Daily Manna
1
0
95
ದೇವರ 7 ಆತ್ಮಗಳು: ಕರ್ತನ ಭಯದ ಆತ್ಮ
Sunday, 24th of August 2025
Categories :
ದೇವರ ಆತ್ಮ ( Spirit of God)
ನಿಮಗೆ ತಿಳಿದಿರುವಂತೆ, ನಾವು ಯೆಶಾಯ 11:2 ರಲ್ಲಿ ಉಲ್ಲೇಖಿಸಲಾದ ಕರ್ತನ ಏಳು ಆತ್ಮಗಳನ್ನು ಅಧ್ಯಯನ ಮಾಡುತ್ತಿದ್ದೇವೆ.
ಆ ಅಂಕುರದ ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳಿವಳಿಕೆಯನ್ನೂ ಮತ್ತು ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು. (ಯೆಶಾಯ 11:2)
ಇಂದು, ಪವಿತ್ರಾತ್ಮನು ಕರ್ತನ ಭಯದ ಆತ್ಮನಾಗಿ ತನ್ನನ್ನು ಹೇಗೆ ಪ್ರಕಟಪಡಿಸಿಕೊಳ್ಳುತ್ತಾನೆ ಎಂಬುದನ್ನು ನಾವು ಅಧ್ಯಯನ ಮಾಡಲಿದ್ದೇವೆ. ಯೆಶಾಯ 11 ರಲ್ಲಿ "ಭಯ" ಎಂಬ ಪದದ ಅರ್ಥ ಕರ್ತನಿಗೆ ತೋರುವ ಪವಿತ್ರ ಭಯ ಮತ್ತು ಭಕ್ತಿಯನ್ನು ಹೊಂದಿರುವುದು ಆಗಿದೆ. ಕರ್ತನ ಭಯದ ಆತ್ಮವನ್ನು ಭಕ್ತಿಯ ಆತ್ಮ ಎಂದೂ ಕರೆಯಲಾಗುತ್ತದೆ. (ಕೀರ್ತನೆ 111:9 KJV)
ನಾನು ಚಿಕ್ಕ ಹುಡುಗನಾಗಿದ್ದಾಗ ತಮಾಷೆಯ ಶಬ್ದವನ್ನು ಮಾಡುವ ಮತ್ತು ಅವುಗಳ ಮೇಲೆ ದೀಪಗಳನ್ನು ಹೊಂದಿರುವ ಬೂಟುಗಳನ್ನು ಧರಿಸಿದ್ದನ್ನು ನೆನಪಿಸಿಕೊಳ್ಳುತ್ತೇನೆ. ನಾನು ಅದನ್ನು ಧರಿಸಿಕೊಂಡು ತುಂಬಾ ಉತ್ಸುಕನಾಗಿ, ಉಸ್ತುವಾರಿ ಪಾಸ್ಟರ್ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾಗ ನಾನು ಚರ್ಚ್‌ನಾದ್ಯಂತ ಅದನ್ನು ಹಾಕಿಕೊಂಡು ಓಡಾಡುತ್ತಿದ್ದೆ.
ನನ್ನ ತಾಯಿ ಎಲ್ಲಿಂದಲೋ ನೋಡಿ ಬಂದು ನನ್ನ ಬೆನ್ನಿನ ಮೇಲೆ ಲಘುವಾಗಿ ಪೆಟ್ಟು ಕೊಟ್ಟು ನನ್ನ ಜೀವನದುದ್ದಕ್ಕೂ ನಾನು ಎಂದಿಗೂ ಮರೆಯಲಾಗದ ಒಂದು ವಿಷಯವನ್ನು ನನ್ನ ಕಿವಿಯಲ್ಲಿ ಪಿಸುಗುಟ್ಟಿದಳು. ಅದೇನೆಂದರೆ, "ಮಗನೇ, ದೇವರ ಬಗ್ಗೆ ಮತ್ತು ಆತನ ಸಾನಿಧ್ಯದ ಬಗ್ಗೆ ಯಾವಾಗಲೂ ಆಳವಾದ ಭಕ್ತಿಯನ್ನು ಹೊಂದಿರಲು ಮರೆಯಬೇಡ. ನೀನು ಹಾಗೆ ಮಾಡುವಾಗ, ದೇವರು ಯಾವಾಗಲೂ ನಿನ್ನ ಜೊತೆಗೆ ಇರುತ್ತಾನೆ." ಎಂದು ಹೇಳುತ್ತಿದ್ದಳು.
ಕರ್ತನ ಭಯದ ಆತ್ಮವೂ ಆತ್ಮನ ಸಾಕಾರತೆಯಲ್ಲಿ ಒಂದಾಗಿದ್ದು, ಆತನು ಒಂದು ಸ್ಥಳಕ್ಕೆ ಅಥವಾ ಒಬ್ಬ ವ್ಯಕ್ತಿಯ ಮೇಲೆ ಬಂದಾಗ, ಆತನು ದೇವರ ಕುರಿತು ಆಳವಾದ ಭಕ್ತಿಯನ್ನು ಅಲ್ಲಿ ಮೂಡಿಸುತ್ತಾನೆ.. ಜನರು ಇದ್ದಕ್ಕಿದ್ದಂತೆ ಭಯದಿಂದ ಮೊಣಕಾಲುಗಳಲ್ಲಿ ನಿಲ್ಲಲಾರಾಂಭಿಸುತ್ತಾರೆ, ಕೆಲವೊಮ್ಮೆ ಅವರ ಮುಖಗಳ ಮೇಲೆ ಕಣ್ಣೀರು ಹರಿಯುತ್ತಿರುತ್ತದೆ.
ವರ್ಷಗಳಲ್ಲಿ, ಸಭಾ ಸೇವೆಗೆ ಬಂದಾಗಲೆಲ್ಲಾ ಜನರನ್ನು ಅವರ ನಡತೆಯನ್ನು ನಾನು ನೋಡಿದ್ದೇನೆ. ಆರಾಧನೆ ನಡೆಯುತ್ತಿರುವಾಗ, ಕೆಲವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸುವಲ್ಲಿ, ತಮ್ಮ ಇಮೇಲ್ ಅನ್ನು ಪರಿಶೀಲಿಸುವಲ್ಲಿ ನಿರತರಾಗಿರುತ್ತಾರೆ. ದೇವರು ಅಂತಹ ಅಗೌರವದ ಮನೋಭಾವವನ್ನು ಎಂದಿಗೂ ಸಹಿಸುವುದಿಲ್ಲ.
ಕರ್ತನ ಭಯದ ಆತ್ಮವು ಒಬ್ಬ ವ್ಯಕ್ತಿಯ ಮೇಲೆ ಇರುವಾಗ, ಅಂತಹ ವ್ಯಕ್ತಿಯು ನಮ್ರತೆಯಿಂದ ನಡೆಯುತ್ತಾನೆ. ಅಪೊಸ್ತಲ ಪೌಲನು, "ದೇವರ ಭಯದಲ್ಲಿ ಒಬ್ಬರಿಗೊಬ್ಬರು ಅಧೀನರಾಗಬೇಕು" ಎಂದು ಹೇಳಿದನು. (ಎಫೆಸ 5:21).
ಕರ್ತನ ಭಯದ ಆತ್ಮನ ಉಪಸ್ಥಿತಿಯಿಲ್ಲದೆ ಒಬ್ಬರಿಗೊಬ್ಬರು ಎಚ್ಚರಿಕೆಯಿಂದ ಅಧೀನರಾಗುವುದು ಸಾಧ್ಯವಿಲ್ಲ. ಸ್ವಭಾವತಃ, ಮಾನವರು ಎಂದಿಗೂ ಯಾರಿಗೂ ಅಧೀನರಾಗಲು ಬಯಸುವುದಿಲ್ಲ. ಬದಲಾಗಿ ದಂಗೆ ಏಳುವಂತದ್ದು ನಮಗೆ ಹೆಚ್ಚು ಸ್ವಾಭಾವಿಕವಾಗಿ ಬರುವಂತದ್ದಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕರ್ತನ ಭಯದ ಆತ್ಮವು ನಮಗೆ ದೇವರ ಕಡೆಗೆ ಭಕ್ತಿಯನ್ನು ಕಲಿಸುತ್ತದೆ ಅದು ನಮ್ಮನ್ನು ನೆಟ್ಟನೆಯ ಆದರೆ ಇಕ್ಕಟ್ಟಾದ ಮಾರ್ಗದಲ್ಲಿ ನಡೆಸುತ್ತದೆ.
ಪವಿತ್ರಾತ್ಮನು ಕರ್ತನ ಭಯದ ಆತ್ಮನಾಗಿ ತನ್ನನ್ನು ತಾನು ಪ್ರಕಟಪಡಿಸಿಕೊಳ್ಳುವಾಗ, ಒಂದೇ ಸಮಯದಲ್ಲಿ ನಾವು ಆತನನ್ನು ಆರಾಧಿಸುತ್ತೇವೆ, ಆತನ ಬಗ್ಗೆ ಭಯಪಡುತ್ತೇವೆ, ಪವಿತ್ರ ರೀತಿಯಲ್ಲಿ ಆತನಿಗೆ ಗೌರವ ಸಲ್ಲಿಸುತ್ತೇವೆ - ಮತ್ತು ಆತನಲ್ಲಿ ಆನಂದಿಸುರಾಗುತ್ತೇವೆ.
Bible Reading: Jeremiah 37-39
Prayer
ಪರಿಶುದ್ಧ ಪವಿತ್ರಾತ್ಮನೇ, ನಾನು ನನ್ನನ್ನು ಸಂಪೂರ್ಣವಾಗಿ ನಿನಗೆ ಒಪ್ಪಿಸುತ್ತೇನೆ ಇಂದು ಕರ್ತನ ಭಯದ ಆತ್ಮನಾಗಿ ನಿನ್ನನ್ನು ನನಗೆ ಪ್ರಕಟಪಡಿಸು ನಿನ್ನ ಕುರಿತಾದ ಪವಿತ್ರ ಭಯ ಮತ್ತು ಭಕ್ತಿಯಿಂದ ನನ್ನನ್ನು ಯೇಸುನಾಮದಲ್ಲಿ ತುಂಬು. ಆಮೆನ್.
Join our WhatsApp Channel

Most Read
● ಪಂಚಶತ್ತಾಮ ದಿನದ ಉದ್ದೇಶ● ಕೃಪೆಯಿಂದಲೇ ರಕ್ಷಣೆ
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ವಾಕ್ಯದಿಂದ ಬೆಳಕು ಬರುತ್ತದೆ
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿರುವ ಪ್ರಮುಖ ಸಂಗತಿಗಳು
● ಹನ್ನೆರಡು ಮಂದಿಯಲ್ಲಿ ಒಬ್ಬರು.
Comments