हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ವಿಧೇಯತೆ ಎಂಬುದು ಒಂದು ಆತ್ಮೀಕ ಸದ್ಗುಣ
Daily Manna

ವಿಧೇಯತೆ ಎಂಬುದು ಒಂದು ಆತ್ಮೀಕ ಸದ್ಗುಣ

Tuesday, 18th of March 2025
2 0 153
Categories : ಬಿಡುಗಡೆ (Deliverance)
"ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತು ಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ. (1 ಸಮುವೇಲ 15:22) 

ದೇವರ ಆಜ್ಞೆ ಮತ್ತು ಸೂಚನೆಗಳಿಗೆ ನಾವು ತೋರುವ ವಿಧೇಯತೆಯು ನಮ್ಮ ಜೀವನದಲ್ಲಿ ಆತನ ಆಶೀರ್ವಾದಗಳನ್ನು ಪಡೆಯುವುದಕ್ಕೆ ದ್ವಾರವಾಗಿದೆ. ಹಾಗೆಂದಮೇಲೆ , ಅವಿಧೇಯತೆಯು ಖಂಡಿತವಾಗಿಯೂ ಆತನ ಶಾಪಗಳನ್ನು ಆಕರ್ಷಿಸುತ್ತದೆ. ಇಂದು ಅನೇಕ ಕುಟುಂಬಗಳು  ತಮ್ಮ ಪಿತೃಗಳಲ್ಲಿ ಯಾರೋ ಒಬ್ಬರ ಪುನರಾವರ್ತಿತ ಅವಿಧೇಯತೆಯಿಂದಾಗಿ ಅಂತಹ ಶಾಪಗಳಿಗೆ ಒಳಗಾಗಿವೆ. ಸತ್ಯವೇದದ ಯೆಹೋಶುವ 6:18-19ನಲ್ಲಿ ಒಂದು ವೃತ್ತಾಂತವನ್ನು ದಾಖಲಿಸುತ್ತದೆ ಅದೇನೆಂದರೆ 
ಯೆಹೋಶುವನು ಇಸ್ರಾಯೇಲ್ಯರಿಗೆ 
"ನೀವಾದರೋ ಯೆಹೋವನಿಗೆ ಮೀಸಲಾದ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವದನ್ನಾದರೂ ತೆಗೆದುಕೊಂಡರೆ ಇಸ್ರಾಯೇಲ್ಯರ ಪಾಳೆಯವು ಶಾಪಕ್ಕೆ ಗುರಿಯಾಗಿ ಕೆಟ್ಟೀತು. ಎಲ್ಲಾ ಬೆಳ್ಳಿಬಂಗಾರವೂ ತಾಮ್ರ ಕಬ್ಬಿಣಗಳ ಪಾತ್ರೆಗಳೂ ಯೆಹೋವನ ಮೀಸಲಾಗಿದ್ದು ಆತನ ಭಂಡಾರಕ್ಕೆ ಸೇರತಕ್ಕವುಗಳು ಅಂದನು. 

ಶಾಪಗ್ರಸ್ತ ವಸ್ತುಗಳನ್ನು ನಿಮ್ಮ ವಾಸಸ್ಥಳಕ್ಕೆ ತರುವಂತದ್ದು  ನಿಮ್ಮ ಆತ್ಮೀಕ ವಿಜಯದ ಮೇಲೆ ಮಾತ್ರವಲ್ಲದೆ ನಿಮ್ಮ ಸುತ್ತಮುತ್ತಲಿನವರ ಆತ್ಮೀಕ ವಿಜಯದ ಮೇಲೂ ಪರಿಣಾಮ ಬೀರುವಂತದ್ದಾಗಿದ್ದು  ಅಂತಿಮವಾಗಿ ಅದು ನಿಮ್ಮ ಜೀವವನ್ನೇ ನೀವು ಕಳೆದುಕೊಳ್ಳುವಂತೆ ಮಾಡಬಹುದು ಎಂಬುದನ್ನು  ಕಂಡುಕೊಂಡ  ಪ್ರಾಚೀನ ಇಸ್ರೇಲ್‌ನ ಒಬ್ಬ ವ್ಯಕ್ತಿಯ ಕಥೆಯನ್ನು ಧರ್ಮಗ್ರಂಥವು ವಿವರಿಸುತ್ತದೆ!

ಯೆಹೋಶುವ ಮತ್ತು ಇಸ್ರಾಯೇಲ್ಯರು ವಶಪಡಿಸಿಕೊಂಡ ಮೂವತ್ತೊಂದು ಕಾನಾನ್ಯ ನಗರಗಳಲ್ಲಿ ಯೆರಿಕೊ ಮೊದಲನೆಯದು. ಹೀಗಾಗಿ, ಯೆರಿಕೊ ಪ್ರಥಮ ಫಲದ ನಗರವಾಗಿತ್ತು. ಈ ವಿಜಯದಿಂದ ಸಂಗ್ರಹಿಸಿದ ಎಲ್ಲಾ ಲೂಟಿಗಳು ಪ್ರಥಮ ಫಲದ ಕಾಣಿಕೆಯಾಗಿ ಕರ್ತನ ಗುಡಾರದ ಖಜಾನೆಗೆ ಹೋಗಬೇಕಾಗಿತ್ತು. ಮೊದಲ ಫಲಗಳು ಯಾವಾಗಲೂ ಕರ್ತನಿಗೆ ಸಲ್ಲುವಂತವುಗಳಾಗಿದ್ದು, ಅವುಗಳನ್ನು  ಅರ್ಪಿಸದೆ ಹೋಗುವುದಾದರೆ ಅಂತಹ ಅವಿಧೇಯತೆಯು ಇಡೀ ಇಸ್ರೇಲ್ ಪಾಳೆಯದ ಮೇಲೆ ಶಾಪವನ್ನು ತಂದಂತೆಯೇ ಶಾಪವನ್ನು ತರುತ್ತದೆ,.

ಯೆರಿಕೊವನ್ನು ವಶಪಡಿಸಿಕೊಂಡ ಸಮಯದಲ್ಲಿ, ಯೆಹೂದ ಕುಲದ ಆಕಾನ್ ಎಂಬ ಮನುಷ್ಯನು ರಹಸ್ಯವಾಗಿ ಕೆಲವು ಚಿನ್ನದ ಇಟ್ಟಿಗೆಗಳನ್ನು ಮತ್ತು ಸುಂದರವಾದ ಬ್ಯಾಬಿಲೋನಿಯನ್ ವಸ್ತ್ರಗಳನ್ನು ಕದ್ದು ತನ್ನ ಡೇರೆಯಲ್ಲಿ ಹೂತಿಟ್ಟನು. ಅದು ಮುಗ್ಧ ಕೃತ್ಯದಂತೆ ತೋರುತ್ತದೆ, ಸರಿತಾನೇ ? ಬಹುಶಃ ಅವನಿಗೆ ಆರ್ಥಿಕ ಆಶೀರ್ವಾದ ಬೇಕಾಗಿದ್ದು  ಅವನ ಕುಟುಂಬಕ್ಕೆ ಅಗತ್ಯವಾದ ಸಮೃದ್ಧಿಯನ್ನು ತರುವ ಅವಕಾಶವಾಗಿ ಅದು ಕಂಡಿರಬಹುದು. ತಾವು ಗೆದ್ದ ಯುದ್ಧದ ಸಿಕ್ಕ ಕೊಳ್ಳೆಯಲ್ಲಿ  ಸೈನಿಕರು ಆನಂದಿಸಬಾರದೋ?

ಆದರೆ "ಆಗ ಯೆಹೋವನು ಯೆಹೋಶುವನಿಗೆ ಹೇಳಿದ್ದೇನಂದರೆ - ಏಳು, ನೀನು ಈ ಪ್ರಕಾರ ಬೋರಲಬಿದ್ದಿರುವದೇಕೆ? ಎಂದನು  (ಯೆಹೋಶುವ 7:10). ನಂತರ ದೇವರು ಯಾರೋ ಒಬ್ಬರು ದೇವರ ಆದೇಶಗಳಿಗೆ ಅವಿಧೇಯರಾಗಿದ್ದರಿಂದ ಮತ್ತು ಶಾಪಗ್ರಸ್ತ ವಸ್ತುಗಳನ್ನು ಕದ್ದಿಟ್ಟುಕೊಂಡಿರುವುದರಿಂದ ಹೀಗಾಗಿದೆ ಎಂದು ಇಸ್ರೇಲ್‌ನ ಸೋಲಿಗೆ ಇರುವ  ಗುಪ್ತ ಕಾರಣವನ್ನು ಬಹಿರಂಗಪಡಿಸಿದನು. ಆಕಾನನ ಪಾಪವು ಪ್ರಕಟವಾಗಿ  (ಅವನ ಗುಡಾರದಲ್ಲಿ ಹೂತಿಟ್ಟಿದ್ದ) ಶಾಪಗ್ರಸ್ತ ವಸ್ತುಗಳನ್ನು ಮನೆಯಿಂದ ತೆಗೆದುಹಾಕಿದಾಗ ನಂತರವೇ  ಇಸ್ರೇಲ್ ತನ್ನ ಉಳಿದ ಶತ್ರುಗಳ ಮೇಲೆ ಜಯಗಳಿಸಲು ಸಾಧ್ಯವಾಯಿತು. (ಯೆಹೋಶುವ 7:24-26; 8:1-2 ನೋಡಿ.).

ನಮ್ಮ ಕುಟುಂಬದಲ್ಲಿನ ತೊಂದರೆಗಳಿಗೆ ನಾವು ಕಾರಣರಲ್ಲ ಎಂದು ಖಚಿತಪಡಿಸಿಕೊಳ್ಳಲು, ನಾವು ನಮ್ಮನ್ನು ಪರೀಕ್ಷಿಸಿಕೊಳ್ಳುವ ಸಮಯ ಇದಾಗಿದೆ. ನಮ್ಮ ಮನೆಯಲ್ಲಿ ಶಾಪಕ್ಕೆ  ಮಾರ್ಗವಾದದ್ದು ಯಾವುದಾದರೂ ಇದೆಯೇ ಎಂದು ಯೋಚಿಸುವ ಮತ್ತು ಖಚಿತಪಡಿಸಿಕೊಳ್ಳುವ ಸಮಯ ಇದಾಗಿದೆ. ಅದಕ್ಕಾಗಿ ಇಲ್ಲಿ ದೇವರು ಹೇಳುತ್ತಿರುವುದೇನೆಂದರೆ  ಶಾಪಗ್ರಸ್ತರವಾದದ್ದನ್ನು  ತೆಗೆದುಹಾಕಿ ಎಂದು. ನಾವು ದೇವರ ಆಜ್ಞೆಯನ್ನು ಉಲ್ಲಂಘಿಸಿದಾಗ, ನಾವು ನಮ್ಮ ಮೇಲೆ ಮಾತ್ರ ಶಿಕ್ಷೆಯನ್ನು  ತಂದು ಕೊಳ್ಳದೇ ನಮ್ಮ ಇಡೀ ಕುಟುಂಬಗಳ ಮೇಲೆಯೇ  ದೇವರ ಕೋಪವನ್ನು ತಂದೊಡ್ದು ಕೊಳ್ಳುತ್ತೇವೆ.

ಆಕಾನನು ದೇವರಿಗೆ ಸೇರಿದ್ದ ಶಾಪಗ್ರಸ್ತ ವಸ್ತುವನ್ನು ತೆಗೆದುಕೊಂಡನು, ಮತ್ತು ಇದರಿಂದಾಗಿ  ಅವನ ಇಡೀ ಕುಟುಂಬವು ಅದಕ್ಕೆ ಬೆಲೆ ತೆತ್ತಬೇಕಾಯಿತು. ಆದ್ದರಿಂದ, ಇದು ವಿಧೇಯತೆಯಿಂದ ದೇವರ ಬಳಿಗೆ ಮರಳಲು ಕರೆಯಾಗಿದೆ. ಬಹುಶಃ ನೀವು ಹಿಂದೆ ದೇವರಿಗೆ ಅವಿಧೇಯರಾಗಿರಬಹುದು;ಆದರೆ  ಆತನಿಗೆ ಹೌದು ಎಂದು ಹೇಳುವ ಸಮಯ ಇದಾಗಿದೆ . ಅಲ್ಲದೆ, ಇಸ್ರೇಲ್ ತಮ್ಮ ವೈಫಲ್ಯಕ್ಕೆ ಬೇರೆಲ್ಲಾ ಕಾರಣವನ್ನು ಊಹಿಸಿಕೊಂಡಿರಬಹುದು ಮತ್ತು ದೇವರು ನಾಯಕನಾದ ಯೆಹೋಶುವನೊಂದಿಗೆ ಮಾತನಾಡುವವರೆಗೂ ಅವರು ಯುದ್ಧದಲ್ಲಿ ವಿಫಲರಾಗುತ್ತಲೇ ಇದ್ದರು. ದೇವರು ಅವರ ಸೋಲಿನ ಕಾರಣವನ್ನು ಅವನಿಗೆ ನಿರ್ದೇಶಿಸಿದ ಮೇಲೆಯೇ  ಅದಕೆಲ್ಲಾ ಕಾರಣ ಆಕಾನನು  ಎಂದು ಅವರು ಕಂಡುಕೊಂಡರು. ಸಮಯಕ್ಕೆ ಸರಿಯಾಗಿ ಕಾರಣವನ್ನು ಮೊದಲೇ ಕಂಡುಕೊಂಡಿದ್ದರೆ ಎಷ್ಟು ಸೈನಿಕರು ಜೀವಂತವಾಗಿಯೇ ಇರುತ್ತಿದ್ದರು ಎಂಬುದನ್ನು  ಊಹಿಸಿನೋಡಿ. 

ಇದು ದೇವರನ್ನು  ಹೊಂದಿಕೊಳ್ಳುವ ಸಮಯ . ನಿಮ್ಮ ಮನೆಯಲ್ಲಿ ನೀವು ಎದುರಿಸುತ್ತಿರುವ  ಸವಾಲುಗಳಿಗೆ  ಕಾರಣವು  ನಿಮಗೆ ತಿಳಿದಿದೆ ಎಂದು ಭಾವಿಸಬೇಡಿ; ಬದಲಾಗಿ ಆತನನ್ನು ಕೇಳಿಕೊಳ್ಳಿರಿ . ಆತನು ನಿಮ್ಮನ್ನು ಮುನ್ನಡೆಸಲಿ ಮತ್ತು ನಿಮ್ಮ ಕುಟುಂಬವು ಎಲ್ಲಿ ಅದನ್ನು ಕಳೆದುಕೊಂಡಿದೆ ಎಂಬುದನ್ನು  ತೋರಿಸಲಿ. ನೀವು ಅವಿಧೇಯರಾಗುತ್ತಿರುವ ಸೂಚನೆಯನ್ನು ಆತನು ನಿಮಗೆ ತೋರಿಸಲಿ. ನೀವು ಇತ್ತೀಚಿನವರೆಗೂ  ಕಾರಣಗಳನ್ನು ಊಹಿಸಿಕೊಳ್ಳುತ್ತಿದ್ದರೂ  ಯಾವುದೂ ಸಹ ಬದಲಾಗಿಲ್ಲ; ಆದ್ದರಿಂದ ದೇವರನ್ನು ಅದಕ್ಕಿರುವ ಕಾರಣಗಳನ್ನು  ಬಹಿರಂಗಪಡಿಸಲು ಮತ್ತು ದಯೆಯನ್ನು ಬೇಡಿಕೊಳ್ಳುವ ಸಮಯ ಇದಾಗಿದೆ . ಆತನು ನಿಮ್ಮ ಮಾರ್ಗಗಳನ್ನು ಮತ್ತು ದಾರಿಯನ್ನೂ ಶಾಪಗಳು ಮತ್ತು ಹೋರಾಟಗಳಿಂದ ಹೊರಗೆ ತರಲಿ.

Bible Reading: Joshua 13-16
Prayer
ತಂದೆಯೇ,  ನಮಗೆ ಯಾವಾಗಲೂ ದಾರಿ ತೋರಿಸುತ್ತಿರುವುದಕ್ಕಾಗಿ ಯೇಸುನಾಮದಲ್ಲಿ  ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ . ನಾವು ಎಲ್ಲಿ ಅದನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಕಂಡು ಕೊಳ್ಳುವಂತೆ ನಮ್ಮ ಕಣ್ಣುಗಳನ್ನು ತೆರೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನಿಮ್ಮ ಕೃಪೆಯು ನಮ್ಮ ಮೇಲೆ ಸುರಿಸಲ್ಪಡಲಿ ಎಂದೂ  ನೀನು  ನಮ್ಮನ್ನು ಮಾರ್ಗದರ್ಶನ ತೋರಿ ಸರಿಯಾದ ದಾರಿಯಲ್ಲಿ ನಮ್ಮನ್ನು ನಡೆಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮೇಲೆ ವಿಧೇಯತೆಯ ಮನೋಭಾವ ಉಂಟಾಗಲಿ ಎಂದು ಯೇಸುನಾಮದಲ್ಲಿ  ನಾನು ಪ್ರಾರ್ಥಿಸುತ್ತೇನೆ. ಆಮೆನ್.


Join our WhatsApp Channel


Most Read
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ಎರಡು ಸಾರಿ ಸಾಯಬೇಡಿರಿ
● ಶುದ್ಧೀಕರಣದ ತೈಲ
● ನಂಬಿಕೆಯ ಶಾಲೆ
● ಮಾತಿನಲ್ಲಿರುವ ಶಕ್ತಿ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login