हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದೇವರಿಗೆ ಮೊದಲಸ್ಥಾನ ನೀಡುವುದು #3
Daily Manna

ದೇವರಿಗೆ ಮೊದಲಸ್ಥಾನ ನೀಡುವುದು #3

Monday, 23rd of September 2024
2 1 239
Categories : ಕೊಡುವ (Giving)
ಕೆಲವು ವರ್ಷಗಳ ಹಿಂದೆ ನಾನು ಒಂದು ಪ್ರಮುಖ ಸಭೆಯ ಸೇವಾಕಾರ್ಯಕ್ಕೆ ತಡವಾಗಿ ಹೋಗಿದ್ದೆ ಮತ್ತು ಆವರಸರದಲ್ಲಿ  ನನ್ನ ಅಂಗಿಯ ಗುಂಡಿಯನ್ನು ತಪ್ಪಾಗಿ ಹಾಕಿಕೊಂಡಿದ್ದೆ ಎಂಬುದು ನನಗೆ ನೆನಪಿದೆ. ನನ್ನ ಸೇವೆಯ ಸಮಯದಲ್ಲಿ ನನಗೆ ಅದರ ಕುರಿತು ಗೊತ್ತಾಗಿರಲಿಲ್ಲ. ನಾನು ಮನೆಗೆ ಹಿಂದಿರುಗಿದಾಗ ಸತ್ಯವನ್ನು ನಾನು ಅರಿತುಕೊಂಡೆ. ನಾನಂದು ಬ್ಲೇಜರ್ ಧರಿಸುವಂತೆ ಸಹಾಯ ಮಾಡಿದ ದೇವರಿಗೆ ಸ್ತೋತ್ರ. ಇಲ್ಲದಿದ್ದರೆ ನನಗೆ ಬಹಳ ಮುಜುಗರವಾಗುತ್ತಿತ್ತು. ನೀವು ಒಂದು ಸಾರಿ ಅಂಗಿಯ ಮೊದಲ ಗುಂಡಿಯನ್ನು ತಪ್ಪಾಗಿ ಹಾಕಿಕೊಂಡರೆ ಉಳಿದೆಲ್ಲ ಗುಂಡಿಗಳೆಲ್ಲ ತಪ್ಪಾದ ಸ್ಥಳದಲ್ಲಿ ಕೂರುತ್ತವೆ. ಇದು  ನಮ್ಮ ಆದ್ಯತೆಗಳ ವಿಚಾರದಲ್ಲೂ ಸತ್ಯ. ನಾವು ಮೊದಲನೆಯದನ್ನು ತಪ್ಪಾಗಿ ತಿಳಿದುಕೊಂಡರೆ ಎಲ್ಲವೂ ಅದರಂತೆ ತಪ್ಪಾಗಿ ಹೋಗುತ್ತದೆ. ಅದಕ್ಕೆ ತದ್ವಿರುದ್ಧವಾದದ್ದು  ಕೂಡ ಸತ್ಯ. ನಾವು ಪ್ರಪ್ರಥಮವಾದದ್ದನ್ನು ಸರಿಯಾಗಿ ನಿರ್ವಹಿಸಿದರೆ ಉಳಿದ ಎಲ್ಲವೂ ಅದರ ಸ್ಥಳಕ್ಕೆ ಸರಿಯಾಗಿ ಬಂದು ನಿಲ್ಲುತ್ತವೆ.

ಈ ಕೆಳಕಂಡ ಉದಾಹರಣೆಯು ಈ ಒಂದು ಸತ್ಯವನ್ನು ಸುಂದರವಾಗಿ ವಿವರಿಸುತ್ತದೆ.

"ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು."(ಜ್ಞಾನೋಕ್ತಿಗಳು 3:
 ನಮ್ಮ ಸಂಪತ್ತಿನ ವಿಚಾರದಲ್ಲೂ ಸಹ ನಾವು ದೇವರಿಗೆ ಪ್ರಥಮ ಸ್ಥಾನ ನೀಡಬೇಕು. ಜ್ಞಾನೋಕ್ತಿ 3:9-10 ಸ್ಪಷ್ಟವಾಗಿ ಇದನ್ನು ಹೇಳುತ್ತದೆ

"ನಿನ್ನ ಆದಾಯದಿಂದಲೂ ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು. ಹೀಗೆ ಮಾಡಿದರೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿತುಳುಕುವದು."
ನಾವು ನಮ್ಮಲ್ಲಿ ಇರುವ ಉತ್ಕೃಷ್ಟವಾದದನ್ನು ಪ್ರಪ್ರಥಮವಾದದನ್ನು  ತನ್ನ ದೇವರಿಗೆ ಕೊಡಬೇಕೆ ವಿನಃ ಎಂದಿಗೂ  ಮಿಕ್ಕಿದ್ದರಲ್ಲಿ ಅಲ್ಲ. ನಾವು ಈ ರೀತಿ ಆದ್ಯತೆ  ನೀಡುವಾಗ ನಮ್ಮ ಜೀವದ ಎಲ್ಲಾ ಕ್ಷೇತ್ರಗಳಲ್ಲಿ ಸಮೃದ್ಧಿಯನ್ನು ಹೊಂದುತ್ತೇವೆ.

ನಮ್ಮ ಸಂಪತ್ತಿನಲ್ಲಿ ನಾವೇಕೆ ದೇವರಿಗೆ ಆದ್ಯತೆ ನೀಡಬೇಕು?

 #1
"ಭೂವಿುಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಅದರ ನಿವಾಸಿಗಳೂ ಆತನವೇ."(ಕೀರ್ತನೆಗಳು 24:1)

ನಮ್ಮ ಸಂಪತ್ತಿನಿಂದ ಕರ್ತನನ್ನು ಗೌರವಿಸುವಂಥದ್ದು ನಮ್ಮೆಲ್ಲ ಸಂಪತ್ತು ಆತನಿಗೆ ಸೇರಿದೆ ಎಂಬ ಅಂಶವನ್ನು ನಾವು  ನೆನಪಿನಲ್ಲಿಟ್ಟುಕೊಳ್ಳಲಿರುವ ಪ್ರಮುಖ ಕೀಲಿ ಕೈ ಯಾಗಿದೆ  ನಿಮಗೊಂದು ವಿಷಯ ನೆನಪಿದೆಯಾ ಆದಾಮ ಮತ್ತು ಹವ್ವರು ಏದೇನು ತೋಟದ ಉಸ್ತುವಾರಿ ವಹಿಸುವವರಾಗಿದ್ದರೇ ವಿನಃ ಅದಕ್ಕೆ ಮಾಲೀಕರಾಗಿರಲಿಲ್ಲ. (ಆದಿಕಾಂಡ 2:15). ಹಾಗೆಯೇ ದೇವರು ನಮ್ಮ ಕೈಗೆ ಏನೆಲ್ಲಾ ಕೊಟ್ಟಿದ್ದಾನೋ ನಾವು ಅದಕ್ಕೆ ಕೇವಲ ನಿರ್ವಹಣೆಗಾರರು  ಮಾತ್ರವೇ.

ದಾವೀದನು ತನ್ನ ಸಂಪತ್ತಿನ ವಿಚಾರದಲ್ಲಿ ದೇವರಿಗೆ ಮೊದಲ ಸ್ಥಾನ ಕೊಡುತ್ತಾ ಈ ಸತ್ಯವನ್ನು ಅರ್ಥೈಸಿಕೊಂಡಿದ್ದನು.
"ನಾವು ಈ ಪ್ರಕಾರ ಸ್ವೇಚ್ಫೆಯಿಂದ ಕಾಣಿಕೆಗಳನ್ನು ಸಮರ್ಪಿಸಲು ಶಕ್ತಿಹೊಂದಿದ್ದಕ್ಕೆ ನಾನಾಗಲಿ ನನ್ನ ಪ್ರಜೆಗಳಾಗಲಿ ಎಷ್ಟರವರು? ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು."("1 ಪೂರ್ವಕಾಲವೃತ್ತಾಂತ 29:14)

#2
ಎರಡನೆಯದಾಗಿ ನಿಮಗೆ ಕಠಿಣ ಅನಿಸಿದರೂ ನಿಮ್ಮ ಸಂಪತ್ತಿನ ವಿಚಾರದಲ್ಲಿ ದೇವರಿಗೆ ಮೊದಲ ಸ್ಥಾನ ಕೊಡುವಾಗ ನಿಮ್ಮ ನಂಬಿಕೆಯು ಖಚಿತವಾಗಿ ಅಭಿವೃದ್ಧಿ ಹೊಂದುತ್ತಾ ಹೋಗುತ್ತದೆ. ದೇವರಿಗೆ ಕೊಡುವ ವಿಚಾರದಲ್ಲಿ ದೇವ ಮನುಷ್ಯರಾದ ಪಾಪ ಮಾರಿಶ್ ಸೆರಿಲ್ಲೋ ರವರು ಹೇಳಿದ ಮಾತುಗಳು ನನಗೆ ನೆನಪಿದೆ...

"ನಾನು ದೇವರಿಗೆ ಕೊಡುವ ವಿಚಾರದಲ್ಲಿ ನನ್ನ ಪಯಣದ ಆರಂಭದ ಕುರಿತು ನಿಮಗೆ ಪ್ರಾಮಾಣಿಕವಾಗಿ ಹೇಳಬಯಸುತ್ತೇನೆ. ಅದು ನನಗೆ ಸುಲಭವಾಗಿರಲಿಲ್ಲ! ಕೆಲವೊಂದು ಸಮಯಗಳು ಆತಂಕದಿಂದಲೂ ಕಣ್ಣೀರಿನಿಂದಲೂ ಕೂಡಿರುತ್ತಿತ್ತು. ನನ್ನ ಜೀವಿತದ ಅದೆಷ್ಟೋ ಬಯಕೆಗಳನ್ನು  ನಾನು ದೇವರಿಗಾಗಿ ಕೊಡುವುದಕ್ಕಾಗಿ ಬಲಿಕೊಟ್ಟೆನು.  ಅದಾಗಿಯೂ ಒಂದು ಒಳ್ಳೆಯ ಸುದ್ದಿ ಏನೆಂದರೆ ಅದರಿಂದ ನನ್ನ ಜೀವಿತದಲ್ಲಿ ಮತ್ತು ಕೆಲಸಗಳಲ್ಲಿ ಅನೇಕ ಸಂಗತಿಗಳು ಜರುಗಿದವು. ಆಗ ಅನೇಕ ಅವಕಾಶಗಳ ಬಾಗಿಲುಗಳು, ದಯಾಪೂರ್ವಕ ಬಾಗಿಲುಗಳು ನನಗಾಗಿ ಎಲ್ಲಾ ಕಡೆಯಿಂದಲೂ ತೆರೆಯಲು ಆರಂಭಿಸಿದವು.

ಮೊದಮೊದಲು ಇವೆಲ್ಲವೂ ಕೇವಲ ಕಾಕತಾಳಿಯ ಎಂದು ನಾನು ಭಾವಿಸಿದ್ದೆ ಆದರೆ ನಂತರವೂ ಹಾಗೆಯೇ ನಡೆಯುತ್ತಾ ಹೋಯಿತು.-ಅನಂತರ ಇದು ನನಗಾಗಿ ದೇವರಿಂದಲೇ ಬಂದದ್ದು ಎಂದು ತಿಳಿದುಕೊಂಡೆನು.

1 ಅರಸು 17 ನಮಗೆ ಚಾರಪ್ತದ ವಿಧವೆಯ ಕುರಿತು ಹೇಳುತ್ತದೆ. ಆಕೆ ಆಗಲೇ ತನ್ನ ಗಂಡನನ್ನು ಕಳೆದುಕೊಂಡವಳಾಗಿದ್ದಳು. ಜೊತೆಗೆ ಈಗ ಕಠಿಣವಾದ ಬರಗಾಲದ ಸ್ಥಿತಿಯು ಬೇರೆ ಹಾದು ಹೋಗುತ್ತಿತ್ತು. ಇಷ್ಟು ಸಾಲದೇ ಈ ಬರಗಾಲದಿಂದ ತನಗಿದ್ದ ಒಬ್ಬನೇ ಮಗನನ್ನು ಕಳೆದುಕೊಳ್ಳುವ ಸ್ಥಿತಿಗೆ ಆಕೆ ಬಂದಿದ್ದಳು ಇಂತಹ ಒಂದು ದುರದೃಷ್ಟ ಸಮಯದಲ್ಲಿ ದೇವರು ತನ್ನ ಪ್ರವಾದಿಯನ್ನು  ಆಕೆ ಬಳಿಗೆ ಕಳುಹಿಸಿದನು.

"ಆಗ ಎಲೀಯನು ಆಕೆಗೆ - ಹೆದರಬೇಡ; ನೀನು ಹೇಳಿದಂತೆ ಮಾಡು, ಆದರೆ ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ; ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ - ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವದಿಲ್ಲ ಎಂದು ಹೇಳುತ್ತಾನೆ ಅಂದನು."(1 ಅರಸುಗಳು 17:13-14)

ದೇವರು ತನ್ನ ಪ್ರವಾದಿಯ ಪೋಷಣೆಗಾಗಿ ಯಾರೋ ಒಬ್ಬ ಶ್ರೀಮಂತ ವ್ಯಕ್ತಿಯ ಬಳಿಗೆ ಕಳುಹಿಸದೆ ಗತಿ ಹೀನಳಾಗಿದ್ದ ಒಬ್ಬ ವಿಧವೆ ಬಳಿಗೆ ಕಳುಹಿಸಿದನು ಎಂದು ನಾನು ಭಾವಿಸುತ್ತೇನೆ.

"ಮೊದಲು ನನಗೊಂದು ಚಿಕ್ಕ ರೊಟ್ಟಿಯನ್ನು ಮಾಡಿತಾ" ಎಂದು ಪ್ರವಾದಿ ಹೇಳಿದ್ದನ್ನು ಗಮನಿಸಿ. ಮೊದಲ ನೋಟಕ್ಕೆ ಇದು ತುಂಬಾ ಆಕ್ಷೇಪಾರ್ಹವಾದ ಕೋರಿಕೆ ಎಂದು ತೋರುತ್ತದೆ. ಆದರೆ ಇಲ್ಲಿ ವಿಧವೆಯು ಪ್ರವಾದಿಯನ್ನು ಪೋಷಿಸಲು ಕಳುಹಿಸಲ್ಪಟ್ಟವಳಲ್ಲ. ಬದಲಾಗಿ ಪ್ರವಾದಿಯಿಂದಲೇ ದೇವರ ಪೋಷಣೆಯನ್ನು ಹೊಂದುವಂಥವಳಾದಳು ಎಂಬುದಾಗಿ ನಾವು ನಂತರದಲ್ಲಿ ನೋಡುತ್ತೇವೆ. ಎಷ್ಟೋ ಸಲ ನಾವು ದೇವರಿಗೆ ಆದ್ಯತೆ ನೀಡುತ್ತಾ ಕರ್ತನಿಗೆ ನಾವು ಸಹಾಯ ಮಾಡುತ್ತಿದ್ದೇವೆ ಎಂದು ಭಾವಿಸುತ್ತೇವೆ. ಆದರೆ ವಾಸ್ತವವಾಗಿ ದೇವರು ನಮಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುತ್ತಾನೆ.
Prayer
ತಂದೆಯೇ, ನಮ್ಮೆಲ್ಲ ಸಂಪತ್ತಿನಿಂದ ನಿಮ್ಮನ್ನು ಸನ್ಮಾನಿಸುವಾಗ ನಾವು ಜಡಿದು ಅಲ್ಲಾಡಿಸಿ ಹೊರ ಚೆಲ್ಲುವಷ್ಟನ್ನು ಹೊಂದಿಕೊಳ್ಳುತ್ತೇವೆ ಎನ್ನುವ ನಿನ್ನ ವಾಗ್ದಾನವನ್ನು ಭರವಸೆಯಿಂದ ನಂಬುತ್ತೇನೆ ಮತ್ತು ನಂಬಿಕೆಯಿಂದ ಯೇಸು ನಾಮದಲ್ಲಿ ಈ ವಾಗ್ದಾನವನ್ನು ಹೊಂದುಕೊಳ್ಳುತ್ತೇನೆ.

ತಂದೆಯೇ, ಕೊಡುವ ವಿಚಾರದಲ್ಲಿ ನನ್ನ ಹೃದಯದೊಂದಿಗೆ ಯೇಸು ನಾಮದಲ್ಲಿ ವ್ಯವಹರಿಸು. ನಿನ್ನೊಂದಿಗೆ ಹೋರಾಡುವ ಯಾವ ವಿಚಾರಗಳು ನನ್ನನ್ನು ಆಳದಿರಲಿ.


Join our WhatsApp Channel


Most Read
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -3
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login