हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Daily Manna

ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ

Friday, 15th of December 2023
0 0 606
Categories : ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಕರ್ತನೇ ನಿನ್ನ ಚಿತ್ತವೇ ನೆರವೇರಿಸಲ್ಪಡಲಿ.
 "ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ."(ಮತ್ತಾಯ‬ ‭6:10‬)

ನಾವು ದೇವರ ಚಿತ್ತವೇ ನೆರವೇರಲಿ ಎಂದು ಪ್ರಾರ್ಥಿಸುವಾಗಲೆಲ್ಲ ಪರೋಕ್ಷವಾಗಿ ನಮ್ಮ ಜೀವಿತದಲ್ಲಿ ಆತನ ಪರಿಪೂರ್ಣವಾದ ಚಿತ್ತವು ಉಂಟಾಗಲೆಂದು ಮತ್ತು ಆತನ ರಾಜ್ಯವು ಸ್ಥಾಪಿಸಲ್ಪಡಲೆಂದು ಪ್ರಾರ್ಥಿಸುತ್ತೇವೆ.
 ನಾವು ದೇವರ ಚಿತ್ತಕ್ಕನುಸಾರವಾಗಿ ಪ್ರಾರ್ಥಿಸುವಾಗ ನಮ್ಮ ಗ್ರಹಿಕೆಗಳು ಬದಲಾಗುತ್ತವೆ. ಆತನ ಚಿತ್ತವು ಸ್ವಯಂ ಚಾಲಿತವಾಗಿ ನಮ್ಮ ಕೊರತೆಗಳನ್ನು ನೀಗಿಸುತ್ತದೆ. ಆದುದರಿಂದ ನಾವು ನಮ್ಮ ಚಿತ್ತವು ನೆರವೇರಿಸಬೇಕೆಂದು ಒದ್ದಾಡುವ ಅವಶ್ಯಕತೆ ಇಲ್ಲ. ನಮ್ಮ 'ಅಹಂ' 'ಸ್ವಾಭಿಮಾನ' 'ಒಣ ಹೆಮ್ಮೆ' ಇವೆಲ್ಲವೂ ದೇವರ ಚಿತ್ತವೇ ನೆರವೇರಲೆಂದು ನಾವು ಪ್ರಾರ್ಥಿಸುವಾಗ ಅವು ಶಿಲುಬೆಗೆ ಹಾಕಲ್ಪಡುತ್ತದೆ.

ದೇವರ ಚಿತ್ತವು ಭೂಮಿಯಲ್ಲಿ ನೆರವೇರಿಸಲ್ಪಡಲು - ಆತನು ತನ್ನ ಚಿತ್ತಕ್ಕನುಸಾರ ಕಾರ್ಯ ಮಾಡಲು ಅದಕ್ಕಾಗಿ ಮೊದಲು ನಾವು ಪ್ರಾರ್ಥಿಸಬೇಕು. ನಾವು ನಮ್ಮ ಪ್ರಾರ್ಥನೆಯಲ್ಲಿ ಆತನನ್ನು ಆಹ್ವಾನಿಸದಿದ್ದರೆ ಆತನು ನಮ್ಮ ವಿಚಾರಕ್ಕೆ ತಲೆಹಾಕುವುದಿಲ್ಲ.

ದೇವರ ಚಿತ್ತವನ್ನು ನಾವು ಏಕೆ ತಿಳಿದುಕೊಳ್ಳಬೇಕು?

1. ಆತನ ಚಿತ್ತಕ್ಕನುಸಾರವಾಗಿ ನಾವು ಪ್ರಾರ್ಥಿಸಲು.
ನೀವು ದೇವರ ಚಿತ್ತವೇನೆಂದು ಅರಿಯದಿದ್ದರೆ ಅದಕ್ಕನುಗುಣವಾಗಿ ಪ್ರಾರ್ಥಿಸುವುದು ನಿಮಗೆ ಸವಾಲಾಗಿ ಬಿಡುತ್ತದೆ. ಉದಾಹರಣೆಗೆ 2 ಅರಸು 4:33-35 ರಲ್ಲಿ ನೋಡುವಂತೆ ಪ್ರವಾದಿಯಾದ ಎಲಿಷನು ಮತ್ತು ಆ ಹುಡುಗನ ತಾಯಿಗೆ ಆ ಹುಡುಗನು ಅವಧಿಗೆ ಮುಂಚಿತವಾಗಿ ಸಾಯುವುದಿಲ್ಲ ಎಂಬ ದೇವರ ಚಿತ್ತ ತಿಳಿದಿದ್ದರಿಂದಲೇ ಅವರು ದೇವರ ಚಿತ್ತಕನುಸಾರವಾಗಿ ಪ್ರಾರ್ಥಿಸಲು ಸಾಧ್ಯವಾಗಿ ಆ ಹುಡುಗನು ಪುನಃ ಜೀವ ವನ್ನು ಹೊಂದಿದನು. ದೇವರ ಚಿತ್ತವನ್ನು ನಾವು ಅರಿತುಕೊಂಡಿದ್ದರೆ ನಮ್ಮ ಜೀವನದಲ್ಲಿ ಉಂಟಾಗುವ ಪ್ರತಿಕೂಲ ಪರಿಸ್ಥಿತಿಗಳನ್ನು ಯಥಾವತ್ತಾಗಿ ಸ್ವೀಕರಿಸಿಕೊಳ್ಳದೆ ಅದನ್ನು ತಿರಸ್ಕರಿಸಿ ನಿರ್ದಿಷ್ಟವಾದ ಉದ್ದೇಶದೊಂದಿಗೆ ಮಾರ್ಗದರ್ಶನದೊಂದಿಗೆ ಅದಕ್ಕೆ ವಿರುದ್ಧವಾಗಿ ಪ್ರಾರ್ಥಿಸಲು ಬಲ ನೀಡುತ್ತದೆ.

 2. ದೇವರ ಚಿತ್ತದ ಜ್ಞಾನವು ಸೈತಾನನ ಶೋಧನೆಯನ್ನು ಪ್ರತಿರೋಧಿಸುತ್ತದೆ.
ಪಾಪದ ಪ್ರೇರೇಪಣೆಗೆ ಒಳಗಾಗದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಲು ದೇವರ ಚಿತ್ತವನ್ನು ಅರಿಯುವಂತದ್ದು ನಿರ್ಣಾಯಕವಾಗಿದೆ. ಮತ್ತಾಯ 4:1- 11ರಲ್ಲಿ ಯೇಸು ಸ್ವಾಮಿಯು ಸೈತಾನನಿಂದ ಉಂಟಾದ ಶೋಧನೆಗಳನ್ನು ಜಯಿಸಲು ಸಾಧ್ಯವಾದದ್ದು ಆತನು ದೇವರ ಚಿತ್ತವನ್ನು ಪರಿಪೂರ್ಣವಾಗಿ ಅರಿತುಕೊಂಡಿದ್ದರಿಂದಲೇ. ಸೈತಾನನು ದೇವರ ವಾಕ್ಯವನ್ನು ವಿರೂಪಗೊಳಿಸಿ ಅದನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವಾಗಲೂ ಯೇಸು ಸ್ವಾಮಿಯು ಅದನ್ನು ಸಮರ್ಥವಾಗಿ ಎದುರಿಸಿದರು. ಒಬ್ಬರು ದೇವರ ಚಿತ್ತವನ್ನು ಸ್ಪಷ್ಟವಾಗಿ ಅರಿಯದಿದ್ದರೆ ಸೈತಾನನು ಒಡ್ಡುವ ವಂಚನೆಯ ಜಾಲಕ್ಕೆ ಸುಲಭವಾಗಿ ಬಿದ್ದು ಅದರಿಂದ ಆತ್ಮಿಕ ವಾಗಿಯೂ ನೈತಿಕವಾಗಿಯೂ ವಿಫಲತೆ ಹೊಂದುತ್ತಾರೆ.

3. ದೇವರ ಚಿತ್ತದೊಳಗೇ ಸುರಕ್ಷೆ ಆಶೀರ್ವಾದ ಸಮೃದ್ಧಿ ನೆಲೆಗೊಂಡಿದೆ.
ನಮ್ಮ ಸುರಕ್ಷೆಯು ಆಶೀರ್ವಾದವೂ ಮತ್ತು ನಮ್ಮ ಸಮೃದ್ಧಿ ಎಲ್ಲವನ್ನೂ ದೇವರ ಚಿತ್ತವೇ ಆವರಿಸಿಕೊಂಡಿದೆ. ದೇವರ ಚಿತ್ತವನ್ನು ಕಡೆಗಣಿಸುವುದು, ಸೈತಾನನು ಶೋಷಣೆ ಮಾಡಲು ಆಹ್ವಾನ ಕೊಟ್ಟಂತೆ. 3ಯೋಹಾನ 2 ಹೇಳುತ್ತದೆ, "ಪ್ರಿಯನೇ, ನೀನು ಆತ್ಮ ವಿಷಯದಲ್ಲಿ ಅಭಿವೃದ್ಧಿಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ ಸುಕ್ಷೇಮವಾಗಿರಬೇಕೆಂದು ಪ್ರಾರ್ಥಿಸುತ್ತೇನೆ." ಎಂದು.

 ಕೆಲವರು ಈ ವ್ಯಾಧಿಗಳು ಬಡತನವು ಸಹ ತಮ್ಮ ಜೀವಿತದಲ್ಲಿ ದೇವರ ಚಿತ್ತದಿಂದ ಉಂಟಾಗಿದೆ ಎಂಬ ತಪ್ಪಾದ ನಂಬಿಕೆಯಲ್ಲಿದ್ದಾರೆ. ಈ ತಪ್ಪಾದ ಗ್ರಹಿಕೆಯು ಅವರು ತಮಗುಂಟಾಗುವ ಹಿಂಸೆಯನ್ನು ಸಮ್ಮತಿಸುವಂತೆ ಮಾಡುತ್ತದೆ, ಆದರೆ ಅದು ವಾಸ್ತವವಾಗಿ ಸೈತಾನನ ಕಾರ್ಯವಾಗಿದೆ. ನಮ್ಮ ಜೀವಿತದಲ್ಲಿ ದೇವರ ಚಿತ್ತಕ್ಕೆ ವಿರೋಧವಾಗಿರುವ ಯಾವುದೇ ಆದರೂ ಅದನ್ನು ನಾವು ಎದುರಿಸಿ ನಿಲ್ಲಬೇಕಾದದ್ದು ಅವಶ್ಯವಾಗಿದೆ.

4. ದೇವರ ಚಿತ್ತದ ಜ್ಞಾನವಿದ್ದರೆ ದೇವರ ಚಿತ್ತಕ್ಕೆ ವಿಧೇಯರಾಗಿ ಜೀವಿಸಬಹುದು.
 ದೇವರಿಗೆ ವಿಧೇಯರಾಗಿ ನಡೆಯುವುದಕ್ಕೆ ಮೊದಲು ನಾವು ದೇವರ ಚಿತ್ತವೇನೆಂದು ಅರಿತಿರಬೇಕು. ನಮಗೆ ದೇವರ ಚಿತ್ತದ ಜ್ಞಾನವೇ ಇಲ್ಲದಿದ್ದರೆ ಅದಕ್ಕೆ ವಿರುದ್ಧವಾಗಿ ನಡೆದು ನಮಗೆ ಅರಿವೇ ಇಲ್ಲದೆ ಅಪಾಯವನ್ನು ತಂದುಕೊಳ್ಳುತ್ತೇವೆ. ಇಬ್ರಿಯ 10:7 ಈ ಪರಿಕಲ್ಪನೆಯನ್ನು ಪ್ರತಿಧ್ವನಿಸುತ್ತದೆ
‭" ಆಗ ನಾನು - ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ ಎಂದು ಹೇಳಿದೆನು ಅನ್ನುತ್ತಾನೆ." ಎಂದು

ದೇವರ ಚಿತ್ತದ ಜ್ಞಾನವು ನಮ್ಮ ಜೀವನಕ್ಕಾಗಿ ಆತನಿಗಿರುವ ದೈವೀಕ ಯೋಜನೆಯೊಂದಿಗೆ ನಮ್ಮ ಜೀವಿತವನ್ನು ಜೋಡಿಸಿ ನಡೆಯುವ ಸ್ಪಷ್ಟವಾದ ಮಾರ್ಗದರ್ಶನವನ್ನೂ ಸಂಕಲ್ಪವನ್ನು ನಮಗೆ ಅನುಗ್ರಹಿಸುತ್ತದೆ

ಇದು ನಾವು ತಪ್ಪನ್ನು ಮಾಡುವುದರಿಂದ ನಮ್ಮನ್ನು ತಪ್ಪಿಸುವುದಷ್ಟೇ ಅಲ್ಲದೇ ಪೂರ್ವಭಾವಿಯಾಗಿ ಪ್ರತಿಯೊಂದು ವಿಚಾರದಲ್ಲೂ ದೇವರು ಬಯಸಿದ್ದನ್ನು ಪೂರೈಸುವುದನ್ನೇ ನಾವು ಎದುರು ನೋಡುವುದಾಗಿದೆ. ದೇವರ ಚಿತ್ತವನ್ನು ಮಾಡುವ ಈ ಬದ್ಧತೆಯು ನಿರಂತರ ಕಲಿಕೆ ಮತ್ತು ಬೆಳವಣಿಗೆಯ ಪ್ರಯಾಣವಾಗಿದೆ, ಅಲ್ಲಿ ನಾವು ನಮ್ಮ ಇಚ್ಛೆಯನ್ನು ಆತನ ಚಿತ್ತದೊಂದಿಗೆ ಜೋಡಿಸುತ್ತೇವೆ,ಆತನೊಂದಿಗೆ ನಮಗಿರುವ ಸಂಬಂಧದ ಕಾರಣ ನಾವು ದೇವರ ಬಯಕೆಯನ್ನು ಪೂರೈಸುತ್ತೇವೆ ಮತ್ತು ಆತನಿಗೆ ವಿಧೇಯತೆ ತೋರುತ್ತೇವೆ.

5.ನಾವು ದೇವರ ಚಿತ್ತಕ್ಕೆ ಅನುಗುಣವಾಗಿ ನಡೆಯದಿದ್ದಾಗ, ಸೈತಾನನು ನಮ್ಮ ಮೇಲೆ ಆಕ್ರಮಣ ಮಾಡವ ಹಾಗೆ ಕ್ರಮವು ತಿರುಗುತ್ತದೆ.
ಸೈತಾನನಿಗೆ ಅವಕಾಶ ಕೊಡಬೇಡಿ (ಎಫಸ್ಸೆ 4:27)

6.ನಾವು ದೇವರ ಚಿತ್ತವನ್ನು ಬಿಟ್ಟು ಜೀವಿಸುವಾಗ ಸೈತಾನನು ನಮ್ಮ ಮೇಲೆ ದೋಷಾರೋಪಣೆ ಮಾಡುತ್ತಾನೆ.
‭‭ ‭"ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವದನ್ನು ಯೆಹೋವನು ನನಗೆ ತೋರಿಸಿದನು; ಸೈತಾನನು ಯೆಹೋಶುವನಿಗೆ ಪ್ರತಿಕಕ್ಷಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು"(ಜೆಕರ್ಯ‬ ‭3:1‬).

7. ದೇವರು ತನ್ನ ಚಿತ್ತವನ್ನು ಮೀರಿ ಏನನ್ನೂ ಮಾಡಲು ಸಾಧ್ಯವಿಲ್ಲ.
"ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಗಳಿಗಾಗಿ ಉಪಯೋಗಿಸಬೇಕೆಂಬ ದುರಭಿಪ್ರಾಯಪಟ್ಟು ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ. (ಯಾಕೋಬನು‬ ‭4:3‬)
ನಮ್ಮ ಪ್ರಾರ್ಥನೆಗಳು ದೇವರ ಚಿತ್ತಕ್ಕೆ ಹೊರತಾಗಿದ್ದರೆ, ನಾವು ನಮ್ಮ ಪ್ರಾರ್ಥನೆಗಳಿಗೆ ದೇವರಿಂದ ಉತ್ತರವನ್ನು ಹೊಂದಲಾರೆವು.

8.ದೇವರ ಚಿತ್ತವನ್ನು ಬಿಟ್ಟು ನಾವು ನಮ್ಮ ಜೀವನದಲ್ಲಿ ದೇವರು ನಮಗಿಟ್ಟಿರುವ ಗುರಿಯನ್ನು ತಲುಪಲು ಸಾಧ್ಯವಿಲ್ಲ.
[4] ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. [5] ನಾನು ದ್ರಾಕ್ಷೇ ಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. [6] ಯಾವನು ನನ್ನಲ್ಲಿ ನೆಲೆಗೊಂಡಿರುವದಿಲ್ಲವೋ ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು; ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುತ್ತಾರೆ, ಅವು ಸುಟ್ಟುಹೋಗುತ್ತವೆ. [7] ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು."‭‭(ಯೋಹಾನ‬ ‭15:4‭-‬7‬ )

ನಿಮ್ಮ ಜೀವಿತದ ಮೇಲೆ ದೇವರ ಚಿತ್ತವೇನುಮತ್ತು ಆತನ ಯೋಜನೆಗಳೇನು ಎಂಬುದನ್ನು ಅರಿಯಲು ಇರುವ 2 ಪ್ರಮುಖ ಕೀಲಿಕೈ ಗಳು.

1. ದೇವರೊಂದಿಗೆ ನಡೆಯುವುದು.
ನೀವು ದೇವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬೇಕು.ನೀವು ಆತನನ್ನು ಅರಿತುಕೊಳ್ಳಬೇಕು ಆತನ ಬಗ್ಗೆ ಅರಿತುಕೊಳ್ಳಬಾರದು.

ನೀವು ಆತನ ವಾಕ್ಯ ಧ್ಯಾನದಲ್ಲಿ ಸಮಯ ಕಳೆಯುವ ಮುಖಾಂತರ, ಆತನ ಸಮ್ಮುಖದಲ್ಲಿ ಪ್ರಾರ್ಥಿಸುವ ಮುಖಾಂತರ ಅವಕಾಶ ಸಿಕ್ಕಾಗೆಲ್ಲಾ ಸಭೆಯ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ J-12 ನಾಯಕರ ಕೈಕೆಳಗೆ ಕಲಿಯುವ ಮುಖಾಂತರ ನೀವು ದೇವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬಹುದು.ನೀವು ಈ ರೀತಿಯಾಗಿ ನಿಮ್ಮ ಜೀವಿತವನ್ನು ಶಿಸ್ತಿನ ಹಾದಿಗೆ ತರುವುದಕ್ಕಾಗಿ ಪ್ರಯತ್ನಿಸುವಾಗ ಆತನು ನಿಮ್ಮ ಕುರಿತು ಆತನಿಗಿರುವ ಯೋಜನೆಯನ್ನು ನಿಮಗೆ ಪ್ರಕಟಿಸಲು ತನ್ನ ಮೊದಲ ಹೆಜ್ಜೆ ಇಡುತ್ತಾನೆ

"ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. [6] ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು."
ಜ್ಞಾನೋಕ್ತಿಗಳು‬ ‭3:5‭-‬6‬ 

2. ನೀವು ಈಗಾಗಲೇ ಇದು ದೇವರ ಚಿತ್ತ ಎಂದು ತಿಳಿದು ಕೊಂಡಿರುವುದಕ್ಕೆ ವಿಧೇಯರಾಗಿರಿ.

ಬಹಳಷ್ಟು ಮಂದಿ ತಮ್ಮ ಜೀವಿತದಲ್ಲಿ ದೇವರ ಚಿತ್ತವೇನು ಎಂದು ತಿಳಿದುಕೊಳ್ಳಲು ಬಯಸುತ್ತಾರೆ ಆದರೆ ಈಗಾಗಲೇ ಅವರು 98 percent ವಾಕ್ಯದ ಮೂಲಕ ಆತನ ಚಿತ್ತವನ್ನು ತಿಳಿದು ಕೊಂಡಿರುವುದನ್ನು ಕಡೆಗಣಿಸುತ್ತಾರೆ.ಅನೇಕ ವಿಚಾರಗಳಲ್ಲಿ ದೇವರು ತನ್ನ ಚಿತ್ತವನ್ನು ಅನೇಕ ವಿಧದಲ್ಲಿ ಸ್ಪಷ್ಟಪಡಿಸಿದ್ದಾನೆ.ಉದಾಹರಣೆಗೆ ನಾವು ಲೈಂಗಿಕ ವ್ಯಭಿಚಾರ ಮಾಡಬಾರದು ಎಂಬುದು ದೇವರ ಚಿತ್ತ ಎಂಬುದನ್ನು ನಾವು ಅರಿತವರಾಗಿದ್ದೇವೆ.
‭‭
"ದೇವರ ಚಿತ್ತವೇನಂದರೆ ನೀವು ಶುದ್ಧರಾಗಿ ಇರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು."1 (ಥೆಸಲೋನಿಕದವರಿಗೆ‬ ‭4:3‬).

 ನಾವು ತಿಳಿದು ಕೊಂಡಿರುವಂತ ಆತನ ಚಿತ್ತಕ್ಕೆ ವಿಧೇಯರಾಗದಿದ್ದರೆ ನಮಗೆ ಆತನ ಚಿತ್ತದ ಬಗ್ಗೆ ಯಾಗಲೀ ಆತನ ಯೋಜನೆ ಬಗ್ಗೆ ಯಾಗಲೀ ಇನ್ನೂ ಹೆಚ್ಚಿನ ಮಾಹಿತಿಗಳು ಏಕೆ ಬೇಕು?
Prayer
ಪ್ರತಿಯೊಂದು ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದಿಂದ ಹೊರಟು ಬರುವ ವರೆಗೂ ಪುನರಾವರ್ತಿಸುತ್ತಲೇ ಇರ್ರಿ. ಆನಂತರವೇ ಮುಂದಿನ ಪ್ರಾರ್ಥನೆಯ ಅಂಶಕ್ಕೆ ತೆರಳಿ. ಗಡಿಬಿಡಿ ಬೇಡ.

1.ತಂದೆಯೇ, ನನ್ನ ಜೀವಿತದಲ್ಲಿ ನಿನ್ನ ಚಿತ್ತವೆ ಯೇಸುನಾಮದಲ್ಲಿ ನೆರವೇರಲಿ. (ಮತ್ತಾಯ 6:10)

2.ನನ್ನ ಜೀವನದಲ್ಲಿ ಪರಲೋಕದ ತಂದೆಯಿಂದ ನಾಟಲ್ಪಡದ ಯಾವುದೇ ಆದರೂ ಯೇಸುನಾಮದಲ್ಲಿ ಬೆಂಕಿಬಿದ್ದು ನಾಶವಾಗಿ ಹೋಗಲಿ.(ಮತ್ತಾಯ 15:13)
3.ನನ್ನ ಜೀವಿತದಲ್ಲಿ ದೇವರ ಚಿತ್ತವು ನಾನು ಸಂವೃದ್ಧಿ ಯಾಗಬೇಕೆಂಬುದೇ ಆದ್ದರಿಂದ ಎಲ್ಲಾ ನಷ್ಟ ಪಡಿಸುವ ಕಾರ್ಯವನ್ನು ವಿಫಲ ವಾದ ಕಾರ್ಯವನ್ನು ಸಾವಾಕಾಶ ಮಾಡುವ ಕಾರ್ಯಗಳನ್ನು ಯೇಸುನಾಮದಲ್ಲಿ ನಿಷೇಧಿಸುತ್ತೇನೆ. (3ಯೋಹಾನ 1:2)

4.ನನ್ನ ಜೀವನದಲ್ಲಿ ನಾನು ಆರೋಗ್ಯದಿಂದ ಇರಬೇಕೆಂಬುದೇ ನನ್ನ ದೇವರ ಚಿತ್ತ ಆದ್ದರಿಂದ ನನ್ನ ದೇಹದಲ್ಲಿ ಸಂಚಯನವಾಗುವ ಎಲ್ಲಾ ರೋಗಗಳನ್ನು ಎಲ್ಲಾ ವ್ಯಾದಿಗಳನ್ನು ಯೇಸುನಾಮದಲ್ಲಿ ನಾಶ ಪಡಿಸುತ್ತೇನೆ.

5.ನನ್ನ ಜೀವನದಲ್ಲಿ ನಾನು ಸಾಲ ಕೊಡುವವರಾಗಬೇಕೆ ವಿನಃ ಸಾಲ ತೆಗೆದು ಕೊಳ್ಳುವವರಾಗಬಾರದು ಎಂಬುದೇ ದೇವರ ಚಿತ್ತ ಆದ್ದರಿಂದ ನನ್ನನ್ನು ಸಾಲಕ್ಕೆ ಸಿಕ್ಕಿಸಲು ಇರುವ ಯಾವುದೇ ದುರಾತ್ಮನ ಯೋಜನೆಯನ್ನು ಯೇಸುನಾಮದಲ್ಲಿ ನಾಶ ಪಡಿಸುತ್ತೇನೆ. (ಧರ್ಮೋಪದೇಶ ಕಾಂಡ 28:12)

6.ನನಗೆ ವಿರುದ್ಧವಾದ ಯಾವುದೇ ಕಾನೂನಾಗಲಿ ಅದನ್ನು ಯೇಸು ನಾಮದಲ್ಲಿ ಅದನ್ನು ಶಿಲುಬೆಗೆ ಜಡಿಯುತ್ತೇನೆ(ಕೊಲಸ್ಸೆ 2:14)

7.ನನಗೆ ಮತ್ತು ನನ್ನ ಕುಟುಂಬಕ್ಕೆ ವಿರುದ್ಧವಾಗಿ ಮಾಡುವ ಯಾವುದೇ ಮಂತ್ರ-ತಂತ್ರ ವಾಗಲಿ ಕಣಿ ಯಾಗಲಿ ಶಾಪವಾಗಲಿ ಯಾವುದೇ ದುರಾತ್ಮನ ಕಾರ್ಯಗಳಾಗಲೀ ಎಲ್ಲವನ್ನು ಯೇಸುನಾಮದಲ್ಲಿ ಚದುರಿಸುತ್ತೇನೆ. (ಅರಣ್ಯ ಕಾಂಡ 23:23)

8.ನನ್ನ ಜೀವನದಲ್ಲಿರುವ ಎಲ್ಲಾ ದುರಾತ್ಮನ ಕಾರ್ಯಗಳು, ಅವಮಾನ ನಿಂದೆ, ತಿರಸ್ಕಾರ ಸಾವು ನೋವು ನಷ್ಟ ಎಲ್ಲವೂ ನನ್ನ ಜೀವನದಿಂದ ತೊಲಗಿ ಹೋಗಲೆಂದು ಯೇಸುನಾಮದಲ್ಲಿ ಘೋಷಿಸುತ್ತೇನೆ. (ಕೀರ್ತನೆಗಳು 34:19)

9.‭‭ ನನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನಾನು ಯೇಸುನಾಮದಲ್ಲಿ ಖಂಡಿಸುತ್ತೇನೆ.(ಯೆಶಾಯ‬ ‭54:17‬)

10.ಕರ್ತನೆ ನಾನು ನಿನ್ನ ಚಿತ್ತವನ್ನೇ ನೆರವೇರಿಸುವ ಹಾಗೆಯೂ ನಿನ್ನ ರಾಜ್ಯವನ್ನು ಭೂಲೋಕದಲ್ಲಿ ವಿಸ್ತರಿಸುವ ಹಾಗೆಯೂ ಯೇಸುನಾಮದಲ್ಲಿ ನನ್ನನ್ನು ಬಲಗೊಳಿಸು (ಫಿಲಿಪ್ಪಿ 2:13)

11.ನನ್ನ ಜೀವಿತದಲ್ಲಿರುವ ಯಾವುದೇ ಅಂಧಕಾರದ ಕೋಟೆ ಕೊತ್ತಲುಗಳನ್ನು ಅದಕ್ಕೆ ವಿರುದ್ಧವಾಗಿ ನಾನು ಯುದ್ಧ ಮಾಡಲು ಕರ್ತನೆ ನನ್ನನ್ನು ಸಜ್ಜು ಗೊಳಿಸು.ಈ ಎಲ್ಲವನ್ನು ಯೇಸುನಾಮದಲ್ಲಿ ಕೆಳೆಗೆ ಎಳೆದು ಬೀಳಿಸುತ್ತೇನೆ . (2 ಕೊರಿಯಂತೆ 2:4)

12.ಯಾವುದೇ ಉಪದ್ರವವಾಗಲೀ ಯಾವುದೇ ವ್ಯಾದಿಯಾಗಲೀ ನನ್ನ ಗುಡಾರಾದ ಸಮೀಪಕ್ಕೂ ಬಾರದು. ನನ್ನ ಹಾಗೂ ನನ್ನ ಕುಟುಂಬದ ಮೇಲೆ ಕರ್ತನ ಸುರಕ್ಷಾ ಹಸ್ತವು ಇದೆಯೆಂದು ಯೇಸುನಾಮದಲ್ಲಿ ಘೋಷಿಸುತ್ತೇನೆ. (ಕೀರ್ತನೆಗಳು 91:10)

Join our WhatsApp Channel


Most Read
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ದರ್ಶನ ಹಾಗೂ ಸಾಕಾರದ ನಡುವೆ...
● ದೇವರು ದೊಡ್ಡ ಬಾಗಿಲುಗಳನ್ನು ತೆರೆಯಲಿದ್ದಾನೆ
● ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
● ಸಮರುವಿಕೆಯ ಕಾಲ- 3
● ಆತ್ಮದಲ್ಲಿ ಉರಿಯುತ್ತಿರ್ರಿ.
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login