೆರೆವಾಸವು ಯೋಸೆಫನಿಗೆ ಆಳವಾದ ಜಲರಾಶಿಯಾಗಿತ್ತು. ಆ ಆಳವಾದ ನೀರಿನಲ್ಲಿ ಈಜುವ ಸಮಯದಲ್ಲಿಯೇ, ಅವನು ಕನಸುಗಳನ್ನು ಕಂಡನು.  ಅವನು ಕಳೆದುಕೊಂಡ ವರ್ಷಗಳನ್ನು ಮೀರಿಸುವಂತ  ವಿಶೇಷ ಜ್ಞಾನವನ್ನೂ  ಮತ್ತು ಐಗುಪ್ತವನ್ನು ಆಳ್ವಿಕೆ ಮಾಡಲು ಬೇಕಾದ ಕೃಪಾವರದ ವಿಶೇಷ ಅಭಿಷೇಕವನ್ನು ಅವನು  ಹೊಂದಿಕೊಂಡನು .

ಆ ಆಳವಾದ ನೀರೇ  ಅವನು  ಊಹಿಸಲೂ ಸಾಧ್ಯವಾಗದಂತಹ ಮಹತ್ತರವಾದ ಕಾರ್ಯಕ್ಕಾಗಿ ಇದ್ದ  ಸಿದ್ಧತೆಗಳಾಗಿದ್ದವು. ಅವನು ತನ್ನ ಪೀಳಿಗೆಯಲ್ಲಿಯೇ ಯಾರೂ ಸಹ ಕಾಣದಂತಹ  ದೇವರ ಕಾರ್ಯಗಳನ್ನು ಸ್ಪಷ್ಟವಾಗಿ ನೋಡುವವನಾದನು. ದೇವರು ಅವನನ್ನು  30 ವರ್ಷ ವಯಸ್ಸಿನವರೆಗೂ  ಗೊಂದಲದ ಕಣದಲ್ಲಿರಿಸಿದನು . ತನ್ನ ಜೀವನದಲ್ಲಿ ಎಂತದ್ದೆ ಅಗಾದವು ಎದುರಾದರೂ ತನ್ನನ್ನು ಕಾಯಲು ದೇವರು ತನ್ನ ಜೊತೆಗಿರುವನು ಎಂದು ಯೋಸೆಫನು ಅರಿತುಕೊಳ್ಳುವಂತೆ ಮಾಡುವುದೇ ಆ ಸಿದ್ಧತೆಯ ಉದ್ದೇಶವಾಗಿತ್ತು.

ದೇವರು ನಿಮ್ಮನ್ನು ಆಳವಾದ ನೀರಿಗೆ ಕರೆದೊಯ್ಯಲು ನಿರ್ಧರಿಸಿದರೆ, ಅದು ಒಂದು ಕಾರಣಕ್ಕಾಗಿಯೇ. ನಿಮ್ಮ ಕರೆ ಉನ್ನತವಾದಂತೆಲ್ಲಾ  ನೀರು ಆಳವಾಗಿರುತ್ತದೆ. ನೀವಿಂದು ಹಾದು ಹೋಗುತ್ತಿರುವ  ಆಳವು ದೇವರ ಕಾರ್ಯಗಳನ್ನು ನೋಡಲು ನಿಮ್ಮನ್ನು ಸಿದ್ದಪಡಿಸಲಿರುವುದಕ್ಕಾಗಿಯೇ ಎಂದು ಆತನ ಜ್ಞಾನವನ್ನು ನಂಬಿರಿ.
Prayer
ಪರಲೋಕದ ತಂದೆಯೇ, ನಾನು ಜಾಲರಾಶಿಯನ್ನು ಹಾದು ಹೋಗುವಾಗ ನೀವು ನನಗೆ ಮಾರ್ಗದರ್ಶನ ನೀಡುತ್ತೀರಿ ಎಂದೂ ಮತ್ತು ನಾನು ಕುಗ್ಗಿಹೋಗದಂತೆಯೂ, ನನ್ನ ನಂಬಿಕೆಯು ಕ್ಷೀಣಿಸದಂತೆಯೂ ನನಗೆ ಬಲವನ್ನು ಅನುಗ್ರಹಿಸ ಬೇಕೆಂದು ಯೇಸುವಿನ ಹೆಸರಿನಲ್ಲಿ.ನಾನು ಪ್ರಾರ್ಥಿಸುತ್ತೇನೆ. ಆಮೆನ್


Join our WhatsApp Channel


Most Read
● ಕೃತಜ್ಞತೆಯ ಪಾಠ
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಕ್ಷಮಿಸದಿರುವುದು
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ಸಮಾಧಾನದ ಮೂಲ :ಕರ್ತನಾದ ಯೇಸು
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಎಲ್ಲಿ ಸ್ತುತಿಸ್ತೋತ್ರವೋ ಅಲ್ಲಿ ದೇವರು ನೆಲೆಸಿರುತ್ತಾನೆ. 
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login