ನೀವು ಆದಿಕಾಂಡ 1ನೇ ಅಧ್ಯಾಯ ಓದಿದರೆ, ದೇವರು ಭೂಮಿಯನ್ನು ಮತ್ತು ಅದರಲ್ಲಿರುವ ವಿವಿಧ ಸಂಗತಿಗಳನ್ನು ಸೃಷ್ಟಿಸಿದ ವೃತ್ತಾಂತವನ್ನು ನೀವು ನೋಡುತ್ತೀರಿ.
ಸೃಷ್ಟಿಯ ಪ್ರತಿಯೊಂದು ಹಂತದಲ್ಲಿಯೂ, ದೇವರು ತನ್ನ ಕೆಲಸವನ್ನು ನಿಲ್ಲಿಸಿ ಅದನ್ನು ಮೌಲ್ಯಮಾಪನ ಮಾಡಿ. " ಅದು ಒಳ್ಳೆಯದೆಂದು ನೋಡಿದನು" (ಆದಿಕಾಂಡ 1:4, 10, 12, 18, 21, 25)
ಅಂತಿಮವಾಗಿ, ದೇವರು ತನ್ನ ಸ್ವಂತ ಸ್ವರೂಪದಲ್ಲಿ ಮನುಷ್ಯನನ್ನು ಸೃಷ್ಟಿಸಲು ನಿರ್ಧರಿಸಿದನು. ನಂತರ ಆತನು ಆದಾಮನನ್ನು ತನ್ನ ಸ್ವಂತ ಸ್ವರೂಪ ಮತ್ತು ಹೋಲಿಕೆಯಲ್ಲಿ ಸೃಷ್ಟಿಸಿದನು. ಏದೆನ್ ತೋಟದಲ್ಲಿ ಇರಿಸಿದ ಮೊದಲ ಮನುಷ್ಯನಾದ ಆದಾಮನು, ಭೂಮಿಯ ಮೇಲಿನ ಯಾವುದೇ ಜೀವಿಗಳಂತೆ ಇರಲಿಲ್ಲ.
ಆದರೆ ಆದಾಮನನ್ನು ತೋಟದಲ್ಲಿ ಇರಿಸಿದ ನಂತರ, ದೇವರು ಇನ್ನೂ ಏನೋ ಬೇಕಾಗಿದೆ ಎಂಬುದನ್ನು ಗಮನಿಸಿದನು. ಆದಾಮನು ಅನೇಕ ಅದ್ಭುತ ಪ್ರಾಣಿಗಳು ಮತ್ತು ಪಕ್ಷಿಗಳಿಂದ ಸುತ್ತುವರೆದಿದ್ದರೂ, ಅವನು ಅದೆಷ್ಟೇ ಒಳ್ಳೆಯ ವಾತಾವರಣದಲ್ಲಿದ್ದರೂ - ಅವನು ಒಂಟಿಯಾಗಿದ್ದಾನೆಂಬುದನ್ನು ದೇವರು ನೋಡಿದನು.
ಸತ್ಯವೆಂದರೆ, ನೀವು ಗುಂಪಿನಲ್ಲಿದ್ದರೂ ಸಹ ಒಂಟಿತನವನ್ನು ಅನುಭವಿಸಬಹುದು. ಆದಾಮನ ಒಂಟಿತನವೇ ದೇವರ ಗಮನ ಸೆಳೆದು ದೇವರು ಅದನ್ನು ಮೊದಲು "ಒಳ್ಳೆಯದಲ್ಲ" ಎಂದನು.
ಮತ್ತು ದೇವರಾದ ಕರ್ತನು, "ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ (ಆದಿಕಾಂಡ 2:18)" ಎಂದು ಹೇಳಿದನು.
ಕರ್ತನಾದ ಯೇಸು ಶಿಲುಬೆಯ ಮೇಲೆ ನೇತಾಡುವಾಗ, ಆತನು ತನ್ನ ತಾಯಿ ಮತ್ತು ತಾನು ಪ್ರೀತಿಸಿದ ಶಿಷ್ಯನನ್ನು ನೋಡಿದನು. ನಂತರ ಆತನು ತನ್ನ ತಾಯಿಗೆ, "ಸ್ತ್ರೀಯೇ, ಇಗೋ ನಿನ್ನ ಮಗ!" ಎಂದು ಹೇಳಿದನು. ನಂತರ ಆತನು ಶಿಷ್ಯನಿಗೆ, "ಇಗೋ ನಿನ್ನ ತಾಯಿ!" ಎಂದು ಹೇಳಿದನು. ಆ ಗಂಟೆಯಿಂದ, ಆ ಶಿಷ್ಯನು ಆಕೆಯನ್ನು ತನ್ನ ತಾಯಿಯಾಗಿ ತನ್ನ ಮನೆಗೆ ಕರೆದುಕೊಂಡು ಹೋದನು. (ಯೋಹಾನ 19:26-27)
ಯೇಸು ಈ ರೀತಿ ಅನ್ನಲು ಕಾರಣವೇನು? ನಮ್ಮ ಕರ್ತನು ರಕ್ತಸ್ರಾವದಿಂದ ಶಿಲುಬೆಯ ಮೇಲೆ ನೇತಾಡುತ್ತಾ, ಅಸಹನೀಯ ನೋವು ಮತ್ತು ದೌರ್ಬಲ್ಯದಲ್ಲಿದ್ದಾಗಲೂ, ಆತನು ತನ್ನ ತಾಯಿಯನ್ನು ಒಂಟಿಯಾಗಿ ಮತ್ತು ಏಕಾಂಗಿಯಾಗಿ ನಿಂತಿರುವುದಾಗಿ ನೋಡಿದನೆಂದು ನಾನು ನಂಬುತ್ತೇನೆ.
ಆಕೆಯ ವೃದ್ಧಾಪ್ಯದಲ್ಲಿ ಆಕೆಯನ್ನು ಯಾರೂ ಸಹ ಆರೈಕೆ ಮಾಡದಂತೆ ಆಕೆಯನ್ನು ಹೇಗೆ ಬಿಟ್ಟು ಬಿಡಲಿ? ಎಂದು ಯೋಚಿಸಿರ ಬಹುದು. ಪ್ರವಾದಿ ಸಿಮೆಯೋನನು ಪ್ರವಾದಿಸಿದಂತೆ ಆಕೆಯ ಅಲಗು ನೆಟ್ಟಂತ ಹೃದಯವನ್ನು ಆತನು ಬಹುಶಃ ನೋಡಿದನು. (ಲೂಕ 2:35)
ಶಿಲುಬೆಯ ಮೇಲೆ ಇದ್ದಾಗಲೂ, ಯೇಸು ತನ್ನ ತಾಯಿಯ ಅಗತ್ಯವನ್ನು ಪೂರೈಸಿದನು. ಆತನು ಆಕೆಯ ಒಂಟಿತನವನ್ನು ದೂರ ಮಾಡಿದನು.
ಸಾಯುತ್ತಿರುವಾಗಲೂ ಮತ್ತು ರಕ್ತಸ್ರಾವವಾಗುತ್ತಿರುವಾಗಲೂ ನಮ್ಮ ರಕ್ಷಕನು ಯಾರೊಬ್ಬರ ಅಗತ್ಯಗಳನ್ನು ಪೂರೈಸಲು ಸಾಧ್ಯವಾದರೆ, ಇಂದು ಆತನು ಪರಲೋಕದಲ್ಲಿ ಮಹಾಪ್ರಭುತ್ವದ ಸಿಂಹಾಸನದ ಬಲಗಡೆಯಲ್ಲಿ ಕುಳಿತಿರುವಾಗ ಇನ್ನೂ ಎಷ್ಟು ಹೆಚ್ಚಾಗಿ ಒಬ್ಬಂಟಿಗರ ಹೋರಾಟವನ್ನು ಬದಲಿಸಬಲ್ಲನಲ್ಲವೇ. (ಇಬ್ರಿಯ 8:1)
ನೀವು ಒಂಟಿತನದ ಸಮಸ್ಯೆಯಲ್ಲಿ ಹೋರಾಡುತ್ತಿದ್ದೀರಾ? ನೀವು ಒಂಟಿಯಾಗಿದ್ದು ತಿರಸ್ಕರಿಸಲ್ಪಟ್ಟವರು ಎಂದು ಭಾವಿಸುತ್ತೀರಾ? ಹಾಗಾದರೆ ಇದನ್ನೆಲ್ಲ ಅನುಭವಿಸಿದ ಮತ್ತು ನಿಮ್ಮ ಒಂಟಿತನವನ್ನು ತೊಡೆದುಹಾಕಲು ಶಕ್ತನಾಗಿರುವ ಯೇಸುವಿನ ಕಡೆಗೆ ನೋಡುವ ಸಮಯ ಬಂದಿದೆ.
Bible Reading: Proverbs 29-31, Ecclesiastes 1
Prayer
ತಂದೆಯೇ, ಈ ಕ್ಷಣದಲ್ಲಿ ನಾನು ಹೇಗೆ ಭಾವಿಸಿದರೂ ಪರವಾಗಿಲ್ಲ. ನೀವು ಹೇಳಿದ್ದೀರಿ, "ನಾನು ನಿನ್ನನ್ನು ಎಂದಿಗೂ ಕೈ ಬಿಡುವುದಿಲ್ಲ ಅಥವಾ ತೊರೆಯುವುದಿಲ್ಲ." ಎಂದು.ನಾನು ಈ ವಾಕ್ಯವನ್ನೇ ಯೇಸುನಾಮದಲ್ಲಿ ಧೃಡವಾಗಿ ಹಿಡಿದಿಟ್ಟುಕೊಳ್ಳುತ್ತೇನೆ. ಆಮೆನ್.
Join our WhatsApp Channel

Most Read
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1● ಹೋರಾಡಿ
● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ನೀವು ನಂಬಿಕೆದ್ರೋಹವನ್ನು ಅನುಭವಿಸಿದ್ದೀರಾ?
● ಕೊಡುವ ಕೃಪೆ -2
Comments