Daily Manna
1
0
102
ಜೀವನದ ಬಿರುಗಾಳಿಗಳ ಮಧ್ಯದಲ್ಲಿಯೂ ನಂಬಿಕೆಯನ್ನು ಕಂಡು ಕೊಳ್ಳುವುದು.
Thursday, 1st of May 2025
Categories :
ನಂಬಿಕೆ (Faith)
ಪರಿಶೋಧನೆ (Trials)
ಜೀವನದ ಬಿರುಗಾಳಿಗಳ ಮಧ್ಯೆ, ನಮ್ಮ ನಂಬಿಕೆಯು ಪರೀಕ್ಷೆಗೆ ಒಳಪಡುವುದು ಸಹಜವೇ. ಸವಾಲುಗಳು ಎದುರಾದಾಗ,ಯೇಸುವಿನ ಶಿಷ್ಯರಂತೆ ನಾವು ಸಹ, "ಗುರುವೇ ನಾವು ಮುಳುಗಿ ಸಾಯುತ್ತಿದ್ದೇವೆ ನಿನಗೆ ಚಿಂತೆ ಇಲ್ಲವೇ?" (ಮಾರ್ಕ 4:38) ಎಂದು ಪ್ರಶ್ನಿಸುತ್ತೇವೆ. ಈ ಕ್ಷಣಗಳಲ್ಲಿಯೇ ನಮ್ಮ ನಂಬಿಕೆಯು ಅದರ ಮಿತಿಗಳಿಗೆ ತಳ್ಳಲ್ಪಡುತ್ತದೆ. ಈ ಹೋರಾಟದಲ್ಲಿ ನಾವು ಒಬ್ಬಂಟಿಯಾಗಿಲ್ಲ; ಯೇಸುವಿನ ಶಕ್ತಿಯನ್ನು ನೇರವಾಗಿ ಕಂಡವರು ಸಹ ಆತನ ಕಾಳಜಿಯ ಕುರಿತು ಅನುಮಾನಿಸುತ್ತಾರೆ ಎಂಬುದು ತಿಳಿದುಬಂದಿದೆ.
1.ನಿಮ್ಮ ಹೋರಾಟದಲ್ಲಿ ನೀವು ಒಬ್ಬಂಟಿಗರಲ್ಲ ಎಂಬುದನ್ನು ನೆನಪಿಡಿ.
ಸತ್ಯವೇದಾದ್ಯಂತ, ಕಷ್ಟದ ಸಮಯದಲ್ಲಿ ದೇವರು ತಮ್ಮ ಕುರಿತು ವಹಿಸಬೇಕಾದ ಕಾಳಜಿಯನ್ನು ಪ್ರಶ್ನಿಸುವ ಹಲವಾರು ವ್ಯಕ್ತಿಗಳನ್ನು ನಾವು. ಬಿರುಗಾಳಿಯಲ್ಲಿ ಸಿಲುಕಿದ ಶಿಷ್ಯರ ಕಥೆಯಲ್ಲಿ, ಅವರು ಯೇಸುವಿನ ಕಾಳಜಿಯನ್ನು ಅನುಮಾನಿಸಿ, "ಗುರುವೇ ನಾವು ಮುಳುಗಿ ಸಾಯುತ್ತಿದ್ದೇವೆ ನಿನಗೆ ಚಿಂತೆಇಲ್ಲವೇ?"(ಮಾರ್ಕ 4:38) ಕೇಳಿದರು. ಅದೇ ರೀತಿ, ಲೂಕ 10:40 ರಲ್ಲಿ ಮಾರ್ಥಳು ಸಹ ಬಹಳ ಸೇವೆಯ ವಿಷಯವಾಗಿ ಬೇಸತ್ತು ಯೇಸುವಿನ ಬಳಿಗೆ ಬಂದು - ಸ್ವಾಮೀ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ?.... (ಲೂಕ 10:40)ಎಂದು ಕೇಳಿದರು.ಈ ಉದಾಹರಣೆಗಳು ಅತ್ಯಂತ ನಂಬಿಗಸ್ತರು ಸಹ ಪರೀಕ್ಷೆಯ ಸಮಯದಲ್ಲಿ ಸಂದೇಹ ಪಟ್ಟು ಹೋರಾಡಬಹುದು ಎಂಬುದನ್ನು ನಮಗೆ ನೆನಪಿಸುತ್ತವೆ.
ದೇವರು ನಮ್ಮ ಕುರಿತು ತೋರಿಸುವ ಕಾಳಜಿಯನ್ನೆ ಪ್ರಶ್ನಿಸುವ ಹಂತವನ್ನು ತಲುಪುವುದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲದು. ಈ ಸಮಯದಲ್ಲಿ ನಾವು ನಮ್ಮ ಆತ್ಮೀಕ ಅಭ್ಯಾಸಗಳಿಂದ ಹಿಂದೆ ಸರಿಯಬಹುದು. ನಮ್ಮ ಪ್ರಾರ್ಥನೆಗಳು ಕಡಿಮೆಯಾಗುತ್ತಾ ಹೋಗಿ ನಾವು ಬೈಬಲ್ ಓದುವುದನ್ನು ಅಥವಾ ಸಭಾ ಸೇವೆಗಳಿಗೆ ಹಾಜರಾಗುವುದನ್ನು ಅಥವಾ ಕರ್ತನ ಸೇವೆ ಮಾಡುವುದನ್ನು ನಿಲ್ಲಿಸಬಹುದು. ನಾವು ದೇವರ ಪ್ರೀತಿಯನ್ನು ಪ್ರಶ್ನಿಸುತ್ತಾ "ಕರ್ತನೇ, ನಿನಗೆ ನಿಜವಾಗಿಯೂ ನಮ್ಮ ಕುರಿತು ಕಾಳಜಿ ಇದ್ದಿದ್ದರೆ, ಇದು ಏಕೆ ನನಗೆ ಸಂಭವಿಸುತಿತ್ತು?" ಎಂದು ಕೇಳಿಕೊಳ್ಳಬಹುದು.
2. ದೇವರ ವಾಗ್ದಾನಗಳ ಮೇಲೆ ಆತುಕೊಳ್ಳಿ
ನಮ್ಮ ನಂಬಿಕೆಯು ಚಂಚಲವಾದಾಗ, ದೇವರವಾಕ್ಯದಲ್ಲಿ ಕಂಡುಬರುವ ದೇವರ ವಾಗ್ದಾನಗಳ ಕಡೆಗೆ ತಿರುಗಿ ಕೊಳ್ಳುವುದು ಮುಖ್ಯ. ಸತ್ಯವೇದವು ದೇವರು ನಮ್ಮ ಕುರಿತು ಹೊಂದಿರುವ ಜಾಗ್ರತೆ ಮತ್ತು ಕಾಳಜಿಯನ್ನು ನೆನಪಿಸುವ ವಾಕ್ಯಗಳಿಂದ ತುಂಬಿದೆ. ಅಂತಹ ಒಂದು ವಾಕ್ಯವೆಂದರೆ ಯೆಶಾಯ 41:10, "ನೀನಂತೂ ಹೆದರಬೇಡ, ಏಕೆಂದರೆ ನಾನೇ ನಿನ್ನ ದೇವರು, ನಾನು ನಿನ್ನನ್ನು ಬಲಪಡಿಸುತ್ತೇನೆ. ನಾನು ನಿನಗೆ ಸಹಾಯ ಮಾಡುತ್ತೇನೆ. ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿಹಿಡಿಯುತ್ತೇನೆ" ಎಂದು ಹೇಳುತ್ತದೆ. ದೇವರ ವಾಕ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ, ಅನಿಶ್ಚಿತತೆಯ ಸಮಯದಲ್ಲಿಯೂ ನಾವು ಬಲವನ್ನೂ ಮತ್ತು ಭರವಸೆಯನ್ನೂ ಕಂಡುಕೊಳ್ಳಬಹುದು.
3. ದೇವರ ನಂಬಿಗಸ್ತಿಕೆಯ ಕುರಿತು ಆಲೋಚಿಸಿ.
ಸಂದೇಹದ ಕ್ಷಣಗಳಲ್ಲಿ, ದೇವರು ತನ್ನ ನಂಬಿಗಸ್ತಿಕೆಯನ್ನುಲೆಕ್ಕವಿಲ್ಲದಷ್ಟು ಬಾರಿ ಪ್ರದರ್ಶಿಸಿದ ಸಂಗತಿಗಳನ್ನು ಕುರಿತು ಚಿಂತಿಸುವುದು ಸಹಾಯಕವಾಗಿದೆ. ಬೈಬಲ್‌ನಾದ್ಯಂತ, ದೇವರು ತನ್ನ ಜನರಿಗೆ ಅಚಲವಾದ ಬದ್ಧತೆಯನ್ನು ತೋರಿರುವ ಉದಾಹರಣೆಗಳನ್ನು ನಾವು ನೋಡುತ್ತೇವೆ. ಇಸ್ರಾಯೇಲ್ಯರ ಚರಿತ್ರೆಯಲ್ಲಿ , ದೇವರು ಅವರನ್ನು ಅರಣ್ಯದ ಮೂಲಕ ನಡೆಯುವಾಗ ಮಾರ್ಗದರ್ಶನ ಮಾಡಿ ಅವರ ಅಗತ್ಯಗಳನ್ನು ಪೂರೈಸಿದನು. (ವಿಮೋಚನಕಾಂಡ 16). ಹೊಸ ಒಡಂಬಡಿಕೆಯಲ್ಲಿ, ಕರ್ತನಾದ ಯೇಸು ರೋಗಿಗಳನ್ನು ಗುಣಪಡಿಸಿ, ಸತ್ತವರನ್ನು ಎಬ್ಬಿಸಿ ಹತಾಶ ರಾದವರಿಗೆ ಭರವಸೆಯನ್ನು ನೀಡಿದನು (ಮತ್ತಾಯ 9). ಈ ಕಥೆಗಳನ್ನು ನೆನಪಿಸಿಕೊಳ್ಳುವುದು ದೇವರು ನಮಗಾಗಿ ಹೊಂದಿರುವ ಕಾಳಜಿಯಲ್ಲಿ ನಮ್ಮ ನಂಬಿಕೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.
4. ಪ್ರಾರ್ಥಿಸಿ ಮತ್ತು ಸಹ ವಿಶ್ವಾಸಿಗಳಿಂದ ಬೆಂಬಲ ಪಡೆಯಿರಿ.
ನಮ್ಮ ನಂಬಿಕೆ ಅಲುಗಾಡಿದಾಗ ದೇವರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಪ್ರಾರ್ಥನೆಯು ಒಂದು ಪ್ರಬಲ ಮಾರ್ಗವಾಗಿದೆ. ಫಿಲಿಪ್ಪಿಯರಿಗೆ 4:6-7 ರಲ್ಲಿ, "ಯಾವ ವಿಷಯವಾಗಿಯೂ ಚಿಂತೆ ಮಾಡದೆ, ಸರ್ವ ವಿಷಯದಲ್ಲಿ ಕೃತಜ್ಞತಾಸ್ತುತಿಯೊಡನೆ ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮ್ಮ ಬೇಡಿಕೆಯನ್ನು ದೇವರಿಗೆ ಸಮರ್ಪಿಸಿರಿ.ಆಗ ಎಲ್ಲಾ ಗ್ರಹಿಕೆಯನ್ನೂ ಮೀರುವ ದೇವರ ಸಮಾಧಾನವು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು."ಎಂದು ನಮ್ಮ ಅಗತ್ಯತೆಗಳ ಸಮಯದಲ್ಲಿ ಪ್ರಾರ್ಥನೆಯ ಮೂಲಕ ದೇವರ ಕಡೆಗೆ ತಿರುಗಲು ಪೌಲನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಸಹ ವಿಶ್ವಾಸಿಗಳಿಂದ ಬೆಂಬಲವನ್ನು ಪಡೆಯುವುದು ನಮ್ಮ ನಂಬಿಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಜೀವನದಲ್ಲಿ ದೇವರ ಉಪಸ್ಥಿತಿಯನ್ನು ನಮಗೆ ನೆನಪಿಸುತ್ತದೆ. ನೀವು ಕರುಣಾ ಸದನ ಚರ್ಚ್‌ಗೆ ಸಂಪರ್ಕ ಹೊಂದಿದ್ದರೆ, ನೀವು ಇದನ್ನು ಮಾಡಬಹುದಾದ ಒಂದು ಮಾರ್ಗವೆಂದರೆ J-12 ನಾಯಕನ ಅಡಿಯಲ್ಲಿ ಬರುವಂತದ್ದಾಗಿದೆ.
Bible Reading: 1 Kings 19-20
Prayer
ತಂದೆಯೇ, ಸಂದೇಹ ಮತ್ತು ಕಷ್ಟದ ಸಮಯದಲ್ಲಿ, ನನ್ನ ನಂಬಿಕೆಯು ಸಂದರ್ಭಗಳ ಮೇಲೆ ಆಧಾರಿತವಾಗಿರದೇ ನಿಮ್ಮ ಅಚಲವಾದ ಪ್ರೀತಿ ಮತ್ತು ಕಾಳಜಿಯ ಮೇಲೆ ಆಧಾರಿತವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ನಿಮ್ಮ ವಾಕ್ಯದಿಂದ ತಿಳುವಳಿಕೆಯಲ್ಲಿ ಬೆಳೆಯಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡಿ. ಆಮೆನ್!
Join our WhatsApp Channel

Most Read
● ಕೃಪೆಯ ವಾಹಕರಾಗಿ ಮಾರ್ಪಡುವುದು.● ಕೃಪೆಯಿಂದಲೇ ರಕ್ಷಣೆ
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
● ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
● ಕರ್ತನ ಸೇವೆ ಮಾಡುವುದು ಎಂದರೇನು-I
Comments