हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.
Daily Manna

ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.

Monday, 27th of January 2025
2 1 161
Categories : ಶಿಷ್ಯತ್ವ (Discipleship)
ಇಂದಿನ ವೇಗದ, ಸವಾಲಿನ ಜಗತ್ತಿನಲ್ಲಿ ವೈವಾಹಿಕ  ಜೀವಿತ ಮತ್ತು ಕುಟುಂಬವನ್ನು ನಿರ್ಮಿಸುವುದು ಸಣ್ಣ ಕೆಲಸವಲ್ಲ. ಅಚಲವಾದ ಬದ್ಧತೆ, ಪ್ರಯತ್ನ ಮತ್ತು ಬುದ್ಧಿವಂತಿಕೆಯನ್ನು ಅದು ನಿರೀಕ್ಷಿಸುತ್ತದೆ. ಆದರೂ, ನಿಜವಾದ ಒಂದು ದೈವಿಕ ಕುಟುಂಬವನ್ನು ಸ್ಥಾಪಿಸುವಲ್ಲಿ ಅತ್ಯಂತ ನಿರ್ಣಾಯಕ ಅಂಶವೆಂದರೆ ನಮ್ಮ ಜೀವನದ ಪ್ರತಿಯೊಂದು ಅಂಶಕ್ಕೂ ದೇವರನ್ನು ಆಹ್ವಾನಿಸುವುದಾಗಿರುತ್ತದೆ.

"ಕರ್ತನು ಮನೆಯನ್ನು ಕಟ್ಟದಿದ್ದರೆ, ಕಟ್ಟುವವರು ವ್ಯರ್ಥವಾಗಿ ಕೆಲಸ ಮಾಡುತ್ತಾರೆ."ಎಂದು ಕೀರ್ತನೆ 127:1 ಹೇಳುತ್ತದೆ.

ಕ್ರಿಸ್ತ ಕೇಂದ್ರಿತ ಮನೆಯೆಂದರೆ  ಕೇವಲ ಕ್ರೈಸ್ತರು ವಾಸಿಸುವ ಸ್ಥಳವಲ್ಲ ಆದರೆ ಯೇಸುಕ್ರಿಸ್ತನ ಸ್ವಭಾವ ಮತ್ತು ಉಪಸ್ಥಿತಿಯನ್ನು ಪ್ರತಿಬಿಂಬಿಸುವ ವಾಸಸ್ಥಾನವಾಗಿದೆ. 

ಕ್ರಿಸ್ತ ಕೇಂದ್ರಿತ ಮನೆಯು  ಕೆಲವು ಗುಣಲಕ್ಷಣಗಳನ್ನು ಹೊಂದಿದೆ. ಅವುಗಳು ಯಾವುವು ಎಂದು  ನೋಡೋಣ: 

1.ಹೇಗೆ ಒಂದು ಭೌತಿಕ ಮನೆಯು ಒಂದು ಸುಭದ್ರವಾದ ಅಸ್ಥಿವಾರ ಕಟ್ಟಲ್ಪಡಬೇಕಾದ ಅವಶ್ಯಕತೆ ಇದೆಯೋ ಹಾಗೆಯೇ ಕ್ರಿಸ್ತನೆಂಬ ಅಸ್ಥಿವಾರದ ಮೇಲೆ ನಮ್ಮ ಜೀವಿತವನ್ನು ಕಟ್ಟಲ್ಪಟ್ಟಿದ್ದರೆ ಅದು ಸದೃಢವಾಗಿರುತ್ತದೆ. ಮತ್ತಾಯ 7: 24-27 ರಲ್ಲಿ, ಯೇಸು ಆತನ ಮಾತುಗಳನ್ನು ಕೇಳಿ ಅದರಂತೆ ನಡೆಯುವವನು  ಬಂಡೆಯ ಮೇಲೆ ತನ್ನ ಮನೆಯನ್ನು ನಿರ್ಮಿಸುವ ಬುದ್ಧಿವಂತನಿಗೆ  ಹೋಲಿಸುತ್ತಾನೆ. ಹಾಗೆಯೇ, ಕ್ರಿಸ್ತ ಕೇಂದ್ರಿತ ಮನೆಯು ದೇವರ ವಾಕ್ಯದಲ್ಲಿ ಬೇರೂರಿರಬೇಕು ಮತ್ತು ಆತನ ತತ್ವಗಳಿಂದ ಮಾರ್ಗದರ್ಶಿಸಲ್ಪಡಬೇಕು. ಈ ಅಡಿಪಾಯವು  ಶೋಧನೆಯ ಸಮಯದಲ್ಲಿ ಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಖಾತ್ರಿಗೊಳಿಸುತ್ತದೆ.

ಇದನ್ನು ಕಾರ್ಯಗತಗೊಳಿಸಲು ಇರುವ ಪ್ರಾಯೋಗಿಕ ಹಂತಗಳು:
  • ಪ್ರತಿ ದಿನದಲ್ಲಿ  ಸ್ವಲ್ಪ ಸಮಯವನ್ನು ಕುಟುಂಬವಾಗಿ  ಪ್ರಾರ್ಥನೆಯಲ್ಲಿಯೋ  ಮತ್ತು ವಾಕ್ಯವನ್ನು ಓದುವುದಯಲ್ಲಿಯೋ  ಪ್ರಾರಂಭಿಸಿ ಅಥವಾ ಕೊನೆಗೊಳಿಸಿ.
  •  ಪ್ರಾಪಂಚಿಕ ಮಾನದಂಡಗಳಿಗಿಂತ ಹೆಚ್ಚಾಗಿ ಸತ್ಯವೇದದ  ಮೌಲ್ಯಗಳ ಆಧಾರದ ಮೇಲೆ ನಿಮ್ಮ ನಿರ್ಧಾರಗಳನ್ನು ಮಾಡಿ.
2.ಒಂದು ಕ್ರಮಬದ್ಧತೆಯ ಸಮಾಧಾನದ ಮನೆ.
"ದೇವರು ಸಮಾಧಾನದ ಕರ್ತನೇ ಹೊರತು ಗೊಂದಲಕ್ಕೆ ಕಾರಣನಲ್ಲ "  ಎಂದು ಅಪೊಸ್ತಲ ಪೌಲನು ನಮಗೆ 1 ಕೊರಿಂಥ 14:33 ರಲ್ಲಿ ನೆನಪಿಸುತ್ತಾನೆ. ಕ್ರಿಸ್ತ-ಕೇಂದ್ರಿತ ಮನೆಯು ಕ್ರಮಬದ್ಧವಾಗಿದ್ದು -ಎಲ್ಲದರಲ್ಲೂ  ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇರುತ್ತದೆ ಎಂಬ ಅರ್ಥವಲ್ಲ. ಆದರೆ ದೈವಿಕ ಆದ್ಯತೆಗಳು ಮತ್ತು ಮಾನದಂಡಗಳನ್ನು ಕಾಪಾಡಿಕೊಳ್ಳುವಲ್ಲಿ. ದೇವರ ಚಿತ್ತದೊಂದಿಗೆ ಯಾವುದು ಹೊಂದಿಕೆಯಾಗುತ್ತದೆ ಮತ್ತು ಯಾವುದು ಹೊಂದಿಕೆಯಾಗುವುದಿಲ್ಲ ಎಂಬುದನ್ನು ಕುಟುಂಬ ಸದಸ್ಯರು ನಿಯಮಿತವಾಗಿ ನಿರ್ಣಯಿಸಬೇಕು.

“ಇದು ನಮ್ಮ ಕುಟುಂಬದಲ್ಲಿ  ನಂಬಿಕೆಯನ್ನು  ಕಟ್ಟುತ್ತದೆಯೇ?”  "ಈ ಕಾರ್ಯವು ದೇವರನ್ನು ಮಹಿಮೆಪಡಿಸುತ್ತದೆಯೇ?" ಆತ್ಮೀಕ ಕ್ರಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆಯೇ?ಎಂಬಂತಹ ಪ್ರಶ್ನೆಗಳಿಗೆ ಉತ್ತರಿಸುವಂತಿರಬೇಕು 

3.ಕ್ರಿಸ್ತ-ಕೇಂದ್ರಿತ ಮನೆಯು ಆತ್ಮೀಕ ಶಿಸ್ತುಗಳ ಸ್ಥಳವಾಗಿರಬೇಕು.
ಕ್ರಿಸ್ತ ಕೇಂದ್ರಿತ  ಮನೆಯು ಆತ್ಮೀಕ ಕೇಂದ್ರವಾಗಿದ್ದು, ಅಲ್ಲಿ ಯಾವಾಗಲೂ  ದೇವರ ವಾಕ್ಯವನ್ನು ಅಧ್ಯಯನ ಮಾಡಲಾಗುತ್ತದೆ, ಪ್ರಾರ್ಥನೆಗಳನ್ನು ಮಾಡಲಾಗುತ್ತದೆ ಮತ್ತು ಆರಾಧನೆಯು ಅಲ್ಲಿನ ಜೀವನಶೈಲಿಯಾಗಿರುತ್ತದೆ. ಧರ್ಮೋಪದೇಶಕಾಂಡ 6:6-7 ರಲ್ಲಿ, ದೇವರು ತನ್ನ ಜನರಿಗೆ ತಮ್ಮ ಮಕ್ಕಳಿಗೆ ಶ್ರದ್ಧೆಯಿಂದ ತನ್ನ ವಾಕ್ಯವನ್ನು ಕಲಿಸಲು ಆಜ್ಞಾಪಿಸುತ್ತಾನೆ, ಅವರ ತಮ್ಮ  ದೈನಂದಿನ ಜೀವನದಲ್ಲಿ ಅದರ ಬಗ್ಗೆ ಮಾತನಾಡುವವರಾಗಿರಬೇಕು . ಪಾಲಕರು ಈ ವಿಭಾಗಗಳಲ್ಲಿ  ತಾವೇ ಮಾದರಿ ಜೀವನ ನಡೆಸುವ ಮೂಲಕ ಆತ್ಮೀಕವಾಗಿ ಒಂದು ಅದ್ಭುತ ಕುಟುಂಬಕ್ಕೆ  ಬುನಾದಿ ಹಾಕುವವರಾಗಿರುತ್ತಾರೆ.

4.ದೇವರ ಕೃಪೆಯಿಂದ ಗುರುತಿಸಲ್ಪಟ್ಟ ಆಶ್ರಯಸ್ಥಾನ.
ಯಾವುದೇ ಕುಟುಂಬಗಲಾಗಲೀ   ಭಿನ್ನಾಭಿಪ್ರಾಯಗಳು ಅಥವಾ ಸವಾಲುಗಳಿಲ್ಲದೆ ಇರುವುದಿಲ್ಲ. ಅತ್ಯಂತ ದೈವಿಕ ಎನಿಸುವಂತ  ಮನೆಗಳಲ್ಲಿಯೂ ಸಹ, ಉದ್ವೇಗದ ಕ್ಷಣಗಳು ಇದ್ದೇ ಇರುತ್ತವೆ. ಆದರೆ ಇವೆಲ್ಲವುಗಳಿಂದ  ಕ್ರಿಸ್ತ-ಕೇಂದ್ರಿತ ಮನೆಯನ್ನು ಪ್ರತ್ಯೇಕಿಸುವಂತದ್ದು  ದೇವರ ಕೃಪೆ ಮತ್ತು ಕ್ಷಮಾಗುಣದ  ವಾತಾವರಣವಾಗಿದೆ.  “ ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆಯೇ ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ." ಎಂದು ಎಫಸ್ಸೆ 4:32 ನಮ್ಮನ್ನು ಪ್ರೋತ್ಸಾಹಿಸುತ್ತದೆ.

ಪೋಷಕರು ತಾವು  ಕ್ಷಮಗುಣ  ಮತ್ತು ದಯೆಯನ್ನು ತೋರಿಸುವುದರಲ್ಲಿ ಮಾದರಿಯಾದಾಗ, ಅದು ಮಕ್ಕಳಿಗೆ ತಪ್ಪುಗಳನ್ನು ಒಪ್ಪಿಕೊಳ್ಳಲು ಮತ್ತು ಸಮನ್ವಯವನ್ನು ಪಡೆಯಲು ಸುರಕ್ಷಿತ ಸ್ಥಳವನ್ನು ಸೃಷ್ಟಿಸಿಕೊಡುತ್ತದೆ.

ಇದನ್ನು ಮಾಡಲು ಪ್ರಾಯೋಗಿಕ ಹಂತಗಳು: 

  • ತಪ್ಪಾದಾಗ ಬಹಿರಂಗವಾಗಿ ಕ್ಷಮೆಯಾಚಿಸಿ ಮತ್ತು ತ್ವರಿತವಾಗಿ ಕ್ಷಮಿಸಿ.
  • ಹಿಂದಿನ ತಪ್ಪುಗಳನ್ನು ಮರುಹೊಂದಿಸುವುದನ್ನು ತಪ್ಪಿಸಿ ಮತ್ತು ಮುಂದೆ ಸಾಗುವತ್ತ ಗಮನಹರಿಸಿ. 
5.ಮಾದರಿಯ ಮೂಲಕ ಮುನ್ನಡೆಸುವುದು.
"ಆದರೆ ನಾನು ಮತ್ತು ನನ್ನ ಮನೆಯವರು, ನಾವು ಕರ್ತನನ್ನೇ ಸೇವಿಸುತ್ತೇವೆ" ಎನ್ನುವಂತದ್ದು ಯೆಹೋಶುವನ ಘೋಷಣೆಯಾಗಿತ್ತು (ಯಹೋಶುವ  24:15),  ಇದು ಆತ್ಮಿಕ ಉದಾಹರಣೆಯನ್ನು ತೋರಿಸುವಲ್ಲಿ ಪೋಷಕರ ಪಾತ್ರವನ್ನು ಉದಾಹರಿಸುತ್ತದೆ. ಮಕ್ಕಳು ಸಾಮಾನ್ಯವಾಗಿ ತಾವು ಏನನ್ನು ಗಮನಿಸುತ್ತಾರೋ ಅದನ್ನೇ  ಮಾಡುತ್ತಾರೆ. ಸಭೆ, ಪ್ರಾರ್ಥನೆ ಮತ್ತು ಸೇವೆಗೆ ಆದ್ಯತೆ ನೀಡುವಂತ  ಪೋಷಕರು ತಮ್ಮ ಮಕ್ಕಳೂ ಸಹ  ಅದೇ ರೀತಿ ಆಗಬೇಕೆಂದು ಪ್ರೇರೇಪಿಸುತ್ತಾರೆ.

ಪ್ರಾಯೋಗಿಕ ಹಂತಗಳು: 
  • ಸಭೆ  ಮತ್ತು ಸಭಾಸೇವೆಯಲ್ಲಿ ಪಾಲ್ಗೊಳ್ಳಬೇಕಾದ ಬಲವಾದ ಬದ್ಧತೆಯನ್ನು ಪ್ರದರ್ಶಿಸಿ.
  • ಇತರರೊಂದಿಗೆ ನಿಮ್ಮ ಸಂವಹನದಲ್ಲಿ ಕ್ರಿಸ್ತನಂತೆ ಪ್ರೀತಿ ಮತ್ತು ನಮ್ರತೆಯನ್ನು ತೋರಿಸಿ. 
6.ಭಕ್ತಿಹೀನ ಪ್ರಭಾವಗಳಿಂದ ಸಂರಕ್ಷಿಸುವುದು.
ಕ್ರಿಸ್ತನು ಮನೆಯ ಮುಖ್ಯಸ್ಥನಲ್ಲದಿದ್ದರೆ, ಸೈತಾನನು ಆ ಶೂನ್ಯವನ್ನು ತುಂಬಲು ಪ್ರಯತ್ನಿಸುತ್ತಾನೆ. “ನಿನ್ನ ಹೃದಯವನ್ನು ಎಲ್ಲಾ ಜಾಗರೂಕತೆಯಿಂದ ಕಾಪಾಡು"ಎಂದು ಜ್ಞಾನೋಕ್ತಿ 4:23 ನಮ್ಮನ್ನು ಎಚ್ಚರಿಸುತ್ತದೆ,  ಮಾಧ್ಯಮ, ಸಂಬಂಧಗಳು ಅಥವಾ ಅಭ್ಯಾಸಗಳ ಮೂಲಕ ತಮ್ಮ ಮನೆಗಳಿಗೆ ಯಾವ ಪ್ರಭಾವಗಳು ಪ್ರವೇಶಿಸುತ್ತಿವೆ  ಎಂಬುದನ್ನು ಪಾಲಕರು ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡಬೇಕು. 

ಪ್ರಾಯೋಗಿಕ ಹಂತಗಳು: 
  • ದೂರದರ್ಶನ ಅಥವಾ ಮೊಬೈಲ್‌ನಲ್ಲಿ ಕುಟುಂಬದ ಸದಸ್ಯರು ಏನನ್ನು ವೀಕ್ಷಿಸುತ್ತಿದ್ದಾರೆ  ಎಂಬುದರ ಮೇಲೆ ಮಿತಿಇರಲಿ. 
  • ನಿಮ್ಮ ಕುಟುಂಬವನ್ನು ಕರ್ತನ ಕರಗಳಿಗೆ ಒಪ್ಪಿಸಿಕೊಟ್ಟು ಪ್ರಾರ್ಥಿಸಿ, ತಿಂಗಳಿಗೊಮ್ಮೆಯಾದರೂ  ಪ್ರಾರ್ಥನೆಯ ಎಣ್ಣೆಯಿಂದ ಮನೆಯನ್ನು ಅಭಿಷೇಕಿಸಿ , ದೇವರ ಪ್ರಸನ್ನತೆಯಿಂದ ತುಂಬಿಸಲು ಕರ್ತನಿಗೆ ಸಮರ್ಪಿಸಿ. 
ಕ್ರಿಸ್ತ-ಕೇಂದ್ರಿತ ಮನೆಯನ್ನು ರಾತ್ರೋರಾತ್ರಿ ನಿರ್ಮಿಸಲಾಗುವುದಿಲ್ಲ ಆದರೆ ನಮ್ಮ ದೈನಂದಿನ ಉದ್ದೇಶಪೂರ್ವಕ ಆಯ್ಕೆಗಳು, ಪ್ರಾರ್ಥನೆ ಮತ್ತು ದೇವರ ಕೃಪೆಯ ಮೇಲೆ ಅದು ಅವಲಂಬಿತವಾಗಿದೆ.

Bible Reading: Exodus 26-28
Prayer
1.ತಂದೆಯೇ, ಯೇಸುವಿನ ಹೆಸರಿನಲ್ಲಿ, ನನ್ನ ಕುಟುಂಬದ ಎಲ್ಲಾ  ಸದಸ್ಯರನ್ನು ನಾನು ನಿಮಗೆ ಅರ್ಪಿಸುತ್ತೇನೆ. 

2.ತಂದೆಯೇ,  ನನ್ನ ಮತ್ತು ನನ್ನ ಕುಟುಂಬದ  ಸದಸ್ಯರೊಂದಿಗೆ ಇರುವ ನಿಮ್ಮ ಇಚ್ಛೆಗೆ ವಿರುದ್ಧವಾದ ಎಲ್ಲಾ ದುಷ್ಟ  ಸಂಪರ್ಕವನ್ನು ನಾನು ಇಂದೇ ಯೇಸುವಿನ ಹೆಸರಿನಲ್ಲಿ, ಕಡಿತಗೊಳಿಸುತ್ತೇನೆ.  

3.ನನ್ನ  ಕುಟುಂಬದ ಪ್ರತಿ ಸದಸ್ಯರ ಮೇಲೆ (ನನ್ನನ್ನೂ ಒಳಗೊಂಡಂತೆ) ಹಿಂದಿನ ಪೀಳಿಗೆಯಿಂದ ಬಂದಂತ  ಎಲ್ಲಾ ದುಷ್ಟ ಸಂಬಂಧಗಳನ್ನು ಯೇಸುವಿನ ಹೆಸರಿನಲ್ಲಿ ನಾನು ಮುರಿದು ಹಾಕುತ್ತೇನೆ. 

4.ಇಂದಿನಿಂದ ನಾನೂ ಮತ್ತು ನನ್ನ ಮನೆಯವರೆಲ್ಲರೂ  ಯೆಹೋವನನ್ನು ಮಾತ್ರ ಸೇವಿಸುವೆವು.



Join our WhatsApp Channel


Most Read
● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● AI ಎಂಬುದು ಕ್ರಿಸ್ತವಿರೋಧಿಯ ಆತ್ಮವೇ?
● ಪ್ರೀತಿಯ ಹುಡುಕಾಟ
● ಒಂದು ಮುಖಾಮುಖಿ ಭೇಟಿಯಲ್ಲಿ ಇರುವ ಸಾಮರ್ಥ್ಯ
● ನಂಬತಕ್ಕ ಸಾಕ್ಷಿ
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login