हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದೇವರ ಸ್ವಭಾವ
Daily Manna

ದೇವರ ಸ್ವಭಾವ

Thursday, 2nd of October 2025
2 1 218
Categories : ಗುಣ(character)
ಆದರೆ [ಪವಿತ್ರ] ಆತ್ಮನ ಫಲ [ಆತನ ಸಾನಿಧ್ಯವು ನಮ್ಮೊಳಗೆ ಸಾಧಿಸುವ ಕೆಲಸ] ಪ್ರೀತಿ, ಸಂತೋಷ (ಆನಂದ), ಶಾಂತಿ, ತಾಳ್ಮೆ (ಸಮಚಿತ್ತತೆ, ಸಹಿಷ್ಣುತೆ), ದಯೆ, ಒಳ್ಳೆಯತನ (ಉಪಕಾರ ಸ್ಮರಣೆ), ನಂಬಿಗಸ್ತಿಕೆ, ಸೌಮ್ಯತೆ (ದೀನತೆ, ನಮ್ರತೆ), ಸ್ವಯಂ ನಿಯಂತ್ರಣ (ಸ್ವ-ಸಂಯಮ, ಸಂಯಮ). ಅಂತಹ ವಿಷಯಗಳನ್ನು , (ಆಪಾದನೆಯನ್ನು ತರಬಹುದು)ಯಾವುದೇ ನಿಯಮವೂ ವಿರೋಧಿಸುವುದಿಲ್ಲ. (ಗಲಾತ್ಯ 5:22-23 ವರ್ಧಿತ) 

ಆತ್ಮನ ಫಲವಾದ ಆ ಒಂಬತ್ತು ಗುಣಲಕ್ಷಣಗಳು ದೇವರ ಗುಣ ಮತ್ತು ಸ್ವಭಾವವಾಗಿವೆ. ಅವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಗುಣ ಮತ್ತು ಸ್ವಭಾವವಾಗಿವೆ. ಆತನು ಆತ್ಮನ ಫಲದ ನಡೆದಾಡುವ, ಮಾತನಾಡುವ ಅಭಿವ್ಯಕ್ತಿಯಾಗಿದ್ದನು. 

ಯಾಕಂದರೆ ದೇವರು ತನ್ನ ಮಗನಿಗೆ ಅನೇಕ ಮಂದಿ ಸಹೋದರರಿದ್ದು ಅವರಲ್ಲಿ ಆತನೇ ಹಿರಿಯನಾಗಿರಬೇಕೆಂದು ಉದ್ದೇಶಿಸಿ ತಾನು ಯಾರನ್ನು ತನ್ನವರೆಂದು ಮೊದಲು ತಿಳುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವದಕ್ಕೆ [ಮತ್ತು ಆಂತರಿಕವಾಗಿ ಆಂತರಿಕ ಹೋಲಿಕೆಯನ್ನು ಹಂಚಿಕೊಳ್ಳಬೇಕೆಂದು] ಮೊದಲೇ ನೇವಿುಸಿದನು. (ರೋಮನ್ನರು 8:29)

ವಾಸ್ತವವಾಗಿ, ದೇವರ ವಾಕ್ಯ ಮತ್ತು ಅಭಿಷೇಕದ ಅಂತಿಮ ಉದ್ದೇಶವೆಂದರೆ ನಮ್ಮನ್ನು ಪರಿವರ್ತಿಸಿ ನಮ್ಮ ಸ್ವಭಾವವನ್ನು ಆತನಂತೆಯೇ ಮಾಡುವುದು.  ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗಿ ಗೌರವ ಬರುವುದು; ಇದುವೇ ನೀವು ನನ್ನ ಶಿಷ್ಯರೆಂದು ತೋರ್ಪಡಿಸುವಂತದ್ದು[ಯೋಹಾನ 15:8] 

ಜನರು ಪವಿತ್ರಾತ್ಮನ ವರಗಳನ್ನು ಪವಿತ್ರಾತ್ಮನ ಫಲವಿಲ್ಲದೆ ಕಾರ್ಯನಿರ್ವಹಿಸಲು ಪ್ರಯತ್ನಿಸಿದಾಗ, ಆ ವರಗಳು ಅಂತಿಮವಾಗಿ ಭ್ರಷ್ಟಗೊಳ್ಳುತ್ತದೆ ಮತ್ತು ಅದರ ಪೂರ್ಣತೆಯಲ್ಲಿ ಅದು ಕಾರ್ಯನಿರ್ವಹಿಸಲಾಗದು. ವರಗಳ ಅಂತಹ ದುರುಪಯೋಗದಿಂದ ತಂದೆಗೆ ಯಾವುದೇ ಮಹಿಮೆ ಸಿಗುವುದಿಲ್ಲ. ಆದ್ದರಿಂದ, ನೀವು ಆತನ ಸಾನಿಧ್ಯದೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಫಲ ನೀಡುವುದು ಅತ್ಯಂತ ಕಡ್ಡಾಯವಾದ ಸಂಗತಿಯಾಗಿದೆ.

ಪವಿತ್ರಾತ್ಮನ ವರಗಳನ್ನು ಯಾವಾಗಲೂ ಆತ್ಮನ ಫಲದ ಸಾಮರಸ್ಯದಿಂದ ಮತ್ತು ಅದರ ಪ್ರಬಲ ಪ್ರಭಾವದ ಅಡಿಯಲ್ಲಿ ಬಳಸಬೇಕು. ಕೋಲಿನ ಕಥೆಯು ಅರಣ್ಯಕಾಂಡ 17 ರಲ್ಲಿ ಕಂಡುಬರುತ್ತದೆ; ದೇವರು ಒಬ್ಬ ಮಹಾಯಾಜಕನನ್ನು ಆರಿಸಿಕೊಳ್ಳಲು ಮೋಶೆಗೆ ಪ್ರತಿ ಕುಲದಿಂದಲೂ ಒಬ್ಬೊಬ್ಬ ಮನುಷ್ಯನು ಒಂದೊಂದು ಕೋಲನ್ನು ತಂದು ಗುಡಾರದ ಬಾಗಿಲಿನ ಮುಂದೆ ಇಡುವಂತೆ ಆಜ್ಞಾಪಿಸಲು ಹೇಳಿದನು.ಒಂದು ರಾತ್ರಿಯಲ್ಲಿ ಯಾವ ಕೋಲು ಚಿಗುರಿ ಎಲೆ ಬಿಟ್ಟು ಮೊಗ್ಗೆ ಹೊಡೆದು ಅರಳಿ ಕಾಯಿ - ಹಣ್ಣು ಬಿಟ್ಟಿರುವುದೋ ಆ ಕೋಲು ಯಾವ ಯಾಜಕನದೋ ಅವನೇ ತನ್ನ ಆಯ್ಕೆಯ ಯಾಜಕ ಎನ್ನುವುದಕ್ಕೆ ಸಂಕೇತವಾಗಿದೆ ಎಂದು ದೇವರು ಹೇಳಿದ್ದನು.

ಮರುದಿನ ಮೋಶೆಯು ಸಾಕ್ಷಿ ಗುಡಾರದೊಳಗೆ ಹೋದಾಗ, ಲೇವಿ ಕುಲದವರಿಗಾಗಿ ಆರೋನನ ಕೋಲು ಚಿಗುರಿ ಮೊಗ್ಗುಗಳನ್ನು ಬಿಟ್ಟು, ಹೂವುಗಳನ್ನು ಬಿಟ್ಟು, ಬಾದಾಮಿ ಹಣ್ಣುಗಳನ್ನು ಕೊಟ್ಟಿತ್ತು. (ಅರಣ್ಯ ಕಾಂಡ 17:8) 

ಕರ್ತನಾದ ಯೇಸು, "ನೀವು  ಅವರ ಫಲಗಳಿಂದಲೇ ಅವರನ್ನು ತಿಳಿದುಕೊಳ್ಳುವಿರಿ..." ಎಂದು ಹೇಳಿದನು (ಮತ್ತಾಯ. 7:16). ದೇವರು ಆರಿಸಿಕೊಂಡ ಮಹಾಯಾಜಕನೂ ಸಹ ಕೋಲಿನಲ್ಲಿ ಹುಟ್ಟಿದ ಫಲದಿಂದ ತಿಳಿದುಬಂದನು.

Bible Reading: Micah 4-7; Nahum 1 
Confession
ನಾನು ತಲೆಗೆ (ಕರ್ತನಾದ ಯೇಸು ಕ್ರಿಸ್ತನಿಗೆ) ಸಂಪರ್ಕ ಹೊಂದಿರುವುದರಿಂದ, ನನ್ನ ಜೀವನವು ಬಹಳ ಫಲ ನೀಡಿ ತಂದೆಗೆ ಗೌರವವನ್ನು  ಮಹಿಮೆಯನ್ನು ತರುತ್ತದೆ.


Join our WhatsApp Channel


Most Read
● ನೀವು ಎಷ್ಟು ವಿಶ್ವಾಸಾರ್ಹರು?
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಶುಭವಾರ್ತೆಯನ್ನು ಸಾರಿರಿ.
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇನ್ನೆಷ್ಟರವರೆಗೆ?
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login