Daily Manna
3
0
73
ಯಾರ ಸಂದೇಶವನ್ನು ನೀವು ನಂಬುವಿರಿ?
Wednesday, 16th of July 2025
Categories :
ಮೋಕ್ಷ (Salvation)
“ನಮ್ಮ ಸಂದೇಶವನ್ನು ಯಾರು ನಂಬಿದರು ಮತ್ತು ಕರ್ತನ ಬಾಹು ಯಾರಿಗೆ ಪ್ರಕಟವಾಯಿತು?” (ಯೆಶಾಯ 53:1)
ದೇವರ ಮನುಷ್ಯನೊಬ್ಬನು ಒಂದು ದಿನ ಪ್ರಾರ್ಥನೆ ಮಾಡುವಾಗ ಒಂದು ದರ್ಶನದಲ್ಲಿ ಪರಲೋಕಕ್ಕೆ ಕರೆದೊಯ್ಯಲ್ಪಟ್ಟನು. ಅವನು ಪರಲೋಕಕ್ಕೆ ಭೇಟಿ ನೀಡಿದಾಗ, ಅವನು ಒಂದು ಹೊಳೆಯುವ ಪುಸ್ತಕವನ್ನು ನೋಡಿದನು. ಅದು ಯಾವ ಪುಸ್ತಕ ಎಂದು ಅವನು ಕರ್ತನನ್ನು ಕೇಳಿದನು. ಕರ್ತನು ಮುಗುಳ್ನಗುತ್ತಾ ಅದನ್ನು ಅವನೇ ಸ್ವತಃ ನೋಡುವಂತೆ ಹೇಳಿದನು. ಅದು ಸತ್ಯವೇದವಾಗಿತ್ತು. ಅದರಲ್ಲಿ ಅವನು ಕಂಡದ್ದು ಅವನನ್ನು ಆಶ್ಚರ್ಯಗೊಳಿಸಿತು; ಅದರಲ್ಲಿ ಸತ್ಯವೇದದ ಒಂದು ಅಧ್ಯಾಯ ತೆರೆದಿತ್ತು - ಅದು ಯೆಶಾಯ 53 ಆಗಿತ್ತು.
ಇಂದಿನ ವಚನವು ಅನೇಕರು ರಕ್ಷಣೆಯ ಸುವಾರ್ತಾ ಸಂದೇಶವನ್ನು ತಿರಸ್ಕರಿಸುತ್ತಾರೆ ಎಂಬುದನ್ನು ನಮಗೆ ಸ್ಪಷ್ಟವಾಗಿ ಹೇಳುತ್ತದೆ. ಅನೇಕ ಜನರು ರಕ್ಷಣೆಯ ಸಂದೇಶವನ್ನು ವಿವಿಧ ಕಾರಣಗಳಿಗಾಗಿ ತಿರಸ್ಕರಿಸುತ್ತಾರೆ. ಕೆಲವು ಜನರು ತಾವು ರಕ್ಷಣೆಯ ಸಂದೇಶವನ್ನು ಸ್ವೀಕರಿಸಿಕೊಂಡು ಬಿಟ್ಟರೆ ಅವರು ಸಮಾಜದಿಂದ ಬಹಿಷ್ಕರಿಸಲ್ಪಡಬಹುದೇನೋ ಎಂದು ಸಮಾಜಕ್ಕೆ ಭಯಪಟ್ಟು ಸುವಾರ್ತೆ ಸಂದೇಶವನ್ನು ತಿರಸ್ಕರಿಸುತ್ತಾರೆ.
ಯೋಹಾನ 9:22 ರಲ್ಲಿ, ಯೇಸು ಗುಣಪಡಿಸಿದ ಕುರುಡನ ತಂದೆತಾಯಿಗಳನ್ನು ನಾವು ನೋಡುವಾಗ, ಅವರು ಯೆಹೂದ್ಯರ ಭಯದಿಂದ ಆತನನ್ನು ಕ್ರಿಸ್ತನೆಂದು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ ಹಾಗೆ ಹೇಳಿದರೆ ಅವರೆಲ್ಲಿ ತಮ್ಮನ್ನು ಸಭಾಮಂದಿರದಿಂದ ಹೊರಹಾಕುತ್ತಾರೋ ಎಂದು ಅವರು ಭಯಪಟ್ಟರು. ಇಂದಿಗೂ ಸಹ, ಮನುಷ್ಯರ ಮತ್ತು ಸಮಾಜದ ಭಯದಿಂದಾಗಿ ಅನೇಕರು ನಿಜವಾದ ರಕ್ಷಣೆಯ ಸಂದೇಶದೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ.
ನೀವು ಅವರಂತೆ ಇರಬೇಡಿ. ಗುಣಮುಖರಾಗಿ ಸಭಾಮಂದಿರದಿಂದ ಹೊರಗೆ ಹಾಕಲ್ಪಟ್ಟ ವ್ಯಕ್ತಿಯು ಏನು ಮಾಡಿದನೆಂದು ತಿಳಿದಿದ್ದೀರಾ - ಈ ಮನುಷ್ಯನು ಯೇಸು ತನಗಾಗಿ ಕಾಯುತ್ತಿರುವುದನ್ನು ಕಂಡುಕೊಂಡನು.
ಇಂದು, ದೇವರ ವಾಕ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳಿ. ಅದಕ್ಕೆ ನಿಮಗೆ ಸಿಗುವ ಪ್ರತಿಫಲವೆಂದರೆ ಯೇಸುವೇ ನಿಮಗೆ ಸಿಗುತ್ತಾನೆ. ಸಮಾಜದಲ್ಲಿ ತನ್ನ ಅಂತಸ್ತು ಮತ್ತು ಸ್ಥಾನಮಾನದ ಬಗ್ಗೆ ಚಿಂತಿಸದೆ ಬಹಿರಂಗವಾಗಿ ಯೇಸುವಿನ ಪಾದಗಳಿಗೆ ಅಡ್ಡಬಿದ್ದ ಯಾಯೀರನಂತೆ ಇರಿ, ಅದರ ಅಂತಿಮ ಫಲಿತಾಂಶವೆಂದರೆ ಅವನ ಸತ್ತ ಮಗಳು ಜೀವಂತಳಾದಳು.
Bible Reading: Proverbs 12-15
Confession
ಯೇಸುವೇ ನನ್ನ ಜೀವನದ ಪ್ರಭು, ನನ್ನ ದೇವರು ಮತ್ತು ನನ್ನ ಆತ್ಮದ ರಕ್ಷಕ. ನಾನು ಸತ್ಯವನ್ನು ತಿಳಿದುಕೊಂಡಿದ್ದೇನೆ ಆ ಸತ್ಯವು ನನ್ನನ್ನು ಬಿಡುಗಡೆಗೊಳಿಸಿದೆ.
Join our WhatsApp Channel

Most Read
● ದೇವರು ನನಗಿಂದು ಒದಗಿಸುತ್ತಾನೋ?● ಇತರರಿಗೆ ಸೇವೆ ಸಲ್ಲಿಸುವ ಮೂಲಕ ನಾವು ಅನುಭವಿಸುವ ಆಶೀರ್ವಾದಗಳು
● ದ್ವಾರ ಪಾಲಕರು / ಕೋವರ ಕಾಯುವವರು
● ನಿಮ್ಮ ಮಾನದಂಡಗಳನ್ನು ಹೆಚ್ಚಿಸಿ
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ತಾವಾಗಿಯೇ ಹೇರಿಕೊಂಡ ಶಾಪಗಳಿಂದ ವಿಮೋಚನೆ
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
Comments