हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
Daily Manna

ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3

Wednesday, 28th of August 2024
3 1 482
Categories : ಆತ್ಮೀಕ ಶಕ್ತಿ ( Spiritual Strength)
ಇಂದು ನೀವು ನಿಮ್ಮ ಜೀವನವನ್ನು, ವ್ಯವಹಾರವನ್ನು ಉಪವಾಸದಿಂದಲೂ ಪ್ರಾರ್ಥನೆಯಿಂದಲೂ ಮತ್ತು ಕಣ್ಣೀರಿನಿಂದಲೂ ಕಟ್ಟಿಕೊಂಡಿದ್ದರೆ ಮತ್ತು ಒಂದು ಹಂತದವರೆಗಿನ ಸಾಧನೆಯನ್ನು ಸಾಧಿಸಿಕೊಂಡಿದ್ದರೆ ನಿಮ್ಮನ್ನು ಟೀಕಿಸುವವರಿಗೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಯಾವಾಗಲೂ ನಿಮ್ಮನ್ನು ಯಾತನೆಗೊಳಿಸುವ ಚುಚ್ಚು ಮಾತುಗಳಿಂದ ನೋಯಿಸಿ ನಿಮಗೆ ಅಡ್ಡ ಹೆಸರುಗಳನ್ನೀಡುತ್ತಾರೆ.ಅವರು ಕೇವಲ ನಿಮ್ಮ ಹಿರಿಮೆಯನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಾರೆಯೇ ವಿನಃ ಅವರು ಎಂದಿಗೂ ನಿಮ್ಮ ಕಥೆಯನ್ನು ತಿಳಿದುಕೊಳ್ಳಲು ಬಯಸುವುದಿಲ್ಲ.

ಅವರೆಲ್ಲರೂ ಅನೇಕ ಕಪಟ ಮಾತುಗಳನ್ಡುತ್ತಾ ನೆಪಗಳನ್ನು ಹೇಳುತ್ತಾ ನಿಮ್ಮನ್ನು ಟೀಕಿಸುತ್ತಲೇ ಇರುತ್ತಾರೆ. ಆದರೂ ನೀವು ಹೆಣಕಾಡುತ್ತಿರುವಾಗ, ಕೆಳಗೆ ಬಿದ್ದಾಗ ಅಥವಾ ಏನನ್ನಾದರೂ ಆರಂಭಿಸುವಾಗ  ಅವರೆಂದಿಗೂ ನಿಮ್ಮನ್ನು ಸರಿಪಡಿಸಲು ಬರುವುದಿಲ್ಲ. ಅವರು ನಿಮಗೆ ಸಹಾಯ ಮಾಡಲು ತಮ್ಮ ಹಸ್ತವನ್ನಲ್ಲ ಒಂದು ಬೆರಳನ್ನಾದರೂ ನೀಡಲೊಲ್ಲರು. ಆದರೆ ನೀವು ಮೇಲೆ ಬರುವಾಗ ಮಾತ್ರ ಏನೋ ನಿಮ್ಮನ್ನು ದೂಷಿಸಲೆಂದೇ ಸ್ವಯಂ ನಿಯೋಜನೆಗೊಂಡ ಪಾಲಕರಾಗಿ ಕಾರ್ಯನಿರ್ವಹಿಸಲು ಆರಂಭಿಸುತ್ತಾರೆ.ಪ್ರಾಯಶಃ  ಹೆಸರಾಂತ ವ್ಯಕ್ತಿಗಳ ವ್ಯಕ್ತಿತ್ವಹರಣ ಮಾಡುವುದರಿಂದ ಅವರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಸಾಕಷ್ಟು ವೀಕ್ಷಣೆಗಳು ಲೈಕ್ ಗಳು ಪಡೆಯಲು ಹೀಗೆ ಮಾಡುತ್ತಾರೆಂದು ಕಾಣುತ್ತದೆ.

ದೇವರು ತನ್ನ ಸೇವೆಯಲ್ಲಿ  ಮಹತ್ತರವಾಗಿ ಬಳಸಿಕೊಂಡಿದ ದಕ್ಷಿಣ  ಭಾರತದ ಒಬ್ಬ ದೇವರ ಮಹಾನ್ ಸೇವಕರಿದ್ದರು.
ಒಂದು ದಿನ ಒಂದು ಭಯಂಕರವಾದ ಕಾರು ಅಪಘಾತದಲ್ಲಿ ತಮ್ಮ ಅಮೂಲ್ಯವಾದ ಮಗಳನ್ನು ಅವರು ಕಳೆದುಕೊಂಡರು. ಅವರ ವಿರುದ್ಧ ಎಂತೆಂಥ ಟೀಕಾ ಪ್ರಹಾರಗಳು ಎದ್ದಿದ್ದವು ಎಂಬುದನ್ನು ನೀವು ನೋಡಬೇಕಿತ್ತು. ಅವರೆಲ್ಲರೂ ತಮ್ಮ ಮನಬಂದಂತೆ ಆ ಸೇವಕರ ವಿರುದ್ಧವೂ  ಅವರ ಸೇವೆಯ ವಿರುದ್ಧವು ಬರೆಯಲಾರಂಭಿಸಿದರು. ಅವರ ಪ್ರೀತಿಯ ಚಿಕ್ಕ ಮಗಳನ್ನು ಕಳಕೊಂಡ ನೋವು ಒಂದು ಕಡೆಯಾದರೆ ವಿಷಕಾರಿಯಾದ ಟೀಕಾ ಪ್ರಹಾರದ ನೋವು ಇನ್ನೊಂದು ಕಡೆಯಾಗಿತ್ತು.ಇದರಿಂದ ಅವರು ಬಹಳವಾಗಿ ಮನನೊಂದು ಇನ್ನೇನು ತಮ್ಮ ಸೇವಯನ್ನೇ ತ್ಯಜಿಸಬೇಕೆಂದಿದ್ದರು.

ಹೀಗೆ ಇರುವಾಗ ಒಂದು ದಿನ ಅವರ ಕುಟುಂಬ ಪ್ರಾರ್ಥನೆಯ ಸಮಯದಲ್ಲಿ ಪವಿತ್ರಾತ್ಮನು ಅವರಲ್ಲಿ ಒಬ್ಬರ ಮೇಲೆ ಇಳಿದು ಬಂದು ಆ ಪ್ರಿಯ ದೇವ ಸೇವಕರೊಂದಿಗೆ ಮಾತನಾಡಲು ಆರಂಭಿಸಿದನು. "ನನ್ನ ಮಗನೇ, ಇಡೀ ಪರಲೋಕವೇ ನೀನು ನನ್ನ ಸೇವೆಯನ್ನು ಮುಂದುವರಿಸುತ್ತಿಯೋ ಇಲ್ಲವೇ ಎಲ್ಲವನ್ನೂ ಬಿಟ್ಟು ದೂರಾಗುವೆಯೋ ಎಂದು ನೋಡಲು ತವಕದಿಂದ ಕಾಯುತ್ತಿದೆ "ಎಂದನು.ಆ ಕ್ಷಣದಲ್ಲಿಯೇ ಆ ದೇವಸೇವಕರು ಬಹಳವಾಗಿ ಅಳುತ್ತಾ "ನನ್ನ ಕೊನೆ ಉಸಿರು ಇರುವವರೆಗೂ ನಾನು ನಿನ್ನನ್ನು ಸೇವಿಸುತ್ತೇನೆ ಕರ್ತನೆ"ಎಂದರು.ಅಲ್ಲಿಂದೀಚೆಗೆ ಅವರ ಒಂದು ಸೇವೆಯು ಲೋಕದಾದ್ಯಂತ ಹರಡಲು ಆರಂಭವಾಯಿತು. ಆ ದೇವಸೇವಕರ ಸೇವೆಯ  ರಹಸ್ಯವು ನಿಮಗೆ ಗೊತ್ತೇ? ಅವರು ಪ್ರತಿದಿನವೂ ಗಂಟೆಗಟ್ಟಲೆ ಅನ್ಯ ಭಾಷೆಯಲ್ಲಿ ಪ್ರಾರ್ಥಿಸುತ್ತಿರುವವರಾಗಿದ್ದರು. ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ನಿಮ್ಮ ಆತ್ಮಿಕ ಮನುಷ್ಯನಿಗೆ ಚೈತನ್ಯವನ್ನು ವಿಶ್ರಾಂತಿಯನ್ನು  ತಂದುಕೊಡುತ್ತದೆ.ನೀವಿಂದು ನಿಮ್ಮ ಸೇವೆಯನ್ನು -ಕರೆಯನ್ನು ತ್ಯಜಿಸಿ ಬಿಡುವಂತಹ ಯೋಚನೆಯಲ್ಲಿರಬಹುದು. ಅನ್ಯ ಭಾಷೆಯಲ್ಲಿ ಪ್ರಾರ್ಥಿಸಲು ಆರಂಭಿಸಿ ಆಗ ನೀವು ಆತ್ಮಿಕ ಆಯಾಮದ ಮುಂದಿನ ಸ್ತರಕ್ಕೆ ಹೋಗುವವರಾಗುತ್ತೀರಿ.

" ಹೌದು, ತೊದಲು ಮಾತಿನವರು, ಅನ್ಯಭಾಷಿಗಳು, ಇವರ ಮೂಲಕವಾಗಿಯೇ ಯೆಹೋವನು ಈ ಜನರ ಮಧ್ಯದಲ್ಲಿ ಮಾತಾಡುವನು.

ಆತನು ಮೊದಲು - ಇದೇ ನಿಮಗೆ ಆವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮಗೊಳಿಸಿರಿ, ನಿಮಗೆ ಅನುಕೂಲವಾದ ಉಪಶಮನವು ಇದೇ ಎಂದು ಹೇಳಿದಾಗ ಇವರು ಕೇಳಲೊಲ್ಲದೆ ಹೋದರು."(ಯೆಶಾಯ 28:11-12).

ಅನ್ಯ ಭಾಷೆಯಲ್ಲಿ ಮಾತನಾಡುವುದರಲ್ಲಿ ಬಲ ಮತ್ತು ಫಲವತ್ತತೆ ಇದೆ. ಆದರೆ ಎಷ್ಟೋ ಜನರು ಅದನ್ನು ಕೇಳುವುದೇ ಇಲ್ಲ. ಇದನ್ನೇ ಪ್ರವಾದಿಯಾದ ಯೆಶಾಯ ಮುಂತಿಳಿಸಿದ್ದು "ಇವರು ಕೇಳದೇ ಹೋದರು" ಎಂದು. ಅನ್ಯ ಭಾಷೆಯಲ್ಲಿ ಮಾತನಾಡುವುದನ್ನು ವಿರೋಧಿಸಿ ಮಾತನಾಡುವ ಮತ್ತು ಬರೆಯುವ ಕೆಲವರಿದ್ದಾರೆ. ಅದು ಬಿರಿಯಾನಿಯ ರುಚಿ ನೋಡದೆ ಬಿರಿಯಾನಿಯ ಕುರಿತು ಮಾತನಾಡುವಂತೆಯೇ ಸರಿ. ಇದು ಎಂದೂ ಕೂಡ ಗಣಿತ ಕಲಿಯದ ವ್ಯಕ್ತಿಯಿಂದ ಗಣಿತ ಕಲಿಯುವಂತೆ. ಅನ್ಯ ಭಾಷೆಯ ವಿರುದ್ಧ ಮಾತನಾಡುವ ಮತ್ತು ಬರೆಯುವ ಜನರು ಎಂದಿಗೂ ಅನ್ಯ ಭಾಷೆಯ ಅನುಭವವನ್ನು ಪಡೆದಿರುವುದಿಲ್ಲ. ಅವರು ಅನ್ಯ ಭಾಷೆಯಲ್ಲಿ ಮಾತನಾಡುವುದೂ ಇಲ್ಲ. ಆದ್ದರಿಂದ ಅಂತವರೊಂದಿಗೆ ವಾದಿಸಲು ಎಂದಿಗೂ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿರಿ. ದೇವರು ನಿಮಗೆ ಅನುಗ್ರಹಿಸಿರುವ ಈ ಸೌಭಾಗ್ಯ ನಿಧಿಯಿಂದ ಎಂದಿಗೂ ವಂಚಿತರಾಗಬೇಡಿರಿ.

ಅಪೋಸ್ತಲನಾದ ಪೇತ್ರನ ಜೀವಿತದಲ್ಲೂ ಅವನು ಯೇಸುವನ್ನು ತೀವ್ರವಾಗಿ ನಿರಾಕರಿಸುವಂತಹ ಒಂದು ಸಮಯ ಬಂತು. ಅವನ ಜೀವನದಲ್ಲಿನ ನಿರತ್ಸಾಹ, ಒತ್ತಡ ಮತ್ತು ಆತ್ಮಿಕತೆಯಲ್ಲಿ ಕೆಳಮಟ್ಟಕ್ಕೆ ಜಾರಿದ ಅವನ ಸಮಯದ ನಿಮಿತ್ತ ಅವನು ಹೀಗೆ ಮಾಡಿರಬಹುದು ಎಂದು ನಾನು ನಂಬುತ್ತೇನೆ.
ಆದಾಗಿಯೂ ಪಂಚಶತ್ತಾಮ ದಿನದಂದು ಪವಿತ್ರಾತ್ಮನ ಬಲವು ಪೇತ್ರನ ಮೇಲೆಯೂ ಇಳಿದು ಬಂತು. ಅವನೂ ಸಹ ಅನ್ಯ ಭಾಷೆಯಲ್ಲಿ ಮಾತನಾಡಲು ಆರಂಭಿಸಿದನು. ಯೇಸುವನ್ನು ನಿರಾಕರಿಸಿದಂತಹ ತನಗೂ ಯೇಸುವಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದಂತ ಅದೇ ವ್ಯಕ್ತಿಯು ಮಾನಸಂತರ ಪಟ್ಟು  ಅಂದು ದೀಕ್ಷಾ ಸ್ನಾನ ಪಡೆದುಕೊಂಡ ಮೂರು ಸಾವಿರ ಜನರಿಗೆ ಧೈರ್ಯವಾಗಿ ಯೇಸುವನ್ನು ಪ್ರಚುರ ಪಡಿಸಿದನು (ಅ. ಕೃ 2).

ಒತ್ತಡವನ್ನು ನಿಭಾಯಿಸಲು ಅನೇಕರು ತಂಬಾಕು ಮದ್ಯಪಾನಗಳ ಮೊರೆ ಹೋಗುತ್ತಾರೆ. ಇವೆಲ್ಲವೂ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುವುದರ ಜೊತೆಗೆ ದುಬಾರಿಯೂ ಆಗಿದೆ ಮತ್ತು ಜನರನ್ನು ವ್ಯಸನಕ್ಕೂ ದೂಡುತ್ತದೆ. ಆದರೆ ಅನ್ಯ ಭಾಷೆಯಲ್ಲಿ ಮಾತನಾಡುವಂಥದ್ದು ಅತ್ಯಂತ ಪರಿಣಾಮಕಾರಿಯಾದ ಒತ್ತಡ ನಿರೋಧಕ ಆತ್ಮೀಕಾ  ಚಿಕಿತ್ಸೆಯಾಗಿದೆ. ನಾನಿಂದು  ನಿಮಗೆ ಎದುರಾಗಿ ನಿಂತಿರುವ ಎಲ್ಲವನ್ನೂ ನೀವು ಜಯಿಸುವಂತಾಗಲಿ ಎಂದು ಯೇಸು ನಾಮದಲ್ಲಿ ಆದೇಶಿಸಿ ಘೋಷಿಸುತ್ತೇನೆ.ನೀವು ಜಯಶಾಲಿಗಳೆನಿಸಿಕೊಳ್ಳುವಿರಿ. ನೀವು ಧರಿಸಿದಂತಹ ಬಟ್ಟೆಗಳನ್ನು ನೋಡಿ ನಿಮ್ಮ ಗುರುತು ತಿಳಿದುಕೊಳ್ಳಲು ಆಗುವುದಿಲ್ಲ. ಆದರೆ ನಿಮ್ಮ ಜೀವಿತದಲ್ಲಿ ಆತ್ಮನ ಕಾರ್ಯಗಳಿಂದ ನಿಮ್ಮ ಗುರುತು ತಿಳಿಯಲ್ಪಡುತ್ತದೆ.
Confession
 ಪರಿಶುದ್ಧವಾದ ಕರ್ತನಾದ ಯೇಸುವಿನ ರಕ್ತದಿಂದ ನನ್ನ ಪ್ರಾಣಾತ್ಮ ಶರೀರಗಳು ಮರೆಮಾಚಲ್ಪಟ್ಟು ಪರಿಶುದ್ಧೀಕರಿಸಲ್ಪಡಲಿ ಮತ್ತು ಸೈತಾನನಿಂದಲೂ ಲೋಕದಿಂದಲೂ ಶಾರೀರಿಕ ಇಚ್ಛೆಗಳಿಂದಲೂ ನನ್ನನ್ನು ಪ್ರತ್ಯೇಕಿಸಲಿ.ಅನ್ಯ ಭಾಷೆಯಲ್ಲಿ ನಾನು ಮಾತನಾಡುವಾಗ ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿವೇಚಿಸುವಂತೆ ಯೇಸುನಾಮದಲ್ಲಿ ನನ್ನನ್ನು ತರಬೇತುಗೊಳಿಸಲಿ.

Join our WhatsApp Channel


Most Read
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
● ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.
● ಆರಾಧನೆಯ ಪರಿಮಳ
● ಸಾಲದಿಂದ ಹೊರಬನ್ನಿ : ಕೀಲಿಕೈ #2
● ಆರಾಧನೆಗೆ ಬೇಕಾದ ಇಂಧನ
● ಬಲವಾದ ಮೂರುಹುರಿಯ ಹಗ್ಗ
● ಬೇಸರ - ಮುಕ್ತ ಜೀವನವನ್ನು ನಡೆಸುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login