ಪವಿತ್ರಾತ್ಮನ ಬಿರುದನ್ನು ಹೊಂದಿರುವ ದೇವರಾತ್ಮನ ಹೆಸರು ಗಳು ಈ ಕೆಳಕಂಡವುಗಳಿಗೆ ಸಂಬಂಧಿಸಿವೆ
1. ಬಲ
2. ಪ್ರವಾದನೆ ಮತ್ತು
3. ಮಾರ್ಗದರ್ಶನ
ಹಳೆಯ ಒಡಂಬಡಿಕೆಯಲ್ಲಿ ಆತ್ಮನಿಗಿದ್ದ ಮೊದಲ ಬಿರುದು ದೇವರಾತ್ಮನು. ಆದಿಕಾಂಡದಲ್ಲಿಯೇ ಮೊದಲು ನಾವು ದೇವರಾತ್ಮನ ಹೆಸರನ್ನು ನೋಡುವವರಾಗಿರುತ್ತೇವೆ.
ಆದಿಯಲ್ಲಿ, ದೇವರು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದನು (ಸಿದ್ಧಪಡಿಸಿದನು, ರೂಪಿಸಿದನು, ರಚಿಸಿದನು ಮತ್ತು) ಭೂಮಿಯು ಆಕಾರವಿಲ್ಲದೆ ಬರಿದಾಗಿ ಕತ್ತಲೆಯಾಗಿತ್ತು ಮತ್ತು ಭೂಮಿಯ ಅಗಾಧದ ಮೇಲ್ಮುಖದ ಮೇಲೆ ಕತ್ತಲಿದ್ದು ದೇವರ ಆತ್ಮನು ನೀರಿನ ಮೇಲ್ಮುಖದ ಮೇಲೆ ಚಲಿಸುತ್ತಿದ್ದನು (ಸುಳಿದಾಡುತ್ತಿದ್ದನು, ಹಾರಾಡುತ್ತಿದ್ದನು)" (ಆದಿಕಾಂಡ 1:1-2 )
ಈ ವಚನಗಳ ಪ್ರಕಾರ, ಪವಿತ್ರಾತ್ಮನು ಸೃಷ್ಟಿಯಲ್ಲಿಯೂ ಭಾಗಿಯಾಗಿದ್ದನ್ನು ನಾವು ನೋಡಬಹುದು. ದೇವರ ಆತ್ಮವು ಅಗಾಧದ(ನೀರು) ಮೇಲೆ ಚಲಿಸುತ್ತಿದ್ದನು ಎಂದು ದೇವರವಾಕ್ಯ ಹೇಳುತ್ತದೆ. ಆಂಪ್ಲಿಫೈಡ್ ಬೈಬಲ್ ಚಲಿಸುವ ಪದದ ಎರಡು ಅರ್ಥಗಳನ್ನು ನಮಗೆ ನೀಡುತ್ತದೆ - ಸುಳಿದಾಡುವುದು ಮತ್ತು ಸಂಸಾರ ಮಾಡುವುದು.
ಗೂಡಿನಲ್ಲಿ ಕುಳಿತುಕೊಂಡು ತನ್ನ ಮೊಟ್ಟೆಗಳ ಮೇಲೆ ಸುಳಿದಾಡುತ್ತಾ ಸಂಸಾರ ಮಾಡುತ್ತಾ, ಹೊಸ ಜೀವಗಳನ್ನು ನೋಡಿಕೊಳ್ಳುವ ಹಕ್ಕಿಯ ಕಲ್ಪನೆಯನ್ನು ಇದು ಸ್ಪಷ್ಟವಾಗಿ ತಿಳಿಸಿಕೊಡುತ್ತದೆ.
ಧರ್ಮೋಪದೇಶಕಾಂಡ 32:11 ರಲ್ಲಿ "ಹದ್ದು ತನ್ನ ಗೂಡನ್ನು ಕಟ್ಟಿ, [ಮತ್ತು] ತನ್ನ ಮರಿಗಳ ಮೇಲೆ ಸುಳಿದಾಡುತ್ತದೆ" ಎಂಬುದನ್ನು ವಿವರಿಸಲೂ ಸಹ ಅದೇ ಪದವನ್ನು ಬಳಸಲಾಗಿದೆ.
ನಂತರ, ದೇವರ ಅದೇ ಆತ್ಮನು ಸೌಲನ ಮೇಲೆ ಬಂದು ಅವನನ್ನು ಪ್ರವಾದಿಸುವಂತೆ ಮಾಡಿದನು (1 ಸಮುವೇಲ 10:10 ನೋಡಿ).
ಆತನು ಜೆಕರ್ಯಾ ಮೇಲೆಯೂ ಬಂದು ಕರ್ತನ ವಾಕ್ಯವನ್ನು ಸಾರುವಂತೆ ಅವನನ್ನು ಬಲಗೊಳಿಸಿದನು(2 ಪೂರ್ವಕಾಲವೃತ್ತಾಂತ 24:20 ನೋಡಿ).
ಮತ್ತು ಇಸ್ರೇಲ್‌ನ ಪುನಃಸ್ಥಾಪನೆಯ ಯೆಹೆಜ್ಕೇಲನ ದರ್ಶನವನ್ನು "ದೇವರ ಆತ್ಮನ ಮೂಲಕ" ನೀಡಲಾಯಿತು (ಯೆಹೆಜ್ಕೇಲ 11:24).
ರೋಮನ್ನರು 8:14 ರಲ್ಲಿ ದೇವರ ವಾಕ್ಯ ಘೋಷಿಸುವುದೇನೆಂದರೆ: "ದೇವರ ಆತ್ಮನಿಂದ ನಡೆಸಲ್ಪಡುವವರೆಲ್ಲರೂ ದೇವರ ಮಕ್ಕಳು."
ದೇವರಆತ್ಮನೇ ಲೋಕವನ್ನು ಸೃಷ್ಟಿಸಿದನು. ಆತನೇ ಪ್ರವಾದನೆಯ ಆತ್ಮ. ಆತನೇ ಬಲದ ಆತ್ಮ, ಮತ್ತು ಆತನೇ ಮಾರ್ಗದರ್ಶನದ ಆತ್ಮ.
ನೀವು (ನಿಮ್ಮ ದೇಹವು) ದೇವರ ಆಲಯವಾಗಿದೆಯೆಂದೂ ಮತ್ತು ದೇವರ ಆತ್ಮನು ನಿಮ್ಮಲ್ಲಿ ವಾಸಿಸುತ್ತಾನೆಂದು ನಿಮಗೆ ತಿಳಿಯದೋ? (1 ಕೊರಿಂಥ 3:16)
ಆದ್ದರಿಂದ, ನಮ್ಮ ದೇಹಗಳು ಜೀವಸ್ವರೂಪ ದೇವರ ದೇವಾಲಯಗಳಾಗಿವೆ, ಮೌಲ್ಯಯುತವಾಗಿವೆ ಮತ್ತು ಇತರರು ನೋಡುವಾಗ ಕ್ರಿಸ್ತನೊಂದಿಗಿನ ನಮ್ಮ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ತಿಳಿದುಕೊಂಡು ಕ್ರೈಸ್ತರಾದ ನಾವು ನಮ್ಮ ದೇಹಗಳನ್ನು ನೋಡಿಕೊಳ್ಳಬೇಕು, .
Bible Reading: Psalms 105-107
Confession
ನನ್ನ ದೇಹವು ಪವಿತ್ರಾತ್ಮನಿಗೆ ಗರ್ಭಗುಡಿಯಾಗಿದೆ ಮತ್ತು ದೇವರ ಸರ್ವ ಸಂಪೂರ್ಣತೆಯು ನನ್ನಲ್ಲಿ ವಾಸಿಸುತ್ತದೆ. ನಾನು ದೇವರನ್ನು ನನ್ನ ದೇಹದಲ್ಲಿ ಮತ್ತು ಆತನ ಆತ್ಮದಲ್ಲಿಯೂ ಯೇಸುನಾಮದಲ್ಲಿ ಮಹಿಮೆಪಡಿಸುತ್ತೇನೆ.. ಆಮೆನ್.
Join our WhatsApp Channel

Most Read
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1● ನಂಬಿಕೆ- ನಿರೀಕ್ಷೆ -ಪ್ರೀತಿ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ಪ್ರೀತಿಯ ಭಾಷೆ
● ಯಹೂದವು ಮುಂದಾಗಿ ಹೊರಡಲಿ
● ದೂರದಿಂದ ಹಿಂಬಾಲಿಸುವುದು
Comments