हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ‭‭ಕ್ರಿಸ್ತನಲ್ಲಿ ಅರಸರೂ ಯಾಜಕರೂ..
Daily Manna

‭‭ಕ್ರಿಸ್ತನಲ್ಲಿ ಅರಸರೂ ಯಾಜಕರೂ..

Monday, 26th of February 2024
0 0 527
Categories : ಕ್ರಿಸ್ತನಲ್ಲಿ ನಮ್ಮ ಗುರುತು (our identity in Christ)
"ನಮ್ಮನ್ನು ಪ್ರೀತಿಸುವವನೂ ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನೂ...."(ಪ್ರಕಟನೆ‬ ‭1:5‭)

 ಇಲ್ಲಿನ ವಾಕ್ಯವು ಹೇಳಿರುವ ಕ್ರಮವನ್ನು ಗಮನಿಸಿ ನೋಡಿರಿ. ಮೊದಲು ಆತನು ನಮ್ಮನ್ನು ಪ್ರೀತಿಸಿದನು ನಂತರ ತನ್ನ ರಕ್ತದಿಂದ ನಮ್ಮನ್ನು ತೊಳೆದನು.

 ಇದು ಯಾವುದೋ ಕರ್ತವ್ಯಕ್ಕೊಸ್ಕರ ದೇವರು ನಮ್ಮನ್ನು ತೊಳೆದನು ಎಂಬುದಲ್ಲ ಆತನು ಅದನ್ನು ನಮ್ಮನ್ನು ಪ್ರೀತಿಸಿದ್ದರಿಂದಲೇ ಮಾಡಿದ್ದಾನೆ. ಆದುದರಿಂದ ನಾವು ಶುದ್ಧವಾದೆವು. ನಾವು ಕೊಳಕಾಗಿದ್ದಾಗಲೇ ಆತನು ನಮ್ಮನ್ನು ಪ್ರೀತಿಸಿದ್ದನು. ಆಮೇಲೆ ನಮ್ಮನ್ನು ಶುದ್ಧೀಕರಿಸಿದನು.

ರೋಮ 5:8 ಸಹ ಇದನ್ನೇ ದೃಢಪಡಿಸುತ್ತದೆ. "ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ."

"ನಮ್ಮನ್ನು ಅರಸರನ್ನಾಗಿಯೂ,ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದವನೂ ಆಗಿರುವಾತನಿಗೆ ಯುಗಯುಗಾಂತರಗಳಲ್ಲಿಯೂ ಘನ ಮಹತ್ವಗಳಿರಲಿ. ಆಮೆನ್."(ಪ್ರಕಟನೆ‬ ‭1:6‬)

ಕರ್ತನಾದ ಯೇಸುವು ನಮ್ಮನ್ನು ಶುದ್ಧ ಪಡಿಸಿದ ಮೇಲೆ ಅಲ್ಲಿಗೆ ತನ್ನ ಕಾರ್ಯವನ್ನು ನಿಲ್ಲಿಸಲಿಲ್ಲ. ಆತನು ನಮ್ಮನ್ನು ಅರಸರನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದನು

ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮುಂಚೆ ಒಬ್ಬ ಮನುಷ್ಯನಿದ್ದನು, ಆತನೇ ಅರಸನೂ ಯಾಜಕನೂ ಆದ ಮೆಲ್ಕಿಜೆದೇಕನು. (ಆದಿಕಾಂಡ 14:18).ಆದಾಗಿಯೂ ಹಳೆ ಒಡಂಬಡಿಕೆಯಲ್ಲಿ ಧರ್ಮಶಾಸ್ತ್ರವು ಕೊಡಲ್ಪಟ್ಟಿತು. ಈ ಧರ್ಮಶಾಸ್ತ್ರವು ಅರಸುತನ ಮತ್ತು ಯಾಜಕತ್ವವು ಒಂದಾಗಿ ಕಾರ್ಯನಿರ್ವಹಿಸುವುದರ ಮೇಲೆ ನಿಷೇಧ ಹೇರಿತ್ತು. ಆಗ ನೀವು ಕೇವಲ ಅರಸರಾಗಿರಬಹುದಾಗಿತ್ತು ಅಥವಾ ಯಾಜಕರಾಗಿರಬಹುದಾಗಿತ್ತು ನೀವು ಏಕಕಾಲಕ್ಕೆ ಎರಡೂ ಆಗಲು ಆಗ ಸಾಧ್ಯವಿರಲಿಲ್ಲ.

 ಅರಸನಾದ ಉಜ್ಜಿಯನು ಇದಕ್ಕೆ ಒಂದು ಉತ್ತಮ ಉದಾಹರಣೆ. ಇವನು ಎರಡೂ ಕಾರ್ಯಗಳನ್ನು ಸಮ್ಮಿಶ್ರ ಮಾಡಲು ಹೋಗಿ ಅದಕ್ಕೆ ತಕ್ಕ ದಂಡವನ್ನು ತೆರಬೇಕಾಯಿತು - ಅವನು ದೇವರಿಂದ ತಿರಸ್ಕರಿಸಲ್ಪಟ್ಟು ತನ್ನ ಸಿಂಹಾಸನವನ್ನು ಕಳೆದುಕೊಳ್ಳಬೇಕಾಯಿತು.2ಪೂರ್ವ ಕಾಲ ವೃತ್ತಾಂತ 26:16-2ರವರೆಗೆ  ಓದಿ ನೋಡಿರಿ ಇದರ ಸಂಪೂರ್ಣ ಕಥೆಯನ್ನು ನಮಗೆ ಹೇಳುತ್ತದೆ.

 ಅರಸನಾದ ಸೌಲನು ಮತ್ತೊಬ್ಬನು ಇದೇ ರೀತಿ ಯಾಜಕತ್ವ ಮತ್ತು ಅರಸುತನವನ್ನು ಸಮ್ಮಿಶ್ರ ಮಾಡಿ ಕಾರ್ಯನಿರ್ವಹಿಸಲು ಹೋದವನು. ಇವನೂ ಸಹ ದೇವರಿಂದ ತಿರಸ್ಕರಿಸಲ್ಪಟ್ಟು ತನ್ನ ರಾಜ್ಯವನ್ನು ಕಳೆದುಕೊಂಡನು. ಇದರ ಕಥೆಯನ್ನು ತಿಳಿಯಲು 1ಸಮುವೇಲ13:8-14ರವರೆಗೆ ಓದಿ ನೋಡಿ.

ಈ ಎರಡು ಉದಾಹರಣೆಗಳು ಹಳೆ ಒಡಂಬಡಿಕೆಯ ಅರಸುತನ ಮತ್ತು ಯಾಜಕತ್ವ ಎರಡೂ ಕಾರ್ಯಗಳನ್ನು ಸಮ್ಮಿಶ್ರ ಮಾಡುವುದನ್ನು ನಿಷೇಧಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಹೇಗೂ ಹೊಸ ಒಡಂಬಡಿಕೆಯ ಅಡಿಯಲ್ಲಿ ನಾವು ಕರ್ತನಾದ ಯೇಸು ಕ್ರಿಸ್ತನ ಹಾಗೆ ಆಗಬಹುದು ಅಂದರೆ ಅರಸರೂ ಯಾಜಕರೂ ಎರಡೂ ಆಗಬಹುದು.

 ಈಗ 1ಪೇತ್ರ 2:9ಕ್ಕೆ ಹೋಗೋಣ. "ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ."

ಇಲ್ಲಿ ರಾಜವಂಶಸ್ಥರಾದ ಯಾಜಕರು ಎಂದು ರಾಜವಂಶಸ್ತರು ಮತ್ತು ಯಾಜಕರು ಎಂಬ ಎರಡು ಪದಗಳನ್ನು ಸಮ್ಮಿಶ್ರ ಮಾಡಿರುವುದನ್ನು ಗಮನಿಸಿ ನೋಡಿರಿ ಹಾಗಾಗಿ ಯಾರ್ಯಾರು ಕರ್ತನನ್ನು ನಿಜವಾಗಿ ನಂಬಿದ್ದಾರೋ ಅವರೆಲ್ಲರೂ ಅರಸರೂ  ಯಾಜಕರೂ ಆಗಿ ಮಾಡಲ್ಪಡುವರು ಎಂಬುದು ಇಲ್ಲಿ ಸ್ಪಷ್ಟ ವಾಗಿದೆ.

ಕ್ರಿಸ್ತನ ಹಾಗೆಯೇ ನಾವು ಸಹ ಎರಡು ರೀತಿಯಲ್ಲಿಯೂ ಸೇವಾ ಕಾರ್ಯವನ್ನು ಮಾಡಬಹುದು. ನಾವು ಯಾಜಕರಾಗಿ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವವರಾಗಿ ಆತನಿಗೆ ಸ್ತೋತ್ರ ಯಜ್ಞವನ್ನು ಅರ್ಪಿಸಲು ಕರೆಯಲ್ಪಟ್ಟವರಾಗಿದ್ದೇವೆ. ಹಾಗೆಯೇ  ಅರಸರಾಗಿ ಸುವಾರ್ತೆಯನ್ನು ಸಾರುವುದಕ್ಕೋಸ್ಕರ ರೋಗಿಗಳನ್ನು ಸ್ವಸ್ಥಪಡಿಸುವ ದೆವ್ವಗಳನ್ನು ಓಡಿಸುವ ಅಧಿಕಾರವನ್ನು ನಡೆಸುವವರಾಗಿದ್ದೇವೆ
Confession
 ನಾನು ಕ್ರಿಸ್ತನಲ್ಲಿ ಇದ್ದೇನೆ ಮತ್ತು ದೇವರಾದುಕೊಂಡ ಜನಾಂಗ, ರಾಜ ವಂಶಸ್ಥರಾದ ಯಾಜಕ, ಮೀಸಲಾದ ಜನ ದೇವರು ಕೊಂಡುಕೊಂಡ ವಿಶೇಷ ಪ್ರಜೆಯೂ ಆಗಿದ್ದೇನೆ. ಆದ್ದರಿಂದ ನಾನು ಆಶ್ಚರ್ಯಕರವಾದ ಬೆಳಕಿನಲ್ಲಿ ನನ್ನನ್ನು ಸೇರಿಸಿದಾತನ ಗುಣತಿಶಯಗಳನ್ನು ಪ್ರಚಾರ ಮಾಡುವೆನು.


Join our WhatsApp Channel


Most Read
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ಪ್ರಾರ್ಥನಾ ಹೀನತೆ ಎಂಬ ಪಾಪ
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇದು ಅಧಿಕಾರ ವರ್ಗಾವಣೆಯ ಸಮಯ
● ಮಾತಿನಲ್ಲಿರುವ ಶಕ್ತಿ
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕ್ರಿಸ್ತನ ರಾಯಭಾರಿಗಳು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login