हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಆತ್ಮಗಳ ಪುನಃಸ್ಥಾಪನೆ
Daily Manna

ನಿಮ್ಮ ಆತ್ಮಗಳ ಪುನಃಸ್ಥಾಪನೆ

Sunday, 16th of March 2025
4 1 134
"ಅವರು ನನಗೆ ಹೇಳಿದ್ದೇನೆಂದರೆ, “ಈ ಎಲುಬುಗಳ ಮೇಲೆ ಪ್ರವಾದಿಸಿ, ಅವುಗಳಿಗೆ ಹೇಳು: ‘ಒಣಗಿದ ಎಲುಬುಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ,  ಸಾರ್ವಭೌಮ ಯೆಹೋವ ದೇವರು ಈ ಎಲುಬುಗಳಿಗೆ ಹೀಗೆ ಹೇಳುತ್ತಾರೆ: ಇಗೋ, ನಾನು ನಿಮ್ಮಲ್ಲಿ ಉಸಿರನ್ನು ಬರಮಾಡುತ್ತೇನೆ. ನೀವು ಬದುಕುವಿರಿ; ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ ಮಾಂಸವನ್ನು ತಂದು ಮತ್ತು ಚರ್ಮದಿಂದ ಮುಚ್ಚಿ ನಿಮ್ಮೊಳಗೆ ಉಸಿರನ್ನು ಕೊಟ್ಟು ಬದುಕಿಸುತ್ತೇನೆ ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ." (ಯೆಹೆಜ್ಕೇಲ 37:4-6)

 ನೀವು ಎಷ್ಟೇ ಕಳೆದುಹೋಗಿದ್ದರೂ, ಕ್ರಿಸ್ತನಲ್ಲಿ ನಿಮಗೆ ಒಂದು  ನಿರೀಕ್ಷೆ ಇದೆ. ನೀವು ಪಾಪ ಮತ್ತು ವ್ಯಸನದ ಎಷ್ಟೇ ಆಳದಲ್ಲಿದ್ದರೂ, ನೀವು ಎಷ್ಟೇ ದೌರ್ಜನ್ಯಗಳನ್ನು ಮಾಡಿದ್ದರೂ, ಮತ್ತು ಅಲ್ಲಿಂದ ಹಿಂತಿರುಗುವುದು  ಅಸಾಧ್ಯವೆಂದು ನೀವು ಎಷ್ಟೇ ಭಾವಿಸಿದರೂ, ನನ್ನಲ್ಲಿ  ನಿಮಗಾಗಿ ಒಂದು  ಶುಭಸುದ್ದಿ ಇದೆ, ಕ್ರಿಸ್ತನಲ್ಲಿ ನಿಮಗೊಂದು ನಿರೀಕ್ಷೆ ಇದೆ. ಧರ್ಮಗ್ರಂಥದಲ್ಲಿ, ದೇವರು ಸತ್ತುಹೋದ ಒಣಗಿದ ಮೂಳೆಗಳಿಗೆ  ಹೇಗೆ ಮರಳಿ ಜೀವ ತಂದನೆಂದು ನಾವು ನೋಡುತ್ತೇವೆ. ಇವರು ಬಲಿಷ್ಠ ಮನುಷ್ಯರಾಗಿದ್ದವರೂ  ತಮ್ಮ ಘನತೆ ಮತ್ತು ಉದ್ದೇಶವನ್ನು ಕಳೆದುಕೊಂಡ ದೊಡ್ಡ ಸೈನ್ಯವೂ ಆಗಿದ್ದರು. 

"ಆ ಮೂಳೆಗಳು ತುಂಬಾ ಒಣಗಿದ್ದವು." ಆದರೆ ದೇವರು ಅದಕ್ಕೆ  ಮರಳಿ ಜೀವ ತಂದನು ಎಂದು ಸತ್ಯವೇದ ಹೇಳುತ್ತದೆ. ಅವನು ಅವುಗಳಲ್ಲಿ ಮಾಂಸವನ್ನು  ಮತ್ತು ಉಸಿರನ್ನು ಹೊಸದಾಗಿ ಸೇರಿಸಿದನು. ಆತನ ಉಸಿರು ಆತನ ಜೀವವನ್ನು  ಒಳಗೊಂಡಿದ್ದು  "ಅವು ಜೀವಂತ ಆತ್ಮವಾದವು.ಎಂದು ಸತ್ಯವೇದ ಹೇಳುತ್ತದೆ" ಆದ್ದರಿಂದ, ಉತ್ತೇಜನಗೊಳ್ಳಿ. ಇದು ಮುಗಿದು ಹೋಗಿದೆ ಎಂದು ಹೇಳುತ್ತಲೇ ಇರುವ ಆ ಧ್ವನಿಯನ್ನು ಮೌನಗೊಳಿಸಿ ಏಕೆಂದರೆ ಅದು ಇನ್ನೂ ಮುಗಿದಿಲ್ಲ. ದೇವರು  ತನ್ನ ಕಾರ್ಯವನ್ನು  ನಿಮ್ಮೊಂದಿಗೆ ಇನ್ನೂ ಮುಗಿಸಿಲ್ಲ. ಆತನು ನಿಮ್ಮ ಮೇಲೆ ಕೋಪಗೊಂಡಿಲ್ಲ. ಹೌದು, ನೀವು ಉದ್ದೇಶಗಳನ್ನು ಪೂರೈಸದೆ ವಂಚಿತರಾಗಿರಬಹುದು  ಆದರೆ ನೀವು ಈ ನಿರೀಕ್ಷೆಯ ಮಾತುಗಳನ್ನು ಕೇಳುತ್ತಿದ್ದೀರಿ ಅದಕ್ಕಾಗಿ ದೇವರಿಗೆ ಸ್ತೋತ್ರ. 

ದೇವರೇ ಆತನಿಗೆ  ಬೇಕಾದರೆ  ನಿಮ್ಮನ್ನು ಪುನಃಸ್ಥಾಪಿಸಬಲ್ಲನೆಂದು ನಿಮ್ಮ ಹೃದಯವನ್ನು ಕಠಿಣಗೊಳಿಸಿಕೊಳ್ಳಬೇಡಿ. ಆತನು ನಿಮ್ಮ ಆತ್ಮಕ್ಕೆ ಬಿಡುಗಡೆಯನ್ನೂ  ವಿಮೋಚನೆಯನ್ನೂ ತರಲು ನೀವು ಮಾಡಬೇಕಾದ ನಾಲ್ಕು ವಿಷಯಗಳು ಇಲ್ಲಿವೆ.

1. ಎದುರಿಸಿ. 

ನಿಮ್ಮ ಭಾವನೆಗಳನ್ನು ನಿರಾಕರಿಸಬೇಡಿ, ಮತ್ತು ನಿಮ್ಮಲ್ಲಿನ  ನಕಾರಾತ್ಮಕ ಭಾವನೆಗಳಿಗೆ ಇತರರನ್ನು ದೂಷಿಸಬೇಡಿ. ದೇವರನ್ನು ಪ್ರೀತಿಸುವ ಪುರುಷ ಅಥವಾ ಮಹಿಳೆಯಾಗಿ ಅದನ್ನು ಎದುರಿಸಿ. ನೀವು ಅನುಮತಿಸುವುದನ್ನು ನೀವು ಎಂದಿಗೂ ಬದಲಾಯಿಸಲಾಗುವುದಿಲ್ಲ ಮತ್ತು ನೀವು ನಿರಾಕರಿಸುವುದನ್ನು ಎಂದಿಗೂ ಎದುರಿಸಲಾಗುವುದಿಲ್ಲ. ದೇವರು ನಿಮಗೆ ಸಹಾಯ ಮಾಡುವ ಅವಶ್ಯಕತೆಯಿದೆ ಎಂದು ಒಪ್ಪಿಕೊಳ್ಳಿ. ನೀವು ಮನಮುರಿಯಲ್ಪಟ್ಟವರು ಎಂದು ಒಪ್ಪಿಕೊಳ್ಳಿ, ಧಾರ್ಮಿಕವಾಗಿ ನಟಿಸಲು ಅಥವಾ ಅಂತ ಕಾರ್ಯ ಮಾಡಲು ಪ್ರಯತ್ನಿಸಬೇಡಿ. 
ಯೇಸು ಕೆಲವು ಕುರುಡರನ್ನು ಭೇಟಿಯಾದನು, ಆದರೂ ಅವರು ದೃಷ್ಟಿ ಹೊಂದಿಕೊಳ್ಳಲು  ಆತನು ಅವರನ್ನು ನಿಮಗೆ ಏನು ಬೇಕು ಎಂದು ಕೇಳಿದನು. ಅವರು ತಾವು  ಕುರುಡರಾಗಿದ್ದೇವೆ  ಮತ್ತು ತಮಗೆ ದೃಷ್ಟಿಯ  ಪುನಃಸ್ಥಾಪನೆ ಯಾಗಬೇಕಾಗಿದೆ ಎಂದು ಆ ಕುರುಡರು  ಒಪ್ಪಿಕೊಳ್ಳಬೇಕಾಗಿತ್ತು. 

2. ಅದನ್ನು ಪತ್ತೆಹಚ್ಚಿ. 

ನೀವು ಅದನ್ನು ಎದುರಿಸಿದ ನಂತರ, ನೀವು ನಿಮ್ಮ ಸಂಘರ್ಷದ ಮೂಲಕ್ಕೆ ಹೋಗಿ ಅದನ್ನು ಪತ್ತೆಹಚ್ಚಬೇಕು. ಅದು ನಿಮ್ಮ ಕಡೆಯಿಂದ ಉಂಟಾಗಿರುವ ಹೆಮ್ಮೆಯೇ? ನೀವು ದೈವಿಕ ಸಲಹೆಯನ್ನು ಎಂದಾದರೂ ತಿರಸ್ಕರಿಸಿದ್ದೀರಾ? ಮೇಲ್ಮೈ ಪರಿಸ್ಥಿತಿ ಮಾತ್ರವಲ್ಲ, ಅದರ ಮೂಲ ಏನೆಂದು ಅರಿತುಕೊಳ್ಳಿ. ನೀವು ಎಲ್ಲಿ ಕಳೆದುಕೊಂಡಿದ್ದೀರಿ ಎಂಬುದನ್ನು ವಿವೇಚಿಸಿ? ಸತ್ಯವೇದವು ಎಲೀಷ ಮತ್ತು ಪ್ರವಾದಿಯ ಮಕ್ಕಳ ಕಥೆಯ ಬಗ್ಗೆ ಮಾತನಾಡುತ್ತದೆ. ಅವರು ಒಮ್ಮೆ ಮರವನ್ನು ಕಡಿಯಲು ಹೋದರು, ಅಲ್ಲಿ ಏನೋ ಒಂದು  ದುರಂತ ಸಂಭವಿಸಿತು.
"ಹಾಗೆಯೇ ಎಲೀಷನು ಅವರ ಸಂಗಡ ಹೋದನು. ಅವರು ಯೊರ್ದನ್ ನದಿಯ ಕಡೆಗೆ ಬಂದು ಅಲ್ಲಿ ಮರಗಳನ್ನು ಕಡಿದರು. ಆದರೆ ಒಬ್ಬನು ಮರವನ್ನು ಬೀಳಿಸುವಾಗ ಕೊಡಲಿಯು ನೀರಿನೊಳಕ್ಕೆ ಬಿತ್ತು. ಆಗ ಅವನು, “ಅಯ್ಯೋ! ಯಜಮಾನನೇ, ನಾನು ಅದನ್ನು ಸಾಲವಾಗಿ ತೆಗೆದುಕೊಂಡದ್ದು,” ಎಂದು ಕೂಗಿ ಹೇಳಿದನು.ದೇವರ ಮನುಷ್ಯನು, “ಅದು ಎಲ್ಲಿ ಬಿತ್ತು?” ಎಂದನು. ಅವನು ಎಲೀಷನಿಗೆ ಸ್ಥಳವನ್ನು ತೋರಿಸಿದ ತರುವಾಯ, ಎಲೀಷನು ಒಂದು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದ್ದರಿಂದ ಆ ಕಬ್ಬಿಣವು ತೇಲಿತು." ಎಂದು ಸತ್ಯವೇದ 2 ಅರಸುಗಳು 6:4-6 ರಲ್ಲಿ ಹೇಳುತ್ತದೆ. ಹಾಗಾಗಿ ನಕಾರಾತ್ಮಕ ಭಾವನೆಗಳನ್ನು ಪರಿಹರಿಸಲು ನಾವು ಕಾರಣವನ್ನು ಕಂಡುಹಿಡಿಯಬೇಕು. 

3. ಅದನ್ನು ಅಳಿಸಿಹಾಕಿ.

 ಕ್ಷಮೆ ಕೇಳುವ ಮೂಲಕ - ಕೆಲವೊಮ್ಮೆ, ನೀವು ಪತ್ರ ಬರೆಯಬಹುದು ಅಥವಾ ನೇರವಾಗಿ ಒಬ್ಬ ವ್ಯಕ್ತಿಯನ್ನು  ಭೇಟಿಯಾಗಿ ಕ್ಷಮೆ ಕೇಳಬಹುದು -ಆಗ  ವಾಸ್ತವದಲ್ಲಿ, ನೀವು ಅಪರಾಧವನ್ನು ಅಳಿಸಿಹಾಕುತ್ತಿದ್ದೀರಿ. ದೇವರು ಅದನ್ನು ಪರಲೋಕದಲ್ಲಿಯೂ ತನ್ನ ಎಲ್ಲಾ ದಾಖಲೆಯಿಂದ ಅಳಿಸಿಹಾಕಿ  ಅದನ್ನು ನಿಮ್ಮ ಆತ್ಮದಿಂದ ಶುದ್ಧೀಕರಿಸಲು ಸಹಾಯ ಮಾಡುತ್ತಾನೆ. ಶತ್ರುವು ಸ್ವಲ್ಪ ಸಮಯದವರೆಗೆ ನೆನಪನ್ನು ಮರಳಿ ತರಲು ಪ್ರಯತ್ನಿಸಬಹುದು, ಆದರೆ ದೇವರೇ  ಮರೆತಿರುವ ಪಾಪವನ್ನು ನೀವು ನೆನಪಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪವಿತ್ರಾತ್ಮನು  ನಿಮಗೆ ನೆನಪಿಸುತ್ತಾನೆ! 

 “ನಾನಾಗಿ ನಾನೇ, ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು. (ಯೆಶಾಯ 43:25)

4. ಅದನ್ನು ಪುನಃಸ್ಥಾಪಿಸಿ. 

ಹಳೆಯ ಚಿತ್ರಗಳನ್ನು  ಹೊಸ ಚಿತ್ರಗಳೊಂದಿಗೆ ಬದಲಾಯಿಸಬಹುದು. ಹಾಗಾಗಿ ಹೊಸ ನೆನಪುಗಳನ್ನು ರಚಿಸಿರಿ. ಹೊಸ ಸಂಬಂಧಗಳನ್ನು ನಿರ್ಮಿಸಿಕೊಳ್ಳಿ. ಹಿಂದಿನದನ್ನು ಬಿಟ್ಟು ನಿಮ್ಮ ಮುಂದಿನ ಜೀವನವನ್ನು ಮುಂದುವರಿಸಿ. ಸಾವಿರಾರು ಪುರುಷರು ಮತ್ತು ಮಹಿಳೆಯರು ಈ ಸರಳ ಆದರೆ ಶಕ್ತಿಯುತ ಮಾದರಿಯನ್ನೇ  ಅನುಸರಿಸಿ ಕ್ರಿಸ್ತನಲ್ಲಿ ನಂಬಿಕೆಯ ಮೂಲಕ ಸ್ವಾತಂತ್ರ್ಯ ಮತ್ತು ವಿಮೋಚನೆಯನ್ನು ಅನುಭವಿಸಿದ್ದಾರೆ. ಈಗ ನಿಮ್ಮ ಸರದಿ. ನೀವು ಮಗುವಾಗಿದ್ದಾಗ ಅಥವಾ ಹದಿಹರೆಯದವರಾಗಿದ್ದಾಗಿನಿಂದ ನಿಮ್ಮನ್ನು ವಿರೋಧಿ ಗುರಿಯಾಗಿಸಿಕೊಂಡು ಗುರುತಿಸಿರಬಹುದು. ಕ್ರಿಸ್ತನು ಸೆರೆಮನೆಯ ಬಾಗಿಲುಗಳನ್ನು ತೆರೆದಿದ್ದಾನೆ, ಆದರೆ ನೀವು ತೆರೆದ ಬಾಗಿಲುಗಳ ಮೂಲಕ ಹೊರ ನಡೆಯಬೇಕು.

Bible Reading: Joshua 8-10
Prayer
ತಂದೆಯೇ, ನಾನು ನಿನ್ನಲ್ಲಿ ಹೊಂದಿರುವ ನಿರೀಕ್ಷೆಗಾಗಿ ನಿನಗೆ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನಿನ್ನ ಸಾನಿಧ್ಯಕ್ಕೆ ಬಂದು  ನನ್ನ ದೌರ್ಬಲ್ಯ ಮತ್ತು ಹೋರಾಟಗಳನ್ನು ನಿನ್ನ ಮುಂದೆ  ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಗಾಯವನ್ನು ನಿನ್ನ ಮುಂದೆ  ತೆರೆಯುತ್ತೇನೆ, ನೀನೇ ಸ್ವಸ್ಥ  ಮಾಡುವಂತೆ ಬೇಡುತ್ತೇನೆ. ನಿನ್ನ ಹಸ್ತವೇ ನನ್ನ ಆತ್ಮವನ್ನು ಪುನಃಸ್ಥಾಪಿಸಲಿ ಮತ್ತು ನನ್ನನ್ನು ಮತ್ತೆ ಗುಣಪಡಿಸಲಿ ಎಂದು ನಾನು ಯೇಸುನಾಮದಲ್ಲಿ  ಪ್ರಾರ್ಥಿಸುತ್ತೇನೆ. ಆಮೆನ್.

Join our WhatsApp Channel


Most Read
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಆತ್ಮವಂಚನೆ ಎಂದರೇನು? - II
● ಕರ್ತನೊಂದಿಗೆ ನಡೆಯುವುದು
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ದೈನಂದಿನ ಮನ್ನಾ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login