हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನೀವು ನಂಬಿಕೆದ್ರೋಹವನ್ನು ಅನುಭವಿಸಿದ್ದೀರಾ?
Daily Manna

ನೀವು ನಂಬಿಕೆದ್ರೋಹವನ್ನು ಅನುಭವಿಸಿದ್ದೀರಾ?

Wednesday, 18th of June 2025
1 0 113
Categories : ಕ್ಷಮೆ (Forgiveness)
"ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೇನು.ಆದರೆ ನೀನು ನನಗೆ ಸ್ವಕೀಯನೂ ಆಪ್ತವಿುತ್ರನೂ ಅಲ್ಲವೇ. ನಾವು ಪರಸ್ಪರವಾಗಿ ರಸಭರಿತ ಸಂಭಾಷಣೆ ಮಾಡುತ್ತಾ ಭಕ್ತಸಮೂಹದೊಡನೆ ದೇವಾಲಯಕ್ಕೆ ಹೋಗುತ್ತಿದ್ದೆವಲ್ಲಾ."(ಕೀರ್ತನೆ 55:12-14) 

ಈ ಮಾತುಗಳು ಯೂದ ಇಸ್ಕರಿಯೋತನಿಂದ ಕರ್ತನಾದ ಯೇಸುವಿಗೆ ಆಗುವ ದ್ರೋಹದ  ಕುರಿತು ಮೆಸ್ಸೀಯನ ಕುರಿತ  ಪ್ರವಾದನೆಯಾಗಿದೆ. ಆದರೆ ಯೇಸುವಿಗೆ ದ್ರೋಹ ಬಗೆದದ್ದು ಯೂದ ಮಾತ್ರ ಅಲ್ಲ. ಆತನ ಶಿಷ್ಯರೂ ಸಹ, ಅವರುಗಳೆಲ್ಲ  ತಮ್ಮ ಜೀವ ಭಯದಿಂದ ಆತನನ್ನು ಬಿಟ್ಟು ಓಡಿಹೋದರು. ಯೇಸುವಿನ ಆತ್ಮೀಯ ಶಿಷ್ಯರಲ್ಲಿ ಒಬ್ಬನಾದ ಪೇತ್ರನು ಯೇಸುವಿನೊಂದಿಗೆ ನನಗೆ ಯಾವುದೇ ರೀತಿ ಸಂಬಂಧವಿಲ್ಲ ಎಂದು ಸಂಪೂರ್ಣವಾಗಿ ನಿರಾಕರಿಸಿಬಿಟ್ಟನು. 

ಆಗ ಯೇಸು ಸಹಿಸಿಕೊಂಡಿದ್ದಂತಹ ಆಳವಾದ ನೋವು, ಸಂಕಟ , ಒಂಟಿತನವನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ. ನಮ್ಮಲ್ಲಿ ಅನೇಕರು ಇದೇ ರೀತಿಯ ನಂಬಿಕೆ ದ್ರೋಹವನ್ನು  ಎದುರಿಸಿದ್ದೇವೆ. ಬಹಳ ಆತ್ಮೀಯರಾದ ಯಾರಿಂದಾದರೂ ದ್ರೋಹವಾದರೆ  ಅದು ಇನ್ನಷ್ಟು ನೋವನ್ನು ಕೂಡಿಸುತ್ತದೆ  ಇದು ಸಂಭವಿಸಿದಾಗ, ನಾವು ನಮ್ಮ ಹಕ್ಕುಗಳನ್ನು, ನಮ್ಮ ದೃಷ್ಟಿಕೋನವನ್ನು ರಕ್ಷಿಸಿಕೊಳ್ಳಲು ಎದ್ದು ನಿಲ್ಲಲು ಬಯಸುತ್ತೇವೆ. ಅದನ್ನು ಸರಿದೂಗಿಸಲು ನಾವು ತೀವ್ರವಾಗಿ ಹೋರಾಡುತ್ತೇವೆ. ಕೆಲವೊಮ್ಮೆ, ನಾವು ಮೌನವಾಗಿ ಒಳಗಿನಿಂದ ಮುರಿದುಹೋಗುತ್ತೇವೆ.

ನಮಗೆ  ಪರಿಪೂರ್ಣ ಮಾದರಿಯಾಗಿರುವ  ಯೇಸುವಿನ ಮೂಲಕ, ಈ ನಂಬಿಕೆದ್ರೋಹದಿಂದ ಉಂಟಾದ ನೋವನ್ನು  ಹೇಗೆ ನಿಭಾಯಿಸುವುದು ಎಂಬುದರ ಕುರಿತು ನಾವು ಸರಿಯಾದ ಮಾದರಿಯನ್ನು ಕಲಿಯಬಹುದು. ನಂಬಿಕೆ ದ್ರೋಹವನ್ನು ಜಯಿಸಲು ಯೇಸುವಿನ ಬೋಧನೆಗಳಿಂದ ತತ್ವಗಳು ಇಲ್ಲಿವೆ. 

#1 ನಿಮ್ಮ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಿ.
" ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.(ಅದರಿಂದಲೇ ನಿನ್ನ ಎಲ್ಲಾ ಕಾರ್ಯಗಳು ನಡೆಯುವಂತದ್ದು) (ಜ್ಞಾನೋಕ್ತಿ 4:23 )(NLT)

ನಂಬಿಕೆ ದ್ರೋಹವು ನಿಮ್ಮ ಭಾವನೆಗಳನ್ನು ನೋಯಿಸುವುದಲ್ಲದೆ, ಅದು ನೇರವಾಗಿ ನಿಮ್ಮ ಹೃದಯಕ್ಕೆ, ನಿಮ್ಮ ಎಲ್ಲಾ ಭಾವನೆಗಳ ಮೂಲಕ್ಕೆ ತಾಗುತ್ತದೆ. ನೀವು ಆ ನಂಬಿಕೆ ದ್ರೋಹಕ್ಕೆ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ, ನಿಮ್ಮ ಹೃದಯವು ಇತರ ಜನರ ಕಡೆಗೂ ಮತ್ತು ಅಂತಿಮವಾಗಿ ಕರ್ತನ ಕಡೆಗೂ ವರ್ತಿಸುವ ರೀತಿಯಲ್ಲಿ ಕಠಿಣವಾಗಿ ಮಾರ್ಪಟಾಗಿಬಿಡುತ್ತದೆ . ನಂಬಿಕೆ ದ್ರೋಹದ ಗುರಿ ನಿಮ್ಮ ಹೃದಯವನ್ನು ವಿಷಪೂರಿತಗೊಳಿಸುವುದರಿಂದ ನೀವು ಅದರ ವಿರುದ್ಧ ಎಚ್ಚರವಾಗಿರಬೇಕು. 

#2 ನಿಮಗೆ ದ್ರೋಹ ಮಾಡಿದವರನ್ನು ಕ್ಷಮಿಸಿ
ನೀವು ಜನರ ತಪ್ಪುಗಳನ್ನು ಕ್ಷವಿುಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷವಿುಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷವಿುಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷವಿುಸುವದಿಲ್ಲ.(ಮತ್ತಾಯ 6:14-15)(NLT)

ಕ್ಷಮೆಯು ನಂಬಿಕೆಯನ್ನು ಪ್ರತಿಬಿಂಬಿಸುವ ಕಾರ್ಯರೂಪವಾಗಿದೆ. ನೀವು ಕ್ಷಮಿಸದೇ ಹೋದರೆ , ಯೇಸು ನಿಮಗೆ ಉಚಿತವಾಗಿ ನೀಡಿರುವ ಕ್ಷಮೆಯನ್ನು ನೀವೂ ಸಹ ಆನಂದಿಸಲು ನಿಮಗೆ ಸಾಧ್ಯವಾಗುವುದಿಲ್ಲ! ಹೊಸ ಒಡಂಬಡಿಕೆಯ ಗ್ರೀಕ್ ಭಾಷೆಯಲ್ಲಿ "ಕ್ಷಮೆ" ಎಂಬ ಪದದ ಅರ್ಥ "ಹೋಗಲು ಬಿಡುವುದು". ಬಿಟ್ಟುಬಿಡಿ ಮತ್ತು ಮುಂದುವರಿಯಿರಿ.ಎನ್ನುವುದಾಗಿದೆ.

Bible Reading: Job 14-18
Prayer
ತಂದೆಯೇ, ನಿನ್ನ ಮಹಿಮೆಯ ಐಶ್ವರ್ಯದಿಂದ ನೀನು ನನ್ನ ಅಂತರಂಗದಲ್ಲಿನ  ನಿನ್ನ ಆತ್ಮನ ಮೂಲಕ ನನ್ನನ್ನು ಬಲಗೊಳಿಸಬೇಕೆಂದು ನಾನು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ, ಆಗ ಕ್ರಿಸ್ತನು ನಂಬಿಕೆಯ ಮೂಲಕ ನನ್ನ ಹೃದಯದಲ್ಲಿ ವಾಸಿಸುವನು. 

ತಂದೆಯೇ, ಜ್ಞಾನವನ್ನು ಮೀರುವ ನಿನ್ನ ಪ್ರೀತಿಯಲ್ಲಿ ನಾನು ಬೇರೂರಿ ನೆಲೆಗೊಳ್ಳಬೇಕೆಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ.  

ತಂದೆಯೇ, ದೇವರ ಸರ್ವ ಸಂಪೂರ್ಣತೆಯ ಅಳತೆಗೆ ನನ್ನನ್ನು  ತುಂಬಿಸಬೇಕೆಂದು ನಾನು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. (ಎಫೆಸ 3 ರ ಆಧಾರದ ಮೇಲೆ)


Join our WhatsApp Channel


Most Read
● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯೇಸುವನ್ನು ನೋಡುವ ಬಯಕೆ  
● ನಿಮ್ಮ ಜಗತ್ತನ್ನು ರೂಪಿಸಲು ನಿಮ್ಮ ಕಲ್ಪನೆಯನ್ನು ಬಳಸಿಕೊಳ್ಳಿ.
● ಅಶ್ಲೀಲ ಸಾಹಿತ್ಯ
● ನಂಬಿಕೆಯ ಜೀವಿತ
● ಓಟವನ್ನು ಓಡಲು ಇರುವ ತಂತ್ರಗಾರಿಕೆ
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login