हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಮಳೆಯಾಗುತ್ತಿದೆ
Daily Manna

ಮಳೆಯಾಗುತ್ತಿದೆ

Tuesday, 9th of July 2024
3 1 399
Categories : ಆಶೀರ್ವಾದ ( Blessing)
ಮಳೆ, ಇದೊಂದು ಸಾಮಾನ್ಯವಾಗಿ ಸಂಭವಿಸುವಂತಹ ಘಟನೆಯಾಗಿದೆ. ವಿಶೇಷವಾಗಿ ಮುಂಬೈನಲ್ಲಿ ಮಾನ್ಸೂನ್ ಕಾಲದಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವಂತದ್ದೇ. ಆದರೂ ನಮ್ಮಲ್ಲಿ ಅನೇಕರಿಗೆ ಮಳೆಯೂ ಆಶೀರ್ವಾದ ಎನಿಸದೆ ಅನಾನುಕೂಲತೆ ಎಂದೇ ಅನಿಸುತ್ತದೆ. ಯಾಕೆಂದರೆ ಅದು ನಮ್ಮ ದೈನಂದಿನ ದಿನಚರಿಯನ್ನೆಲ್ಲ ಭಂಗಪಡಿಸಿ ನಮ್ಮ ಬಟ್ಟೆ ಶೂ ಗಳನ್ನೆಲ್ಲ ತೋಯಿಸಿ, ನಮ್ಮ ಹೊರಗಡೆ ಸುತ್ತಾಡುವ ಯೋಜನೆಗಳನ್ನೆಲ್ಲಾ ಹಾಳುಮಾಡುತ್ತದೆ ಎಂದು ನಮ್ಮ ಮನಸ್ಸು ನೆನೆಸಿ ಸೌಲಭ್ಯಾಕಾಂಕ್ಷೆಯನ್ನೇ ಬಯಸುವ ನಮ್ಮ ಗೀಳು ಶುಷ್ಕವಾದ ಬಿಸಿಲಿನ ವಾತಾವರಣವನ್ನು ಮಳೆಯ ಸಮಯದಲ್ಲಿ ಬೇಕೆಂದು ಬಯಸುತ್ತದೆ. ಹೇಗೂ ಕೃಷಿಗೂ ನಗರಗಳ ಉಳಿವಿಗಾಗಿ ಮಳೆ ಎಷ್ಟು ಮಹತ್ವವೋ ಹಾಗೆಯೇ ನಮ್ಮ ಜೀವನದಲ್ಲಿ ಮಳೆ ಎಂಬುದು ಆಶೀರ್ವಾದದ ಸುರಿಯುವಿಕೆಗೆ ರೂಪಕವಾಗಿದೆ.

ಸತ್ಯವೇದವು ಯಾವಾಗಲೂ ಮಳೆಯನ್ನು ದೇವರಿಂದ ಸುರಿಸಲ್ಪಡುವ ಆಶೀರ್ವಾದದ ಹೋಲಿಕೆಗಾಗಿ ಉಪಯೋಗಿಸುತ್ತದೆ. ಧರ್ಮೋಪದೇಶಕಾಂಡ 28:12 "‭ಯೆಹೋವನು ಆಕಾಶದಲ್ಲಿರುವ ತನ್ನ ಜಲನಿಧಿಯನ್ನು ತೆರೆದು ನಿಮ್ಮ ದೇಶದ ಮೇಲೆ ಬೆಳೆಗೆ ಬೇಕಾದ ಹಾಗೆ ಮಳೆಯನ್ನು ಸುರಿಸಿ ನಿಮ್ಮ ಎಲ್ಲಾ ವ್ಯವಸಾಯವನ್ನೂ ಸಫಲಮಾಡುವನು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಸಾಲತೆಗೆದುಕೊಳ್ಳುವದಿಲ್ಲ." ಎಂದು ಹೇಳುತ್ತದೆ. ಈ ವಾಕ್ಯವು ಮಳೆ ಸುರಿಯುವಂತೆ ಸುರಿಸಲ್ಪಡುವ ದೇವರ ಆಶೀರ್ವಾದಗಳು ನಮ್ಮ ಸಮೃದ್ಧಿ ಹಾಗೂ ಯಶಸ್ಸಿಗೆ ಹೇಗೆ ಮಹತ್ವವುಳ್ಳದಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಅಹಿತಕರ ಎನಿಸುವಂತಹ ಆಶೀರ್ವಾದ.
ಆಸಕ್ತಿಕರ ವಿಷಯವೇನೆಂದರೆ, ಮಳೆಗೆ ನಾವು ತೋರುವಂತಹ ಪ್ರತಿಕ್ರಿಯೆಯೇ ಸಾಮಾನ್ಯವಾಗಿ ನಮ್ಮ ಆಶೀರ್ವಾದಗಳಿಗೂ ತೋರಿಸುವ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ. ಮಳೆಯು ನಮಗೆ ಪ್ರತಿಕೂಲ ಎಣಿಸುವಂತೆ ಕೆಲವೊಮ್ಮೆ ಆಶೀರ್ವಾದಗಳು ಸಹ ನಮ್ಮ ಜೀವಿತದ ಆರಾಮಾದಾಯಕ ವಲಯಗಳಿಗೆ ಸವಾಲು ಹಾಕುವ ರೂಪದಲ್ಲಿ ಬರುತ್ತವೆ. ಸತ್ಯಗಳನ್ನು ಎದುರಿಸಲು, ನಮ್ಮ ಅಭ್ಯಾಸಗಳನ್ನು ಬದಲಾಯಿಸಲು ಅಥವಾ ಕೆಲವು ನಂಬಿಕೆಗಳಿಂದ ಹೊರತರಲು ಕಷ್ಟಕರ ಎನಿಸುವಂತೆ ಆ ಆಶೀರ್ವಾದಗಳು ಆಗಬಹುದು. ಆದರೂ ಈ ಸವಾಲುಗಳೆಲ್ಲವೂ ನಮ್ಮನ್ನು ಪ್ರಭುದ್ಧಗೊಳಿಸಲು ಮತ್ತು ನಮ್ಮನ್ನು ಪರಿಷ್ಕರಿಸಲು ಕಾರ್ಯ ಮಾಡುವ ಸಾಧನಗಳಾಗಿರುತ್ತವೆ.

ಮಳೆಯನ್ನು ಒಬ್ಬ ನಂಬಿಗಸ್ತ ಸ್ನೇಹಿತನಾಗಿ ಫಾಸ್ಟರ್ ಆಗಿ ಅಥವಾ ಸತ್ಯದಲ್ಲಿ ನಮ್ಮನ್ನು ನಡೆಸುವ ಸಹಾಯಕ ಎಂದು ನಾವು ಪರಿಗಣಿಸಬೇಕು. "‭ಕಬ್ಬಿಣವು ಕಬ್ಬಿಣವನ್ನು ಹೇಗೋ ವಿುತ್ರನು ವಿುತ್ರನ ಬುದ್ಧಿಯನ್ನು ಹಾಗೆ ಹರಿತ ಮಾಡುವನು." ಎಂದು ಜ್ಞಾನೋಕ್ತಿಗಳು 27:17 ಹೇಳುತ್ತದೆ. ಈ ಹರಿತಗೊಳಿಸುವ ವ್ಯಕ್ತಿಗಳನ್ನು ಸಹಾಯಕರು ಎಂದು ನೆನೆಸುವುದು ಬಹು ಅಪರೂಪ. ಆದರೂ ಇವರು ನಮ್ಮ ಬೆಳವಣಿಗೆಗೆ ಅಗತ್ಯವಾದವರು. ದೇವರು ನಮ್ಮನ್ನು ತಿದ್ದಲು ಮಾರ್ಗದರ್ಶಿಸಲೆಂದೇ ಇವರುಗಳನ್ನು ನಮ್ಮ ಜೀವಿತದಲ್ಲಿ ಅನುಮತಿಸಿರುತ್ತಾನೆ. ಕಟ್ಟ ಕಡೆಗೆ ಇವರು ನಮಗೆ ಪ್ರಭುದ್ಧತೆಯ ವಿವೇಕದ ಆಶೀರ್ವಾದ ಉಂಟಾಗುವಂತೆ ನಮಗೆ ಸಹಕಾರಿಗಳೇ ಆಗಿರುತ್ತಾರೆ.

ನಮ್ಮ ದೃಷ್ಟಿಕೋನವನ್ನು ಬೇರೆ ಮಾಡಿಕೊಳ್ಳುವುದು.
ಮಳೆಯನ್ನು ಮತ್ತು ಆಶೀರ್ವಾದವನ್ನು ಕುರಿತು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದು ಹೇಗೆ? ಮುಂದಿನ ಸಲ ಮಳೆ ಬರುವುದನ್ನು ನೀವು ನೋಡುವಾಗ ಇದೆಂತ ರಗಳೆಯಪ್ಪ ಎಂದು ನೋಡುವ ಬದಲು ದೇವರು ಸುರಿಸುವ ಆಶೀರ್ವಾದಗಳ ಜ್ಞಾಪಕ ಪತ್ರ ಎಂದು ಏಕೆ ನೀವು ನೋಡಬಾರದು? ಆ ದೇವರಿಗೆ ಸ್ತೋತ್ರ ಸಲ್ಲಿಸಲು ಸ್ವಲ್ಪ ಸಮಯ ಕೊಡಿ. ಎಲ್ಲಾ ಸವಾಲುಗಳ ನಿರಾಶಾದಾಯಕವಾದ ಸಮಸ್ಯೆಗಳ ಮಧ್ಯದಲ್ಲೂ ದೇವರು ಈ ಹಿಂದೆ ನಿಮ್ಮನ್ನು ಆಶೀರ್ವದಿಸಿದ ಸಂಗತಿಗಳ ಮೇಲೆ ಲಕ್ಷವಿಡಿರಿ.

ಎಫಸ್ಸೆ 1:3 ಹೇಳುವುದೇನೆಂದರೆ "ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾನೆ." ಎಂಬುದೇ. ದೇವರ ಆಶೀರ್ವಾದವು ನಾವು ನೆನೆಸಿದ ರೀತಿಯಲ್ಲಿ ಬರುವುದಿಲ್ಲವಾದರೂ ಅದು ಸಮೃದ್ದಿಕರವಾಗಿಯೂ ಮತ್ತು ನಿತ್ಯಕ್ಕೂ ಇರುವಂತದ್ದು ಆಗಿದೆ ಎಂಬ ಭರವಸೆಯನ್ನು ನಮಗೆ ಈ ವಾಕ್ಯವು ಕೊಡುತ್ತದೆ.
Prayer
ತಂದೆಯೇ, ಮಳೆಯ ನೀರಿನ ಒಂದೊಂದು ಹನಿಯಲ್ಲಿಯೂ ನಾನು ನಿನ್ನ ಆಶೀರ್ವಾದವನ್ನೇ ಕಾಣವಂತಾಗಲಿ. ಯೇಸು ನಾಮದಲ್ಲಿ ನಿನ್ನ ದಯೆಯು ನನ್ನ ಹಾಗೂ ನನ್ನ ಕುಟುಂಬದ ಸುತ್ತಲೂ ಆವರಿಸಿಕೊಳ್ಳಲಿ ಆಮೇನ್


Join our WhatsApp Channel


Most Read
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ
● ನೀವು ಸುಲಭವಾಗಿ ಬೇಸರಗೊಳ್ಳುವಿರಾ?
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಅಪನಂಬಿಕೆ
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login