हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಆತ್ಮನಿಂದ ನಡೆಸಲ್ಪಡುವುದು ಎಂಬುದರ ಅರ್ಥವೇನು?
Daily Manna

ಆತ್ಮನಿಂದ ನಡೆಸಲ್ಪಡುವುದು ಎಂಬುದರ ಅರ್ಥವೇನು?

Friday, 23rd of February 2024
2 1 607
Categories : ಪವಿತ್ರ ಆತ್ಮ (Holy spirit)
"ಕರ್ತನು ನನ್ನ ಕುರುಬನು... ಆತನು ನನ್ನನ್ನು ನಡೆಸುವನು. "(ಕೀರ್ತನೆಗಳು 23:1-2)

ನಡೆಸಲ್ಪಡುವುದು ಎಂದರೆ ಮತ್ತೊಬ್ಬರ ಚಿತ್ತವನ್ನು ಹಿಂಬಾಲಿಸುವುದಾಗಿದೆ. ಆತ್ಮನಿಂದ ನಡೆಸಲ್ಪಡುವುದು ಎಂದರೆ ಪವಿತ್ರಾತ್ಮನ ಮಾರ್ಗದರ್ಶನದಂತೆ ನಡೆಯುವುದಾಗಿದೆ. ನಮ್ಮ ಜೀವಿತದಲ್ಲಿನ ಗುರಿಯನ್ನು ತಲುಪಲು ಪವಿತ್ರಾತ್ಮನ ಚಿತ್ತಕ್ಕೇ ಶರಣಾಗತರಾಗಿ ನಮ್ಮ ಜೀವನದ ಗುರಿಯನ್ನು ಕುರಿತ ಆತನ ಬಯಕೆಯನ್ನು ಪೂರೈಸುವುದಾಗಿದೆ. ಆತನು ನಮ್ಮ ಕುರುಬನು ನಾವೆಲ್ಲರೂ ಆತನ ಕುರಿಗಳಾಗಿದ್ದೇವೆ.

ದೇವರಾತ್ಮನಲ್ಲಿ ನಡೆಯುವಂತಹದ್ದು ಪಾಪವನ್ನು ಜಯಿಸುತ್ತದೆ.:
‭‭
" ನಾನು ಹೇಳುವದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ."(ಗಲಾತ್ಯದವರಿಗೆ‬ ‭5:16‬ )

"ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ನೇಮನಿಷ್ಠೆಗಳಿಗೆ ಅಧೀನರಲ್ಲ."(ಗಲಾತ್ಯದವರಿಗೆ‬ ‭5:18‬)

ಕ್ರೈಸ್ತರಿಗೆ ಇರುವ ಏಕೈಕ ಸೂಕ್ತವಾದ ಮಾರ್ಗವೆಂದರೆ ಅದು ಕರ್ತನಾದ ಯೇಸುಕ್ರಿಸ್ತನ ಮಾದರಿ- ಆತ್ಮನ ಮೂಲಕ ವೈಯಕ್ತಿಕ ಸಂಬಂಧದಲ್ಲಿ ದೇವರನ್ನು ಹಿಂಬಾಲಿಸುವುದಾಗಿದೆ.

"ಆ ಮೇಘವು ಗುಡಾರದಿಂದ ಮೇಲಕ್ಕೆ ಎದ್ದಾಗ ಇಸ್ರಾಯೇಲ್ಯರು ಮುಂದಕ್ಕೆ ಪ್ರಯಾಣಮಾಡುವರು. 18ಆ ಮೇಘವು ಎಲ್ಲಿ ನಿಲ್ಲುವದೋ ಅಲ್ಲಿ ಇಸ್ರಾಯೇಲ್ಯರು ತಮ್ಮ ಡೇರೆಗಳನ್ನು ಹಾಕಿಕೊಳ್ಳುವರು. ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರಾಯೇಲ್ಯರು ಪ್ರಯಾಣಮಾಡುವರು; ಯೆಹೋವನ ಅಪ್ಪಣೆಯನ್ನು ಹೊಂದಿ ಅವರು ತಮ್ಮ ಡೇರೆಗಳನ್ನು ಹಾಕಿಕೊಳ್ಳುವರು. ಆ ಮೇಘವು ದೇವದರ್ಶನದ ಗುಡಾರದ ಮೇಲಿರುವ ತನಕ ಅವರು ಇದ್ದ ಸ್ಥಳದಲ್ಲೇ ಇರುವರು. 19ಆ ಮೇಘವು ಬಹುದಿನದವರೆಗೂ ದೇವದರ್ಶನದ ಗುಡಾರದ ಮೇಲೆ ಇರುವ ಸಂದರ್ಭದಲ್ಲಿ ಇಸ್ರಾಯೇಲ್ಯರು ಯೆಹೋವನ ಸೂಚನೆಯನ್ನು ಅನುಸರಿಸಿ ಪ್ರಯಾಣ ಮಾಡದೆ ಇರುವರು."(ಅರಣ್ಯಕಾಂಡ‬ ‭9:17‭-‬19‬)

ಇಸ್ರೇಯೆಲ್ಯರ ನಡೆಯು ಸಂಪೂರ್ಣವಾಗಿ ದೇವರ ಆತ್ಮನಿಂದ ನಡೆಸಲ್ಪಡುತ್ತಿತ್ತು. ಅದೊಂದು ಅರಣ್ಯದಲ್ಲಿದ್ದ ಹಳೆ ಒಡಂಬಡಿಕೆಯ ಸಭೆ ಯಾಗಿತ್ತು ಮತ್ತು ಅದು ಸಂಪೂರ್ಣವಾಗಿ ಆತ್ಮನಿಂದ ನಡೆಸಲ್ಪಡುತ್ತಿತ್ತು. ಹಾಗಾದರೆ ಹೊಸ ಒಡಂಬಡಿಕೆಯ ಸಭೆಯು ಇನ್ನೂ ಎಷ್ಟೋ ಹೆಚ್ಚಾಗಿ ಆತ್ಮನಿಂದ ನಡೆಸಲ್ಪಡಬೇಕಲ್ಲವೇ?

"ಕೆಲವು ಸಮಯಗಳಲ್ಲಿ ಮೇಘವು ಸಾಯಂಕಾಲದಿಂದ ಹೊತ್ತಾರೆಯವರೆಗೆ ಇರುವದು; ಬೆಳಿಗ್ಗೆ ಅದು ಮೇಲಕ್ಕೆ ಎದ್ದಾಗ ಜನರು ಪ್ರಯಾಣಮಾಡುವರು. ಕೆಲವು ಸಮಯಗಳಲ್ಲಿ ಅದು ಹಗಲಿರುಳು ನಿಂತಿರುವದು; ಅದು ಯಾವಾಗ ಏಳುವದೋ ಆಗ ಜನರು ಹೊರಡುವರು."(ಅರಣ್ಯಕಾಂಡ‬ ‭9:21).

ಇಲ್ಲಿ ಗಮನಿಸಿ ನೋಡಿ ಕೆಲವೊಮ್ಮೆ ದೇವರ ಪ್ರಸನ್ನತೆಯನ್ನು ಸೂಚಿಸುವ ಮೇಘವು ಕೇವಲ ಬೆಳಗಿನಿಂದ ಸಂಜೆವರೆಗೂ ಮಾತ್ರ ಇರುತ್ತಿತ್ತು. ಇದು ಖಂಡಿತವಾಗಿಯೂ ಹೆಂಗಸರಿಗೆ ಮತ್ತು ಚಿಕ್ಕ ಮಕ್ಕಳನ್ನು ಹೊಂದಿದವರಿಗೆ ಆರಾಮದಾಯಕವಾಗಿರಲಾರದು.ಆತ್ಮದಿಂದ ನಡೆಸಲ್ಪಡುವಂಥದ್ದು ನಿಜವಾಗಿಯೂ ಆರಾಮದಾಯಕವಾದುದಲ್ಲ. ಅದು ನಿಮ್ಮನ್ನು ನಿಮ್ಮ ಆರಾಮದಾಯಕ ವಲಯದಿಂದ ಹೊರತಂದು ಸಂಪೂರ್ಣವಾಗಿ ಆತನ ಮೇಲೆಯೇ ಆಧಾರಗೊಳ್ಳುವಂತೆ ಮಾಡುವಂತದ್ದಾಗಿದೆ.ಇದು ನಿಮ್ಮ ಬಯಕೆಗಳನ್ನೆಲ್ಲಾ ಕೊಂದು ಅಂತಿಮವಾಗಿ ಆತನ ಚಿತ್ತಕ್ಕೇ ಶರಣಾಗುವಂತೆ ಮಾಡುವಂತದ್ದಾಗಿದೆ.

"ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು."(‭‭ರೋಮಾಪುರದವರಿಗೆ‬ ‭8:14‬ )

ಪವಿತ್ರಾತ್ಮನು ದೇವರ ಉದ್ದೇಶಕ್ಕೆ ಮತ್ತು ಯೋಜನೆಗೆ ತಕ್ಕಂತೆ ಒಬ್ಬ ವ್ಯಕ್ತಿಯ ಜೀವನವನ್ನು ಮಾರ್ಗದರ್ಶಿಸುವವನಾಗಿದ್ದಾನೆ. ಆತ್ಮನಿಂದ ನಡೆಸಲ್ಪಡುವಂಥದ್ದು ನಮ್ಮನ್ನು ರೂಪಾಂತರಗೊಳಿಸುತ್ತದೆ. ನಾವಾಗ ದೇವರ ಗುಣಲಕ್ಷಣಗಳನ್ನು ಮತ್ತು ಸ್ವಭಾವಗಳನ್ನು ಮತ್ತು ದೇವರ ಜೀವದಾತುಗಳನ್ನೇ ಒತ್ತೋಯುವವರಾಗಿರುತ್ತೇವೆ ಮತ್ತು ಅದು ನಮ್ಮನ್ನು ದೇವಪುತ್ರರನ್ನಾಗಿ ಮಾಡುತ್ತದೆ.
Prayer
1. ತಂದೆಯೇ,ನಿನ್ನ ವ್ಯಕ್ತಿತ್ವದ ಮತ್ತು ನಿನ್ನ ಮಾರ್ಗಗಳ ಆಳವಾದ ಪ್ರಕಟಣೆಯನ್ನು ಯೇಸು ನಾಮದಲ್ಲಿ ಅನುಗ್ರಹಿಸಬೇಕಾಗಿ ಬೇಡುತ್ತೇನೆ.

2. ತಂದೆಯೇ, ಪವಿತ್ರಾತ್ಮನೊಂದಿಗೆ ಗಾಢವಾದ ಐಕ್ಯತೆಯನ್ನು ಅನುಗ್ರಹಿಸಬೇಕಾಗಿ ಯೇಸುನಾಮದಲ್ಲಿ ಬೇಡುತ್ತೇನೆ.

3. ತಂದೆಯೇ, ದೇವರ ಮನಸ್ಸಿನ ಮತ್ತು ಪವಿತ್ರಾತ್ಮನ ಕಾರ್ಯಚರಣೆಯ ರೀತಿಯನ್ನು ಅರಿತುಕೊಳ್ಳುವ ಅದ್ಭುತವಾದ ತಿಳುವಳಿಕೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಬೇಕಾಗಿ ಬೇಡಿಕೊಳ್ಳುತ್ತೇನೆ.

4. ತಂದೆಯೇ, ದಿನ ದಿನವೂ ನಿನ್ನ ಆತ್ಮನಿಂದ ಯೇಸು ನಾಮದಲ್ಲಿ ನನ್ನನ್ನು ನಡೆಸು. ಆಮೆನ್.

Join our WhatsApp Channel


Most Read
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ಸಫಲತೆ ಎಂದರೇನು?
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ಆರಾಧನೆಯ ಪರಿಮಳ
● ವ್ಯಸನಗಳನ್ನು ನಿಲ್ಲಿಸುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login