हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಂಬಿಕೆಯಿಂದ ಹೊಂದಿಕೊಳ್ಳುವುದು
Daily Manna

ನಂಬಿಕೆಯಿಂದ ಹೊಂದಿಕೊಳ್ಳುವುದು

Wednesday, 26th of June 2024
2 1 294
Categories : ನಂಬಿಕೆ (Faith)
"ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ." (ಇಬ್ರಿಯರಿಗೆ 11:6)

ನಾವು ದೇವರಿಂದ ಏನಾದರೂ ಹೊಂದಿಕೊಂಡರೆ ಅದು ನಂಬಿಕೆಯ ಮೂಲಕವೇ. ಇಂದು ದೇವರಿಂದ ನಂಬಿಕೆ ಮೂಲಕ ಹೊಂದಿಕೊಳ್ಳುವ ಮೂರು ಮುಖ್ಯ ಕೀಲಿ ಕೈಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಕೀಲಿಕೈ #1
1. ನಾವು ಯಥಾರ್ಥವಾಗಿ ಪ್ರಾಮಾಣಿಕವಾಗಿ ಆತನಿದ್ದಾನೆ ಎಂಬುದನ್ನು ನಂಬಬೇಕು. ಇಂದಿನ ನಮ್ಮ ಸುತ್ತಲಿನ ಲೋಕವು ನಿರಂತರವಾಗಿ ದೇವರನ್ನು ನಿರಾಕರಿಸುತ್ತಲೇ ಬರುತ್ತಿದೆ. ನಾವು ಈ ಸುಳ್ಳನ್ನು ಎಂದಿಗೂ ಖರೀದಿಸಬಾರದು. ಸತ್ಯವೇದವು ಸ್ಪಷ್ಟವಾಗಿ ಹೇಳುವುದೇನೆಂದರೆ "‭ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ." ಎಂಬುದೇ (ಕೀರ್ತನೆಗಳು 19:1)

ಕೀಲಿಕೈ #2
2. ತನ್ನನ್ನು ಮನಃಪೂರ್ವಕವಾಗಿ ಹುಡುಕುವವರಿಗೆ ದೇವರು ಪ್ರತಿಫಲ ಕೊಡುವವನಾಗಿದ್ದಾನೆ.
 ರೂತಳು ಹೃತ್ಪೂರ್ವಕವಾಗಿ ಕರ್ತನನ್ನು ಹಿಂಬಾಲಿಸಿದಳು ಆಕೆಯು ಮೋವಾಬಿನಿಂದ ಬೆತ್ಲೆಹೇಮಿನ(ರೊಟ್ಟಿಯ ಮನೆ)ಕಡೆಗೆ ತನ್ನ ದಿಕ್ಕನ್ನು ಬದಲಾಯಿಸಿದಳು -ಅಂದರೆ ದೇವರ ಮನೆ ಕಡೆಗೆ.

ಕರ್ತನು ರೂತಳ ನಂಬಿಕೆಯನ್ನು ಬಹಳವಾಗಿ ಮೆಚ್ಚಿದನು. ಒಬ್ಬ ಅನ್ಯ ಸ್ತ್ರೀಯು ತನಗಿದ್ದ ಎಲ್ಲವನ್ನು ಕಳೆದುಕೊಂಡರೂ ತನ್ನನ್ನು ನಂಬಿ ಹಿಂಬಾಲಿಸಿದ್ದನ್ನು ಕಂಡು ಅವಳ ಇಡೀ ಜೀವಮಾನವನ್ನು ಆತನು ಆಶೀರ್ವದಿಸಿದ್ದು ಮಾತ್ರವಲ್ಲದೆ ಅವಳ ಹೆಸರನ್ನು ತನ್ನ ಮಗನಾದ ಕರ್ತನಾದ ಯೇಸು ಕ್ರಿಸ್ತನ ವಂಶಾವಳಿಯಲ್ಲಿ ಇಟ್ಟು ಬಿಟ್ಟನು. ಇದುವೇ ನಿಮ್ಮ ಜೀವನದಲ್ಲೂ ಸಹ ಜರಗುತ್ತದೆ.

ಕೀಲಿಕೈ #3
3."ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು. ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು. ಆ ಮನುಷ್ಯನು ತಾನು ಕರ್ತನಿಂದ ಏನಾದರೂ ಹೊಂದುವೆನೆಂದು ಭಾವಿಸದೆ ಇರಲಿ;"(ಯಾಕೋಬನು 1:6-7)

ಇಲ್ಲಿ "ಏನಾದರೂ ಹೊಂದುವೆನೆಂದು" ಎಂಬ ಪದವನ್ನು ನೀವು ಗಮನಿಸಿ ನೋಡಬೇಕೆಂದು ನಾನು ಬಯಸುತ್ತೇನೆ. "ಏನಾದರೂ" ಅಂದರೆ, ಸ್ವಸ್ಥತೆ, ಬಿಡುಗಡೆ, ಸಮೃದ್ಧಿ ಇತ್ಯಾದಿ ಎಲ್ಲವನ್ನೂ ಒಳಗೊಂಡಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಏನಾದರೂ ಎನ್ನುವುದು ಎಲ್ಲಾ ಸಂಗತಿಗಳನ್ನು ಒಳಗೊಂಡಿರುವುದಾಗಿದೆ.

ಕರ್ತನಿಂದ ನೇರವಾಗಿ ಹೊಂದಿಕೊಳ್ಳುವುದಕ್ಕಿರುವ ಕೀಲಿ ಕೈ ಎಂದರೆ "ನಂಬಿಕೆಯಿಂದ ಬೇಡಿಕೊಳ್ಳುವುದಾಗಿದೆ"

ಈಗ ಮೊದಲನೇ ಸಂಗತಿಯೆಂದರೆ, ನೀವು ತಕ್ಷಣವೇ ಫಲಿತಾಂಶವನ್ನು ಕಾಣದೆ ಇರಬಹುದು. ಆದರೂ ನೀವು ಬಿಡದೇ, ನಂಬಿಕೆಯಿಂದ ಬೇಡಿಕೊಳ್ಳುವ ದೇವರ ವಾಕ್ಯಗಳನ್ನು ಕಾರ್ಯ ರೂಪದಲ್ಲಿ ತರುವಾಗ ನಿಮ್ಮ ಆತ್ಮಿಕ ಮಾಂಸ ಖಂಡಗಳು ಅಭಿವೃದ್ಧಿ ಹೊಂದುತ್ತ ಹೋಗುತ್ತದೆ ಮತ್ತು ನೀವು 'ಆ ಏನಾದರೂ' ನಿಮ್ಮ ಜೀವನದಲ್ಲಿ ಸಾಕಾರಗೊಳ್ಳುವುದನ್ನು ಕಾಣಲಾರಂಬಿಸುವಿರಿ.

ಹೀಗೆಯೇ ಮಹಾನ್ ದೇವ ಸೇವಕ- ಸೇವಕಿಯರು ತಮ್ಮ ನಂಬಿಕೆಯನ್ನು ವೃದ್ಧಿಗೊಳಿಸುತ್ತಾ ಹೋಗಿದ್ದು. ಹಾಗಾಗಿ ನಾನು ಮತ್ತು ನೀವು ಕೂಡ ಹೀಗೆಯೇ  ಮಾಡಬಹುದು.

ಅನೇಕ ವರ್ಷಗಳ ಹಿಂದೆ ಮಹಾನ್ ದೇವ ಮನುಷ್ಯರಾದ ಅಂಕಲ್ ಡಿ. ಜಿ. ಎಸ್ ದಿನಕರವರು ಆಂಪ್ಲಿಫೈಡ್ ಬೈಬಲ್ ವರ್ಷನ್  ನಲ್ಲಿರುವ ಒಂದು ವಚನವನ್ನು ಎತ್ತಿ ಹೇಳಿದರು. " ಬೇಡುತ್ತಾ ಇರ್ರಿ ನೀವು ಹೊಂದಿಕೊಳ್ಳುವಿರಿ. ಹುಡುಕುತ್ತಾ ಇರು ಅದು ನಿಮಗೆ ಸಿಕ್ಕುವುದು. ( ಬಿಡದೆ) ತಟ್ಟುತ್ತಲೇ ಇರಿ ಮತ್ತು (ಬಾಗಿಲು) ನಿಮಗಾಗಿ ತೆರೆಯಲ್ಪಡುವುದು. " ಎಂದು  (ಮತ್ತಾಯ 7:7)
ನೀವು ಬಹಳ ಜಾಗರೂಕತೆಯಿಂದ ಇದನ್ನು ಗಮನಿಸಿ ನೋಡಿದರೆ ಮೂಲ ಸತ್ಯವೇದದ  ಭಾಷಾಂತರವು ಹೇಳುವುದೇನೆಂದರೆ "ಬಿಡದೆ ಬೇಡುತ್ತಲೇ ಇರಿ ಮತ್ತದು ನಿಮಗೆ ಕೊಡಲ್ಪಡುವುದು." ಎಂದು. ಇಂದು ಅನೇಕರು ಒಂದೆರಡು ಸಾರಿ ಬೇಡಿ ಆಮೇಲೆ ಆ ಬೇಡಿಕೆಯನ್ನು ಮೂಟೆ ಕಟ್ಟಿ ಇಟ್ಟುಬಿಡುತ್ತಾರೆ. ಆದರೆ ನೀವು ಬೇಡಿಕೊಳ್ಳಿರಿ.. ಬೇಡಿಕೊಳ್ಳುತ್ತಲೇ... ಇರಿ. ಖಂಡಿತವಾಗಿಯೂ ಅದು ನಿಮಗೆ ಕೊಡಲ್ಪಡುವುದು.
Prayer
ಪರಲೋಕದಲ್ಲಿರುವ ತಂದೆಯೇ, ನನ್ನೆಲ್ಲಾ ಅಪನಂಬಿಕೆಯನ್ನು ಕ್ಷಮಿಸು. ನನ್ನ ಜೀವಿತದ ಎಲ್ಲಾ ದಿನಗಳಲ್ಲೂ ಮನಪೂರ್ವಕವಾಗಿ ನಿನ್ನನ್ನು ಹುಡುಕುವ ಕೃಪೆಯನ್ನು- ಬಲವನ್ನು ಅನುಗ್ರಹಿಸು. ನೀನೇ ನನ್ನ ಬಹುಮಾನವು. ನಿನ್ನನ್ನೇ ನಾನು ಆರಾಧಿಸುವೆನು. ಯೇಸು ನಾಮದಲ್ಲಿ ಬೇಡುತ್ತೇನೆ. ಆಮೇನ್.


Join our WhatsApp Channel


Most Read
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
● ದೇವರ ಪ್ರೀತಿಯನ್ನು ಅನುಭವಿಸುವುದು
● ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ದೇವರು ದೊಡ್ಡ ಬಾಗಿಲುಗಳನ್ನು ತೆರೆಯಲಿದ್ದಾನೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login